Just In
- 5 hrs ago
ಕಳೆದು ಹೋದ ಸ್ಮಾರ್ಟ್ಫೋನ್ನಲ್ಲಿನ ನಿಮ್ಮ ವಾಟ್ಸಾಪ್ ಅಕೌಂಟ್ ಮತ್ತೆ ಪಡೆಯುವುದು ಹೇಗೆ?
- 8 hrs ago
ರಿಯಲ್ಮಿ C25 ಫಸ್ಟ್ ಲುಕ್: ಬಜೆಟ್ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್!
- 22 hrs ago
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್ ಮಾಡುವುದು ಹೇಗೆ?
- 23 hrs ago
ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!
Don't Miss
- News
ಮಾಗಡಿ ಶಾಸಕ ಎ.ಮಂಜುನಾಥ್ಗೆ ಕೋವಿಡ್ ಸೋಂಕು
- Movies
'ಬದುಕು ಮತ್ತೆ ಕೈ ಬೀಸಿ ಕರೆದಾಗ' ಎನ್ನುತ್ತಾ ನಗುತ್ತಾ ವಾಪಸ್ ಆದ ನಟಿ ಚೈತ್ರಾ ಕೋಟೂರ್
- Sports
ಐಪಿಎಲ್ 2021: ಆರ್ಸಿಬಿ ಪರ ಮತ್ತೊಂದು ಭರ್ಜರಿ ಅರ್ಧ ಶತಕ ಸಿಡಿಸಿದ ಮ್ಯಾಕ್ಸ್ವೆಲ್
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶ್ವದಲ್ಲಿಯೇ ಅತೀ ಹೆಚ್ಚು ಬಳಸುವ ಟಾಪ್ 5 ವೆಬ್ಸೈಟ್ಗಳು!
ಪ್ರಸ್ತುತ ಬಹುತೇಕ ಎಲ್ಲ ಕೆಲಸಗಳು ಇಂಟರ್ನೆಟ್ ಆಧಾರಿತವಾಗಿವೆ. ಆನ್ಲೈನ್ನ ಪ್ರತಿಯೊಂದು ಸೇವೆಗಳಿಗೂ ಪ್ರತ್ಯೇಕ ವೆಬ್ಸೈಟ್ಗಳಿವೆ ಹಾಗೂ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವುದೇ ಗೂಗಲ್. ಹೀಗಾಗಿ ಇಂಟರ್ನೆಟ್ ಬಳಕೆ ಇಲ್ಲದೇ ಇರುವುದು ಕಷ್ಟ ಅನಿಸುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಸೇವೆಗಳನ್ನು ಪಡೆಯಲು ಬಳಕೆದಾರರು ಕೆಲವೊಂದು ವೆಬ್ಸೈಟ್ಗಳಿಗೆ ಪದೇ ಪದೇ ಭೇಟಿ ನೀಡುವ ಅಗತ್ಯ ಇರುತ್ತದೆ.

ಹೌದು, ಇಂಟರ್ನೆಟ್ ಬಳಕೆದಾರರು ಬುಕ್ಕಿಂಗ್, ಆರ್ಡರ್, ಸರ್ಕಾರಿ, ಖಾಸಗಿ, ಆಸಕ್ತಿ ವಿಷಯ ಹೀಗೆ ಯಾವುದೇ ಅಗತ್ಯ ಸೇವೆಗಳನ್ನು ಪಡೆಯಲು ಅದಕ್ಕೆ ಸಂಬಂಧಿಸಿದ ವೆಬ್ಸೈಟ್ಗಳಿಗೆ ಭೇಟಿ ನೀಡುತ್ತಾರೆ. ಆದರೆ ಈ ಎಲ್ಲ ವೆಬ್ಸೈಟ್ಗಳಿಗೆ ಅಧಿಕವಾಗಿ ಭೇಟಿ ನೀಡುವ ಸಾಧ್ಯತೆಗಳು ವಿರಳ. ಆದರೆ ಗೂಗಲ್ ಸೇರಿದಂತೆ ಇನ್ನು ಕೆಲವು ವೆಬ್ಸೈಟ್ಗಳಿವೆ ಅವುಗಳಿಗೆ ಖಂಡಿತಾ ಹೆಚ್ಚು ಬಾರಿ ಭೇಟಿ ನೀಡುತ್ತಲೆ ಇರುತ್ತಾರೆ. 2019ರಲ್ಲಿ ಬಳಕೆದಾರರು ಹೆಚ್ಚಾಗಿ ಭೇಟಿ ನೀಡಿದ ಪ್ರಮುಖ ವೆಬ್ಸೈಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಗೂಗಲ್
ವಿಶ್ವ ಸರ್ಚ್ ದೈತ್ಯ ಎಂದೇ ಗುರುತಿಸಿಕೊಂಡಿರುವ ಗೂಗಲ್ ಹೆಚ್ಚು ವೀಕ್ಷಣೆ ಪಡೆದ ವೆಬ್ಸೈಟ್ಗಳ ಪೈಕಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರಿಗೆ ಯಾವುದೇ ವಿಷಯಕ್ಕೆ ಮಾಹಿತಿ ಬೇಕಿದ್ದರೂ ಮೊದಲು ಭೇಟಿ ನೀಡುವ ತಾಣವೇ ಗೂಗಲ್.

