ಏಸರ್‌ ಸಂಸ್ಥೆಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌! ವಿಶೇಷತೆ ಏನು?

|

ಇತ್ತೀಚಿನ ದಿನಗಳಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿದ್ಯಮಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಏಸರ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಏಸರ್‌ ಸಂಸ್ಥೆ ಏಸರ್ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜಿಫೋರ್ಸ್ RTX3070 ಅಥವಾ ಎನ್ವಿಡಾ ಜೀಫೋರ್ಸ್ RTX3060 ಜಿಪಿಯುಗಳೊಂದಿಗೆ ರಿಫ್ರೆಶ್ ಮಾಡಲಾಗಿದೆ.

ಏಸರ್‌

ಹೌದು, ಏಸರ್‌ ಕಂಪೆನಿ ಹೊಸ ಏಸರ್‌ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್ ಹತ್ತನೇ ತಲೆಮಾರಿನ ಇಂಟೆಲ್ ಕೋರ್ ಐ 7 ಆಕ್ಟಾ-ಕೋರ್ ಮೊಬೈಲ್ ಗೇಮಿಂಗ್ ಪ್ರೊಸೆಸರ್ ಹೊಂದಿದೆ. ಇದು ನಯವಾದ ಗೇಮಿಂಗ್‌ಗಾಗಿ 3 ಮಿಲಿಸೆಕೆಂಡ್ ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದ್ದು, 144Hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್‌

ಏಸರ್‌ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್ ಲ್ಯಾಪ್‌ಟಾಪ್ 1,080x1,920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6-ಇಂಚಿನ ಫುಲ್‌-ಹೆಚ್‌ಡಿ + ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ 240Hz ವರೆಗೆ ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ ಹತ್ತನೇ ತಲೆಮಾರಿನ ಇಂಟೆಲ್ ಕೋರ್ 7 ಐ 7-10870 ಹೆಚ್ ಪ್ರೊಸೆಸರ್ ಅನ್ನು ಹೊಂದಿದ್ದು, ವಿಂಡೋಸ್ 10 ಹೋಂ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 32 GBRAM, 1TB HDD ಮತ್ತು 1TB ಎಸ್‌ಎಸ್‌ಡಿ ವರೆಗೆ ಜೋಡಿಸಲ್ಪಟ್ಟಿದೆ.

ಏಸರ್

ಇದಲ್ಲದೆ ಏಸರ್ ಪ್ರಿಡೇಟರ್ ಹೆಲಿಯೊಸ್ 300 ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ 720p ಎಚ್‌ಡಿ ವೆಬ್‌ಕ್ಯಾಮ್ ಅನ್ನು ನೀಡಲಾಗಿದೆ. ಇದು 4-ಸೆಲ್ 59Whr ಬ್ಯಾಟರಿಯನ್ನು ಹೊಂದಿದ್ದು ಅದು ಏಳು ಗಂಟೆಗಳ ಕಾಲ ಇರುತ್ತದೆ ಎಂದು ಹೇಳಿದೆ. ಇನ್ನು ಈ ಲ್ಯಾಪ್‌ಟಾಪ್‌ ಎರಡು ಯುಎಸ್‌ಬಿ 3.2 ಜನ್ 1 ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್ (ಯುಎಸ್‌ಬಿ 3.2 ಜನ್ 2), ಒಂದು ಯುಎಸ್‌ಬಿ 3.2 ಜನ್ 2 ಪೋರ್ಟ್, ಎಚ್‌ಡಿಎಂಐ ಪೋರ್ಟ್ ಮತ್ತು ಆರ್ಜೆ -45 ಸೇರಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕಿಲ್ಲರ್ ವೈ-ಫೈ 6 ಎಎಕ್ಸ್ 1650 ಐ, ಬ್ಲೂಟೂತ್ ವಿ 5.1 ಅನ್ನು ಬೆಂಬಲಿಸಲಿದೆ.

ಲ್ಯಾಪ್‌ಟಾಪ್

ಈ ಲ್ಯಾಪ್‌ಟಾಪ್ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು ಡಿಟಿಎಸ್-ಎಕ್ಸ್ ಅಲ್ಟ್ರಾ ಆಡಿಯೊ ಫೈನ್-ಟ್ಯೂನಿಂಗ್‌ನೊಂದಿಗೆ 3 ಡಿ ಸಿಮ್ಯುಲೇಟೆಡ್ ಸರೌಂಡ್ ಸೌಂಡ್ ಹೊಂದಿದೆ. ಅಲ್ಲದೆ, ತೀವ್ರವಾದ ಗೇಮಿಂಗ್‌ ಅವಧಿಗಳಲ್ಲಿ ಉತ್ತಮ ತಂಪಾಗಿಸುವಿಕೆಗಾಗಿ ಇದು ನಾಲ್ಕನೇ ಜನ್ ಏರೋಬ್ಲೇಡ್ 3D ಫ್ಯಾನ್‌ಗಳೊಂದಿಗೆ ಬರುತ್ತದೆ. ಪ್ರಿಡೇಟರ್ ಟೈಪ್‌ಫೇಸ್‌ನೊಂದಿಗೆ ನಾಲ್ಕು-ವಲಯ RGB ಕಸ್ಟಮೈಸ್ ಮಾಡಿದ ಕೀಬೋರ್ಡ್ ಸಹ ಇದೆ. ಸದ್ಯ ಈ ಹೊಸ ಏಸರ್ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್ ಲ್ಯಾಪ್‌ಟಾಪ್ ಭಾರತದಲ್ಲಿ ರೂ. 1,19,999 ರೂ.ಬೆಲೆಯನ್ನು ಹೊಂದಿದೆ. ಇದು ಏಸರ್ ಎಕ್ಸ್‌ಕ್ಲೂಸಿವ್ ಸ್ಟೋರ್, ಏಸರ್ ಆನ್‌ಲೈನ್ ಸ್ಟೋರ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

Most Read Articles
Best Mobiles in India

English summary
Acer Predator Helios 300 Gaming Laptop Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X