ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್‌ ಮಾಡುವ ಅವಧಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ!

|

ಕೇಂದ್ರ ಹಣಕಾಸು ಸಚಿವಾಲಯ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್‌ ಲಿಂಕ್‌ ಮಾಡಲು ನೀಡಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಸೆಪ್ಟೆಂಬರ್ 30, 2021ಕ್ಕೆ ಗಡುವು ನೀಡಲಾಗಿತ್ತು. ಆದರೆ ಇದೀಗ ಈ ಗಡುವನ್ನು ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ. ಅಂದರೆ ಮಾರ್ಚ್ 31, 2022ರ ವರೆಗೆ ನೀವು ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್‌ ಲಿಂಕ್ ಮಾಡಲು ಅವಕಾಶವಿದೆ.

ಆಧಾರ್

ಹೌದು, ಕೇಂದ್ರ ಸರ್ಕಾರ ಮತ್ತೆ ಆಧಾರ್ ಕಾರ್ಡ್‌ ಪ್ಯಾನ್‌ ಲಿಂಕ್‌ ಮಾಡಲು ಅವಧಿಯನ್ನು ವಿಸ್ತರಣೆ ಮಾಡಿದೆ. ಈಗಾಗಲೇ ಮೂರ್ನಾಲ್ಕು ಭಾರಿ ಅವಧಿ ವಿಸ್ತರಣೆ ಮಾಡಿರುವ ಸರ್ಕಾರ ಇದೀಗ ಮತ್ತೊಂದು ಅವಧಿ ವಿಸ್ತರಣೆ ಮಾಡಿದೆ. ಇನ್ನು ತೆರಿಗೆಗಳ ಲೆಕ್ಕದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಆಧಾರ್‌ ಪ್ಯಾನ್‌ ಲಿಂಕ್‌ ಅನಿವಾರ್ಯ ಹಾಗೂ ಕಡ್ಡಾಯವಾಗಿದೆ. ಇದೇ ಕಾರಣಕ್ಕೆ ಸರ್ಕಾರ ದೇಶದ ನಾಗರಿಕರಿಗೆ ಅವಕಾಶವನ್ನು ನೀಡುತ್ತಲೇ ಬಂದಿದೆ. ಹಾಗಾದ್ರೆ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡುವುದಕ್ಕೆ ನೀವು ಏನು ಮಾಡಬೇಕು? ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯಾ ಅನ್ನೊದನ್ನ ತಿಳಿಯೋದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?

ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?

ಇನ್ನು ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಪ್ಯಾನ್ 'ನಿಷ್ಕ್ರಿಯ' ಆಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡ ನಂತರ, ಒಬ್ಬರು ಹಲವಾರು ವಹಿವಾಟುಗಳಿಗೆ ಒಳಗಾಗಲು ಸಾಧ್ಯವಾಗುವುದಿಲ್ಲ, ಅಲ್ಲಿ ಪ್ಯಾನ್ ಅನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗುತ್ತದೆ. ಆದರಿಂದ ನೀವು ಕೂಡ ಪ್ಯಾನ್‌ ಅನ್ನು ಆಧಾರ್‌ ಜೊತೆಗೆ ಲಿಂಕ್‌ ಮಾಡಿಸುವುದು ಉತ್ತಮ. ಇನ್ನು ಪ್ಯಾನ್‌ ಅನ್ನು ಆಧಾರ್‌ ಜೊತೆ ಲಿಂಕ್‌ ಮಾಡುವುದಕ್ಕೆ ಎರಡು ಮಾರ್ಗಗಳಿವೆ. ಮೊದಲನೆಯದಾಗಿ ಎಸ್‌ಎಂಎಸ್ ಸೇವೆಯ ಮೂಲಕ, ಹಾಗೂ ಎರಡನೇಯದಾಗಿ ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ತಾಣಕ್ಕೆ ಹೋಗಿ ಅಲ್ಲಿನ ಕ್ರಮಗಳನ್ನು ಅನುಸರಿಸುವ ಮೂಲಕ ಮಾಡಬಹುದಾಗಿದೆ.

