ಜಿಯೋ ಡಿಟಿಹೆಚ್‌ಗೆ ಸೆಡ್ಡು..ಒಂದು ವರ್ಷದ ಏರ್‌ಟೆಲ್ ಆಂಡ್ರಾಯ್ಡ್ ಡಿಟಿಹೆಚ್ ಸೇವೆ ಶಾಕಿಂಗ್ ಬೆಲೆಗೆ!!

Written By:

ಜಿಯೋ ಡಿಟಿಹೆಚ್‌ಗೆ ಸೆಡ್ಡುಹೊಡೆಯಲು ಏರ್‌ಟೆಲ್ ಕೂಡ ಅಂಡ್ರಾಯ್ಡ್ ಆಧಾರಿತ ಸೆಟ್‌ಟಾಪ್‌ ಬಾಕ್ಸ್‌ ಬಿಡುಗಡೆ ಮಾಡಿದೆ. ಈಗಾಗಲೇ ಟ್ರೆಂಡ್ ಸೃಷ್ಟಿಸಿರುವ ಜಿಯೋ ಡಿಟಿಹೆಚ್ ಕೂಡ ಆಂಡ್ರಾಯ್ಡ್ ಮೂಲಕವೇ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗಿದ್ದು, ಇದು ಏರ್‌ಟೆಲ್ ಮತ್ತು ಜಿಯೋವಿನ ಹೊಸ ಫೈಟ್ ಆಗಿರಲಿದೆ.!!

ಸಾಮಾನ್ಯ ಟಿವಿಗಳಿಗಿಂತ ಏರ್‌ಟೆಲ್‌ ಇಂಟರ್‌ನೆಟ್‌ ಟಿವಿಗೆ ನೂತನ ಆಂಡ್ರಾಯ್ಡ್ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿದರೆ ತಡೆರಹಿತವಾಗಿ ಈ ಎರಡೂ ಸೌಲಭ್ಯ ಪಡೆಯಬಹುದು. ಆದರೂ ಏರ್‌ಟೆಲ್ ಆಂಡ್ರಾಯ್ಡ್ ಮೂಲಕ ಅತ್ಯುತ್ತಮ ಸೇವೆ ನೀಡಲಿದೆ ಎಂದು ಏರ್‌ಟೆಲ್‌ ಡಿಟಿಎಚ್ ಸಿಇಒ ಮತ್ತು ನಿರ್ದೇಶಕ ಸುನಿಲ್‌ ತಲ್ದಾರ್ ಹೇಳಿದ್ದಾರೆ.!!

ಹಾಗಾದರೆ, ಏರ್‌ಟೆಲ್ ಹೊರತರುತ್ತಿರುವ ಆಂಡ್ರಾಯ್ಡ್ ಟಿವಿಯ ಫೀಚರ್ಸ್ ಏನು? ಜಿಯೋ ಡಿಟಿಹೆಚ್‌ಗೆ ಸೆಡ್ಡುಹೊಡೆಯಲು ಏರ್‌ಟೆಲ್ ಹೂಡಿರುವ ತಂತ್ರವೇನು? ಏರ್‌ಟೆಲ್ ಡಿಟಿಹೆಚ್ ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನ ಅಂಡ್ರಾಯ್ಡ್ ಡಿಟಿಎಚ್!!

ಏರ್‌ಟೆಲ್‌ನ ಅಂಡ್ರಾಯ್ಡ್ ಡಿಟಿಎಚ್!!

ಪ್ರಸ್ತುತ ಏರ್‌ಟೆಲ್ ಡಿಟಿಹೆಚ್ ಲಭ್ಯವಿದ್ದರೂ, ಟಿವಿಯಲ್ಲಿ ವಿವಿಧ ಚಾನೆಲ್‌ ಜತೆ ಇಂಟರ್‌ನೆಟ್‌ ಸಂಪರ್ಕ ನೀಡುವ ಅಂಡ್ರಾಯ್ಡ್ ಡಿಟಿಎಚ್ ಅನ್ನು ಏರ್ಟೆಲ್ ಬಿಡುಗಡೆ ಮಾಡಿದೆ.!! ಇದು ಜಿಯೋವಿನ ಡಿಟಿಹೆಚ್‌ಗೆ ಪೈಪೋಟಿ ನೀಡುವ ಸಲುವಾಗಿ ಎನ್ನಲಾಗಿದೆ.!!

