ಕೇವಲ 10 ಸೆಕೆಂಡಿನ ಈ ವಿಡಿಯೊ ಕ್ಲಿಪ್ ಮಾರಾಟ ಕಂಡ ಬೆಲೆ ಕೇಳಿದ್ರೆ, ಶಾಕ್ ಆಗ್ತೀರಾ!

|

ಪೇಂಟಿಂಗ್ ಚಿತ್ರಗಳಿಗೆ, ಆಕರ್ಷಕ ಕಲಾಕೃತಿಗಳಿಗೆ ಹಾಗೆಯೇ ವಿಡಿಯೊಗಳಿಗೆ ಬೇಡಿಕೆ ಇರುವುದು ನಿಮಗೆ ತಿಳಿದೆ ಇದೆ. ಈ ರೀತಿಯ ಅತ್ಯುತ್ತಮ ಚಿತ್ರಗಳನ್ನು ಮತ್ತು ಕಲಾಕೃತಿಗಳನ್ನು ದುಬಾರಿ ಬೆಲೆಗೆ ಕಲಾಪ್ರೇಮಿಗಳು ಖರೀದಿಸಿರುವುದನ್ನು ನೀವು ಕೇಳಿದ್ದೀರಿ ಅಲ್ಲವೇ. ಇದೇ ರೀತಿ ಇದೀಗ ಹತ್ತು ಸೆಕೆಂಡಿನ ಒಂದು ಚಿಕ್ಕ ವಿಡಿಯೊ ಅತೀ ದೊಡ್ಡ ಮೊತ್ತಕ್ಕೆ ಮಾರಾಟ ಕಂಡಿದೆ ಎಂದರೇ ನಿಮಗೆ ಅಚ್ಚರಿ ಅನಿಸಬಹುದು. ಅಷ್ಟಕ್ಕೂ ಆ ವಿಡಿಯೋದಲ್ಲಿರುವುದಾದರು ಏನು ಎನ್ನುವ ಪ್ರಶ್ನೇ ಸಹ ನಿಮಗೆ ಮೂಡಿರಬಹುದು.

ವಿಡಿಯೋ

ಹೌದು, ಹತ್ತು ಸೆಕೆಂಡಿನ ಒಂದು ಚಿಕ್ಕ ವಿಡಿಯೋ ಬರೊಬ್ಬರಿ 48 ಕೋಟಿ ರೂ.ಗಳಿಗೆ ಮಾರಾಟ ಕಂಡು ಈಗ ಸುದ್ದಿ ಮಾಡಿದೆ. ಮಿಯಾಮಿಯ ನಿವಾಸಿ ಪಾಬ್ಲೋ ರಾಡ್ರಿಗಸ್ ಫ್ರೈಲೆ (Pablo Rodriguez Fraile) ಕಳೆದ ವರ್ಷ ಸುಮಾರು 67 ಸಾವಿರ ಡಾಲರ್ ಅಂದರೆ 49.23 ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ವಿಡಿಯೋ ಮಾಡಿದ್ದರು. ಆದರೆ ಕಳೆದ ವಾರ ಆ ಹತ್ತು ಸೆಕೆಂಡಿನ ಪುಟ್ಟ ವಿಡಿಯೋ ಕ್ಲಿಪ್ ಬರೋಬ್ಬರಿ (6.6 ಮಿಲಿಯನ್ ಡಾಲರ್) 48.47 ಕೋಟಿ ರೂ.ಗಳಿಗೆ ಮಾರಾಟ ಆಗಿದೆ.

ಸಂಗ್ರಾಹಕ

ಮಿಯಾಮಿ ಮೂಲದ ಕಲಾ ಸಂಗ್ರಾಹಕ ಪ್ಯಾಬ್ಲೊ ರೊಡ್ರಿಗಸ್-ಫ್ರೇಲ್ ಅವರು 10 ಸೆಕೆಂಡುಗಳ ಅವಧಿಯ ವಿಡಿಯೊ ಕಲಾಕೃತಿಯನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಿತ್ತು. ಆದ್ರೆ ಈ ವಿಡಿಯೋ ಕ್ಲಿಪ್ ಈಗ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದು, ಗಮನ ಸೆಳೆದಿದೆ.

ವಿಡಿಯೋದಲ್ಲಿ ಇರುವುದಾದರು ಏನು?

ವಿಡಿಯೋದಲ್ಲಿ ಇರುವುದಾದರು ಏನು?

ರೊಡ್ರಿಗಸ್-ಫ್ರೇಲ್ ಅವರು ಮಾರಾಟ ಮಾಡಿದ ವಿಡಿಯೊ ಕಂಪ್ಯೂಟರ್ ಸಹಾಯದಿಂದ ಮಾಡಲಾಗಿದೆ. ಆ ವಿಡಿಯೋದಲ್ಲಿ ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತೆ ಹೋಲುವ ದೈತ್ಯ ವ್ಯಕ್ತಿ ನೆಲದ ಮೇಲೆ ಕುಸಿದು ಬಿದ್ದಂತೆ ಕಾಣುತ್ತದೆ. ಹಾಗೆಯೇ ಟ್ರಂಪ್ ಶರೀರದಂತೆ ಕಾಣುವ ಆ ವ್ಯಕ್ತಿಯ ಮೇಲೆ ಘೋಷಣೆಗಳನ್ನು ಬರೆಯಲಾಗಿದೆ. ಹಾಗೆಯೇ ವಿಡಿಯೊದಲ್ಲಿ ಜನ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.

ಡಿಜಿಟಲ್ ಕರೆನ್ಸಿ ಬಳಕೆ

ಡಿಜಿಟಲ್ ಕರೆನ್ಸಿ ಬಳಕೆ

ಅಂದಹಾಗೇ ಈ ಪುಟ್ಟ ವಿಡಿಯೋ ಕ್ಲಿಪ್ ಖರೀದಿಸಲು ಮೊದಲ ಸಲ ಕ್ರಿಪ್ಟೋಕರೆನ್ಸಿ (Cryptocurrency) ಬಳಸಲಾಗಿದೆ ಎನ್ನಲಾಗಿದೆ. ಈ ವಿಡಿಯೋದಲ್ಲೊಂದು ಡಿಜಿಟಲ್ ಹಸ್ತಾಕ್ಷರವಿದ್ದು, ಇದರಿಂದ ಅದರ ಅಸಲೀ ಮಾಲೀಕರನ್ನು ಪತ್ತೆ ಮಾಡಬಹುದಾಗಿದೆ. ಅಂದರೆ, ಈ ವಿಡಿಯೋ ಕದಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Miami-based art collector Pablo Rodriguez-Fraile spent almost $67,000 on a 10-second video artwork that he could have watched for free online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X