ವಿಶ್ವ ಟೆಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಭಾರತೀಯರು!

|

ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರ ಪಾತ್ರ ದೊಡ್ಡದಿದೆ. ಭಾರತೀಯ ಮೂಲದ ಹಲವಾರು ಟೆಕ್ ಅಧಿಕಾರಿಗಳು ವಿಶ್ವದ ಕೆಲವು ದೊಡ್ಡ ಟೆಕ್ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ.

ಕ್ಷೇತ್ರದಲ್ಲಿ

ಹೌದು, ಪ್ರಸ್ತುತ ಟೆಕ್‌ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳನ್ನು ಪರಿಚಯಿಸುತ್ತಲೆ ಸಾಗಿದ್ದಾರೆ. ಅವುಗಳಲ್ಲಿ ಗೂಗಲ್, ಮೈಕ್ರೋಸಾಫ್ಟ್‌, ಅಡೊಬ್ ಸೇರಿದಂತೆ ದೊಡ್ಡ ಕಂಪನಿಗಳು ಸ್ಮಾರ್ಟ್‌ಫೋನ್‌, ತಂತ್ರಜ್ಞಾನ ವಲಯದಲ್ಲಿ ಬಾಸ್‌ ಅನಿಸಿಕೊಂಡಿವೆ. ಹಾಗೆಯೇ ಫೇಸ್‌ಬುಕ್, ಟ್ವಿಟ್ಟರ್ ಈ ಸೋಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್ಗಳು ಸದ್ಯ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಅಚ್ಚರಿಯ ಸಂಗತಿಯೆಂದರೇ ಈ ಎಲ್ಲ ಟೆಕ್‌ ಕಂಪನಿಗಳ ಭಾರತೀಯರ ಕೊಡುಗೆ ಇರುವುದು ಹೆಮ್ಮೆಯ ಸಂಗತಿ ಆಗಿದೆ. ವಿಶ್ವ ಟೆಕ್ ಕ್ಷೇತ್ರದಲ್ಲಿರುವ ಪ್ರಮುಖ ಭಾರತೀಯರ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಸುಂದರ್ ಪಿಚೈ (Sundar Pichai)

ಸುಂದರ್ ಪಿಚೈ (Sundar Pichai)

ಮೂಲತ ಭಾರತೀಯರಾದ ಸುಂದರ್ ಪಿಚೈ ಅವರು ಸದ್ಯ ಇವರು ವಿಶ್ವ ಟೆಕ್ ಕ್ಷೇತ್ರದ ದಿಗ್ಗಜ ಗೂಗಲ್ ಸಂಸ್ಥೆಯ ಸಿಇಓ-CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಗಷ್ಟ 10, 2015 ರಂದು ಗೂಗಲ್ ಸಿಇಓ ಆಗಿ ನೇಮಕವಾಗಿರುವ ಇವರಿಗೆ ಡಿಸೆಂಬರ್ 2019ರಲ್ಲಿ ಹೆಚ್ಚುವರಿಯಾಗಿ Alphabet-ಅಲ್ಫಾಬೆಟ್ ಸಿಇಓ ಜವಾಬ್ದಾರಿಯನ್ನು ನೀಡಿದ್ದಾರೆ. 47 ವರ್ಷದ ಸುಂದರ್ ಪಿಚೈ ಹುಟ್ಟಿದ್ದು, ತಮಿಳನಾಡಿನ ಚೆನೈನಲ್ಲಿ.

ಸತ್ಯ ನಡೆಲ್ಲಾ ​(Satya Nadella)

ಸತ್ಯ ನಡೆಲ್ಲಾ ​(Satya Nadella)

ಪ್ರಸ್ತುತ ದೈತ್ಯ ಟೆಕ್ ಸಂಸ್ಥೆ ಆಗಿರುವ ಮೈಕ್ರೋಸಾಫ್ಟ್‌ನ CEO ಆಗಿ ಕಾರ್ಯನಿರ್ವಹಿಸುತ್ತಿರುವ ಸತ್ಯ ನಡೆಲ್ಲಾ ಅವರು ಹುಟ್ಟಿ ಬೆಳೆದಿದ್ದು, ಹೈದ್ರಾಬಾದ್‌ನಲ್ಲಿ. 52 ವರ್ಷ ವಯಸ್ಸಿನ ಇವರು 1992ರಿಂದ ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2014ರಿಂದ ಸಂಸ್ಥೆಯ CEO ಆಗಿ ನೇಮಕವಾಗಿದ್ದಾರೆ. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ BE ಶಿಕ್ಷಣವನ್ನು ಮುಗಿಸಿದ್ದಾರೆ.

