ಬಳಕೆದಾರರಿಗೆ 6 ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದ ಗೂಗಲ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ಆರು ಹೊಸ ಆಕರ್ಷಕ ಫೀಚರ್ಸ್‌ಗಳನ್ನು ಘೋಷಿಸಿದೆ. ಇನ್ನು ಈ ಹೊಸ ಆಂಡ್ರಾಯ್ಡ್ ಫೀಚರ್ಸ್‌ಗಳು ಗೂಗಲ್ ಅಸಿಸ್ಟೆಂಟ್, ಡ್ಯುವೋ, ಫೋನ್ ಅಪ್ಲಿಕೇಶನ್ ಗಳಿಗೆ ಸಂಬಂದಿಸಿವೆ. ಇನ್ಮುಂದೆ ಗೂಗಲ್‌ ಅಸಿಸ್ಟೆಂಟ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ತೆರೆಯುವುದಾಗಲಿ ಅಥವಾ ಸರ್ಚ್‌ ಮಾಡುವುದಕ್ಕೂ ಸಹ ಬಳಸಬಹುದಾಗಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಬಳಕೆದಾರರಿಗೆ 6 ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದರಲ್ಲಿ ಪ್ರಮುಖವಾಗಿ ಗೂಗಲ್‌ ಅಸಿಸ್ಟೆಂಟ್‌ ಬಳಸಿ ಅಪ್ಲಿಕೇಶನ್‌ಗಳನ್ನು ಒಪನ್‌ ಮಾಡಲು ಅವಕಾಸ ನೀಡಿರುವುದು ಹೈಲೆಟ್‌ ಆಗಿದೆ. ನೀವು ಗೂಗಲ್‌ ಅಸಿಸ್ಟೆಂಟ್‌ ಮೂಲಕ ಇನ್ಮುಂದೆ ನ್ಯೂಸ್‌ ಅನ್ನು ಸರ್ಚ್‌ ಮಾಡಬಹುದಾಗಿದೆ. ಅಷ್ಟೆ ಅಲ್ಲ ಟ್ವಿಟ್ಟರ್‌ ಸೇರಿದಂತೆ ಯಾವುದೇ ಅಪ್ಲಿಕೇಶನ್‌ ಅನ್ನುತೆರೆಯಬಹುದಾಗಿದೆ. ಅಲ್ಲದೆ ನಿಮಗೆ ಅಗತ್ಯವೆನಿಸುವ ಶಾರ್ಟ್‌ಕಟ್‌ಗಳನ್ನು ಕ್ರಿಯೆಟ್‌ ಮಾಡುವ ಮೂಲಕ ಸಹ ನಿಮ್ಮ ಈ ಆಜ್ಞೆಗಳನ್ನು ಕಾರ್ಯಗತಗೊಳಿಸಬಹುದಾಗಿದೆ. ಇನ್ನು ಈ ಹೊಸ ಫೀಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಸದ್ಯ ಗೂಗಲ್‌ ಪರಿಚಯಿಸಿರುವ ಹೊಸ ಆರು ಫೀಚರ್ಸ್‌ಗಳಲ್ಲಿ ಗೂಗಲ್‌ ಡ್ಯುಯೂಗೆ ಸಂಬಂಧಿಸಿದಂತೆ ಕೂಡ ಹೊಸ ಫೀಚರ್ಸ್‌ ಪರಿಚಯಿಸಲಾಗಿದೆ. ಈ ಹೊಸ ಫೀಚರ್ಸ್‌ ಮೂಲಕ ಗೂಗಲ್ ತನ್ನ ವೀಡಿಯೊ ಕರೆ ಅಪ್ಲಿಕೇಶನ್ ಡ್ಯುಯೊದಲ್ಲಿ ಸ್ಕ್ರೀನ್ ಶೇರ್‌ ಅನ್ನು ಸಕ್ರಿಯಗೊಳಿಸಿದೆ. ಈಗ ನೀವು ಡ್ಯುಯೊ ವೀಡಿಯೊ ಕರೆಯಲ್ಲಿದ್ದಾಗಲೆಲ್ಲಾ ನಿಮ್ಮ ಫೋನ್‌ನ ಸ್ಕ್ರೀನ್‌ ಅನ್ನು ಹಂಚಿಕೊಳ್ಳಬಹುದಾಗಿದೆ. ಅಲ್ಲದೆ ವಿಡಿಯೋ ಕಾಲ್‌ ಟೈಂನಲ್ಲಿ ಆಡಿಯೊವನ್ನು ಕೇಳಲು ಸಾಧ್ಯವಾಗದವರಿಗೆ ವೀಡಿಯೊ ಸಂದೇಶಗಳಿಗಾಗಿ ಗೂಗಲ್ automatic titles ಅನ್ನು ಸೇರಿಸಿದೆ. ಇದಲ್ಲದೆ ಗೂಗಲ್ ಕಳೆದ ತಿಂಗಳು ತನ್ನ ಫೋನ್ ಅಪ್ಲಿಕೇಶನ್ ಸ್ಪ್ಯಾಮ್ ಕರೆ ಮಾಡುವವರನ್ನು ತಡೆಯುವುದಾಗಿ ಹೇಳಿಕೊಂಡಿತ್ತು, ಇದಕ್ಕೆ Google ಫೋನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ.

