ಏರ್‌ಟೆಲ್‌ ಪ್ಲಾನ್‌ ಬೆಲೆಯಲ್ಲಿ ಹೆಚ್ಚಳವಾದ ನಂತರ ನಿಮಗೆ ಯಾವ ಪ್ಲಾನ್‌ ಸೂಕ್ತ!

|

ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಟೆಲಿಕಾಂ ಕಂಪೆನಿಗಳು ತಮ್ಮ ಟಾರಿಫ್‌ ಅನ್ನು ಹೆಚ್ಚಿಸುವುದರ ಜೊತೆಗೆ ಪ್ರಿಪೇಯ್ಡ್‌ ಪ್ಲಾನ್‌ಗಳ ಶುಲ್ಕವನ್ನು ಹೆಚ್ಚಳ ಮಾಡಿವೆ. ಇನ್ನು ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಏರ್‌ಟೆಲ್‌ ನೆನ್ನೆಯಷ್ಟೇ ತನ್ನ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು 20-25% ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ತನ್ನ ಪ್ರಿಪೆಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ಬದಲಾವಣೆ ಮಾಡಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ತನ್ನ ಪ್ರಿಪೆಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಮೂಲಕ ಹಲವು ಆಕರ್ಷಕ ಪ್ಲಾನ್‌ಗಳು ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳಲ್ಲಿ ಒಂದೇ ಬೆಲೆಯಲ್ಲಿ ಲಭ್ಯವಾಗಲಿದೆ. ಜೊತೆಗೆ ತನ್ನ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು ಡೇಟಾ ಪ್ಲಾನ್ ಪ್ಯಾಕ್‌ಗಳನ್ನು ಪ್ರತಿಸ್ಪರ್ಧಿಗಳಾದ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾದ ಪ್ರಿಪೇಯ್ಡ್ ಯೋಜನೆಗಳಿಗಿಂತ ಉತ್ತಮಗೊಳಿಸಿದೆ. ಹಾಗಾದ್ರೆ ಮೂರು ಟೆಲಿಕಾಂ ದೈತ್ಯರ ನಡುವಿನ ವಿವಿಧ ಪ್ಲಾನ್‌ಗಳ ಬೆಲೆಗಳು ಹೇಗೆ ಹೋಲಿಕೆಯಾಗುತ್ತವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

28 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳು!

28 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಏರ್‌ಟೆಲ್‌ನ 149ರೂ. ಪ್ರೀಪೇಡ್‌ ಪ್ಲ್ಯಾನ್‌ ಸಹ ದೀರ್ಘಾವಧಿಯ ವ್ಯಾಲಿಡಿಟಿ ಪಡೆದಿದೆ. ಈ ಪ್ಲ್ಯಾನಿನಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಈ ಅವಧಿಯಲ್ಲಿ ಒಟ್ಟಾರೇ 2GB ಡೇಟಾ ಹಾಗೂ ಒಟ್ಟಾರೇ 300 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವಾಯಿಸ್‌ ಕರೆಯ ಸೌಲಭ್ಯ ಹಾಗೂ ಹೆಚ್ಚುವರಿಯಾಗಿ ಡಿಸ್ನಿ ಹಾಟ್‌ಸ್ಟಾರ್ ಚಂದಾದಾರಿಕೆ ಪ್ರಯೋಜನ ಸಹ ಲಭ್ಯವಾಗಲಿದೆ. ಏರ್‌ಟೆಲ್‌ 199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಏರ್‌ಟೆಲ್‌ನ 199ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಏರ್‌ಟೆಲ್‌ 249ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಏರ್‌ಟೆಲ್‌ನ 249ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಹಾಗೆಯೇ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯ ಅವಧಿಯನ್ನು ಪಡೆದಿದೆ.

