ಏಸರ್ ಕಂಪೆನಿಯಿಂದ ಎರಡು ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ವಲಯದಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಜನಪ್ರಿಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವಿಭಿನ್ನ ಪ್ರೊಸೆಸರ್‌ ಮಾದರಿಯ ವೈವಿಧ್ಯಮಯ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಇವುಗಳಲ್ಲಿ ಏಸರ್‌ ಕಂಪೆನಿ ಕೂಡ ಒಂದಾಗಿದೆ. ಸದ್ಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಏಸರ್‌ ತಮ್ಮ ಮತ್ತೊಂದು ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ.

ಏಸರ್‌

ಹೌದು, ಏಸರ್‌ ಸಂಸ್ಥೆ ತನ್ನ ಪ್ರಿಡೇಟರ್ ಹಿಲಿಯೊಸ್ 300 ಮತ್ತು ಪ್ರಿಡೇಟರ್ ಟ್ರಿಟಾನ್ 300 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು 10th gen ಇಂಟೆಲ್ ಕೋರ್ ಪ್ರೊಸೆಸರ್‌ ಹೊಂದಿದ್ದು, ರಿಫ್ರೆಶ್ ಆಗಿದೆ. ಅಲ್ಲದೆ ಏಸರ್ ಎನ್‌ವಿಡಿಯಾ ಜೀಫೋರ್ಸ್ RTX2070 ಮ್ಯಾಕ್ಸ್-ಕ್ಯೂ ಗ್ರಾಫಿಕ್ಸ್ ಮತ್ತು ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ 4th gen ಏರೋಬ್ಲೇಡ್ 3D ಫ್ಯಾನ್ ಅನ್ನು ಕೂಡ ಸೇರಿಸಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್

ಇನ್ನು ಏಸರ್ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್‌ ಲ್ಯಾಪ್‌ಟಾಪ್‌ 15.6-ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 240Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆರು ಕೋರ್ ಮತ್ತು 12 ಥ್ರೇಡ್‌ಗಳನ್ನು ಹೊಂದಿದ್ದು, 10th ಇಂಟೆಲ್ ಕೋರ್ H-ಸರಣಿ ಪ್ರೊಸೆಸರ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 32GB RAM, 2PCAE, NVM, SSDಗಳು ಮತ್ತು 2TB HD ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಇದು 360 ಡಿಗ್ರಿ ಸರೌಂಡ್ ಸೌಂಡ್ ಅನುಭವಕ್ಕಾಗಿ DTS:X ಅಲ್ಟ್ರಾ ಆಡಿಯೊವನ್ನು ಸಹ ಹೊಂದಿದೆ.ಇದಲ್ಲದೆ 4th gen ಏರೋಬ್ಲೇಡ್ 3D ಫ್ಯಾನ್ ಹಸ್ತಚಾಲಿತ ಹೊಂದಾಣಿಕೆಗಾಗಿ ಏಸರ್ ಕೂಲ್ ಬೂಸ್ಟ್ ಅನ್ನು ಒಳಗೊಂಡಿದೆ.

ಪ್ರಿಡೇಟರ್

ಇನ್ನು ಏಸರ್ ಪ್ರಿಡೇಟರ್ ಟ್ರೈಟಾನ್ 300 ಗೇಮಿಂಗ್‌ ಲ್ಯಾಪ್‌ಟಾಪ್‌ 15.6-ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 10th gen ಇಂಟೆಲ್ ಕೋರ್ H-ಸೀರಿಸ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಎನ್‌ವಿಡಿಯಾ ಜೀಫೋರ್ಸ್ RTX2070GPU ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ 32GB RAM ಮತ್ತು 3TB ಇಮಟರ್‌ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇದು HDMI2.0, ಮಿನಿ-ಡಿಪಿ 1.4, ಮತ್ತು ಯುಎಸ್‌ಬಿ 3.2 ಟೈಪ್-ಸಿ ಬೆಂಬಲದೊಂದಿಗೆ ಬರುತ್ತದೆ.

ಏಸರ್

ಸದ್ಯ ಏಸರ್ ಪ್ರಿಡೇಟರ್ ಹಿಲಿಯೊಸ್ 300 ಗೇಮಿಂಗ್‌ ಲ್ಯಾಪ್‌ಟಾಪ್‌ ಬೆಲೆ ರೂ 84,999 ರಿಂದ ಪ್ರಾರಂಭವಾಗಿದ್ದರೆ, ಟ್ರೈಟಾನ್ 300 ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 89,999 ರೂ,ಆಗಿದೆ. ಇನ್ನು ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಏಸರ್‌ನ ಇ-ಸ್ಟೋರ್, ಫ್ಲಿಪ್‌ಕಾರ್ಟ್, ಅಮೆಜಾನ್ ಇಂಡಿಯಾ ಮತ್ತು ಕ್ರೋಮಾ, ರಿಲಯನ್ಸ್ ಸೇರಿದಂತೆ ಇತರೆ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
The Acer Predator Helios 300, and Triton 300 laptops have been upgraded with 10th Gen Intel Core H-series processors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X