ಯೂಟ್ಯೂಬ್
ಯೂಟ್ಯೂಬ್ ವೆಬ್ಸೈಟ್ ಸಹ ಗೂಗಲ್ ಒಡೆತನದ್ದೆ ಆಗಿದೆ. ಯೂಟ್ಯೂಬ್ ವಿಡಿಯೊ ಮತ್ತು ಆಡಿಯೊ ರೂಪದ ಮಾಹಿತಿ ಕಣಜ ಆಗಿದೆ. ಇಲ್ಲಿ ಎಲ್ಲ ಬಗೆಯ ವಿಡಿಯೊ ಕಂಟೆಂಟ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಹೆಚ್ಚು ಭೇಟಿ ಪಡೆದ ವೆಬ್ಸೈಟ್ಗಳ ಪೈಕಿ ಯೂಟ್ಯೂಬ್ ಎರಡನೇ ಸ್ಥಾನದಲ್ಲಿ ಇದೆ.

ಫೇಸ್ಬುಕ್
ವಿಶ್ವದ ಅತೀ ಜನಪ್ರಿಯ ಸಾಮಾಜಿಕ ಜಾಲತಾಣ ಆಗಿರುವ ಫೇಸ್ಬುಕ್, ಹೆಚ್ಚು ಭೇಟಿ ಪಡೆದ ವೆಬ್ಸೈಟ್ಗಳ ಪೈಕಿ ಮೂರನೇ ಸ್ಥಾನದಲ್ಲಿ ಇದೆ. ಫೇಸ್ಬುಕ್ ತಾಣವು ಟೆಕ್ಸ್ಟ್, ಫೋಟೊ, ವಿಡಿಯೊ, ಕಂಟೆಂಟ್ ನಂತಹ ಅತ್ಯುತ್ತಮ ಮಲ್ಟಿಮೀಡಿಯಾ ಪ್ಲಾಟ್ಫಾರ್ಮ್ ಆಗಿದೆ.

ಬೈದು- Baidu
ಬೈದು ಚೀನಾ ಮೂಲದ ವೆಬ್ಸೈಟ್ ಆಗಿದ್ದು, ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಪೂರೈಸುತ್ತದೆ. ಹೆಚ್ಚು ಭೇಟಿ ಪಡೆದ ವೆಬ್ಸೈಟ್ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ಒಳಗೊಂಡಿದೆ.

ವಿಕಿಪಿಡಿಯಾ
ವಿಕಿಪಿಡಿಯಾ ವೆಬ್ಸೈಟ್ ಸಹ ಎಲ್ಲ ಮಾಹಿತಿಯ ಒಳಗೊಂಡ ಒಂದು ವಿಶ್ವಕೋಶ ಆಗಿದೆ. ಬಳಕೆದಾರರು ಈ ಪ್ಲಾಟ್ಫಾರ್ಮ್ನಿಂದ ಮಾಹಿತಿ ಪಡೆಯಲುಬಹುದು ಮತ್ತು ಗೊತ್ತಿರುವ ಹೆಚ್ಚುವರಿ ಮಾಹಿತಿ ಸೇರಿಸಲು ಬಳಕೆದಾರರಿಗೆ ಅವಕಾಶ ನೀಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999