SMS ಮೂಲಕ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡುವುದು ಹೇಗೆ

SMS ಮೂಲಕ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡುವುದು ಹೇಗೆ

ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದಕ್ಕೆ ಇರುವ ಸರಳ ಮಾರ್ಗ ಇದಾಗಿದೆ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಎಸ್‌ಎಂಎಸ್ ಆಧಾರಿತ ಸೌಲಭ್ಯದ ಮೂಲಕ ಆಧಾರ್‌ ಮತ್ತು ಪ್ಯಾನ್‌ ಎರಡನ್ನು ಲಿಂಕ್ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ UIDPAN <ಸ್ಥಳ> ಟೈಪ್‌ ಮಾಡಿ 567678 ಅಥವಾ 56161 ಸಂಖ್ಯೆಗೆ ಎಸ್‌ ಎಂಎಸ್‌ ಕಳುಹಿಸಿ. ಒಮ್ಮೆ ನೀವು ಎಸ್‌ಎಂಎಸ್ ಕಳುಹಿಸಿದರೆ, ನಿಮ್ಮ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಹಂತ:1 ಆನ್‌ಲೈನ್‌ಗೆ ಹೋಗಿ ಆದಾಯ ತೆರಿಗೆ ಇಲಾಖೆಯ ಇ-ಪೋರ್ಟಲ್‌ ಕ್ಲಿಕ್‌ ಮಾಡಿ
ಹಂತ:2 ನಿಮ್ಮ PAN, ಆಧಾರ್ ಸಂಖ್ಯೆಯನ್ನು ಪೋರ್ಟಲ್‌ನಲ್ಲಿ ನೀಡರುವ ಮಾರ್ಗಸೂಚಿಯಂತೆ ತುಂಬಿರಿ.
ಹಂತ:3 ಆಧಾರ್ ನಲ್ಲಿ ನಿಮ್ಮ ಹುಟ್ಟಿದ ವರ್ಷವನ್ನು ಮಾತ್ರ ಉಲ್ಲೇಖಿಸಿದ್ದರೆ, ಸರಿಯಾದ ರೀತಿಯ ಆಯ್ಕೆಯನ್ನು ಆಯ್ಕೆ ಮಾಡಿ.
ಹಂತ:4 ನಂತರ ಕ್ಯಾಪ್ಚಾ ಕೋಡ್ ನಮೂದಿಸಿ.
ಹಂತ:5 ಮುಂದೆ, 'ಲಿಂಕ್ ಆಧಾರ್' ಬಟನ್ ಮೇಲೆ ಕ್ಲಿಕ್ ಮಾಡಿ.

ಹೀಗೆ ಮಾಡಿದರೆ ಸಾಕು ನಿಮ್ಮ ಆಧಾರ್‌ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಲಿದೆ.

ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಪರಿಶೀಲಿಸುವುದು ಹೇಗೆ?

ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಪರಿಶೀಲಿಸುವುದು ಹೇಗೆ?

ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆಧಾರ್ ಸ್ಟೇಟಸ್‌ಗೆ ಹೋಗಿ ಅಥವಾ incometaxindiaefiling.gov.in/aadhaarstatus ಕ್ಲಿಕ್‌ ಮಾಡಿ ಹಂತ 2: ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3: 'ವ್ಯೂ ಲಿಂಕ್ ಆಧಾರ್ ಸ್ಟೇಟಸ್‌' ಕ್ಲಿಕ್ ಮಾಡಿ
ಹಂತ 4: ಲಿಂಕ್ ಆಗಿದೆಯಾ ಇಲ್ಲವಾ ಅನ್ನುವ ಸ್ಟೇಟಸ್‌ ಡಿಸ್‌ಪ್ಲೇ ಆಗಲಿದೆ.

Most Read Articles
Best Mobiles in India

English summary
The Indian government has extended the PAN and Aadhaar linking deadline to March 2022.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X