ನಿಮಗೇ ತಿಳಿಯದಂತೆ ವೆಬ್ ಸೈಟ್ ಗಳು ನಿಮ್ಮ 5 ಮಾಹಿತಿಗಳನ್ನು ಕದ್ದು ಬಿಡುತ್ತವೆ!

  |

  ದಿನದಿಂದ ದಿನಕ್ಕೆ ಇಂಟರ್ನೆಟ್ ಬಳಕೆದಾರರು ಹೆಚ್ಚುತ್ತಲೇ ಇದ್ದಾರೆ. ತಲೆಯಲ್ಲಿ ಬರುವ ಯಾವುದೋ ಆಲೋಚನೆಯನ್ನು ಹುಡುಕಬೇಕು, ತಿಳಿಯಬೇಕು ಅಂದರೆ ತಕ್ಷಣಕ್ಕೆ ನಾವು ಯಾವುದೋ ಪುಸ್ತಕವನ್ನು ಹುಡುಕಾಡುವ ಕಾಲ ಇದಲ್ಲ. ಬದಲಾಗಿ ಇಂಟರ್ನೆಟ್ ನಮ್ಮ ದೈನಂದಿನ ಅಗತ್ಯವಾಗಿ ಬಿಟ್ಟಿದೆ. ಗೂಗಲ್ ಇಲ್ಲದೆ ಇರಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಾವದಕ್ಕೆ ಒಗ್ಗಿಕೊಂಡಿದ್ದೇವೆ. ನಮ್ಮ ಕುತೂಹಲ,ಯಾವುದೋ ವಸ್ತುವಿನ ಬಗೆಗಿನ ಮಾಹಿತಿ, ವಿಳಾಸದ ಹುಡುಕಾಟ, ಸ್ಥಳದ ಮಾಹಿತಿ, ಪ್ರವಾಸಿ ತಾಣದ ಮಾಹಿತಿ, ರಸ್ತೆಯ ಮಾಹಿತಿ, ಪ್ರತಿಯೊಂದಕ್ಕೂ ನಮಗೆ ಇಂಟರ್ನೆಟ್ ಬೇಕಾಗುತ್ತದೆ.

  ನಿಮಗೇ ತಿಳಿಯದಂತೆ ವೆಬ್ ಸೈಟ್ ಗಳು ನಿಮ್ಮ 5 ಮಾಹಿತಿಗಳನ್ನು ಕದ್ದು ಬಿಡುತ್ತವೆ!

  ಎಣಿಸಲು ಸಾಧ್ಯವಿಲ್ಲದಷ್ಟು ವೆಬ್ ಸೈಟ್ ಗಳು ಅಂತರ್ಜಾಲದಲ್ಲಿದ್ದು, ಅವುಗಳು ನಿಮಗೆ ಬೋರ್ ಹೊಡೆಸಲು ಬಿಡುವುದೇ ಇಲ್ಲ. ಆದರೆ ಹೀಗೆ ನೀವು ಇಂಟರ್ ನೆಟ್ ನಲ್ಲಿ ಕಳೆಯುವ ಸಮಯದ ಲಾಭವನ್ನೇ ಪಡೆಯಲು ಕೆಲವರು ಹಾತೊರೆಯುತ್ತಿರುತ್ತಾರೆ. ಕೆಲವು ಬ್ಯೂಸಿನೆಸ್ ಡೀಲರ್ ಗಳು ಮತ್ತು ವೆಬ್ ಸೈಟ್ ಓನರ್ ಗಳಿಗೆ ನಿಮ್ಮ ವಯಕ್ತಿಕ ಮಾಹಿತಿಗಳು ಬೇಕಾಗಿರುತ್ತವೆ., ನಿಮಗೆ ತಿಳಿಯದಂತೆ ಕೆಲವರಿಗೆ ನಿಮ್ಮ ಈ ಕೆಳಗಿನ ವಯಕ್ತಿಕ ಮಾಹಿತಿಗಳು ಲಭ್ಯವಾಗಿ ಬಿಡುತ್ತೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಥಳ

