ಬಜೆಟ್‌ ಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಎನಿಸಲಿವೆ ಈ ಲ್ಯಾಪ್‌ಟಾಪ್‌ಗಳು!

|

ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಂದ ಹಿಡಿದು ವರ್ಕ್‌ಫ್ರಮ್‌ ಹೋಮ್‌ ಮಾಡುತ್ತಿರುವ ಎಲ್ಲರಿಗೂ ಲ್ಯಾಪ್‌ಟಾಪ್‌ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇನ್ನು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ಗಳ ಕಡೆಗೆ ಒವು ತೋರಿಸುತ್ತಾರೆ. ಕೇವಲ ಆನ್‌ಲೈನ್‌ ತರಗತಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ಬಳಸುವುದರಿಂದ ಬಜಟ್‌ ಬೆಲೆಯ ಲ್ಯಾಪ್‌ಟಾಪ್‌ಗಳು ಸೂಕ್ತವಾಗಿವೆ.

ಲ್ಯಾಪ್‌ಟಾಪ್‌ಗಳು

ಹೌದು, ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆಯಾಗಿವೆ. ಇನ್ನು ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಹಲವು ಲ್ಯಾಪ್‌ಟಾಪ್‌ಗಳು ಲಾಂಚ್‌ ಆಗಿವೆ. ಇವುಗಳಲ್ಲಿ ಬಜೆಟ್‌ ಲ್ಯಾಪ್‌ಟಾಪ್‌ಗಳು ಮತ್ತು ಕ್ರೋಮ್‌ಬುಕ್‌ಗಳು ಕೂಡ ಸೇರಿವೆ. ಇನ್ನು ನೀವು ಕೂಡ ಬಜೆಟ್‌ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಮತ್ತು ಕ್ರೋಮ್‌ಗಳನ್ನು ಸರ್ಚ್‌ ಮಾಡುತ್ತಿದ್ದರೆ, ಈ ಲೇಖನದಲ್ಲಿ ನಿಮಗೆ ಸೂಕ್ತ ಎನಿಸುವ ಲ್ಯಾಪ್‌ಟಾಪ್‌ಗಳ ಬಗ್ಗೆ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಹೆಚ್‌ಪಿ ಕ್ರೋಮ್‌ಬುಕ್‌ 11A

ಹೆಚ್‌ಪಿ ಕ್ರೋಮ್‌ಬುಕ್‌ 11A

ಬಜೆಟ್‌ ಬೆಲೆ ಲ್ಯಾಪ್‌ಟಾಪ್‌ ಗಳಲ್ಲಿ ಹೆಚ್‌ಪಿ ಕ್ರೋಮ್‌ಬುಕ್‌ 11A ಕೂಡ ಒಂದಾಗಿದೆ. ಈ ಲ್ಯಾಪ್‌ಟಾಪ್‌ 11.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್‌ MT8183 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ. ಜೊತೆಗೆ 3-ಇನ್ -1 ಕಾರ್ಡ್ ರೀಡರ್‌ ಅನ್ನು ಒಳಗೊಂಡಿದೆ. ಒಂದು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಯುಎಸ್‌ಬಿ ಟೈಪ್-ಎ ಪೋರ್ಟ್ ಹೊಂದಿದ್ದು, ಇಂಟರ್‌ಬಿಲ್ಟ್‌ ಡ್ಯುಯಲ್ ಸ್ಪೀಕರ್‌ಗಳು, ಡ್ಯುಯಲ್-ಅರೇ ಮೈಕ್ರೊಫೋನ್‌ಗಳು ಮತ್ತು ಗೂಗಲ್ ಅಸಿಸ್ಟೆಂಟ್ ನಂತಹ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ನಿಮಗೆ ಕೇವಲ 22,990ರೂ, ಬೆಲೆಯಲ್ಲಿ ಲಭ್ಯವಾಗಲಿದೆ.

ಏಸರ್ ಕ್ರೋಮ್‌ಬುಕ್ 311

ಏಸರ್ ಕ್ರೋಮ್‌ಬುಕ್ 311

ಏಸರ್ ಸಂಸ್ಥೆಯ ಕ್ರೋಮ್‌ಬುಕ್ 311 ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು 11.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇಂಟೆಲ್ ಸೆಲೆರಾನ್ ಪ್ರೊಸೆಸರ್ ಹೊಂದಿದ್ದು, 4GB RAM ಮತ್ತು 32GB ROM ಹೊಂದಿದೆ. ಜೊತೆಗೆ ಇಂಟೆಲ್‌ UHD ಗ್ರಾಫಿಕ್ಸ್ 600 ಅನ್ನು ಒಳಗೊಂಡಿದೆ. ಇದರ ಬೆಲೆ 22,890ರೂ, ಆಗಿದೆ.

