ಏರ್‌ಟೆಲ್‌ನಿಂದ ಹೊಸ ಪೋಸ್ಟ್ ಪೇಯ್ಡ್‌ ಪ್ಲ್ಯಾನ್‌ ಲಾಂಚ್‌! ಅಧಿಕ ಡೇಟಾ ಪ್ರಯೋಜನ!

|

ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಸಂಸ್ಥೆಗಳ ದರ್ಭಾರ್‌ ಜೊರಾಗಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆದಿವೆ. ಅಷ್ಟೇ ಅಲ್ಲ ತಮ್ಮ ಚಂದಾದಾರಿಗೆ ಹೊಸ ಹೊಸ ಪ್ರಿಪೇಯ್ಡ್‌ ಯೋಜನೆಗಳನ್ನು ಪರಿಚಯಿಸುತ್ತಲೇ ಬಂದಿವೆ. ಇದರಲ್ಲಿ ಏರ್‌ಟೆಲ್‌ ಕೂಡ ಮುಂಚೂಣಿಯಲ್ಲಿದೆ. ಈಗಾಗಲೇ ಏರ್‌ಟೆಲ್ ಭಾರತದಲ್ಲಿ ತನ್ನ ಗ್ರಾಹಕರಿಗೆ ಹೊಸ ಕಾರ್ಪೊರೇಟ್ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.

ಪೋಸ್ಟ್‌ಪೇಯ್ಡ್

ಹೌದು, ಏರ್‌ಟೆಲ್‌ ಟೆಲಿಕಾಂ ಆಪರೇಟರ್‌ ತನ್ನ ಗ್ರಾಹಕರಿಗೆ ಹಲವು ಮಾದರಿಯ ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹೆಚ್ಚಿನ ವೇಗದ ಡೇಟಾದ ಬಳಕೆಯನ್ನು ಒಳಗೊಂಡಿರುವ ಜೊತೆಗೆ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹಲವು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇದರ ಜೊತೆಗೆ, ತನ್ನ ಸದಸ್ಯರಿಗೆ ಹೆಚ್ಚಿನ ಡೇಟಾ ಮತ್ತು ಪ್ರಯೋಜನಗಳನ್ನು ಪಡೆಯಲು ಏರ್‌ಟೆಲ್ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ರಿಫ್ರೆಶ್ ಮಾಡಿದೆ. ಏರ್‌ಟೆಲ್‌ನ ಹೊಸ ಯೋಜನೆಗಳು ಯಾವೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌ನ ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು

ಏರ್‌ಟೆಲ್‌ನ ಹೊಸ ಪೋಸ್ಟ್ ಪೇಯ್ಡ್ ಯೋಜನೆಗಳು

ಹೊಸ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಯೋಜನೆಗಳ ಪಟ್ಟಿ 299 ರೂ.ಗಳಿಂದ ಪ್ರಾರಂಭವಾಗಿ 1,599 ರೂ. ತನಕ ಲಭ್ಯವಿದೆ. ಇದರಲ್ಲಿ 299ರೂ, ಪ್ಲ್ಯಾನ್‌ ಬಳಕೆದಾರರಿಗೆ 30GB ಡೇಟಾ, ಅನಿಯಮಿತ ಕರೆಗಳು ಮತ್ತು ಏರ್‌ಟೆಲ್ ಕಾಲ್ ಮ್ಯಾನೇಜರ್ ವ್ಯವಹಾರ ಡಿವೈಸ್‌ಗೆ ಪ್ರವೇಶವನ್ನು ಒದಗಿಸುತ್ತದೆ. ಈ ಯೋಜನೆಯು ವಿಂಕ್ ಮ್ಯೂಸಿಕ್, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಒಂದು ವರ್ಷದ ಶಾ ಅಕಾಡೆಮಿ ಚಂದಾದಾರಿಕೆಯಂತಹ ಇತರ ಸೇವೆಗಳನ್ನು ಸಹ ಒಳಗೊಂಡಿದೆ.