  ಪ್ರತಿಯೊಂದು ಕಂಪ್ಯೂಟರ್ ಗೂ ತನ್ನದೇ ಆದ ಒಂದೊಂದು ಐಪಿ ಅಡ್ರೆಸ್ ಇರುತ್ತೆ.ವೆಬ್ ಸೈಟ್ ಮಾಲೀಕರಿಗೆ ತಮ್ಮ ವೆಬ್ ಸೈಟ್ ನೋಡಿದವರು ಎಲ್ಲಿಯವರು ಎಂದು ತಿಳಿಯಲು ಒಂದು ಟ್ರ್ಯಾಕಿಂಗ್ ಸ್ಕ್ರಿಪ್ಟ್ ನೀಡಲಾಗಿರುತ್ತೆ. ನಿಜಕ್ಕೂ ಹೇಳಬೇಕೆಂದರೆ ಇದು ಓದುಗರಿಗೆ ಸರಿಯಾದ ಮಾಹಿತಿ ಒದಗಿಸಲು ನೀಡುವ ಉದ್ದೇಶದಿಂದ ನೀಡಲಾಗಿರುತ್ತೆ. ಐಪಿ ಅಡ್ರೆಸ್ ಒಂದು ಸಾಕಾಗುತ್ತೆ. ನೀವು ಎಲ್ಲಿಂದ ಅಂದರೆ ಯಾವ ಸ್ಥಳದಿಂದ ವೆಬ್ ಸೈಟ್ ವೀಕ್ಷಣೆ ಮಾಡುತ್ತಿದ್ದೀರಿ,ನಿಮ್ಮ ಅಂತರ್ಜಾಲದ ಪ್ರೊವೈಡರ್ ಯಾರು, ನೀವು ವಾಸಿಸುತ್ತಿರುವ ಸಿಟಿಯ ಹೆಸರೇನು ಎಲ್ಲವನ್ನು ತಿಳಿಯಬಹುದಾಗಿದೆ

  ವಯಸ್ಸು, ಲಿಂಗ ಮತ್ತು ಸಿಸ್ಟಮ್ ಮಾಹಿತಿಗಳು

  ನೀವು ಯಾವುದೇ ವೆಬ್ ಸೈಟ್ ನ್ನು ಗೂಗಲ್ ಲಾಗ್ ಇನ್ ಇರುವಾಗ ನೋಡಿದರೆ, ಗುಗಲ್ ನಿಮ್ಮ ಹುಡುಕಾಟದ ಶೈಲಿಯನ್ನು ತನ್ನ ಡಾಟಾಬೇಸ್ ಮೂಲಕ ವಿಮರ್ಶಿಸಿ, ನಿಮ್ಮ ವಯಸ್ಸು ಮತ್ತು ಲಿಂಗವನ್ನು ತಿಳಿದುಕೊಳ್ಳುತ್ತೆ. ಜನಸಂಖ್ಯಾ ವರದಿ ತಯಾರಿಸುವಾಗ ಕೇಳುತ್ತಾರಲ್ಲ ವಯಸ್ಸು, ಲಿಂಗ ಅಂತ ಹಾಗೆ ನಿಮ್ಮ ಈ ಮಾಹಿತಿಗಳು ಗೂಗಲ್ ಮೂಲಕ ವೆಬ್ ಸೈಟ್ ಓನರ್ ಗಳಿಗೆ ಸಿಗುತ್ತೆ ಮತ್ತು ಆ ಮೂಲಕ ನಿಮ್ಮ ವಯಸ್ಸಿಗೆ ತಕ್ಕಂತ ಜಾಹೀರಾತುಗಳು ನೀವು ಸಿಸ್ಟಮ್ ಮುಂದೆ ಲಾಗಿನ್ ಆದಾಗ ಕಾಣುವುದಕ್ಕೆ ಕಾರಣವಾಗುತ್ತೆ. ಕೇವಲ ಯಾರು ಮತ್ತು ಏನು ಅಷ್ಟೇ ಮಾಹಿತಿಗಳನ್ನಲ್ಲ ಬದಲಾಗಿ ವೆಬ್ ಸೈಟ್ ಗಳು ಯಾವ ರೀತಿಯ ಬ್ರೌಸರ್ ನ್ನು ನೀವು ಬಳಸುತ್ತೀರಿ,ನಿಮ್ಮ ಆಪರೇಟಿಂಗ್ ಸಿಸ್ಟಮ್ ಯಾವುದು,ಸ್ಕ್ರೀನ್ ರೆಸೋಲ್ಯೂಷನ್ ಎಂತದ್ದು, ಯಾವ ವರ್ಷನ್ ನ ಫ್ಲಾಶ್ ನ್ನು ನೀವು ಬಳಕೆ ಮಾಡುತ್ತಿದ್ದೀರಿ ಎಲ್ಲವನ್ನೂ ತಿಳಿಯಲು ಸಾಧ್ಯವಾಗುತ್ತೆ.