ಆಸುಸ್ ಕ್ರೋಮ್ ಬುಕ್ ಸಿ 223

ಆಸುಸ್ ಕ್ರೋಮ್ ಬುಕ್ ಸಿ 223

ಆಸುಸ್‌ ಕಂಪೆನಿಯ ಈ ಲ್ಯಾಪ್‌ಟಾಪ್‌ 20,000ರೂ ಒಳಗೆ ಲಭ್ಯವಾಗುವ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇದು 11.6-ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 720p ವೆಬ್‌ಕ್ಯಾಮ್ ಒಳಗೊಂಡಿದೆ. ಇದು ಇಂಟೆಲ್ ಸೆಲೆರಾನ್ N3350 ಪ್ರೊಸೆಸರ್ ಹೊಂದಿದ್ದು, 4GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಪಡೆದುಕೊಂಡಿದೆ. ಇದರ ಬೆಲೆ 17,999ರೂ,ಆಗಿದೆ.

ಆಸುಸ್ ವಿವೋಬುಕ್ 15 2020

ಆಸುಸ್ ವಿವೋಬುಕ್ 15 2020

ಆಸುಸ್ ವಿವೋಬುಕ್ 15 ಲ್ಯಾಪ್‌ಟಾಪ್‌ ಬಜೆಟ್‌ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇದು 15.6-ಇಂಚಿನ HD ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್‌ ಹೊಂದಿದ್ದು, ಇಂಟೆಲ್ UHD ಗ್ರಾಫಿಕ್ಸ್ 600 ಅನ್ನು ಒಳಗೊಂಡಿದೆ. ಹಾಗೆಯೇ 4GB RAM ಅನ್ನು 8GB RAM ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಬೆಲೆ 28,689ರೂ, ಆಗಿದೆ.

ಆಸುಸ್ ಕ್ರೋಮ್ ಬುಕ್ ಸೆಲೆರಾನ್ ಡ್ಯುಯಲ್ ಕೋರ್

ಆಸುಸ್ ಕ್ರೋಮ್ ಬುಕ್ ಸೆಲೆರಾನ್ ಡ್ಯುಯಲ್ ಕೋರ್

ಆಸುಸ್‌ ಕಂಪೆನಿ ಕೂಡ ಬಜೆಟ್‌ ಬೆಲೆಯಲ್ಲಿ ಹಲವು ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಆಸುಸ್‌ ಕ್ರೋಮ್‌ಬುಕ್ ಸೆಲೆರಾನ್ ಡ್ಯುಯಲ್ ಕೋರ್‌ ವಿಧ್ಯಾರ್ಥಿಗಳಿಗೆ ಸೂಕ್ತವಾದ ಲ್ಯಾಪ್‌ಟಾಪ್‌ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ 1366 x 768 ಪಿಕ್ಸೆಲ್‌ ಸ್ಕ್ರಿನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ HD ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ಕಾನ್ಫಿಗರೇಶನ್ ಹೊಂದಿದೆ. ಜೊತೆಗೆ 720p HD ವೆಬ್‌ಕ್ಯಾಮ್ ಮತ್ತು ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಸಹ ಒಳಗೊಂಡಿದೆ.ಈ ಲ್ಯಾಪ್‌ಟಾಪ್‌ ತನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ Type-Cಯನ್ನು ಬೆಂಬಲಿಸಲಿದೆ.ಇದು ವಿದ್ಯಾರ್ಥಿಗಳಿಂದ ಹಿಡಿದು ವರ್ಕ್‌ಫ್ರಮ್‌ ಹೋಮ್‌ ಮಾಡುತ್ತಿರುವ ಎಲ್ಲರಿಗೂ ಅತ್ಯುತ್ತಮ ಆಯ್ಕೆಯಾಗಿದೆ.ಇದರ ಬೆಲೆ 23,999 ರೂ. ಆಗಿದೆ.

Most Read Articles
Best Mobiles in India

English summary
If you’re looking for some good budget laptops and Chromebooks, here are a few options to consider.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X