1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!..ಬೇರೆಯವರಿಗೆ ಇವು ಅರ್ಥವಾಗಲ್ಲ!!

|

21ನೇ ಶತಮಾನದ ಆರಂಭದವರೆಗೂ ಮೊಬೈಲ್ ಎಂಬುದು ಕೆಲವರಿಗೆ ಗಗನಕುಸುಮವಾಗಿದ್ದರೆ, ಇನ್ನು ಕೆಲವರಿಗೆ ಮೊಬೈಲ್ ಎಂದರೆ ಏನೂ ಎಂದೇ ತಿಳಿದಿರಲಿಲ್ಲ. ಆದರೆ, 21ನೇ ಶತಮಾನಕ್ಕೆ ಕಾಲಿಟ್ಟು ಕೇವಲ 19 ವರ್ಷಗಳು ಕಳೆಯುವ ವೇಳೆಗೆ ಇಂದು ಮೊಬೈಲ್ ಎಂಬುದು ಎಲ್ಲರ ಅವಿಭಾಜ್ಯ ವಸ್ತು.! ಕೇವಲ ಕರೆ ಮಾಡಬಹುದಾದ ಫೀಚರ್ ಫೋನ್‌ಗಳಿಂದ ಹಿಡಿದು ಇತ್ತೀಚಿನ ಮಡುಚುವ 5G ಸ್ಮಾರ್ಟ್‌ಫೋನ್‌ಗಳವರೆಗೂ ಮೊಬೈಲ್ ಲೋಕ ಬೆಳೆದುನಿಂತಿದೆ. ಇತಿಹಾಸದಲ್ಲೇ ಅತಿವೇಗವಾಗಿ ಬದಲಾವಣೆಕಂಡ ಒಂದು ಕ್ಷೇತ್ರ ಇದಾಗಿದೆ.

ಹೌದು, ಮೊಬೈಲ್ ಬೆಳವಣಿಗೆಯನ್ನು ವಿಶ್ವದ ಅತ್ಯಂತ ವೇಗದ ಬದಲಾವಣೆ ಕ್ಷೇತ್ರ ಎಂದು ಗುರುತಿಸಲಾಗಿದೆ. ಕೇವಲ 20 ರಿಂದ 30 ವರ್ಷಗಳಲ್ಲಿ ಆದಂತಹ ಒಂದು ಕ್ಷೇತ್ರದ ಬದಲಾವಣೆ ಇತಿಹಾಸದ ಯಾವ ಪುಟದಲ್ಲೂ ದಾಖಲಾಗದ್ದು ಇದಕ್ಕೆ ಕಾರಣ ಎಂದು ಹೇಳಬಹುದು. ಹಾಗಾದರೆ, ಕಳೆದ 20 ವರ್ಷಗಳಲ್ಲಿ ಮೊಬೈಲ್ ಲೋಕ ಹೇಗಿತ್ತು ಎಂದು ಒಮ್ಮೆ ಊಹಿಸಿಕೊಳ್ಳಿ.! 1999 ರಿಂದ ಒಳಗೆ ಜನಿಸಿದವರಿಗೆ ಸಿಕ್ಕ ಮೊಬೈಲ್ ಅನುಭವಗಳನ್ನು ನೆನೆಸಿಕೊಳ್ಳಿ. ಆ ಒಂದು ಅನುಭವ ಇಂದಿನ ಮಕ್ಕಳಿಗೆ ಎಂದೂ ಸಿಗಲಾರದು ಅಲ್ಲವೇ.?

1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!.ಬೇರೆಯವರಿಗೆ ಇವು ಅರ್ಥವಾಗಲ್ಲ!

