ನಾವೇ ಮೊದಲು..! ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದವರು ಇವರು..!

By Avinash
|

ವಿಶ್ವದಲ್ಲಿ ಭಾರತ ತನ್ನದೇ ಆದ ಗೌರವವನ್ನು ಹೊಂದಿದೆ. ಸೊನ್ನೆ, ಚೆಸ್, ಆಯುರ್ವೇದ, ಸುಶ್ರೂತ, ವಜ್ರ ಹೀಗೆ ಹಲವು ಮೊದಲುಗಳನ್ನು ಭಾರತ ಜಗತ್ತಿಗೆ ನೀಡಿದೆ. ಅದರಲ್ಲೂ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳನ್ನು ಭಾರತ ನೀಡಿದೆ. ಆದರೆ, ಅನೇಕ ಭಾರತೀಯರ ಆವಿಷ್ಕಾರಗಳು ಭಾರತೀಯರಿಗೆ ಗೊತ್ತಿಲ್ಲ. ಈ ಆವಿಷ್ಕಾರಗಳು ಇಡೀ ಜಗತ್ತಿನ ತಂತ್ರಜ್ಞಾನ ವ್ಯವಸ್ಥೆಯನ್ನು ಬದಲಿಸಿವೆ.

ನಾವೇ ಮೊದಲು..! ಭಾರತದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದವರು ಇವರು..!

ಅದಕ್ಕಾಗಿಯೇ ಈ 72ನೇ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ಅಂತಹ ಆವಿಷ್ಕಾರಗಳನ್ನು ನೆನೆಯೋಣ, ಇವರು ಟಿವಿ, ರೇಡಿಯೋ, ನ್ಯೂಸ್‌ಪೇಪರ್‌ಗಳಲ್ಲಿ ಮಿಂಚಿಲ್ಲದಿರಬಹುದು. ಆದರೆ, ಎಲೆಮರೆಯ ಕಾಯಿಯಂತೆ ಭಾರತೀಯ ವಿಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅಂತಹ ವಿಜ್ಞಾನಿ ಹಾಗೂ ತಂತ್ರಜ್ಞರನ್ನು ಪರಿಚಯಿಸುವ ಸಲುವಾಗಿ ಜನಸಾಮಾನ್ಯರಿಗೆ ಗೊತ್ತಿಲ್ಲದ ಒಂದಿಷ್ಟು ಅನ್ವೇಷಣಾಕಾರರ ಪರಿಚಯವನ್ನು ಇಲ್ಲಿ ಮಾಡಲಾಗಿದೆ.

ಜಿ.ಡಿ.ನಾಯ್ಡು (Two-Seater Petrol Engine)

ಜಿ.ಡಿ.ನಾಯ್ಡು (Two-Seater Petrol Engine)

ಭಾರತದ ಎಡಿಸನ್‌ ಎಂದು ಕರೆಯಲ್ಪಡುವ ಜಿ.ಡಿ.ನಾಯ್ಡು ಅನೇಕ ಪ್ರಮುಖ ಅನ್ವೇಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿರುವುದು Two-Seater Petrol Engine. ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್ ಕಂಡುಹಿಡಿದ ಹೆಮ್ಮೆ ಇವರಿಗೆ ಸಲ್ಲುತ್ತದೆ. ಇವರ ಕೊಡುಗೆಗಳು ಕೇವಲ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದರು, ಎಲೆಕ್ಟ್ರಿಕಲ್, ಮೆಕಾನಿಕಲ್, ಕೃಷಿ, ಆಟೋಮೊಬೈಲ್‌ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇವರ ಕೊಡುಗೆ ಬಹಳಷ್ಟಿದೆ. ಸೂಪರ್ ಥೀನ್‌ ಶೇವಿಂಗ್‌ ಬ್ಲೇಡ್, ಫಿಲ್ಮ್‌ ಕ್ಯಾಮೆರಾಗಳಿಗೆ ಡಿಸ್ಟೆನ್ಸ್‌ ಅಡ್ಜಸ್ಟರ್, ಫ್ರೂಟ್ ಜ್ಯೂಸ್ ಎಕ್ಟ್ರಾಕ್ಟರ್, ಟ್ಯಾಂಪರ್ ಪ್ರೂಫ್ ವೋಟ್ ರೆಕಾರ್ಡಿಂಗ್ ಮಷೀನ್, ಕೇರೋಸೆನ್‌ನಿಂದ ಕಾರ್ಯನಿರ್ವಹಿಸುವ ಫ್ಯಾನ್‌ ಅನ್ವೇಷಿಸಿದ್ದಾರೆ.