  ವಯಕ್ತಿಕ ಮಾಹಿತಿಗಳು

  ಹೆಚ್ಚಿನ ಎಲ್ಲಾ ವೆಬ್ ಸೈಟ್ ಗಳು ಇತ್ತೀಚೆಗೆ ಗುಗಲ್ ಪ್ಲಸ್ ಮತ್ತು ಫೇಸ್ಬುಕ್ ಮೂಲಕ ಲಾಗಿನ್ ಆಗಲು ಅವಕಾಶ ಕಲ್ಪಿಸುತ್ತವೆ. ಅಂದರೆ ಆ ಮೂಲಕ ನಿಮ್ಮ ಸ್ನೇಹಿತರ ಬಳಗ,ನಿಮ್ಮ ಕುತೂಹಲಗಳು,ಯಾವುದನ್ನು ನೀವು ಇಷ್ಟ ಪಡುತ್ತೀರಿ, ಯಾವುದು ನಿಮಗೆ ಇಷ್ಟವಾಗುವುದಿಲ್ಲ, ನಿಮ್ಮ ಹವ್ಯಾಸಗಳೇನು, ಹೀಗೆ ಇತ್ಯಾದಿ ಮಾಹಿತಿಗಳನ್ನು ಅವು ಸುಲಭದಲ್ಲಿ ಕಲೆ ಹಾಕಿಬಿಡುತ್ತವೆ. ಕೆಲವು ವಸ್ತುಗಳ ಮಾರಾಟಕ್ಕೆ ಮುಂದಿನ ದಿನಗಳಲ್ಲಿ ಅವರಿಗೆ ಈ ಮಾಹಿತಿಗಳು ಅಗತ್ಯವಾಗಿ ಬೇಕಾಗುತ್ತವೆ. ಅದೇ ಕಾರಣಕ್ಕೆ ತಮ್ಮ ವಸ್ತುಗಳ ಪ್ರಮೋಷನ್ ಗಾಗಿ ನಿಮ್ಮ ವಯಕ್ತಿಕ ಮಾಹಿತಿಗಳನ್ನು ಅವರು ಕದ್ದು ಬಿಡುತ್ತಾರೆ.

  ವಿಳಾಸ, ಫೋನ್ ನಂಬರ್, ಮತ್ತು ಈ ಮೇಲ್

  ನೀವು ಯಾವುದಾದರೂ ಹೊಸ ಆಪ್ ಅಥವಾ ಸರ್ವೀಸ್ ಗೆ ಸೈನ್ ಇನ್ ಆಗುತ್ತಿದ್ದೀರಾದರೆ, ನಿಮ್ಮ ವಿಳಾಸ, ಫೋನ್ ನಂಬರ್ ಮತ್ತು ಯಾವ ಈ ಮೇಲ್ ಅಡ್ರೆಸ್ ಗೆ ಮೇಲ್ ಕಳಿಸಬೇಕು ಎಂಬುದನ್ನು ಅದು ಕೇಳಿಯೇ ಕೇಳುತ್ತೆ. ಆದರೆ ಹೀಗೆ ನಂಬಿಕೆ ಇಲ್ಲದ ಯಾವುದೋ ವೆಬ್ ಸೈಟ್ ಗೆ ನೀವು ಲಾಗಿನ ಆಗುವಾಗ ಇಂತಹ ಮಾಹಿತಿಗಳನ್ನು ಕೊಡುವುದು ಎಷ್ಟು ಸೂಕ್ತ ಎಂಬುದರ ಬಗ್ಗೆ ಹಲವು ಬಾರಿ ಯೋಚಿಸಿಕೊಳ್ಳಬೇಕು. ನೀವು ನಿಮ್ಮ ಸೋಷಿಯನ್ ಅಕೌಂಟ್ ಯಿಂದಲೇ ವ್ಯವಹರಿಸುತ್ತಿದ್ದೀರಾದರೂ ಕೂಡ, ಇವು ನಿಮಗೆ ಎಷ್ಟು ಅಹಿತವನ್ನುಂಟು ಮಾಡಬಹುದು ಅನ್ನುವುದರ ಭವಿಷ್ಯದ ಆಲೋಚನೆ ನಿಮ್ಮಲ್ಲಿದ್ದರೆ ಒಳಿತು. ನಿಮ್ಮ ಕೆಲವು ವಯಕ್ತಿಕ ಮಾಹಿತಿಗಳನ್ನು ಯಾವುದೇ ವೆಬ್ ಸೈಟ್ ಗೆ ನೀಡದೇ ಇರುವುದು ನಿಮ್ಮ ಹಿತದೃಷ್ಟಿಯಿಂದ ಉತ್ತಮವಾದದ್ದು.