ಆಂಡ್ರಾಯ್ಡ್‌

ಅಲ್ಲದೆ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಪರಿಚಯಿಸಿರುವ ಮತ್ತೊಂದು ಹೊಸ ಫೀಚರ್ಸ್‌ ಅಂದರೆ 'Sound Notifications' ಕೂಡ ಒಂದಾಗಿದೆ. ಇದು ನಿಮ್ಮ ಸುತ್ತಲಿನ ಪ್ರಮುಖ ಮತ್ತು ಆತಂಕಕಾರಿ ಶಬ್ದಗಳು ಉಂಟಾದಾಗ ನಿಮಗೆ ಆಲರ್ಟ್‌ ಸಂದೇಶಗಳನ್ನು ಕಳುಹಿಸುತ್ತದೆ. ನಿಮ್ಮ ಫೋನ್ ಫೈರ್ ಅಲಾರ್ಮ್, ಬಾಗಿಲು ಬಡಿಯುವುದು, ಗೃಹೋಪಯೋಗಿ ಉಪಕರಣಗಳು ಬೀಪಿಂಗ್ ಮತ್ತು ಹೆಚ್ಚಿನದನ್ನು ಪತ್ತೆ ಮಾಡಿದಾಗ ವಾಯ್ಸ್ ನೋಟಿಫಿಕೇಷನ್ಸ್ ಗ್ಲಿಟ್ಟರ್,ಆಗಲಿವೆ ಮತ್ತು ಕಂಪಿಸುತ್ತವೆ ಹಾಗೂ ಪುಶ್ ನೋಟಿಫಿಕೇಷನ್ಸ್‌ ಅನ್ನು ಕಳುಹಿಸುತ್ತವೆ. ಇದನ್ನು ವೇರ್ ಓಎಸ್ ಸ್ಮಾರ್ಟ್ ವಾಚ್‌ಗಳಲ್ಲಿಯೂ ಹೊಂದಿಸಬಹುದು, ಮತ್ತು ಇದು ಲೈವ್ ಟ್ರಾನ್ಸ್‌ಸ್ಕ್ರಿಪ್ಟ್ ಅಪ್ಲಿಕೇಶನ್‌ನೊಂದಿಗೆ ಸಹ ಲಭ್ಯವಿದೆ.

Google

ಇನ್ನು Google ನ ಆಕ್ಷನ್ ಬ್ಲಾಕ್‌ಗಳ ಅಪ್ಲಿಕೇಶನ್ ಅನ್ನು ಸಹ ಪರಿಚಯಿಸಲಾಗಿದ್ದು, ಇದು ಕಾಗ್ನಿಟಿವ್ ದಿಸಬಿಲಿಟಿಸ್ ಮತ್ತು ವಯಸ್ಸಿಗೆ ಸಂಬಂದಿಸಿದ ಪರಿಸ್ಥಿತಿಗಳನ್ನ ತಳಿಸಲು ಸಣ್ಣ ನುಡಿಗಟ್ಟುಗಳ ಮೂಲಕ ಸಂವಹನ ಮಾಡಲು ಬಳಸಬಹುದಾಗಿದೆ. ಅಲ್ಲದೆ ಟೋಬಿ ಡೈನಾವಾಕ್ಸ್‌ನಿಂದ ಸಾವಿರಾರು ಪಿಕ್ಚರ್ ಕಮ್ಯುನಿಕೇಷನ್ ಸಿಂಬಲ್ಸ್ ಅನ್ನು ಆಕ್ಷನ್ ಬ್ಲಾಕ್‌ನಲ್ಲಿ ನವೀಕರಿಸಲಾಗಿದೆ. ಅಲ್ಲದೆ ಆಕ್ಷನ್ ಬ್ಲಾಕ್‌ಗಳಲ್ಲಿ ಜಪಾನೀಸ್, ಫ್ರೆಂಚ್, ಜರ್ಮನ್ ಮತ್ತು ಇಟಾಲಿಯನ್‌ಗಳಿಗೆ ಗೂಗಲ್ ಬೆಂಬಲವನ್ನು ಸೇರಿಸಿದೆ.

Most Read Articles
Best Mobiles in India

Read more about:
English summary
Google Assistant can now open and search for apps, Duo gets screen sharing, and more new features on Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X