ಹಾಗಾಗಿ, ಇಂದಿನ ಲೇಖನದಲ್ಲಿ 80 ರಿಂದ 90ರ ದಶಕದಲ್ಲಿ ಹುಟ್ಟಿದವರ ನೆನಪನ್ನು ಪುನಾರವರ್ತನೆ ಮಾಡುವಂತಹ ಹತ್ತಾರು ಮೀಮ್ಸ್‌ಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ. ಅನುಕರಣೆಯಿಂದ ಅಂಗೀಕರಿಸಲ್ಪ ಈ ಮೀಮ್ಸ್‌ಗಳಿಂದ ನೀವು 21 ದಶಕದಿಂದ ಆಚೆಗೆ ಹುಟ್ಟಿದ, ಅಂದರೆ ಇಂದಿನ ಮಕ್ಕಳನ್ನು ಕೂಡ ಟ್ರೋಲ್ ಮಾಡಲು ಸಾಧ್ಯವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮೀಮ್ಸ್‌ಗಳು ನಿಮ್ಮ ನೆನಪಿನ ಬುತ್ತಿಯನ್ನು ತೆರೆಯುತ್ತವೆ. ನಿಮ್ಮ ಮನಸ್ಸನ್ನು ಸಂತೋಷಗೊಳಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.!

ಬಾಲ್ಯದ ಫೇವರೇಟ್ ಸ್ಮಾರ್ಟ್‌ಫೋನ್‌

ಬಾಲ್ಯದ ಫೇವರೇಟ್ ಸ್ಮಾರ್ಟ್‌ಫೋನ್‌

ಖಂಡಿತ ಈ ವಿಡಿಯೊ ಗೇಮ್‌ ಡಿವೈಸ್‌ ಅನ್ನು ಹೊಂದಬೇಕೆಂದು ಬಾಲ್ಯದಲ್ಲಿ ಎಲ್ಲರಿಗೂ ಅನಿಸಿರುತ್ತದೆ. ಆ ಕಾಲಕ್ಕೆ ಅದೇ ನಮಗೆ ಐಫೋನೂ ಮತ್ತು ಸ್ಮಾರ್ಟ್‌ಫೋನ್ ಆಗಿತ್ತು. ಗೇಮಿಂಗ್ ಡಿವೈಸ್‌ನಲ್ಲಿ ಗೇಮ್‌ ಆಡುತ್ತಿದ್ದರೆ ಲೋಕವನ್ನೆ ಮರೆಯುತ್ತಿದ್ದ ಬಾಲ್ಯದ ನೆನೆಪುಗಳನ್ನು ಈ ಚಿತ್ರ ಮರುಕಳಿಸುವುದಂತು ಸುಳ್ಳಲ್ಲ ನೋಡಿ.

ದಿನಕ್ಕೊಂದು ಫೋನು ನೋಡಿ ಫೀಲ್!

ದಿನಕ್ಕೊಂದು ಫೋನು ನೋಡಿ ಫೀಲ್!

20ನೇ ಶತಮಾನದ ಅಂತ್ಯದಲ್ಲಿ ಮೊಬೈಲ್ ಒಂದನ್ನು ಖರೀದಿಸಿದರೆ ಅವು ವರ್ಷಗಳ ಕಾಲ ಹೊಸ ಮಾಡೆಲ್ ಆಗಿಯೇ ಇರುತ್ತಿತ್ತು. ಆದರೆ, 21ನೇ ಶತಮಾನದಲ್ಲಿ ಇಂದು ಖರೀದಿಸಿದ ಸ್ಮಾರ್ಟ್‌ಫೋನ್ ನಾಳೆಗೆ ಹಳೆಯದಾಗಿರುತ್ತದೆ. ಕೇವಲ ನಾಲ್ಕೈದು ವಾರಗಳ ಹಿಂದಷ್ಟೇ ಖರೀದಿಸಿದ ಸ್ಮಾರ್ಟ್‌ಫೋನ್ ಹಳೆಯದಾಯಿತು ಎಂಬ ಫೀಲ್ ಈಗ ಬರುತ್ತದೆ.

ಮೊಬೈಲ್ ಒಂದೇ ಕೊಂದಿದ್ದು 250 ಜನರನ್ನ!

ಮೊಬೈಲ್ ಒಂದೇ ಕೊಂದಿದ್ದು 250 ಜನರನ್ನ!

