ವಿಶ್ವ ಮೊಬೈಲ್ ವಾಣಿಜ್ಯ ಅಳವಡಿಕೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ; ಪೇಪಾಲ್!

|

ಜಾಗತಿಕ ಮಟ್ಟದ ಡಿಜಿಟಲ್ ಪೇಮೆಂಟ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪೇಪಾಲ್ ಇಂದು ''ದಿ ಎಂ ಕಾಮರ್ಸ್ ರಿಪೋರ್ಟ್'' ಅನ್ನು ಬಿಡುಗಡೆ ಮಾಡಿದೆ. ಈ ರಿಪೋರ್ಟ್ ಬಗ್ಗೆ ಪೇಪಾಲ್ ನಿಯೋಜಿಸಿ, ಐಪಿಎಸ್‍ಒಎಸ್ ಅಧ್ಯಯನವನ್ನು ಭಾರತ ಮತ್ತು ಜಗತ್ತಿನ ಎಲ್ಲೆಡೆ ನಡೆಸಿದೆ. ಜಾಗತಿಕವಾಗಿ ಇತರೆ ದೇಶಗಳಿಗೆ ಹೋಲಿಸಿದರೆ ಮೊಬೈಲ್ ವಾಣಿಜ್ಯ ಅಳವಡಿಕೆಯಲ್ಲಿ ಭಾರತ ಮುಂಚೂಣಿಯಲ್ಲಿ ಹೊರಹೊಮ್ಮಿದೆ.!

22,000 ಗ್ರಾಹಕರು

11 ದೇಶಗಳಲ್ಲಿ ಸುಮಾರು 22,000 ಗ್ರಾಹಕರು ಮತ್ತು 4,000 ವ್ಯವಹಾರಸ್ಥರನ್ನು ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದ್ದು, ಇದರಲ್ಲಿ ಜನರು ಆನ್‌ಲೈನಿನಲ್ಲಿ ಹೇಗೆ ಮಾರಾಟ ಮತ್ತು ಖರೀದಿ ನಡೆಸುತ್ತಾರೆ ಎಂದು ಪರೀಕ್ಷಿಸಲಾಗಿದೆ. ಭಾರತದಲ್ಲಿ ಸ್ಮಾರ್ಟ್‍ಫೋನ್ ಬಳಸುವ ಅಲ್ಲದೇ ಆನ್‍ಲೈನ್‍ನಲ್ಲಿ ಹಣ ಸ್ವೀಕರಿಸುವ ಅಥವಾ ಪಾವತಿ ಮಾಡುವ 18ರಿಂದ 74 ವರ್ಷ ವಯಸ್ಸಿನ 2000 ಗ್ರಾಹಕರು ಮತ್ತು 300ಕ್ಕೂ ಹೆಚ್ಚಿನ ವ್ಯವಹಾರಗಳ ಮೇಲೆ ಪ್ರಭಾವ ಬೀರುವವರು ಅಥವಾ ನಿರ್ಣಯ ಕೈಗೊಳ್ಳುವವರನ್ನು ಸಂದರ್ಶಿಸಲಾಗಿದೆ.

