ಗೇಮಿಂಗ್ ಟೂರ್ನಮೆಂಟ್‌ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

|

ಜನಪ್ರಿಯ ರಿಲಾಯನ್ಸ್‌ ಜಿಯೋ ಗೇಮ್ಸ್ 27 ದಿನಗಳ ಕ್ಲಾಷ್ ರಾಯಲ್ ಪಂದ್ಯಾವಳಿಯನ್ನು ಆಯೋಜಿಸಿದೆ. ಇದರಲ್ಲಿ ವಿಜೇತರಿಗೆ 'ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್' ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಗೇಮ್‌ನಲ್ಲಿ ಆಟಗಾರರು ಪ್ರಶಸ್ತಿಗಳು ಗೆಲ್ಲಬಹುದು. ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಗೇಮಿಂಗ್ ಟೂರ್ನಮೆಂಟ್‌ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

ಕ್ಲಾಷ್ ರಾಯಲ್ ಒಂದು ಫ್ರೀಮಿಯಮ್, ನೈಜ-ಸಮಯ, ಮಲ್ಟಿಪ್ಲೇಯರ್ ಸ್ಟ್ರಾಟಜಿ ವಿಡಿಯೋ ಗೇಮ್ ಆಗಿದ್ದು, ಇದರಲ್ಲಿ ರಾಯಲ್ಸ್, ಕ್ಲಾಷ್ ಮತ್ತು ಹೆಚ್ಚಿನ ಪಾತ್ರಗಳನ್ನು ಕಾಣಬಹುದಾಗಿದೆ. ಕ್ಲಾಷ್ ಆಫ್ ಕ್ಲಾನ್ಸ್ ಟ್ರೂಪ್ಸ್, ಸ್ಪೇಲ್ಸ್‌ ಮತ್ತು ಡಿಫೆನ್ಸಸ್ಸ್ ಗಳಿದ್ದು, ರಾಯಲ್ ಫ್ರಿನ್ಸಸ್, ನೈಟ್ಸ್, ಬೇಬಿ ಡ್ರಾಗನ್ಸ್ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಡಜನ್ಗಟ್ಟಲೆ ಕಾರ್ಡ್‌ಗಳನ್ನು ಸಂಗ್ರಹಿಸಿ ಮತ್ತು ನವೀಕರಿಸಬಹುದಾಗಿದೆ.

ಜಿಯೋ ಗೇಮ್ಸ್ ಕ್ಲಾಷ್ ರಾಯಲ್ ಪಂದ್ಯಾವಳಿ, ಸೂಪರ್‌ಸೆಲ್ ಸಹಯೋಗದೊಂದಿಗೆ ನಡೆಯಲಿದೆ. ಇಲ್ಲಿ ನೀವು ಸ್ಪರ್ಧಿಸಿ, ನಿಮ್ಮ ಕೌಶಲ್ಯಗಳನ್ನು ಪರೀಕ್ಷಿಸಿ ಮತ್ತು ಕಾರ್ಯತಂತ್ರದಿಂದ ಜಯಗಳಿಸಬಹುದಾಗಿದೆ . ನವೆಂಬರ್ 28 ರಿಂದ ಡಿಸೆಂಬರ್ 25 ರವರೆಗೆ ನಡೆಯಲಿರುವ 27 ದಿನಗಳ ಪಂದ್ಯಾವಳಿಯು ಪ್ರತಿ ಗೇಮರ್‌ಗೆ ವಿವಿಧ ಹಂತದ ಪರಿಣತಿಯನ್ನು ಹೊಂದಿದೆ - ಆರಂಭಿಕರು, ಹವ್ಯಾಸಿಗಳು ಮತ್ತು ಪ್ರೋ-ಗೇಮರುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಗೇಮಿಂಗ್ ಟೂರ್ನಮೆಂಟ್‌ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

ಪಂದ್ಯಾವಳಿಯ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ಭಾಗವಹಿಸುವವರು '1-ವರ್ಸಸ್ -1 ಪಂದ್ಯಗಳಲ್ಲಿ' ಗರಿಷ್ಠ ಗೆಲುವುಗಳನ್ನು ಗಳಿಸಬೇಕಾಗುತ್ತದೆ, ಅಲ್ಲಿ ವಿಜೇತರು ಆಕರ್ಷಕ ಸಾಪ್ತಾಹಿಕ ಕೊಡುಗೆಗಳ ಜೊತೆಗೆ ದೊಡ್ಡ ನಗದು ಬಹುಮಾನಗಳನ್ನು ಗೆಲ್ಲಬಹುದು. ಪಂದ್ಯಾವಳಿಯಲ್ಲಿ ಭಾಗವಹಿಸಲು ಗೇಮರ್ ಗಳು ಮತ್ತು ಉತ್ಸಾಹಿಗಳು https://play.jiogames.com/clashroyale ನಲ್ಲಿ ನೋಂದಾಯಿಸಿಕೊಳ್ಳಬಹುದು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಜಿಯೋಟಿವಿಯಲ್ಲಿ ಸ್ಟ್ರೀಮ್ ಮಾಡಲಾಗುವುದು.

ಪ್ರಮುಖ ದಿನಾಂಕಗಳು:

ನೋಂದಣಿ: 26ನೇ ನವೆಂಬರ್‌ ನಿಂದ 19ನೇ ಡಿಸೆಂಬರ್ ವರೆಗೆ

ಸ್ಪರ್ಧೆ ಪ್ರಾರಂಭ: 28ನೇ ನವೆಂಬರ್ 2020 ರಿಂದ

ಪಂದ್ಯಾವಳಿ ದಿನಾಂಕಗಳು ಮತ್ತು ಫೈನಲ್ಸ್: ಡಿಸೆಂಬರ್ 21 ರಿಂದ 25ರ ವರೆಗೆ

ನೋಂದಣಿ:

- ಇಲ್ಲಿ ನೋಂದಾಯಿಸಿ https://play.jiogames.com/clashroyale

- ಜಿಯೋ ಮತ್ತು ಜಿಯೋ ಅಲ್ಲದ ಬಳಕೆದಾರರಿಗೆ ನೋಂದಣಿ ಮುಕ್ತವಾಗಿದೆ

- ಯಾವುದೇ ನೋಂದಣಿ ಶುಲ್ಕಗಳು ಇಲ್ಲ

Most Read Articles
Best Mobiles in India

Read more about:
English summary
Reliance Jio's gaming arm JioGames said it has partnered with Battle Royale game Clash Royale to host a 27-day gaming tournament that will start on 28 November 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X