ನಿಮಗೆ ಗೊತ್ತಾ?, ಮೊಬೈಲ್ ಹುಟ್ಟಿ ಬೆಳವಣಿಯಾಗುತ್ತಾ ಬಂದಾಗಿನಿಂದ ಸರಿಸುಮಾರು 250 ವಸ್ತುಗಳು ತನ್ನ ಕೆಲಸವನ್ನು ಕಳೆದುಕೊಂಡಿವೆಯಂತೆ. ಅಲಾರಾಂ, ರೇಡಿಯೋ, ಪುಸ್ತಕ, ಫೋಸ್ಟ್‌ಕಾರ್ಟ್, ಲ್ಯಾಂಡ್ ಲೈನ್ ಫೋನ್, ಟೇಪ್ ರೆಕಾರ್ಡರ್ ಮತ್ತು ಸಿಡಿ, ಡಿವಿಡಿಗಳು ಸೇರಿದಂತೆ ಹಲವು ವಸ್ತುಗಳನ್ನು ಈಗಿನವರು ನೆನಸಿಕೊಳ್ಳುವುದೇ ಕಷ್ಟ.!

ಇಂಗ್ಲೇಂಡ್ ಶೌಚಾಲಯ ಹುಡುಕಿದ್ರೆ ಮೊಬೈಲ್ ಸಿಗುತ್ತೆ!

ಇಂಗ್ಲೇಂಡ್ ಶೌಚಾಲಯ ಹುಡುಕಿದ್ರೆ ಮೊಬೈಲ್ ಸಿಗುತ್ತೆ!

ನಿಮಗೆ ಗೊತ್ತಾ? ಇಂಗ್ಲೇಂಡ್ ದೇಶದ ಒಂದೊಂದು ಶೌಚಾಲಯ ಹುಡುಕಿದರೂ ಒಂದೊಂದು ಮೊಬೈಲ್ ಸಿಗುತ್ತೆ ಎಂಬ ಮೀಮ್ಸ್ ಬೆಕಾದಷ್ಟು ಹರಿದಾಡುತ್ತವೆ. ಇದಕ್ಕೆ ಕಾರಣ ಏನು ಗೊತ್ತಾ?, ಪ್ರತಿವರ್ಷ ಇಂಗ್ಲೇಂಡ್ ಜನರು ಶೌಚಾಲಯಕ್ಕೆ ಬೀಳಿಸಿರುವ ಮೊಬೈಲ್ ಸಂಖ್ಯೆಗಳೇ ಕೋಟಿ ದಾಟುತ್ತವಂತೆ. ಅಂದರೆ ಅಲ್ಲಿ ಎಲ್ಲರೂ ಶೌಚಾಲಯದಲ್ಲೇ ಮೊಬೈಲ್ ಬಳಸುತ್ತಾರೆ.

ನಿಮ್ಮ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತಾ?

ನಿಮ್ಮ ಮೊಬೈಲ್ ಬ್ಯಾಟರಿ ಖಾಲಿಯಾಗುತ್ತಾ?

ಛೇ, ನನ್ನ ಸ್ಮಾರ್ಟ್‌ಫೋನ್ ಬ್ಯಾಟರಿ ಒಂದು ದಿನ ಕೂಡ ಬರೋದಿಲ್ಲ ಎಂದು ಕೊರಗುವ ಇಂದಿನ ಯುವಕರಿಗೆ ನೋಕಿಯಾ 1110 ಮೊಬೈಲ್ ಕೊಟ್ಟರೆ ತಲೆಕೆಡುತ್ತದೆ. ನಿಮಗೆ ಗೊತ್ತಾ?, ನೋಕಿಯಾ 1110 ಫೋನನ್ನು ಬಳಸದೇ 6 ತಿಂಗಳಿಟ್ಟರೂ ಬ್ಯಾಟರಿ ಡ್ರೈನ್ ಆಗಿರಲಿಲ್ಲವಂತೆ. ಬೆಳಗ್ಗೆ 8 ಗಂಟೆಗೆ ಫುಲ್ ಚಾರ್ಜ್ ಮಾಡಿ ಬಳಸಿದರೆ ಸಂಜೆ 8 ಗಂಟೆಗೆ 99 ಚಾರ್ಜ್ ಇರುತ್ತಿತ್ತು.!

ಟೈಮು ಬದಲಾದಂತೆ ಜನರು ಬದಲಾಗುತ್ತಾರೆ.!

ಟೈಮು ಬದಲಾದಂತೆ ಜನರು ಬದಲಾಗುತ್ತಾರೆ.!