ಜಿಯೋ ಪ್ರಿಪೇಯ್ಡ್‌ ಪ್ಲಾನ್‌ಗಳು
ಇನ್ನು ಜಿಯೋ ಟೆಲಿಕಾಂ 149ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ 24ದಿನಗಳ ಮಾನ್ಯತೆಯನ್ನು ಪಡೆದಿದೆ. ಇದು ದಿನಕ್ಕೆ 100 SMS ಮತ್ತು ದೈನಂದಿನ 1GB ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ 199ರೂ.ಬೆಲೆಯಲ್ಲಿ ದೈನಂದಿನ 1.5GB ಡೇಟಾ ಹಾಗೂ ಅನಿಯಮಿತ ಕರೆ ಪ್ರಯೋಜನ ಸೇವೆಯನ್ನು 28 ದಿನಗಳ ತನಕ ನೀಡಲಿದೆ. ಜೊತೆಗೆ 249ರೂ.ಬೆಲೆಯಲ್ಲಿ ದೈನಂದಿನ 2GB ಡೇಟಾ ಹಾಗೂ ಅನಿಯಮಿಯ ಕರೆ ಪ್ರಯೋಜನ ನೀಡಲಿದೆ. ಇನ್ನು 349ರೂ. ಪ್ಲಾನ್‌ ದಿನಕ್ಕೆ 3GB ಡೇಟಾ ಪ್ರಯೋಜನ ನೀಡಲಿದೆ. ಇದು 28 ದಿನಗಳ ಮಾನ್ಯತೆಯನ್ನು ನೀಡಲಿದೆ.

ವೋಡಾಫೋನ್‌ ಐಡಿಯಾ
ವೋಡಾಫೋನ್‌ ಐಡಿಯಾ ಟೆಲಿಕಾಂ ಬೇಸ್‌ ಪ್ಲಾನ್‌ 219ರೂ.ಗಳಿಂದ ಪ್ರಾರಂಭವಾಗಲಿದೆ. ಈ ಪ್ಲಾನ್‌ 24 ದಿನಗಳ ಮಾನ್ಯತೆ ಹೊಂದಿದ್ದು, ದಿನಕ್ಕೆ 1GB ಡೇಟಾ ಮತ್ತು ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ನೊಂದಿಗೆ ಬರುತ್ತದೆ. ಇದಲ್ಲದೆ 249ರೂ.ಬೆಲೆಯಲ್ಲಿ ದೈನಂದಿನ 1.5GB ಡೇಟಾ ಪ್ರಯೋಜನ ಮತ್ತು ಅನಿಮಿತ ಕರೆ ಪ್ರಯೋಜನ ನೀಡಲಿದ್ದು, ಇದು 28 ದಿನಗಳ ಮಾನ್ಯತೆ ಹೊಂದಿದೆ. ಇನ್ನು ನಿಮಗೆ ದೈನಂದಿನ 3GB ಡೇಟಾವನ್ನು 28 ದಿನಗಳ ಮಾನ್ಯತೆಯಲ್ಲಿ ಪಡೆಯಬೇಕಾದರೆ ನಿಮಗೆ 501ರೂ ಬೆಲೆಯ ಪ್ಲಾನ್‌ ಕೂಡ ಲಭ್ಯವಿದೆ.

56 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್‌ಗಳು

56 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್‌ಗಳು

ಏರ್‌ಟೆಲ್‌ ಟೆಲಿಕಾಂ 558ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡುವ ಪ್ಲಾನ್‌ಗಳಲ್ಲಿ ಒದಾಗಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಜಿಯೋ ಟೆಲಿಕಾಂ
ಜಿಯೋ ಟೆಲಿಕಾಂ 399ರೂ. ಪ್ಲಾನ್‌ 56 ದಿನಗಳ ಮಾನ್ಯತೆ ನೀಡಲಿದೆ. ಈ ಪ್ಲಾನ್‌ ದಿನಕ್ಕೆ 1.5GB ಡೇಟಾವನ್ನು ನೀಡಲಿದೆ. ಇನ್ನು 666ರೂ. ಪ್ಲಾನ್‌ ದಿನಕ್ಕೆ 2GB ಡೇಟಾವನ್ನು ನೀಡಲಿದೆ.