ಖರೀದಿ ಅಭ್ಯಾಸಗಳು

ಭಾರತದಲ್ಲಿ ಮೊಬೈಲ್ ವಾಣಿಜ್ಯ, ಮೊಬೈಲ್ ಮೂಲಕ ಖರೀದಿ ಅನುಭವ, ಸಾಮಾಜಿಕ ವಾಣಿಜ್ಯ, ಗಡಿಯಾಚೆಗಿನ ಖರೀದಿ ಮತ್ತು ಸಂಪರ್ಕರಹಿತ ಪಾವತಿಗಳ ಬಗ್ಗೆ ಈ ಸಂಶೋಧನೆ ಒಳನೋಟಗಳನ್ನು ಸಾದರಪಡಿಸುತ್ತದೆ. ಮೊಬೈಲ್ ಮೂಲಕ ಖರೀದಿ ಅಭ್ಯಾಸಗಳು ಮತ್ತು ಮಾರಾಟಗಾರರ ಸಿದ್ಧತೆ ಅಲ್ಲದೆ, ಇದಕ್ಕೆ ಚಾಲನೆ ನೀಡುವ ಮತ್ತು ಅಡೆತಡೆಗಳಾಗುವ ಅಂಶಗಳು ಅಲ್ಲದೆ, ಗ್ರಾಹಕರ ಮನಸ್ಸಿನಲ್ಲಿ ಭದ್ರತೆ ಎಂಬುದು ಯಾವ ರೀತಿಯಲ್ಲಿ ಅಗ್ರಸ್ಥಾನ ಪಡೆದಿದೆ ಎಂಬುದನ್ನು ಕುರಿತ ಮುಖ್ಯ ಒಲವುಗಳ ಬಗ್ಗೆ ನೋಟವನ್ನು ಇದು ಪೂರೈಸುತ್ತದೆ. ವರದಿಯಲ್ಲಿನ ಕೆಲವು ಮುಖ್ಯ ಅಂಶಗಳು ಈ ಕೆಳಕಂಡಂತಿವೆ:

ಆನ್‍ಲೈನ್‍ನಲ್ಲಿ ಖರೀದಿ

ಶೇ.88ರಷ್ಟು ಭಾರತೀಯ ಗ್ರಾಹಕರು ಆನ್‍ಲೈನ್‍ನಲ್ಲಿ ಖರೀದಿ ಮಾಡಲು ಅಥವ ಹಣ ಪಾವತಿ ಮಾಡಲು ಮೊಬೈಲ್ ಬಳಸುತ್ತಾರೆ. ಆಪ್ ಮೂಲಕ ಖರೀದಿಗಳು ನಡೆಯುವಲ್ಲಿ ಬಿಲ್ ಪಾವತಿಗಳು ಮತ್ತು ಫ್ಯಾಷನ್ ಕ್ಷೇತ್ರಗಳು ಪ್ರಮುಖ ವಿಭಾಗಗಳಾಗಿವೆ. ಆನ್‌ಲೈನ್ ಮಾರಾಟ ಪ್ರಮಾಣದ ಶೇ.51ರಷ್ಟು ಭಾಗ ಇನ್-ಆಪ್ ಖರೀದಿಗಳ ಮೂಲಕ ನಡೆದಿದೆ. ಮೊಬೈಲ್ ಉಪಕರಣಗಳ ಮೂಲಕ ಹಣ ಪಾವತಿ ಮಾಡಲು ಗ್ರಾಹಕರಿಗೆ ನಿಧಾನವಾದ ಪೇಜ್ ಲೋಡಿಂಗ್ ಮತ್ತು ಭದ್ರತೆ ಅಥವ ನಂಬಿಕೆಯ ಸಮಸ್ಯೆಗಳು ಅಗ್ರ ತಡೆಗಳಾಗಿ ಹೊರಹೊಮ್ಮಿವೆ.

ಮೊಬೈಲ್ ವ್ಯವಹಾರ

ಶೇ.45ರಷ್ಟು ಮಾರಾಟಗಾರರು ಮುಂದಿನ 12 ತಿಂಗಳುಗಳಲ್ಲಿ ಮೊಬೈಲ್ ವ್ಯವಹಾರವನ್ನು ಆದ್ಯತೆಯಾಗಿ ಮಾಡಿಕೊಂಡಿದ್ದಾರೆ. ಮೊಬೈಲ್ ವಾಣಿಜ್ಯಕ್ಕೆ ಸಮಯ ಉಳಿತಾಯ ಮತ್ತು ವ್ಯವಹಾರ ಸುಲಭವಾಗಿರುವುದು ಮುಖ್ಯ ಚಾಲನೆಯ ಅಂಶಗಳಾಗಿವೆ. ಸಾಮಾಜಿಕ ವಾಣಿಜ್ಯ ಅಳವಡಿಕೆಯ ನೇತೃತ್ವವನ್ನು ಯುವಜನತೆ ವಹಿಸಿದೆ-ಶೇ.54ರಷ್ಟು ಜೆನ್ ಝೆಡ್ ಮತ್ತು ಶೇ.61ರಷ್ಟು ಮಿಲೆನಿಯಲ್‍ಗಳು ಇದರಲ್ಲಿ ಸೇರಿರುತ್ತಾರೆ. ಬಹುತೇಕ ಬಿಲ್ ಪಾವತಿಗಳು, ಫ್ಯಾಷನ್ ಖರೀದಿಗಳು ಮತ್ತು ಫುಡ್ ಟೆಕ್ ಕ್ಷೇತ್ರಗಳಲ್ಲಿ ಆ್ಯಪ್ ಪರ್ಚೇಸ್‍ಗಳು ಅತ್ಯಂತ ಜನಪ್ರಿಯವಾಗಿವೆ.