ಈ ಮೇಲಿನ ಚಿತ್ರ ನೋಡಿದರೆ ಅನಿಸುವುದು ಈ ರೀತಿ ಪತ್ರಿಕೆಗಳನ್ನು ಹಿಡಿದು ನಿಲ್ಲುವ ಪ್ರಮೇಯ ಮತ್ತೆ ಬರುವುದಿಲ್ಲ ಎಂದು ಹೇಳಬಹುದು. ಸ್ಮಾರ್ಟ್‌ಫೋನ್ ಬಳಕೆಗೆ ಬಂದ ನಂತರ ಬೀದಿಬದಿಯಲ್ಲಿ ಪತ್ರಿಕೆ ಓದುತ್ತಾ ನಿಲ್ಲುತ್ತಿದ್ದವರು ಇಂದು ಸ್ಮಾರ್ಟ್‌ಫೋನ್ ಹಿಡಿದು ನಿಲ್ಲುತ್ತಿದ್ದಾರೆ. ಆದರೂ ಪತ್ರಿಕೆ ಓದುವಂತಹ ಫೀಲ್ ಅನ್ನು ಮೊಬೈಲ್ ನೀಡಲು ಸಾಧ್ಯವೇ ಎಂಬುದು ಪ್ರಶ್ನೆ.

ಟಾಯ್ಲೆಟ್‌ನಲ್ಲೂ ಸ್ಮಾರ್ಟ್‌ಫೋನ್‌

ಟಾಯ್ಲೆಟ್‌ನಲ್ಲೂ ಸ್ಮಾರ್ಟ್‌ಫೋನ್‌

ಇದೀಗ ಸ್ಮಾರ್ಟ್‌ಫೋನ್‌ ಅತೀ ಮಹತ್ವದ ಸ್ಥಾನ ಪಡೆದುಕೊಂಡಿದೆ. ಏನನ್ನು ಬಿಟ್ಟರು ಸ್ಮಾರ್ಟ್‌ಫೋನ್‌ ಬಿಟ್ಟಿರಲಾರರು. ಹಾಗಾಗಿ, ಟಾಯ್ಲೆಟ್‌ ಹೋಗಬೇಕಾದರೂ ಸ್ಮಾರ್ಟ್‌ಫೋನ್‌ ಅನ್ನು ತೆಗೆದುಕೊಂಡು ಹೋಗುವ ಮಟ್ಟಿಗೆ ಸ್ಮಾರ್ಟ್‌ಫೋನ್‌ಗೆ ಜನರು ಅಡಿಕ್ಟ್ ಆಗಿದ್ದಾರೆ. ನಿಮಗೆ ಗೊತ್ತಾ? ಸ್ಮಾರ್ಟ್‌ಫೋನ್‌ ಇಲ್ಲದಾಗಲೂ ಮೊಬೈಲ್ ಟಾಯ್ಲೆಟ್‌ಗೆ ಹೋಗುತ್ತಿತ್ತು.!

ಟೈಟಾನಿಕ್‌ ಮುಳಗುವ ಫೋಟೋ

ಟೈಟಾನಿಕ್‌ ಮುಳಗುವ ಫೋಟೋ

ಸದಾ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ನಿಂದ ಬಹುತೇಕ ಘಟನೆಗಳನ್ನು ಲೈವ್‌ ಆಗಿ ಸೆರೆಹಿಡಿಯಲಾಗುತ್ತಿದೆ. ವಿಡಿಯೊಗಳನ್ನು ಶೇರ್‌ ಮಾಡಿ ವೈರಲ್ ಮಾಡಲಾಗುತ್ತಿದೆ. ಜಸ್ಟ್ ಇಮ್ಯಾಜಿನ್ ಒಂದು ವೇಳೆ ಟೈಟಾನಿಕ್‌ ಹಡಗು 2017ರಲ್ಲಿ ಮುಳುಗಡೆ ಆಗಿದ್ದರೇ ಎಷ್ಟು ಜನ ಹಡಗು ಮುಳುಗಡೆಯ ವಿಡಿಯೊ ಮತ್ತು ಫೋಟೋ ಕ್ಲಿಕ್ ಮಾಡುತ್ತಿದ್ದರೂ ಗೊತ್ತಿಲ್ಲ.

