ವೈರಲ್ ಸುದ್ದಿ: 9ನೇ ವರ್ಷಕ್ಕೆ 30 ಗೇಮ್‌ಗಳನ್ನು ಡೆವಲಪ್ ಮಾಡಿದ್ದಾನೆ ಈ ಬಾಲಕ!

|

ಮಕ್ಕಳು ಮೊಬೈಲ್‌ ಹಿಡಿದುಕೊಂಡರೆ ಅದರಲ್ಲಿ ಅವರು ಮೊದಲು ಹುಡುಕುವುದು ಯಾವುದಾದರೂ ಗೇಮ್‌ ಇದೆಯೇ ಎಂದು. ಏಕೆಂದರೆ, ಮಕ್ಕಳಿಗೆ ಮೊಬೈಲ್ ಗೇಮ್ ಆಡುವ ಹಂಬಲ ಸಾಮಾನ್ಯ. ಆದರೆ, ಇಲ್ಲೋರ್ವ ಒಂಬತ್ತರ ಪೋರನಿಗೆ ಮೊಬೈಲ್ ಗೇಮ್ ತಯಾರಿಸುವ ಹಂಬಲ ಹೆಚ್ಚಿದೆ. ಹೌದು, ನೈಜೀರಿಯಾದ 9 ವರ್ಷದ ಬಾಲಕನೊಬ್ಬ ಕೇವಲ ನಾಲ್ಕೇ ತಿಂಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್‌ಗಳಿಗಾಗಿ 30 ಗೇಮ್‌ಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾನೆ.

30 ಗೇಮ್‌ಗಳನ್ನು ಡೆವಲಪ್ ಮಾಡಿದ್ದಾನೆ.

ನೈಜೀರಿಯಾದ ಲಾಗೋಸ್ ನಿವಾಸಿಯಾಗಿರುವ ಬೇಸಿಕ್ ಒಕ್ಪರಾ ಜೂನಿಯರ್ ಎಂಬ ಹುಡುಗ ಇಂತಹ ಸಾಧನೆ ಮಾಡಿದ್ದು, ತನ್ನ 9ನೇ ವಯಸ್ಸಿನಲ್ಲೇ ನಾಲ್ಕು ತಿಂಗಳ ಅವಧಿಯಲ್ಲಿ 30 ಗೇಮ್‌ಗಳನ್ನು ಸೃಷ್ಟಿಸಿದ್ದಾನೆ. ನಾಲ್ಕನೇ ವರ್ಷದಲ್ಲೇ ಬೇಸಿಕ್, ಟ್ಯಾಬ್‌ನಲ್ಲಿ ಸಾಕಷ್ಟು ಗೇಮ್‌ಗಳನ್ನು ಆಡುತ್ತಿದ್ದ ಒಕ್ಪರಾನನ್ನು ಈತನ ತಂದೆ ಬೂಟ್‌ ಕ್ಯಾಂಪ್‌ಗೆ ಸೇರಿಸಿದ್ದರು. ಅಲ್ಲಿ ಆತ ಗೇಮ್‌ ಕೋಡಿಂಗ್‌ ಕಲಿತಿದ್ದ. ಇದಾದ ನಂತರ ತನ್ನ ತಂದೆಯ ಒಂದು ಮಾತಿನಿಂದಾಗಿ 30 ಗೇಮ್‌ಗಳನ್ನು ಡೆವಲಪ್ ಮಾಡಿದ್ದಾನೆ.

 ಬೂಟ್-ಕ್ಯಾಂಪ್

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮಕ್ಕಳಿಗೆ ತಾಂತ್ರಿಕ ಪ್ರಗತಿಗೆ ಪ್ರವೇಶವನ್ನು ನೀಡುವ ಉದ್ದೇಶದಿಂದ (ರೊಬೊಟಿಕ್ಸ್ ಮತ್ತು ವರ್ಚುವಲ್ ರಿಯಾಲಿಟಿ) ಕೋಡ್‌ಫೆಸ್ಟ್ ಇಂಟರ್‌ನ್ಯಾಷನಲ್ ಆಯೋಜಿಸಿತ್ತು. ಐದು ರಿಂದ ಹದಿನೈದು ವರ್ಷದ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಐದು ದಿನಗಳ ಈ ಬೂಟ್-ಕ್ಯಾಂಪ್ ನಲ್ಲಿ ಒಕ್ಪರಾನನ್ನು ಆತನ ತಂದೆ ಸೇರಿಸಿದ್ದರು. ಆ ಕ್ಯಾಂಪ್‌ನಲ್ಲಿ ಒಕ್ಪರಾ ಸಾಕಷ್ಟು ಕಲಿತಿದ್ದಾನೆ. ಇದರಿಂದಲೇ ಆತ ಗೇಮ್‌ಗಳನ್ನು ಕೂಡ ಅಭಿವೃದ್ದಿ ಮಾಡಿದ್ದಾನೆ ಎಂದು ಆತನ ತಂದೆ ತಿಳಿಸಿದ್ದಾರೆ.