  ಆದ್ಯತೆಗಳು

  ಯಾವುದಾದರೂ ವೆಬ್ ಸೈಟ್ ಗೆ ನೀವು ಹೋದಾಗ ಅಲ್ಲಿ ನಿಮ್ಮ ಫೋನಿನ ಕವರ್ ಬಗೆಗಿನ ಜಾಹಿತಾರುಗಳು ಇಲ್ಲವೆ ಕಲರ್ ಫುಲ್ ಬಟ್ಟೆಗಳ ಬಗೆಗಿನ ಜಾಹಿರಾತುಗಳು ಪಾಪ್ ಅಪ್ ಆಗುತ್ತಲೇ ಇರುತ್ತವೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ.. ಇದಕ್ಕೆ ಸಿಂಪಲ್ ಉತ್ತರ ಕುಕ್ಕಿಗಳು. ಕುಕ್ಕೀಸ್ ಎಂದರೆ ಚಿಕ್ಕ ಟೆಕ್ಸ್ಟ್ ಫೈಲ್ ಗಳು ನಿಮ್ಮ ಹಾರ್ಡ್ ಡಿಸ್ಕ್ ನಲ್ಲಿ ಸೇವ್ ಆಗುತ್ತವೆ. ಇವು ನೀವು ಬ್ರೌಸ್ ಮಾಡಿದ ವೆಬ್ ಸೈಟ್ ಗಳಮಾಹಿತಿಗಳನ್ನು ಒಳಗೊಂಡಿದ್ದು, ಮುಂದಿನ ಬಾರಿ ಆ ವೆಬ್ ಸೈಟ್ ಗೆ ನಿಮಗೆ ಹೋಗಲು ಅನುಕೂಲವಾಗುವ ನಿಟ್ಟಿನಲ್ಲಿ ಕುಕ್ಕೀಸ್ ಗಳಾಗಿ ಸೇವ್ ಆಗಿರುತ್ತವೆ, ಆದರೆ ಈ ವೆಬೈ ಸೈಟ್ ಬ್ರೌಸ್ ಮಾಡಿದ ಮಾಹಿತಿಗಳನ್ನು ಕೆಲವು ವೆಬ್ ಸೈಟ್ ಓನರ್ ಗಳು ಥರ್ಡ್ ಪಾರ್ಟಿ ಕುಕ್ಕೀಸ್ ಗಳಿಂದ ಕದ್ದು ಬಿಡುತ್ತಾರೆ. ಆ ಮೂಲಕ ನಿಮ್ಮ ಹವ್ಯಾಸ ಮತ್ತು ಆಸಕ್ತಿಗಳಿಗೆ ಅನುಸಾರವಾಗಿ ಅವರ ವಸ್ತುಗಳನ್ನು ನಿಮ್ಮ ಮುಂದೆ ಪ್ರಮೋಷನ್ ಮಾಡುತ್ತಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  There's a lot of personal data that websites collect without user's consent. Here are five details that most of the websites collect without your knowledge.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more