ಹೊಸ ಐಫೋನ್ ಬಂದಾಗ ಹುಡುಗಿಯರ ಸ್ಥಿತಿ

ಹೊಸ ಐಫೋನ್ ಬಂದಾಗ ಹುಡುಗಿಯರ ಸ್ಥಿತಿ

ಐಫೋನ್ ಹೊಂದುವುದು ಬಹುತೇಕ ಎಲ್ಲರಿಗೂ ಖುಷಿ ಮತ್ತು ಹೆಮ್ಮೆ ಎನಿಸದೆ ಇರದು. ಅದರಲ್ಲೂ ಹುಡುಗಿಯರಿಗೆ ಐಫೋನ್ ಅಂದ್ರೆ ಬಾಯ್‌ಫ್ರೆಂಡ್‌ಗಿಂತ ಇಷ್ಟವಂತೆ. ಆದರೆ ಐಫೋನ್ ಹೊಸ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದಾಗ ಹುಡುಗಿಯರು ತಮ್ಮಲ್ಲಿರುವ ಐಫೋನ್‌ ಓಲ್ಡ್‌ ವರ್ಷನ್‌ ಅಂತಾ ಸಖತ್‌ ಫೀಲ್‌ ಆಗ್ತಾರಂತೆ.

ಕಾಗೆನೂ ಬೆಳ್ಳಗೆ ಕಾಣುತ್ತೆ!

ಕಾಗೆನೂ ಬೆಳ್ಳಗೆ ಕಾಣುತ್ತೆ!

ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾ ಆಯ್ಕೆ ನೋಡಿ ಖರೀದಿಸುತ್ತಾರೆ ವಿವೋ ಮತ್ತು ಓಪ್ಪೊಗಳು ಹೆಚ್ಚಿನ ಬ್ರೈಟ್‌ನಲ್ಲಿ ಪೋಟೋಗಳು ಮೂಡಿಬರುತ್ತವೆ ಫೋಟೋದಲ್ಲಿ ಸಕತ್ ವೈಟ್‌ ಆಗಿ ಕಾಣುತ್ತಾರೆ ಅದಕ್ಕೆ ಸೂಕ್ತವೆಂಬಂದೆ ವಿವೋ ಮತ್ತು ಒಪ್ಪೊದಲ್ಲಿ ಫೋಟೊ ತೆರೆದರೇ ಕಾಗೆ ಕೂಡಾ ಬೆಳ್ಳಗೆ ಕಾಣುತ್ತೆ ಎನ್ನುವ ಮೆಮ್ ನಗು ತರಿಸದೇ ಇರದು.

ಬೆಕ್ಕು ಫೋನಿನಲ್ಲೇ ಇಲಿ ಹಿಡಿಯುತ್ತೆ.

ಬೆಕ್ಕು ಫೋನಿನಲ್ಲೇ ಇಲಿ ಹಿಡಿಯುತ್ತೆ.

ಸ್ಮಾರ್ಟ್‌ಫೋನ್‌ಗಳು ಮನುಷ್ಯರಿಗೆ ಮಾತ್ರವಲ್ಲದೇ ಸಾಕು ಪ್ರಾಣಿಗಳಿಗೂ ಗಮನಸೆಳೆದಿವೆ ಎನ್ನಬಹುದು. ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಾಣಿಗಳ ವಿಡಿಯೊ ನೋಡಿದರೇ ಇವು ಪ್ರತಿಕ್ರಿಯಿಸುತ್ತವೆ. ಹಾಗೇ ಈ ಚಿತ್ರದಲ್ಲಿರುವ ಬೆಕ್ಕು ಸ್ಮಾರ್ಟ್‌ಫೋನ್‌ನಲ್ಲಿ ಇಲಿಯನ್ನು ನೋಡಿ ಅದನ್ನು ಹಿಡಿಯಲು ಪ್ರಯತ್ನಿಸುತ್ತಿದೆ. ಇಲಿ ಸಿಗಲ್ಲ ಬೆಕ್ಕಿನ ಪರಸ್ಥಿತಿ

