ನಿಮ್ಮ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಏರ್ ಟೆಲ್ ಗೆ ಬದಲಾಯಿಸುವುದು ಹೇಗೆ?

By Gizbot Bureau
|

ಇತರೆ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಸ್ಪರ್ಧೆಯೊಡ್ಡುವ ಉದ್ದೇಶದಿಂದ ಇತ್ತೀಚೆಗೆ ಏರ್ ಟೆಲ್ ಅನಿಯಮಿತ ಡಾಟಾ ಆಕ್ಸಿಸ್ ನ್ನು ತನ್ನೆಲ್ಲಾ ಬ್ರಾಡ್ ಬ್ಯಾಂಡ್ ಪ್ಲಾನ್ ಗಳಲ್ಲಿ ನೀಡಲು ಪ್ರಾರಂಭಿಸಿದೆ. ಅತೀ ಕಡಿಮೆ ಎಂದರೆ ಕೇವಲ 499 ರುಪಾಯಿಯ ಪ್ಲಾನ್ ನ್ನು ಕೂಡ ಕಂಪೆನಿ ಪ್ರಕಟಿಸಿದ್ದು ಇದರ ಸ್ಪೀಡ್ ನ್ನು 40mbps ಗೆ ಇಳಿಸಲಾಗಿದೆ.ಅನಿಯಮಿತ ಡಾಟಾ ಮತ್ತು ಕರೆಗಳ ಸೌಲಭ್ಯವೂ ಕೂಡ ದರಲ್ಲಿದೆ. ನಿಮ್ಮ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಬದಲಾಯಿಸುವುದಕ್ಕೆ ನೀವು ಯೋಚಿಸುತ್ತಿದ್ದರೆ ಹೇಗೆ ಮಾಡಬಹುದು ಎಂಬುದರ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ನಿಮ್ಮ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಏರ್ ಟೆಲ್ ಗೆ ಬದಲಾಯಿಸುವುದು ಹೇಗೆ?

ನಿಮ್ಮ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಏರ್ ಟೆಲ್ ಬದಲಾಯಿಸುವುದಕ್ಕೆ ನೀವು ಮೂರು ವಿಭಿನ್ನ ಮಾರ್ಗಗಳನ್ನು ಅನುಸರಿಸಬಹುದು.

ವಿಧಾನ 1: ಗ್ರಾಹಕ ಸೇವಾ ಕೇಂದ್ರಕ್ಕೆ 121 ಅಥವಾ 199 ಒತ್ತಿ ಕರೆ ಮಾಡಿ.

ನೀವು ಮಾಡಬೇಕಾಗಿರುವುದು ಇಷ್ಟೇ. 121 ಅಥವಾ199 ಕ್ಕೆ ಏರ್ ಟೆಲ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ನಿಂದ ಕರೆ ಮಾಡಿ.ಇದಕ್ಕಾಗಿ ನೀವು ಏರ್ ಟೆಲ್ ಲ್ಯಾಂಡ್ ಲೈನ್ ನ್ನು ಕೂಡ ಬಳಕೆ ಮಾಡಬಹುದು. ಗ್ರಾಹಕ ಸೇವಾ ಪ್ರತಿನಿಧಿಯನ್ನು ತಲುಪಿ ಅವನ/ಳ ಬಳಿ ನಿಮ್ಮ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಏರ್ ಟೆಲ್ ಗೆ ಬದಲಾಯಿಸುವಂತೆ ಕೇಳಿಕೊಳ್ಳಿ.

