ಭಾರತದಲ್ಲಿ ಏಸರ್‌ ಸ್ವಿಫ್ಟ್ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕ ಏಸರ್ ಕಂಪೆನಿ ತನ್ನ ಪ್ರೀಮಿಯಂ ವಿಂಡೋಸ್ ಲ್ಯಾಪ್‌ಟಾಪ್‌ಗಳ ನವೀಕರಿಸಿದ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯ ಲ್ಯಾಪ್‌ಟಾಪ್‌ಗಳು 11 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇನ್ನು 11 ನೇ ತಲೆಮಾರಿನ ನವೀಕರಣವನ್ನು ಆಸ್ಪೈರ್ 5, ಸ್ವಿಫ್ಟ್ 3 ಎಕ್ಸ್, ಸ್ವಿಫ್ಟ್ 3 14, ಸ್ವಿಫ್ಟ್ 3 ಮತ್ತು ಸ್ವಿಫ್ಟ್ 5ಗೆ ಅನ್ವಯಿಸಲಾಗಿದೆ. ಅಲ್ಲದೆ ಏಸರ್ ಈ ಎಲ್ಲಾ ಮಾದರಿಗಳ ಬೆಲೆಗಳನ್ನು ಪರಿಷ್ಕರಿಸಿದ್ದು, ನವೆಂಬರ್ ಮೊದಲ ವಾರದಿಂದ ಮಾರಾಟಕ್ಕೆ ಇಡಲಿದೆ.

ಏಸರ್‌

ಹೌದು, ಏಸರ್‌ ಸಂಸ್ಥೆ ತನ್ನ 11 ನೇ ತಲೆಮಾರಿ ಪ್ರೊಸೆಸರ್‌ ಒಳಗೊಂಡ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳಲ್ಲಿ ಕೆಲವು ಇಂಟೆಲ್ ಇವೊ ಪ್ರೋಗ್ರಾಂಗೆ ಅನುಗುಣವಾಗಿರುತ್ತವೆ ಮತ್ತು ಅವುಗಳಲ್ಲಿ ಕೆಲವು ಇಂಟೆಲ್ ಐರಿಸ್ ಎಕ್ಸ್‌ಇ ಮತ್ತು ಇಟೆಲ್ ಎಕ್ಸ್‌ಇ ಮ್ಯಾಕ್ಸ್ ಆಧಾರಿತ ಲ್ಯಾಪ್‌ಟಾಪ್‌ಗಳನ್ನು ಸಹ ಪರಿಚಯಿಸುತ್ತವೆ. ಈ ಪ್ರೊಸೆಸರ್‌ಗಳು ತ್ವರಿತ ವೇಕ್, ಇಂಟೆಲ್ ಐರಿಸ್ ಕ್ಸೆ ಗ್ರಾಫಿಕ್ಸ್‌ನೊಂದಿಗೆ ಶಕ್ತಿಯುತವಾದ ಗ್ರಾಫಿಕ್ಸ್ ಕಾರ್ಯಕ್ಷಮತೆ, ಬೆಸ್ಟ್-ಇನ್-ಕ್ಲಾಸ್ ವಾಯರ್‌ಲೆಸ್ ಮತ್ತು ಥಂಡರ್ಬೋಲ್ಟ್ 4 ಸಂಪರ್ಕವನ್ನು ಹೊಂದಿವೆ. ಹಾಗಾದ್ರೆ ಏಸರ್‌ 11 ನೇ ತಲೆಮಾರಿನ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್ ಸ್ವಿಫ್ಟ್ 5

ಏಸರ್ ಸ್ವಿಫ್ಟ್ 5

ಏಸರ್ ಸ್ವಿಫ್ಟ್ 5 ಲ್ಯಾಪ್‌ಟಾಪ್ ಹಗುರವಾದ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿದ್ದು, ಇದನ್ನು ಇಂಟೆಲ್ ಇವೊ ಪ್ಲಾಟ್‌ಫಾರ್ಮ್‌ಗೆ ಪರಿಶೀಲಿಸಲಾಗುತ್ತದೆ. ಆದ್ದರಿಂದ, ಲ್ಯಾಪ್ಟಾಪ್ 17 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಏಸರ್ ಕಂಪೆನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 340 ನಿಟ್ಸ್‌ ಬ್ರೈಟ್‌ನೆಶ್‌ ಮಟ್ಟ ಮತ್ತು 100% sRGB ಬಣ್ಣದ ಹರವು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಬೆಲೆ 79,999 ರೂ ಬೆಲೆಯನ್ನು ಹೊಂದಿದೆ.

ಏಸರ್ ಸ್ವಿಫ್ಟ್ 3X

ಏಸರ್ ಸ್ವಿಫ್ಟ್ 3X

ಸ್ವಿಫ್ಟ್ 3X ಹೊಸ ಇಂಟೆಲ್ ಐರಿಸ್ ಎಕ್ಸ್ ಮ್ಯಾಕ್ಸ್ ಗ್ರಾಫಿಕ್ಸ್ ಜೊತೆಗೆ 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿದೆ. ಇದು ಫೋಟೋ ಮತ್ತು ವಿಡಿಯೋ ಎಡಿಟಿಂಗ್‌ನಂತಹ ಗ್ರಾಫಿಕ್ಸ್-ತೀವ್ರವಾದ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 72% ಎನ್‌ಟಿಎಸ್‌ಸಿ ಬಣ್ಣದ ಹರವು ಬೆಂಬಲಿಸುತ್ತದೆ. ಅಲ್ಲದೆ 84% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್ 58.7Wh ಬ್ಯಾಟರಿಯನ್ನು ಹೊಂದಿದ್ದು, 17.5 ಗಂಟೆಗಳವರೆಗೆ ಇರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಬೆಲೆ 79,999 ರೂಗಳಿಂದ ಪ್ರಾರಂಭವಾಗುತ್ತದೆ.

ಏಸರ್ ಸ್ವಿಫ್ಟ್ 3

ಏಸರ್ ಸ್ವಿಫ್ಟ್ 3

ಏಸರ್ ಸ್ವಿಫ್ಟ್ 3 ಲ್ಯಾಪ್‌ಟಾಪ್‌ ಕೂಡ 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಇಂಟೆಲ್ ಇವೊ ಪ್ಲಾಟ್‌ಫಾರ್ಮ್ ಲ್ಯಾಪ್‌ಟಾಪ್ ವಿನ್ಯಾಸವೆಂದು ಪ್ರಮಾಣೀಕರಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್‌ 13.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 3: 2 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 400-ನಿಟ್ ಬ್ರೈಟ್‌ನೆಸ್ ರೇಟಿಂಗ್ ಹೊಂದಿದೆ. ಇದು 16 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 4 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಬೆಲೆ 67,999 ರೂಗಳಿಂದ ಪ್ರಾರಂಭವಾಗುತ್ತದೆ.

Most Read Articles
Best Mobiles in India

Read more about:
English summary
Acer has launched the updated lineup of its premium Windows laptops in India powered by the 11th-Gen Intel Core processors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X