ಹುಡುಗಿಯರ ಆಯ್ಕೆ ಪಿಂಕ್

ಹುಡುಗಿಯರ ಆಯ್ಕೆ ಪಿಂಕ್

ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕಿದ್ದರೇ ಹುಡುಗರು ಆ ಸ್ಮಾರ್ಟ್‌ಫೋನಿನ RAM, ROM, ಪ್ರೊಸೆಸರ್, ಬ್ಯಾಟರಿ, ಬೆಲೆ, ಹೀಗೆ ಸ್ಮಾರ್ಟ್‌ಫೋನ್‌ ಅನ್ನು ತೂಗಿ ಅಳೆದು ನೋಡಿ ಖರೀದಿಸುತ್ತಾರೆ. ಆದರೆ ಅದೇ ಹುಡುಗಿಯರು ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಒಂದು ಫೀಚರ್ಸ್‌ ಕಡಿಮೆ ಆದ್ರು ಅಡ್ಜೆಸ್ಟ್ ಮಾಡ್ಕೊತಾರೆ ಆದರೆ ಕಲರ್‌ ಮಾತ್ರ ಪಿಂಕ್ ಇರಲೇಬೇಕು.

ನೋಕಿಯಾ 1110ದಲ್ಲಿ ವಾಟ್ಸಪ್

ನೋಕಿಯಾ 1110ದಲ್ಲಿ ವಾಟ್ಸಪ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆದಾರರು ಮೆಸೆಜ್‌ಗಾಗಿ ಹೆಚ್ಚಾಗಿ ವಾಟ್ಸಪ್‌ ಆಪ್‌ ಅನ್ನೇ ಬಳಸುತ್ತಾರೆ. ಒಂದು ಕಾಲದಲ್ಲಿ ಫೇಮಸ್‌ ಆಗಿದ್ದ ನೋಕಿಯಾ 1110 ಫೋನ್‌ ಅನ್ನು ಕಂಪನಿ ರೀಲಾಂಚ್ ಮಾಡಿ ಅದರಲ್ಲಿ ವಾಟ್ಸಪ್‌ ಸೇವೆ ನೀಡಿದರೇ ಜನ ಖರೀದಿಸುತ್ತಾರಾ?.ಹೀಗೊಂದು ಮೀಮ್ ನಗುವಿಗೆ ಕಾರಣವಾಗಿದೆ.

ಸ್ಮಾರ್ಟ್‌ಫೋನ್‌ ಆಪರೇಟ್ ಕಲಿತರೆ ಎಲ್ಲ ಕಲಿತಂತೆ

ಸ್ಮಾರ್ಟ್‌ಫೋನ್‌ ಆಪರೇಟ್ ಕಲಿತರೆ ಎಲ್ಲ ಕಲಿತಂತೆ

ಸದ್ಯ ಸ್ಮಾರ್ಟ್‌ಫೋನ್‌ಗಳ ಜಮಾನ ಇದಾಗಿದ್ದು, ದೊಡ್ಡವರಿಂದ ಮಕ್ಕಳವರೆಗೂ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುವವರೇ. ಮಕ್ಕಳು ಸ್ಮಾರ್ಟ್‌ಪೋನ್‌ ಆಪರೇಟಿಂಗ್ ಕಲಿತರೇ ಯಾವುದೇ ಗೃಹ ಉಪಯೋಗಿ ಉತ್ಪನ್ನಗಳನ್ನು ಸಲಿಸಾಗಿ ಆಪರೇಟ್‌ ಮಾಡಬಲ್ಲರು. ಅದಕ್ಕೆ ಸೂಕ್ತ ಮೀಮ್ ನಗು ಉಕ್ಕಿಸುತ್ತದೆ.