ವಿನೋದ್ ಧಾಮ್‌ (Intel Pentium Chip)

ವಿನೋದ್ ಧಾಮ್‌ (Intel Pentium Chip)

ನಮಗೆಲ್ಲಾ ಇಂಟೆಲ್‌ ಪ್ರೊಸೆಸರ್‌ಗಳ ಬಗ್ಗೆ ಗೊತ್ತು, ಕಂಪ್ಯೂಟರ್ ಜಗತ್ತಿನಲ್ಲಿ ಹೊಸ ಕ್ರಾಂತಿ ತಂದಿದ್ದು ಇದೇ ಇಂಟೆಲ್ ಪ್ರೊಸೆಸರ್‌ಗಳು. ಅಂತಹ ಇಂಟೆಲ್‌ ಪೆಂಟಿಯಮ್ ಚಿಪ್‌ಸೆಟ್‌ ಅಭಿವೃದ್ಧಿಪಡಿಸಿದ್ದು, ನಮ್ಮ ಭಾರತದವರೇ ಆದ ವಿನೋದ್‌ ಧಾಮ್‌. ಇವರನ್ನು ಪೇಂಟಿಯಮ್‌ ಚಿಪ್‌ನ ಪಿತಾಮಹ ಎಂದು ಕರೆಯುತ್ತಾರೆ. ಸದ್ಯ ಅನೇಕ ಕಂಪನಿಗಳಿಗೆ ಸಲಹೆಗಾರರಾಗಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಪದವಿ ಪಡೆದಿದ್ದಾರೆ. ಇಂಟೆಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆನಂದಿಶ್‌ ಕುಮಾರ್ ಪಾಲ್‌ (Electromagnetically Controlled Fuel Efficient IC Engine)

ಆನಂದಿಶ್‌ ಕುಮಾರ್ ಪಾಲ್‌ (Electromagnetically Controlled Fuel Efficient IC Engine)

ಭಾರತೀಯ ಅನ್ವೇಷಕ, ಕವಿ, ಪರಿಸರವಾದಿಯಾಗಿರುವ ಆನಂದಿಶ್ ಕುಮಾರ್ ಪಾಲ್‌ವಿದ್ಯುತ್ಕಾಂತೀಯ ನಿಯಂತ್ರಿತ ಸಮರ್ಥ ಐಸಿ ಇಂಜಿನ್ ಅಭಿವೃದ್ಧಿಪಡಿಸಿದ್ದಾರೆ. 9 ಯುಎಸ್‌ ಪೇಟೆಂಟ್‌ಗಳನ್ನು ಪಡೆದಿರುವ ಇವರು. 2009ರಲ್ಲಿ Electromagnetically Controlled Fuel Efficient IC Engine ಕಂಡುಹಿಡಿದು ಪೇಟೆಂಟ್ ಪಡೆದರು. ಅದಲ್ಲದೇ ಗ್ಯಾಸ್‌ನಿಂದ ಆಪರೇಟ್‌ ಮಾಡಬಹುದಾದ ರೀಲೋಡಿಂಗ್ ಗನ್, 3D ಕಂಪ್ಯೂಟರ್ ಮೌಸ್, ಟರ್ಕಿ ಎಲೆಕ್ಟ್ರಿಕ್ ಮೋಟಾರ್‌ ಇವರ ಪ್ರಮುಖ ಅನ್ವೇಷಣೆಗಳು. ಮೂಲತಃ ಇವರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರಲ್ಲ. ಆಲ್‌ ಇಂಡಿಯಾ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ ಹೊರಬಂದ ಮೇಲೆ ಇಂಜಿನಿಯರಿಂಗ್‌ನ್ನು ಹವ್ಯಾಸವಾಗಿ ತೆಗೆದುಕೊಂಡು ಭಾರತದ ಹಿರಿಮೆಯನ್ನು ಹೆಚ್ಚು ಮಾಡಿದರು.

