ಏರ್‌ಟೆಲ್‌ನಿಂದ ಮೂರು ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಆಫರ್‌ ಏನು?

|

ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಈಗಾಗಲೇ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೀಗ ಏರ್‌ಟೆಲ್ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಲಾಂಚ್‌ ಮಾಡಿದೆ. ಇನ್ನು ಈ ಮೂರು ಹೊಸ ಪ್ಲಾನ್‌ಗಳು ಅಧಿಕ ಡೇಟಾ, ಅನಿಯಮಿತ ಕರೆ, ದೈನಂದಿನ SMS ಪ್ರಯೋಜನ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಮೂರು ಹೊಸ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಗೆ ಉಚಿತ ಪ್ರವೇಶವನ್ನು ನೀಡಲಿವೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಹೊಸ ಚಂದಾದಾರಿಕೆಯನ್ನು ಪರಿಚಯಿಸದ ನಂತರ ಏರ್‌ಟೆಲ್‌ ಈ ಹೊಸ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್‌ಗಳ ಮೂಲಕ ತನ್ನ ಪ್ರಿಪೆಯ್ಡ್‌ ಪ್ಲಾನ್‌ಗಳನ್ನು ಅಪ್‌ಗ್ರೇಡ್‌ ಮಾಡಿದೆ. ಹಾಗಾದ್ರೆ ಏರ್‌ಟೆಲ್‌ ಪರಿಚಯಿಸಿರುವ ಮೂರು ಹೊಸ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ 499ರೂ. ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್ 499ರೂ. ಪ್ರಿಪೇಯ್ಡ್ ಪ್ಲಾನ್‌

ಈ ಡೇಟಾ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲಾನ್‌ ನಲ್ಲಿ ದಿನಕ್ಕೆ 3GB ಡೇಟಾ, ಅನಿಯಮಿತ ಕರೆಗಳು ಹಾಗೂ ಡೈಲಿ 100 SMS ಪ್ರಯೋಜನವನ್ನು ಪಡೆಯಬಹುದಾಗಿದೆ. ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಒಂದು ವರ್ಷದ ಅವಧಿಗೆ ಪಡೆಯಲಿದ್ದಿರಿ. ಹಾಗೆಯೇ ಈ ಪ್ಲಾನ್‌ನಲ್ಲಿ ಅಪೊಲೊ 24/7 ಮೂರು ತಿಂಗಳ ಸದಸ್ಯತ್ವ ಮತ್ತು ಶಾ ಅಕಾಡೆಮಿಯಿಂದ ಉಚಿತ ಕೋರ್ಸ್ ಅನ್ನು ಪಡೆಯಬಹುದಾಗಿದೆ.

ಏರ್‌ಟೆಲ್‌ 699ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 699ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 699ರೂ. ಪ್ರಿಪೇಯ್ಡ್‌ ಪ್ಲಾನ್‌ ದಿನಕ್ಕೆ 2GB ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು, ಡೈಲಿ 100 SMS ಪ್ರಯೋಜನ ನೀಡಲಿದೆ. ಈ ಪ್ಲಾನ್ 56 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ನೀವು ಒಂದು ವರ್ಷದವರೆಗೂ ಉಚಿತವಾಗಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಅಲ್ಲದೆ ಅಪೋಲೋ 24/7 ಸರ್ಕಲ್ 3 ತಿಂಗಳ ಸದಸ್ಯತ್ವ ಮತ್ತು ಶಾ ಅಕಾಡೆಮಿಯಿಂದ ಉಚಿತ ಕೋರ್ಸ್‌ ಪ್ರಯೋಜನ ಸಿಗಲಿದೆ.

ಏರ್‌ಟೆಲ್‌ 2,798ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 2,798ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 2,798ರೂ, ಗಳ ಪ್ರಿಪೇಯ್ಡ್‌ ಪ್ಲಾನ್‌ ದೀರ್ಘಾವಧಿ ಪ್ಲಾನ್‌ ಆಗಿದೆ. ಇದು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌, ಡೈಲಿ 100 ಎಸ್‌ಎಂಎಸ್‌ ಮತ್ತು ದೈನಂದಿನ 2GB ಡೇಟಾವನ್ನು ಒಳಗೊಂಡಿದೆ. ಜೊತೆಗೆ ಈ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ 30 ದಿನಗಳ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್-ಒನ್ಲಿ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್‌

ಇದಲ್ಲದೆ ಹೆಚ್ಚುವರಿಯಾಗಿ, ಏರ್‌ಟೆಲ್‌ ಟೆಲಿಕಾಂ 999ರೂ ಗಳಿಗಿಂತ ಹೆಚ್ಚಿನ ಬೆಲೆಯ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಪ್ಲಾನ್‌ ಬಳಸುವವರಿಗೆ ಭರ್ಜರಿ ಆಫರ್‌ ನೀಡಲಿದೆ. ಈ ಪ್ಲಾನ್‌ಗಳನ್ನು ಬಳಸುವವರಿಗೆ 899ರೂ ಮೌಲ್ಯದ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ. ಇನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಆಫರ್ ವೇಗವು 1 ಜಿಬಿಪಿಎಸ್, ಅನಿಯಮಿತ ಕರೆ ಮತ್ತು ಸುಧಾರಿತ ಡಬ್ಲ್ಯುಐ-ಎಫ್‌ಐ ರೂಟರ್‌ಗಳು 60 ವರೆಗೆ ಸಂಪರ್ಕಿಸಲಿದೆ.

ಜಿಯೋ ಟೆಲಿಕಾಂ

ಇನ್ನು ಈಗಾಗಲೇ ಏರ್‌ಟೆಲ್‌ ಮಾದರಿಯಲ್ಲಿಯೇ ಜಿಯೋ ಟೆಲಿಕಾಂ ಕೂಡ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದರಿಕೆ ಉಚಿತವಾಗಿ ನೀಡುವ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಜಿಯೋ ಟೆಲಿಕಾಂ 499ರೂ ಹಾಗೂ 666ರೂ ಗಳ ಪ್ಲಾನ್‌ ಪರಿಚಯಿಸಿದೆ. 499ರೂ, ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 3 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ. ಹಾಗೆಯೇ 666ರೂ,ಗಳಪ್ಲಾನ್‌ನಲ್ಲಿ ಬಳಕೆದಾರರು ಪ್ರತಿ ನಿತ್ಯ ವೇಗದ 2 GB ಡೇಟಾವನ್ನು ಪಡೆಯಲಿದ್ದಾರೆ. ಇದಲ್ಲದೇ ಅನಿಯಮಿತ ಕರೆಗಳು ಮತ್ತು ಮೇಸೆಜ್‌ ಕಳುಹಿಸುವ ಅವಕಾಶವು ದೊರೆಯಲಿದೆ. 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಡಿಸ್ನಿ + ಹಾಟ್ ಸ್ಟಾರ್ ಸಬ್‌ಸ್ಕ್ರಿಪ್ಶನ್ ಸಹ ಲಭ್ಯವಿರಲಿದೆ.

Most Read Articles
Best Mobiles in India

English summary
Airtel has launched new prepaid plans that offer high-speed data, unlimited calling benefits, free access to Disney+ Hotstar subscription and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X