ಲ್ಯಾಂಡ್‌ಲೈನ್ ಮತ್ತು ಸ್ಮಾರ್ಟ್‌ಫೋನ್ ಮೀಟಿಂಗ್

ಲ್ಯಾಂಡ್‌ಲೈನ್ ಮತ್ತು ಸ್ಮಾರ್ಟ್‌ಫೋನ್ ಮೀಟಿಂಗ್

ಲ್ಯಾಂಡ್‌ಲೈನ್‌ ಫೋನ್‌ಗಳ ಟ್ರಿನ್‌ ಟ್ರಿನ್‌ ಕರೆಯ ರಿಂಗಣದ ಬದಲಾಗಿ ಈಗ ರಿಂಗ್‌ಟೋನ್‌ಗಳ ಮೊಳಗುತ್ತಿವೆ. ಹೀಗೆ ಲ್ಯಾಂಡ್‌ಲೈನ್‌ ಮತ್ತು ಸ್ಮಾರ್ಟ್‌ಫೋನ್‌ ಮೀಟ್‌ ಆಗಿ ಮಾತಾಡುವಾಗ ಸ್ಮಾರ್ಟ್‌ಫೋನ್‌ ಲ್ಯಾಂಡ್‌ಲೈನ್‌ಗೆ ಏನು ಕೇಳಿದೆ ಗೊತ್ತಾ?. ಬೇಡವಾಗ ಕರೆಗಳನ್ನು ಹೇಗೆ ಬ್ಲಾಕ್‌ ಮಾಡುತ್ತಿದ್ದೆ ಅಂಥಾ ಕೇಳಿದೆ. ಅದಕ್ಕೆ ಲ್ಯಾಂಡ್‌ಲೈನ್‌ ಹಾಗಂದ್ರೇ ಏನು ಅಂತಂತೆ!

ಸ್ಮಾರ್ಟ್‌ಫೋನ್‌ ಮಂದಿ ಕಣ್ಣಿದ್ದು ಕುರುಡರು!

ಸ್ಮಾರ್ಟ್‌ಫೋನ್‌ ಮಂದಿ ಕಣ್ಣಿದ್ದು ಕುರುಡರು!

ಬಹುತೇಕರು ಸ್ಮಾರ್ಟ್‌ಫೋನ್‌ ಆಪರೇಟಿಂಗ್‌ನಲ್ಲಿ ಮುಳುಗಿದರೇ ಪಕ್ಕದಲ್ಲಿ ಏನಾಗುತ್ತದೆ ಎಂಬುದರ ಪರಿವೇ ಇರುವುದಿಲ್ಲ. ನಡೆದುಕೊಂಡು ಹೋಗುವಾಗ ಎದುರಿಗೆ ಡಿಕ್ಕಿ ಹೊಡೆಯುವ ಸನ್ನಿವೇಶಗಳನ್ನು ಎದುರಿಸಿರಬಹುದು. ಸ್ಮಾರ್ಟ್‌ಫೋನ್‌ ಮಂದಿ ಕಣ್ಣಿದ್ದು ಕುರುಡುರಂತೆ ಎನ್ನಬಹುದು. ಅದಕ್ಕೆ ಸೂಕ್ತವಾಗಿದೆ ಈ ಮಿಮ್ಸ್ ಫೋಟೊ.

ಸೇಲ್‌ ಮಾಡದ ಲ್ಯಾಂಡ್‌ಲೈನ್

ಸೇಲ್‌ ಮಾಡದ ಲ್ಯಾಂಡ್‌ಲೈನ್

ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್‌ಗಳು ಎಂಟ್ರಿಕೊಡುತ್ತಲೆ ಇದ್ದು, ಗ್ರಾಹಕರು ಹಳೆ ಸ್ಮಾರ್ಟ್‌ಫೋನ್‌ಗಳನ್ನು ಮಾರಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಾರೆ. ಸರಿಯಾಗಿ ಎರಡು ವರ್ಷ ಫೋನ್‌ ಬಳಿಸಿರುವುದಿಲ್ಲ ನನ್ನ ಫೋನ್‌ ತುಂಬಾ ಹಳೆಯದಾಯಿತು ಎನ್ನುತಾರೆ. ಆದರೆ ಅದೇ ಆಗಿನ ಕಾಲದ ಲ್ಯಾಂಡ್‌ಲೈನ್‌ ಎಂದಿಗೂ ಸೇಲ್‌ ಮಾಡಿಲ್ಲ ಮತ್ತು ಈಗಲೂ ಸುಂದರ ನೆನೆಪು ಮೂಡಿಸುತ್ತದೆ.