349 ರೂ ಮತ್ತು 299 ರೂ. ಪ್ಲ್ಯಾನ್‌

349 ರೂ ಮತ್ತು 299 ರೂ. ಪ್ಲ್ಯಾನ್‌

ಬಳಕೆದಾರರಿಗೆ 60GB ಡೇಟಾವನ್ನು ಒದಗಿಸುವ 399 ರೂ.‌ ಪ್ಲ್ಯಾನ್‌ ಅನಿಯಮಿತ ಕರೆ ಮತ್ತು ಟ್ರೇಸ್‌ಮೇಟ್, ಗೂಗಲ್ ಕಾರ್ಯಕ್ಷೇತ್ರ ಮತ್ತು ಏರ್‌ಟೆಲ್ ಕಾಲ್ ಮ್ಯಾನೇಜರ್‌ನಂತಹ ಹಲವಾರು ವ್ಯಾಪಾರ ಸಾಧನಗಳಿಗೆ ಪ್ರವೇಶವನ್ನು ಸಹ ಒಳಗೊಂಡಿದೆ. ಈ ಯೋಜನೆಯು ಉಚಿತ ವಿಂಕ್ ಮ್ಯೂಸಿಕ್ ಪ್ರೀಮಿಯಂ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಅನ್ನು ಒಳಗೊಂಡಿದೆ. ಶಾ ಅಕಾಡೆಮಿ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ ಒಂದು ವರ್ಷ, ವಿಐಪಿ ಸೇವೆ ಮತ್ತು ಏರ್‌ಟೆಲ್ ಸೆಕ್ಯೂರ್ ಅನ್ನು ನೀಡಲಿದೆ.

ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳು

ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳು

ಏರ್‌ಟೆಲ್‌ನ ಹೊಸ ಚಿಲ್ಲರೆ ಪೋಸ್ಟ್‌ಪೇಯ್ಡ್ ಯೋಜನೆಗಳು ಸಹ ಇವು. ಇದರಲ್ಲಿ 40GB ಡೇಟಾ, ಅನಿಯಮಿತ ಕರೆಗಳು ಮತ್ತು ವಿಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ಶಾ ಅಕಾಡೆಮಿ (1 ವರ್ಷ), ಮತ್ತು ಉಚಿತ ಹೆಲೋಟೂನ್‌ಗಳಿಗೆ ಪ್ರವೇಶ ಹೊಂದಿರುವ 399 ರೂ.ಪ್ಲ್ಯಾನ್‌ ಪರಿಚಯಿಸಿದೆ. ಅಲ್ಲದೆ 499 ರೂ ಪೋಸ್ಟ್‌ಪೇಯ್ಡ್ ಯೋಜನೆಯು 75GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. 1 ವರ್ಷದ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಮತ್ತು ಶಾ ಅಕಾಡೆಮಿಗೆ ಉಚಿತ ಪ್ರವೇಶವಿದೆ. ಈ ಪ್ಯಾಕ್ ವಿಂಕ್ ಮ್ಯೂಸಿಕ್ ಪ್ರೀಮಿಯಂ, ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಏರ್‌ಟೆಲ್ ಸೆಕ್ಯೂರ್ ಅನ್ನು ಸಹ ಜೋಡಿಸುತ್ತದೆ.

ಕರೆಗಳು

ಇನ್ನು 999 ರೂ ಯೋಜನೆಯು ಬಳಕೆದಾರರಿಗೆ ಯೋಜನೆಗೆ 2 ಸದಸ್ಯರನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಇದು 210 ಜಿಬಿ ಡೇಟಾವನ್ನು (ಮುಖ್ಯ ಬಳಕೆದಾರರಿಗೆ 150 ಜಿಬಿ, ಎರಡನೇ ಸದಸ್ಯರಿಗೆ 30 ಜಿಬಿ, ಮೂರನೇ ಸದಸ್ಯರಿಗೆ 30 ಜಿಬಿ), ಅನಿಯಮಿತ ಕರೆಗಳು ಮತ್ತು 499 ರೂ ಯೋಜನೆಗೆ ಹೋಲುವ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೆ 1,599 ರೂ.ಪ್ಲ್ಯಾನ್‌ ಡೇಟಾವನ್ನು ಹೊರತುಪಡಿಸಿ 999 ರೂಗಳಷ್ಟೇ ಪ್ರಯೋಜನಗಳನ್ನು ಹೊಂದಿವೆ. ಇದು 1 ಹೆಚ್ಚುವರಿ ಸದಸ್ಯರನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ ಮತ್ತು ಅನಿಯಮಿತ ಡೇಟಾ ಮತ್ತು ಐಆರ್ ಪ್ಯಾಕ್ ಅನ್ನು ಒದಗಿಸುತ್ತದೆ. 30 ಜಿಬಿ ಡೇಟಾ, ಅನಿಯಮಿತ ಕರೆಗಳು ಮತ್ತು 399 ರೂ ಪ್ಯಾಕ್‌ನಂತೆಯೇ ಪ್ರಯೋಜನಗಳನ್ನು ನೀಡುವ 299 ರೂ ಆಡ್-ಆನ್ ಪ್ಯಾಕ್ ಸಹ ಇದೆ.

Most Read Articles
Best Mobiles in India

English summary
Airtel has introduced new Corporate postpaid plans that offer "industry leading data benefits" to serve people's work-from-home and online education needs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X