ವೋಡಾಫೋನ್‌ ಐಡಿಯಾ ಟೆಲಿಕಾಂ
ಇದಲ್ಲದೆ ವೋಡಾಫೋನ್‌ ಐಡಿಯಾ ಟೆಲಿಕಾಂ ಕೂಡ 56 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ 399ರೂ.ಬೆಲೆಯ ಪ್ಲಾನ್‌ ದಿನಕ್ಕೆ 1.5GB ಡೇಟಾ ನೀಡಲಿದೆ. ಇನ್ನು 449ರೂ.ಪ್ಲಾನ್‌ ದಿನಕ್ಕೆ 4GBಡೇಟಾ ಪ್ರಯೋಜನ ನೀಡಲಿದೆ. ಜೊತೆಗೆ 701ರೂ.ಪ್ಲಾನ್‌ ದಿನಕ್ಕೆ 3GB ಡೇಟಾವನ್ನು ನೀಡಲಿದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್‌ನ ಒಂದು ವರ್ಷದ ಚಂದಾದಾರಿಕೆ ಮತ್ತು 32GB ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

84 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳು

84 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳು

ಏರ್‌ಟೆಲ್‌ ಸಂಸ್ಥೆಯ 698ರೂ ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ಹಾಗೂ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ಏರ್‌ಟೆಲ್‌ 379ರೂ. ಪ್ಲ್ಯಾನ್‌ ಕೂಡ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಇದು ಸಹ ಡೇಟಾ ಮತ್ತು ಕರೆ ಪ್ರಯೋಜನಗಳನ್ನು ಪಡೆದಿದೆ. ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 6GB ಡೇಟಾ ಸೌಲಭ್ಯವನ್ನು ಒಳದಗಿಸಲಿದ್ದು, ಇದರೊಂದಿಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಪಡೆದಿದೆ. ಜೊತೆಗೆ ಈ ಪ್ಲ್ಯಾನ್‌ Wynk ಮ್ಯೂಸಿಕ್, ಏರ್‌ಟೆಲ್‌ ಎಕ್ಸ್‌ಟ್ರಿಮ್ ಪ್ರೀಮಿಯಮ್, ಪ್ರತಿದಿನ 100ಎಸ್‌ಎಮ್ಎಸ್‌ ಪ್ರಯೋಜನ ಪಡೆದಿದೆ.

ಜಿಯೋ ಟೆಲಿಕಾಂ
ಜಿಯೋ ಟೆಲಿಕಾಂ 555 ರೂ ಬೆಲೆಯ ಪ್ಲಾನ್‌ 84 ದಿನಗಳ ಮಾನ್ಯತೆ ಪಡೆದಿದೆ. ಇದು ದೈನಂದಿನ 1.5GB ಡೇಟಾವನ್ನು ನೀಡಲಿದೆ. ಇನ್ನು ದೈನಂದಿನ 2GB ಡೇಟಾವನ್ನು ನೀಡುವ ಪ್ಲಾನ್‌ ಕೂಡ ಹೊಂದಿದ್ದು, ಇದು 888ರೂ.ಬೆಲೆ ಹೊಂದಿದೆ.

ವೋಡಾಫೋನ್‌ ಐಡಿಯಾ
ವೋಡಾಫೋನ್‌ ಐಡಿಯಾ ಟೆಲಿಕಾಂ ಪ್ರತಿದಿನ 1.5GB ಡೇಟಾವನ್ನು 599ರೂ.ಬೆಲೆಯ ಪ್ಲಾನ್‌ನಲ್ಲಿ ನೀಡಲಿದೆ. ಹಾಗೆಯೇ 3GB ಡೇಟಾವನ್ನು 901ರೂ. ಪ್ಲಾನ್‌ನಲ್ಲಿ ನೀಡಲಿದೆ. ಜೊತೆಗೆ ದೈನಂದಿನ 4GB ಡೇಟಾವನ್ನು 699ರೂ ಬೆಲೆಯಲ್ಲಿ ಪಡೆಯಬಹುದಾಗಿದೆ.

Most Read Articles
Best Mobiles in India

English summary
Airtel, Jio and Vodafone Idea: Here's the popular plans after Airtel’s price hike.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X