ಫೋನ್‌ಗಳಲ್ಲಿ ಬಾರಿ ಬದಲಾವಣೆ

ಫೋನ್‌ಗಳಲ್ಲಿ ಬಾರಿ ಬದಲಾವಣೆ

ಸುಮಾರು 1996 ಇಂದ ಇಲ್ಲಿಯವರೆಗೆ ಫೋನ್‌ಗಳ ಸಾಕಷ್ಟು ಬದಲಾವಣೆಗಳು ಆಗಿದ್ದು,ಮಾಡರ್ನ ಜನತೆಗೆ ತಕ್ಕನಾಗಿ ಹೊಸ ರೂಪ ಹೊಂದುತ್ತಿವೆ. ಇತ್ತೀಚಿನ ಪೀಳಿಗೆ ಬಹುಶಃ ಆಗಿನ ಕಾಲದ ಫೋನ್‌ಗಳು ಹೇಗಿದ್ದವು ಎಂಬುದನ್ನು ಬಹುತೇಕರು ನೋಡಿರುವುದಿಲ್ಲ. ಹಳೆ ಫೋನ್‌ಗಳ ಬೆಳವಣಿಗೆ ಹಂತ ನೆನಪಿಸಲು ಈ ಒಂದು ಮಿಮ್‌ ಸಾಕು ಅಲ್ಲವೇ.

ನೆಟ್‌ ಇಲ್ಲಾಂದ್ರೆ ಸ್ಮಾರ್ಟ್‌ಫೋನ್‌ ಇದ್ದು ಇಲ್ಲದಂತೆ

ನೆಟ್‌ ಇಲ್ಲಾಂದ್ರೆ ಸ್ಮಾರ್ಟ್‌ಫೋನ್‌ ಇದ್ದು ಇಲ್ಲದಂತೆ

ಸ್ಮಾರ್ಟ್‌ಫೋನ್‌ಗಳಲ್ಲಿ ಮನರಂಜನೆ ಒದಗಿಸಲು ಅನೇಕ ಆಪ್‌ಗಳು ಲಭ್ಯವಿದ್ದರೂ ಅಂತರ್ಜಾಲ ಎಂಬ ಮಾಯೆ ಇಲ್ಲದಿದ್ದರೇ ಸ್ಮಾರ್ಟ್‌ಪೋನ್‌ನಲ್ಲಿ ಏನು ವಿಶೇಷತೆ ಎನಿಸುವುದಿಲ್ಲ. ಅದೇ ಆಗಿನ ಕಾಲದ ಬ್ಲ್ಯಾಕ್‌ ಅಂಡ್ ವೈಟ್ ಸೆಟ್‌ಗಳಲ್ಲಿ ಕೇವಲ ಚಾರ್ಜ್‌ ಇದ್ದರೇ ಸಾಕಿತ್ತು ಬೇಸರ ತರದ ಸ್ನೇಕ್‌ಗೇಮ್‌ ಭರ್ಜರಿ ಮನರಂಜನೆ ನೀಡುತ್ತಿತ್ತು.

ಸ್ಮಾರ್ಟ್‌ಫೋನ್‌ ಅನ್ಯೂನ್ಯತೆ

ಸ್ಮಾರ್ಟ್‌ಫೋನ್‌ ಅನ್ಯೂನ್ಯತೆ

ಸ್ಮಾರ್ಟ್‌ಪೋನ್‌ ಇಲ್ಲದ ಕಾಲದಲ್ಲಿ ಜೊತೆಗಿರುವವರೊಂದಿಗೆ ಮಾತನಾಡುತ್ತಿದ್ದರು, ಕುಟುಂಬಕ್ಕೆ ಸಮಯ ಮೀಸಲಿತ್ತು. ಆದರೆ ಸ್ಮಾರ್ಟ್‌ಫೋನ್‌ ಜಮಾನದ ಈ ಕಾಲದಲ್ಲಿ ಎದುರಿಗಿದ್ದವರ ಜೊತೆಗೂ ಸ್ಮಾರ್ಟ್‌ಫೋನ್‌ ಮೂಲಕವೇ ಟೆಕ್ಸ್ಟ್‌ ಮಾಡುವಂತಾಗಿದೆ ನೇರ ಮಾತುಕತೆಗಳು ದೂರಾದಂತೆ ಭಾಸವಾಗುತ್ತಿರುವುದು ಸುಳ್ಳಲ್ಲ. ಅದನ್ನು ಸ್ಪಷ್ಟವಾಗಿ ಈ ಚಿತ್ರ ತಿಳಿಸುತ್ತೆ ನೋಡಿ.

Most Read Articles
Best Mobiles in India

English summary
20 memes on smartphones non-millennials can use against millennials.That Prove Millennials Really Are The best Generation.! to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more