ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಆದಾಯದ ಜೊತೆ ಚಂದಾದಾರರ ಸಂಖ್ಯೆ ಏರಿಕೆ!

|

ಜನಪ್ರಿಯ ಏರ್‌ಟೆಲ್ ಟೆಲಿಕಾಂ 2020ರ ಅಕ್ಟೋಬರ್ 1 ರಿಂದ 2020 ರ ಡಿಸೆಂಬರ್ 31 ರವರೆಗೆ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಏರ್‌ಟೆಲ್ ಟೆಲಿಕಾಂ ಮೂರನೇ ರ್ತ್ರೈಮಾಸಿಕದಲ್ಲಿ ಒಟ್ಟು 853.6 ಕೋಟಿ ರೂ. ಲಾಭ ಗಳಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ಆದಾಯವೂ 26,517.8 ಕೋಟಿ ರೂ.ಗೆ ಏರಿಕೆಯಾಗಿದೆ. ಹಾಗೆಯೇ ಪೋಸ್ಟ್‌ಪೇಯ್ಡ್‌ ಬಳಕೆದಾರರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಆದಾಯದ ಜೊತೆ ಚಂದಾದಾರರ ಸಂಖ್ಯೆ ಏರಿಕೆ!

ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ನ 4G ಚಂದಾದಾರರ ಸಂಖ್ಯೆ 165.6 ಮಿಲಿಯನ್ ಏರಿಕೆಯಾಗಿದೆ ಎಂದು ಏರ್‌ಟೆಲ್‌ ಹೇಳಿದೆ. ಡಿಸೆಂಬರ್‌ ಅಂತ್ಯಕ್ಕೆ ಭಾರತದಲ್ಲಿ ಏರ್‌ಟೆಲ್‌ನ ಬಳಕೆದಾರರ ಸಂಖ್ಯೆ 33.6 ಕೋಟಿಗೆ ಹೆಚ್ಚಳಗೊಂಡಿದೆ. ಹಾಗೆಯೇ ಬಳಕೆದಾರರಿಂದ ಟೆಲಿಕಾಂ ಗಳಿಸುವ ಸರಾಸರಿ ಆದಾಯವು (ARPU ) 162 ರಿಂದ 166 ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಾಯನ್ಸ್‌ ಜಿಯೋಗೆ ಪ್ರಬಲ ಪೈಪೋಟಿಯ ಹೆಜ್ಜೆಗಳನ್ನು ಏರ್‌ಟೆಲ್‌ ಹಾಕುತ್ತಿದೆ.

ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಆದಾಯದ ಜೊತೆ ಚಂದಾದಾರರ ಸಂಖ್ಯೆ ಏರಿಕೆ!

ವಾಯರ್‌ಲೆಸ್‌ ವ್ಯವಹಾರದ ಹೊರತಾಗಿ, ಭಾರ್ತಿ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಮತ್ತು ಡಿಟಿಎಚ್ ಎರಡೂ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಗ್ರಾಹಕರ ಸೇರ್ಪಡೆಗೆ ಸಾಕ್ಷಿಯಾಗಿದೆ. ಟೆಲಿಕಾಂ ತ್ರೈಮಾಸಿಕದಲ್ಲಿ ಏಳು ಲಕ್ಷ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೇರಿಸಿದೆ. ಈ ತ್ರೈಮಾಸಿಕದಲ್ಲಿ ಸುಮಾರು 7 ಲಕ್ಷ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೇರಿಸಿದೆ. ಇದಲ್ಲದೆ, ಟೆಲ್ಕೊ VoWi-Fi ಸೇವೆಯನ್ನು ಬಳಸುವ 18 ದಶಲಕ್ಷ ಗ್ರಾಹಕರನ್ನು ಹೊಂದಿದೆ.

ಮೂರನೇ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಆದಾಯದ ಜೊತೆ ಚಂದಾದಾರರ ಸಂಖ್ಯೆ ಏರಿಕೆ!

ಮೂರನೇ ತ್ರೈಮಾಸಿಕ ವರದಿಯಲ್ಲಿ, ಭಾರ್ತಿ ಏರ್‌ಟೆಲ್ ಹೋಮ್ ಬಿಸಿನೆಸ್ ವಿಭಾಗವು 2.3%ರಷ್ಟು ಆದಾಯದ ಬೆಳವಣಿಗೆಯನ್ನು ಕಂಡಿದ್ದು, ಇದುವರೆಗೆ 2,15,000 ಗ್ರಾಹಕರ ಸೇರ್ಪಡೆಯಾಗಿದೆ. ಏರ್ಟೆಲ್ ಪ್ರತಿ ತಿಂಗಳು ಹೊಸ ಬ್ರಾಡ್ಬ್ಯಾಂಡ್ ಬಳಕೆದಾರರನ್ನು ಸೇರಿಸುತ್ತಿದೆ ಎಂದು ಟ್ರಾಯ್ ಬಹಿರಂಗಪಡಿಸಿದ ಮಾಸಿಕ ಡೇಟಾ ಸಹ ತಿಳಿಸಿದೆ. ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಏರ್‌ಟೆಲ್ ಬ್ರಾಡ್‌ಬ್ಯಾಂಡ್ 2.79 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಏರ್‌ಟೆಲ್‌ ಡಿಜಿಟಲ್ ಟಿವಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಈ ತ್ರೈಮಾಸಿಕದಲ್ಲಿ 4,85,000 ಗ್ರಾಹಕರ ಸೇರ್ಪಡೆಗಳ ಹಿನ್ನೆಲೆಯಲ್ಲಿ 5.8%ರಷ್ಟು ಬೆಳವಣಿಗೆಯನ್ನು ಕಂಡಿದೆ. ಕೊನೆಯದಾಗಿ, ಏರ್‌ಟೆಲ್‌ನ ಡಿಜಿಟಲ್ ಸೇವೆಗಳಾದ ಏರ್‌ಟೆಲ್ ಥ್ಯಾಂಕ್ಸ್, ವಿಂಕ್ ಮತ್ತು ಎಕ್ಸ್‌ಸ್ಟ್ರೀಮ್ ಒಟ್ಟಾಗಿ 190 ಮಿಲಿಯನ್ (MAUs) ಹೊಂದಿವೆ ಎಂದು ಹೇಳಿದೆ.

Most Read Articles
Best Mobiles in India

English summary
Bharti Airtel Adds Around 7 Lakh New Postpaid Users in Q3 FY21, ARPU Increased to Rs 166.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X