ಕೋಡ್‌ಫೆಸ್ಟ್ ಇಂಟರ್‌ನ್ಯಾಷನಲ್

ಜೂನಿಯರ್ ಬೇಸಿಕ್ ಅವರ ತಂದೆ, ಬೇಸಿಕ್ ಒಕ್ಪರಾ ಅವರು ಸಂದರ್ಶನವೊಂದರಲ್ಲಿ ಹೇಳಿರುವಂತೆ, ತನ್ನ ಮಗ ಆತನ ನಾಲ್ಕನೇ ವಯಸ್ಸಿನಿಂದ ಟ್ಯಾಬ್ಲೆಟ್‌ಲ್ಲಿ ಕ್ಯಾಂಡಿ ಕ್ರಷ್, ಟೆಂಪಲ್ ರನ್, ಸಬ್ವೇ ಸರ್ಫರ್ ಮುಂತಾದ ಆಟಗಳನ್ನು ಆಡಲು ಇಷ್ಟಪಡುತ್ತಿದ್ದ. ಇದಾದ ನಂತರ ನಾನು ಕೋಡ್‌ಫೆಸ್ಟ್ ಇಂಟರ್‌ನ್ಯಾಷನಲ್ ಆಯೋಜಿಸಿದ್ದ ಬೂಟ್-ಕ್ಯಾಂಪ್‌ಗೆ ಆತನನ್ನು ಸೇರಿಸಿದೆ. ಆತ ಅಲ್ಲಿ ಸಾಕಷ್ಟು ಕಲಿತಿದ್ದಾನೆ. ಗೇಮ್‌ಗಳ ಬಗ್ಗೆ ಆತನಿಗಿದ್ದ ಒಲವೇ ಆತ ಗೇಮ್‌ಗಳನ್ನು ಡೆವಲಪ್ ಮಾಡಲು ಕಾರಣ ಎಂದು ಹೇಳಿದ್ದಾರೆ.

ಸೃಷ್ಟಿಸಲು ಸಾಧ್ಯವಾಗಿದೆ.

ಆದರೆ, ಜೂನಿಯರ್ ಬೇಸಿಕ್ ಇಷ್ಟೊಂದು ಸಾಧನೆ ಮಾಡುವಲ್ಲಿ ಅವರ ತಂದೆ ಬೇಸಿಕ್ ಒಕ್ಪರಾ ಅವರ ಪಾಲು ಹೆಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬೇಸಿಕ್ ಒಕ್ಪರಾಗೆ ಆತನ ತಂದೆ ನೀಡಿದ ಪ್ರೋತ್ಸಾಹವೇ ಆತ ನಾಲ್ಕು ತಿಂಗಳಲ್ಲೇ 30 ಗೇಮ್‌ಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. 'ನೀನು ಯಾಕೆ ನಿನ್ನದೇ ಆದ ಸ್ವಂತ ಗೇಮ್‌ ಮಾಡಬಾರದು. ಅದನ್ನು ಇತರರು ಆಡುವಂತಾಗಲಿ' ಎಂಬ ತಂದೆ ಮಾತಿನಿಂದಲೇ ಜೂನಿಯರ್ ಬೇಸಿಕ್ ಗೇಮಿಂಗ್ ಅಭಿವೃದ್ಧಿಗೆ ಮನಸ್ಸು ಮಾಡಿದ್ದ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

Most Read Articles
Best Mobiles in India

English summary
A 9-year old boy has developed over 30 games for smartphones and tablets. The boy named Basik Okpara Jr is a resident of Lagos, Nigeria.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X