ಶಿವ ಅಯ್ಯಾದುರೈ (Email)

ಶಿವ ಅಯ್ಯಾದುರೈ (Email)

14ನೇ ವಯಸ್ಸಿನಲ್ಲಿಯೇ ಟೆಕ್‌ ಜಗತ್ತಿಗೆ ಪರಿಚಯವಾದವರು ಶಿವ ಅಯ್ಯಾದುರೈ, 1963 ಡಿಸೆಂಬರ್ 2ರಂದು ಮುಂಬೈನಲ್ಲಿ ಜನಿಸಿದ ಶಿವ ತಮ್ಮ 7ನೇ ವಯಸ್ಸಿಗೆ ಯುನೈಟೆಡ್‌ ಸ್ಟೇಟ್‌ಗೆ ವಲಸೆ ಹೋದರು. 14ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ ಯುನಿವರ್ಸಿಟಿಯ ಕೊರ್ಟಾಂಟ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾಥಮೇಟಿಕಲ್‌ ಸೈನ್ಸಸ್‌ನಲ್ಲಿ ವಿಶೇಷ ಬೆಸಿಗೆ ಶಿಬಿರದಲ್ಲಿ ಪಾಲ್ಗೊಂಡು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತು ಇಮೇಲ್ ಅನ್ವೇಷಿಸಿದರು. 1978ರಲ್ಲಿ ಇಮೇಲ್‌ ಅನ್ವೇಷಿಸಿ ಭಾರತದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು.

ಅಜಯ್ ವಿ.ಭಟ್ (USB)

ಅಜಯ್ ವಿ.ಭಟ್ (USB)

ಇಂಡೋ ಅಮೇರಿಕನ್ ವಿಜ್ಞಾನಿಯಾಗಿರುವ ಅಜಯ್‌.ವಿ. ಭಟ್‌ ಟೆಕ್‌ ಲೋಕದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದ್ದಾರೆ. ಟೆಕ್ ಲೋಕದಲ್ಲಿ ಎಲ್ಲರೂ ಬಳಸುವ ಯುಎಸ್‌ಬಿ (Universal Serial Bus), ಎಜಿಪಿ (Accelerated Graphics Port), ಪಿಸಿಐ ಎಕ್ಸ್‌ಪ್ರೆಸ್, ಪ್ಲಾಟ್‌ಫಾರ್ಮ್‌ ಪವರ್ ಮ್ಯಾನೇಜ್‌ಮೆಂಟ್‌ ಆರ್ಕಿಟೆಕ್ಚರ್ ಮತ್ತು ವಿವಿಧ ರೀತಿಯ ಚಿಪ್‌ಸೆಟ್‌ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುರೋಪಿಯನ್ ಪೇಟೆಂಟ್ ಆಫೀಸ್ ನೀಡುವ ಯುರೋಪಿಯನ್ ಇನ್‌ವೆಂಟರ್ ಅವಾರ್ಡ್‌ಗೆ 2013ರಲ್ಲಿ ಭಾಗಿಯಾಗಿದ್ದಾರೆ. ವಡೋದರಾದಲ್ಲಿ ತಮ್ಮ ಪದವಿಯನ್ನು ಮುಗಿಸಿರುವ ಅಜಯ್ ಸದ್ಯ ಯುಎಸ್‌ನ 30ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿದ್ದಾರೆ.

Most Read Articles
Best Mobiles in India

English summary
5-little-known-indians-with-amazing-tech-inventions. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more