ವಿಧಾನ 2:ಮೈ ಏರ್ ಟೆಲ್ ಆಪ್ ಬಳಸಿ

ಮೈ ಏರ್ ಟೆಲ್ ಆಪ್ ಬಳಸುವುದು ಕಡಿಮೆ ಸಮಯವನ್ನು ಹಿಡಿಯುತ್ತದೆ ಮತ್ತು ಹೆಚ್ಚು ಆರಾಮದಾಯಕವಾಗಿ ಮಾಡಬಹುದಾಗಿದೆ. ನಿಮ್ಮ ಕೊನೆಯ ಬಿಲ್ ನ್ನು ಪರೀಕ್ಷಿಸುವುದಕ್ಕೆ ಇದರಲ್ಲಿ ಸ್ವಾತಂತ್ರ್ಯವಿರುತ್ತದೆ. ಪಾವತಿಯನ್ನು ಮಾಡಿ ಮತ್ತು ಯಾವುದೇ ಪ್ರೀಪೇಯ್ಡ್ ನಂಬರ್ ನ್ನು ಕೂಡ ರೀಚಾರ್ಜ್ ಮಾಡಬಹುದು. ಜೊತೆಗೆ ಇನ್ನೂ ಅನೇಕ ಸವಲತ್ತುಗಳು ಇದರಲ್ಲಿದೆ. ಗೂಗಲ್ ಪ್ಲೇ ಸ್ಟೋರ್ ಅಥಾ ಆಪಲ್ ಆಪ್ ಸ್ಟೋರ್ ನಿಂದ ನೀವು ಮೊದಲು ಆಪ್ ನ್ನು ಡೌನ್ ಲೋಡ್ ಮಾಡಿ ತೆರೆಯಿರಿ.

ರಿಜಿಸ್ಟರ್ ಆಗಿರುವ ಫೋನ್ ನಂಬರ್ ನಿಂದ ಸೈನ್ ಅಪ್ ಆಗಿ ಮತ್ತು ಓಟಿಪಿ ಪಡೆಯಿರಿ. ಒಮ್ಮೆ ಮುಗಿದ ನಂತರ ನಿಮ್ಮ ಬ್ರಾಡ್ ಬ್ಯಾಂಡ್ ಕನೆಕ್ಷನ್ ನ್ನು ಆಪ್ ಗೆ ಸೇರಿಸಿ ಮತ್ತು ಅದಕ್ಕಾಗಿ ಲ್ಯಾಂಡ್ ಲೈನ್ ನಂಬರ್ ಬಳಸಿ. ಒಮ್ಮೆ ಮುಗಿದ ನಂತರ ಬ್ರಾಡ್ ಬ್ಯಾಂಡ್ ಅಥವಾ ಲ್ಯಾಂಡ್ ಲೈನ್ ಕಾರ್ಡ್ ನ್ನು ಆಪ್ ಮೇಲ್ಬಾಗದಿಂದ ಟ್ಯಾಪ್ ಮಾಡಿ ಮತ್ತು ನೀವು ಮೈ ಪ್ಲಾನ್ ಆಯ್ಕೆಗೆ ತೆರಳಬಹುದು.

ಮೈ ಪ್ಲಾನ್ಸ್ ಅಡಿಯಲ್ಲಿ ಚೇಂಜ್ ಪ್ಲಾನ್ ಬಟನ್ ನ್ನು ನೀವು ಕಾಣಬಹುದು ಮತ್ತು ಅದರಲ್ಲಿ ಎಲ್ಲಾ ಬ್ರಾಡ್ ಬ್ಯಾಂಡ್ ಪ್ಲಾನ್ ಗಳ ವಿವರ ಇರುತ್ತದೆ. ನಿಮಗೆ ಅಗತ್ಯವಿರುವ ಪ್ಲಾನ್ ನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಪ್ಲಾನ್ ಚೇಂಜ್ ಗಾಗಿ ಸ್ಕ್ರೀನ್ ನಲ್ಲಿ ಬರುವ ಮಾಹಿತಿಗಳನ್ನು ಅನುಸರಿಸಿ.

ಇದೆಲ್ಲವೂ ಆದ ಬಳಿಕ ನೀವು ಎಸ್ಎಂಎಸ್ ನೋಟಿಫಿಕೇಷನ್ ನ್ನು ಪಡೆಯುತ್ತೀರಿ ಮತ್ತು ಇದು ನಿಮಗೆ ಪ್ಲಾನ್ ಬದಲಾವಣೆಯಾಗಿರುವ ಬಗ್ಗೆ ಖಾತ್ರಿಗೊಳಿಸುತ್ತದೆ.

Most Read Articles
Best Mobiles in India

English summary
Airtel Broadband: How To Change Plans, Choose Unlimited Offers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X