ಪೇಪಾಲ್ ಇಂಡಿಯಾ

ಈ ಸಂದರ್ಭದಲ್ಲಿ ಪೇಪಾಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಅನುಪಮ್ ಪಹುಜಾ ಅವರು ಮಾತನಾಡಿ, ``ಭಾರತ ಡಿಜಿಟಲೀಕರಣದ ಕಡೆಗೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಸಹಸ್ರಮಾನದ ಯುವಜನತೆ ತಂತ್ರಜ್ಞಾನವನ್ನು ಬಳಸಿ ವ್ಯವಹಾರ ನಡೆಸುವ ನವೀನ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಪೇಪಾಲ್‍ನಲ್ಲಿ ನಾವು ಸೀಮಾತೀತ ಮತ್ತು ಸುರಕ್ಷಿತ ವಹಿವಾಟುಗಳಿಗೆ ಅವಕಾಶ ಮಾಡಿಕೊಡುವುದಲ್ಲದೆ, ಭಾರತೀಯ ಗ್ರಾಹಕರ ಜೀವನದ ಭಾಗವಾಗಲು ಶ್ರಮಿಸುತ್ತಿದ್ದೇವೆ. ದೇಶದ ಎಲ್ಲೆಡೆ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಮೊಬೈಲ್ ಉಪಯೋಗ ಹೆಚ್ಚಿನ ವೇಗದ ಚಾಲನೆ ನೀಡುತ್ತದೆ'' ಎಂದರು.

ಡಿಜಿಟಲ್ ಪಾವತಿ

ಪೇಪಾಲ್ ಡಿಜಿಟಲ್ ಪಾವತಿ ಕ್ರಾಂತಿಯ ಮುಂಚೂಣಿಯಲ್ಲಿ ಕಳೆದ 20ಕ್ಕೂ ಹೆಚ್ಚಿನ ವರ್ಷಗಳಿಂದ ಇದೆ. ಹಣಕಾಸು ಸೇವೆಗಳು ಮತ್ತು ವಾಣಿಜ್ಯ ವ್ಯವಹಾರಗಳನ್ನು ಹೆಚ್ಚು ಅನುಕೂಲಕರ, ಕೈಗೆಟುಕುವಂತೆ, ಸುಭದ್ರವಾಗುವಂತೆ ಮಾಡಲು ತಂತ್ರಜ್ಞಾನವನ್ನು ಸಂಸ್ಥೆ ಆಧರಿಸಿದೆ. ಪೇಪಾಲ್ ವೇದಿಕೆ 286 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕರು ಮತ್ತು ಮಾರಾಟಗಾರರನ್ನು 200ಕ್ಕೂ ಹೆಚ್ಚಿನ ಮಾರುಕಟ್ಟೆಗಳಲ್ಲಿ ಸಬಲೀಕರಿಸುತ್ತಿದೆ. ಅಲ್ಲದೆ ಇವರು ಜಾಗತಿಕ, ಆರ್ಥಿಕ ಸ್ಥಿತಿಯನ್ನು ಸೇರಿಕೊಂಡು ವೃದ್ಧಿಸಲು ನೆರವಾಗುತ್ತಿದೆ.

Most Read Articles
Best Mobiles in India

English summary
88 percent of Indians make purchases on their smartphones:paypal Study. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more