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ (​Shantanu Narayen)

ಶಾಂತನು ನಾರಾಯಣ ಅವರು ಮೂಲತ ಹೈದ್ರಾಬಾದ್‌ನವರಾಗಿದ್ದು, ಸದ್ಯ ಇವರು ಅಮೆರಿಕಾದ ಪ್ರತಿಷ್ಠಿತ ಅಡೊಬ್ ಸಾಫ್ಟ್‌ವೇರ್ ಸಂಸ್ಥೆಯ CEO ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಪಲ್‌ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಇವರು 1998ರಲ್ಲಿ ಅಡೊಬ್ ಸಂಸ್ಥೆ ಸೇರಿಕೊಂಡರು. 2007ರಿಂದ ಸಂಸ್ಥೆಯ ಸಿಒಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಲಿಫೊರ್ನಿಯದಲ್ಲಿ MBA ಯನ್ನು ಪೂರೈಸಿದ್ದಾರೆ.

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ (​Jayashree Ullal)

ಜಯಶ್ರೀ ಉಲ್ಲಾಳ್ ಅವರು ಯುಎಸ್‌ಎ ನಲ್ಲಿರುವ ಪ್ರತಿಷ್ಠಿತ ಕಂಪ್ಯೂಟರ್ ನೆಟವರ್ಕ ಸಂಸ್ಥೆಯಾದ 'ಅರಿಷ್ಟಾ ನೆಟವರ್ಕ (Arista Network)'ನ ಅಧ್ಯಕ್ಷೆ ಮತ್ತು ಸಿಒಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಶ್ರೀ ಅವರು ತಮ್ಮ ವೃತ್ತಿ ಜೀವನವನ್ನು AMD ಸಂಸ್ಥೆಯಲ್ಲಿ ಆರಂಭಿಸಿದ್ದರು. ಫೋರ್ಬ್ಸ್ ಮ್ಯಾಗಜೀನ್ ಗುರುತಿಸುವ ವಿಶ್ವದ ಪ್ರಭಾವಿ ಗಣ್ಯವ್ಯಕ್ತಿಗಳ ಟಾಪ್ 5ರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದಾರೆ.

ಅಂಜಲಿ ಸುಡ್ (Anjali Sud)

ಅಂಜಲಿ ಸುಡ್ (Anjali Sud)

ಭಾರತೀಯ ಮೂಲದ ಅಂಜಲಿ ಸುಡ್ ಅವರು 2017ರಲ್ಲಿ ನ್ಯೂಯಾರ್ಕನಲ್ಲಿರುವ Vimeo ವಿಡಿಯೊ ಪ್ಲಾಟ್‌ಫಾರ್ಮ್ ಸಂಸ್ಥೆಯಲ್ಲಿ CEO ಆಗ ಕಾರ್ಯನಿರ್ವಹಿಸುತ್ತಿದ್ದಾರೆ. Vimeo ಜಾಹಿರಾತು ಮುಕ್ತ ವಿಡಿಯೊ ಪ್ಲಾಟ್‌ಫಾರ್ಮ್ ಆಗಿದೆ. ಹಾರ್ವಡ್‌ ಬಿಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಶಿಕ್ಷಣವನ್ನು ಪಡೆದಿದ್ದಾರೆ.

Most Read Articles
Best Mobiles in India

English summary
Google parent Alphabet CEO Sundar Pichai and Microsoft CEO Satya Nadella are poster boys of technology world as they lead two of the biggest companies in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X