ಅಮೆಜಾನ್‌ನಲ್ಲಿ ಮಾರಾಟ!!

ಅಮೆಜಾನ್‌ನಲ್ಲಿ ಮಾರಾಟ!!

ಏರ್‌ಟೆಲ್ ಆಂಡ್ರಾಯ್ಡ್ ಡಿಟಿಹೆಚ್ ಸೌಲಭ್ಯ ಆರಂಭದಲ್ಲಿ ದೇಶದ 20 ಪ್ರಮುಖ ನಗರಗಳಲ್ಲಿ ಮಾತ್ರ ದೊರೆಯಲಿದೆ. ಇನ್ನು ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಲ್ಲಿ ಗ್ರಾಹಕರು ಈ ಉತ್ಪನ್ನ ಖರೀದಿಸಬಹುದು.

ಜಿಯೋ ಡಿಟಿಹೆಚ್‌ಗೆ ಫೈಟ್ ಹೇಗೆ?

ಜಿಯೋ ಡಿಟಿಹೆಚ್‌ಗೆ ಫೈಟ್ ಹೇಗೆ?

ಈಗ ಜಿಯೋ ಬಿಡುಗಡೆ ಮಾಡುತ್ತಿರುವ ಡಿಟಿಹೆಚ್‌ ಸೇವೆಯೂ ಸಹ ಸಂಪೂರ್ಣ ಆಂಡ್ರಾಯ್ಡ್ ಸೇವೆಯಾಗಿದ್ದು, ಜಿಯೋ ಡಿಟಿಹೆಚ್ ಸಂಪೂರ್ಣ ಡೇಟಾ ಮೂಲಕವೇ ಕಾಯ್ನಿರ್ವಹಿಸುತ್ತದೆ ಎನ್ನಲಾಗಿದೆ. ಹಾಗಾಗಿ, ಜಿಯೋವಿಗಿಂತ ಮೊದಲೇ ಏರ್‌ಟೆಲ್ ಆಂಡ್ರಾಯ್ಡ್ ಡಿಟಿಹೆಚ್ ಬಿಡುಗಡೆ ಮಾಡುತ್ತಿದೆ.!!

ಏರ್‌ಟೆಲ್‌ ಡಿಟಿಹೆಚ್ ಬೆಲೆ ಎಷ್ಟು?

ಏರ್‌ಟೆಲ್‌ ಡಿಟಿಹೆಚ್ ಬೆಲೆ ಎಷ್ಟು?

500 ಡಿಟಿಎಚ್‌ ಚಾನೆಲ್‌ ಮತ್ತು ಒಂದು ವರ್ಷದ ಸದಸ್ಯತ್ವ ಶುಲ್ಕ ಸಮೇತ ಏರ್‌ಟೆಲ್‌ ಡಿಟಿಹೆಚ್ ಲಭ್ಯವಿದ್ದು ಬೆಲೆ ₹7,999 ರೂಪಾಯಿ ಹಾಗಿದೆ. ಹಾಗಾಗಿ, ಒಂದು ವರ್ಷದ ಪೂರ್ತಿ ಸೇವೆಗೆ ಒಮ್ಮೆಲೇ ₹7,999 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕಾಗುತ್ತದೆ.!! ಇನ್ನು ಹಳೆಯ ಗ್ರಾಹಕರು ಒಂದು ತಿಂಗಳ ಸದಸ್ಯತ್ವ ಶುಲ್ಕ ಸೇರಿದಂತೆ ₹3,999 ರೂಪಾಯಿಗಳಿಗೆ ಈ ಸೆಟ್‌ಟಾಪ್‌ ಖರೀದಿಸಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Airtel Digital TV has now launched the coveted android TV-based hybrid STB (Set-Top Box) in India. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot