ಜಿಯೋಗೆ ಶಾಕ್!..ಇತಿಹಾಸದಲ್ಲೇ ಮೊದಲ ವಿಶೇಷ ಆಫರ್ ನೀಡಿದ ಏರ್‌ಟೆಲ್!!

|

ಜಿಯೋವನ್ನು ಮಣಿಸಲು ಹರಸಾಹಸಪಡುತ್ತಿರುವ ಭಾರತಿ ಏರ್‌ಟೆಲ್ ಕಂಪೆನಿ ಬಿಗ್ ಪ್ಲ್ಯಾನ್ ಒಂದನ್ನು ಮಾಡಿಕೊಂಡು ಜಿಯೋಗೆ ಶಾಕ್ ನೀಡಿದೆ. ಏರ್‌ಟೆಲ್ ತನ್ನ ಜನಪ್ರಿಯ ರೀಚಾರ್ಜ್ ಪ್ಲ್ಯಾನ್ ಆಗಿರುವ 249 ರೂಪಾಯಿಗಳ ರೀಚಾರ್ಜ್ ಮಾಡಿಸಿದವರಿಗೆ 4 ಲಕ್ಷ ರೂ. ಮೌಲ್ಯದ ಜೀವ ವಿಮೆ ಸೌಲಭ್ಯವನ್ನು ನೀಡಿದೆ. ಖಾಸಾಗಿ ವಿಮಾ ಸಂಸ್ಥೆ ಎಚ್‌ಡಿಎಫ್‌ಸಿ ಲೈಫ್ ಇನ್ಷೂರೆನ್ಸ್ ಸಹಭಾಗಿತ್ವದಲ್ಲಿ ಏರ್‌ಟೆಲ್ ಇತಿಹಾಸದಲ್ಲೇ ಇಂತಹದೊಂದು ವಿಶೇಷ ಆಫರ್ ಅನ್ನು ಪ್ರಕಟಿಸಿದೆ.

ಹೌದು, ಭಾರತೀಯ ಟೆಲಿಕಾಂ ವಲಯದಲ್ಲಿ ಸದ್ಯ ಪೈಪೋಟಿ ಜೋರಾಗಿದ್ದು, ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೆಣಗಾಡುತ್ತಿವೆ. ಅವುಗಳಲ್ಲಿ ಏರ್‌ಟೆಲ್‌ ಮತ್ತೆ ನಂಬರ್‌ ಒನ್‌ ಸ್ಥಾನ ಪಡೆಯಲು ಭಾರಿ ಕಸರತ್ತು ನಡೆಸುತ್ತಿದ್ದು, ಇದೀಗ 4 ಲಕ್ಷ ರೂ. ಮೌಲ್ಯದ ಜೀವ ವಿಮೆ ಸೌಲಭ್ಯವನ್ನು ಉಚಿತವಾಗಿ ನೀಡಿದೆ. ಈ ಜೀವ ವಿಮೆ ಸೌಲಭ್ಯವು ಏರ್‌ಟೆಲ್‌ನ 249 ರೂಪಾಯಿಗಳ ರೀಚಾರ್ಜ್ ಇರುವವರೆಗೂ ಸಹ ಲಭ್ಯವಿರುತ್ತದೆ ಎಂದು ಏರ್‌ಟೆಲ್ ತಿಳಿಸಿದೆ.

ಜಿಯೋಗೆ ಶಾಕ್!..ಇತಿಹಾಸದಲ್ಲೇ ಮೊದಲ ವಿಶೇಷ ಆಫರ್ ನೀಡಿದ ಏರ್‌ಟೆಲ್!!

ಇದರ ಜೊತೆಗೆ ಏರ್‌ಟೆಲ್ ಕಂಪನಿಯು ಬಳಕೆದಾರಿಗೆ ಹೆಚ್ಚುವರಿ 400MB ಡೇಟಾವನ್ನು ಉಚಿತವಾಗಿ ನೀಡಲು ಯೋಜಿಸಿದ್ದು, ಈ ಪ್ರಯೋಜನವು ಏರ್‌ಟೆಲ್‌ನ 398ರೂ, 448ರೂ ಮತ್ತು 499ರೂ ರೀಚಾರ್ಜ್‌ ಪ್ಲ್ಯಾನ್‌ಗಳಲ್ಲಿ ದೊರೆಯಲಿದೆ. ಈ ರೀಚಾರ್ಜ್‌ ಪ್ಯಾಕ್‌ಗಳಲ್ಲಿ ಸದ್ಯ ಇರುವ ಡೇಟಾಗೆ ಇನ್ಮುಂದೆ 400ಎಂಬಿ ಡೇಟಾವು ಸೇರಿಕೊಳ್ಳಲಿದೆ. ಹಾಗಾದರೇ ಏರ್‌ಟೆಲ್‌ ಕಂಪನಿ ನೀಡಿರುವ ಹೆಚ್ಚು ಡೇಟಾದ ಮೂರು ರೀಚಾರ್ಜ್‌ ಪ್ಲ್ಯಾನ್‌ಗಳ ಕುರಿತು ಮುಂದೆ ಓದಿ ತಿಳಿಯಿರಿ.

249ರೂ ರೀಚಾರ್ಜ್‌

249ರೂ ರೀಚಾರ್ಜ್‌

249ರೂ ರೀಚಾರ್ಜ್‌ ಮೇಲೆ ಏರ್ಟೆಲ್ ದಿನಕ್ಕೆ 2 ಜಿಬಿ ಡೇಟಾವನ್ನು 28 ದಿನಗಳಿಗಳ ವ್ಯಾಲಿಡಿಟಿಯಲ್ಲಿ ನೀಡುತ್ತಿದೆ. ಒಟ್ಟು 56 ಜಿಬಿ ಡೇಟಾದ ಈ ಆಫರ್ 3 ಜಿ / 4 ಜಿ ಬಳಕೆದಾರರಿಗೂ ಸಹ ಲಭ್ಯವಿದೆ. ಇದರ ಜೊತೆಗೆ ಇದೀಗ 4 ಲಕ್ಷ ರೂ. ಮೌಲ್ಯದ ಜೀವ ವಿಮೆ ಸೌಲಭ್ಯವನ್ನು ಉಚಿತವಾಗಿ ಲಭ್ಯವಿದೆ. ರೀಚಾರ್ಜ್ ಇರುವವರೆಗೂ ಜೀವ ವಿಮೆ ಸೌಲಭ್ಯವು ಮುಂದುವರೆಯುತ್ತದೆ.

398ರೂ  ರೀಚಾರ್ಜ್‌

398ರೂ ರೀಚಾರ್ಜ್‌

ಪ್ರಸ್ತುತ ಏರ್‌ಟೆಲ್‌ನ 398ರೂ ರೀಚಾರ್ಜ್‌ ಪ್ಯಾಕ್‌ ಉಚಿತ ಕರೆಗಳು, ಎಸ್‌ಎಮ್‌ಎಸ್‌, ಸೇರಿದಂತೆ ಪ್ರತಿದಿನ 1GB ಉಚಿತ ಡೇಟಾ ಆಯ್ಕೆಗಳನ್ನು ಒಳಗೊಂಡಿವೆ. ಆದರೆ ಬಳಕೆದಾರರಿಗೆ ಇನ್ಮುಂದೆ 400MB ಡೇಟಾ ಹೆಚ್ಚುವರಿಯಾಗಿ ದೊರೆಯಲಿದ್ದು, ಹೀಗಾಗಿ ಪ್ರತಿದಿನ 1.4GB ಲಭ್ಯವಾಗಲಿದೆ. ಉಳಿದಂತೆ ಇತರೆ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

448ರೂ ರೀಚಾರ್ಜ್‌

448ರೂ ರೀಚಾರ್ಜ್‌

ಏರ್‌ಟೆಲ್ 448ರೂ ರೀಚಾರ್ಜ್‌ ಪ್ಯಾಕ್‌ನಲ್ಲಿ ಸದ್ಯ ಬಳಕೆದಾರರು ಉಚಿತ ಕರೆ, ಎಸ್‌ಎಮ್‌ಎಸ್‌ ಮತ್ತು ಪ್ರತಿದಿನ 1.5GB ಡೇಟಾದ ಪ್ರಯೋಜನ ಪಡೆಯುತ್ತಿದ್ದು, ಇನ್ಮುಂದೆ ಈ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 400MB ಸೇರಿಕೊಳ್ಳಲಿದೆ. ಆನಂತರ ಪ್ರತಿದಿನ 1.9GB ಡೇಟಾದ ಪ್ರಯೋಜನವು ಬಳಕೆದಾರರಿಗೆ ದೊರೆಲಿದೆ ಎಂದು ಏರ್‌ಟೆಲ್ ಸ್ಪಷ್ಟಪಡಿಸಿದೆ.

499ರೂ ರೀಚಾರ್ಜ್‌

499ರೂ ರೀಚಾರ್ಜ್‌

ಏರ್‌ಟೆಲ್ 499ರೂ ರೀಚಾರ್ಜ್‌ ಯೋಜನೆಯಲ್ಲಿ ಪ್ರಸ್ತುತ ಉಚಿತ ಕರೆಗಳು, ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 2GB ಉಚಿತ ಡೇಟಾ ಬಳಕೆದಾರರಿಗೆ ದೊರೆಯುತ್ತಿದ್ದು, ಇನ್ನು ಹೊಸದಾಗಿ 400MB ಡೇಟಾವು ದೊರೆಯಲಿದೆ. ಹೀಗಾಗಿ ಬಳಕೆದಾರರಿಗೆ ಪ್ರತಿದಿನ 2.4GB ಡೇಟಾದ ಪ್ರಯೋಜನವು ಸೀಗಲಿದ್ದು, ವ್ಯಾಲಿಡಿಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಏರ್‌ಟೆಲ್‌ ಟಿವಿ ಚಂದಾದಾರತ್ವ

ಏರ್‌ಟೆಲ್‌ ಟಿವಿ ಚಂದಾದಾರತ್ವ

ಏರ್‌ಟೆಲ್‌ನ ಈ ಮೂರು ರೀಚಾರ್ಜ್‌ ಪ್ಲ್ಯಾನ್‌ಗಳ ಡೇಟಾದಲ್ಲಿ ಹೆಚ್ಚಳ ಮಾಡಿರುವುದರೊಂದಿಗೆ ಕಂಪನಿಯು ಏರ್‌ಟೆಲ್‌ ಟಿವಿ ಚಂದಾದಾರತ್ವದ ಪ್ರಯೋಜನವನ್ನು ಸಹ ಒದಗಿಸುತ್ತಿದೆ. Zee5, HOOQ, ಸೇರಿದಂತೆ 350ಕ್ಕೂ ಅಧಿಕ ಲೈವ್‌ ಚಾನಲ್‌ಗಳನ್ನು ವೀಕ್ಷಿಸಬಹುದಾಗಿದೆ. ಹಾಗೂ 10,000ಕಿಂತಲೂ ಹೆಚ್ಚಿನ ಸಿನಿಮಾಗಳನ್ನು ವೀಕ್ಷಿಸುವ ಆಯ್ಕೆಗಳು ಇರಲಿವೆ ಎನ್ನಲಾಗಿದೆ.

'ಜಿಯೋ' ರಾಕ್!..ಕೇಬಲ್ ಬಿಲ್ ಹೆಚ್ಚಳಕ್ಕೆ ಬೇಸತ್ತಿದ್ದ ಜನರಿಗೆ ಗುಡ್‌ನ್ಯೂಸ್!

'ಜಿಯೋ' ರಾಕ್!..ಕೇಬಲ್ ಬಿಲ್ ಹೆಚ್ಚಳಕ್ಕೆ ಬೇಸತ್ತಿದ್ದ ಜನರಿಗೆ ಗುಡ್‌ನ್ಯೂಸ್!

ಟ್ರಾಯ್ ನಿಯಮದಿಂದಾಗಿ ಕೇಬಲ್ ಬಿಲ್ ಹೆಚ್ಚಳಗೊಂಡು ಬೇಸತ್ತಿದ್ದ ಜನರಿಗೆ ಜಿಯೋವಿನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಹಲವು ತಿಂಗಳುಗಳಿಂದಲೂ ದೇಶದ ಮಾರುಕಟ್ಟೆಯಲ್ಲಿ ಭಾರೀ ಕುತೋಹಲ ಮೂಡಿಸಿರುವ ಜಿಯೋ 'ಗೀಗಾ ಫೈಬರ್' ಶೀಘ್ರವೇ ಬಿಡುಗಡೆಯಾಗಲಿದ್ದು, ಕೇವಲ 600 ರೂ.ಗಳಿಂದ ಪ್ರತಿ ತಿಂಗಳ ಸೇವೆ ದೊರೆಯಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ರಿಲಯನ್ಸ್ ಜಿಯೋ ಗೀಗಾಫೈಬರ್ ಬ್ರಾಡ್ಬ್ಯಾಂಡ್-ಲ್ಯಾಂಡ್ಲೈನ್-ಟಿವಿ ಕಾಂಬೊ ಸೇವೆಗೆ ತಿಂಗಳಿಗೆ ₹ 600 ಮತ್ತು ಹೆಚ್ಚುವರಿ ಸೌಲಭ್ಯಗಳು ಮತ್ತು ಅದರ ಸ್ಮಾರ್ಟ್ ಹೋಮ್ ನೆಟ್ವರ್ಕ್ಗೆ ಕನಿಷ್ಠ ₹ 1,000 ವರೆಗೆ ಸಂಪರ್ಕ ಕಲ್ಪಿಸುವ ಆಯ್ಕೆಯನ್ನು ನೀಡಲಿದೆ. ದೇಶದ ಒಟ್ಟು 1600 ನಗರಗಳಲ್ಲಿ 'ಗೀಗಾ ಫೈಬರ್' ಒಂದೇ ಬಾರಿಗೆ ಲಾಂಚ್ ಆಗಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಮೊಬೈಲ್, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ಗಳು ಸೇರಿದಂತೆ 40-45 ಸ್ಮಾರ್ಟ್ ಸಾಧನಗಳನ್ನು ಸಂಪರ್ಕಿಸುವ ಓಂಟ್ (ಆಪ್ಟಿಕಲ್ ನೆಟ್ವರ್ಕ್ ಟರ್ಮಿನಲ್) ಬಾಕ್ಸ್ ರೂಟರ್ ಮೂಲಕ ಚಾಲಿತ ಜಿಯೋ ಗೀಗಾಫೈಬರ್ ಬೆಲೆ ಕೂಡ ಎಷ್ಟಿರಬಹುದು ಎಂದು ಲೀಕ್ ಆಗಿದೆ. ಹಾಗಾದರೆ, ದೇಶದ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಜಿಯೋ 'ಗಿಗಾ ಫೈಬರ್' ಬಗ್ಗೆ ಮುಂದೆ ಓದಿ ತಿಳಿಯಿರಿ.

ಗೀಗಾ ಫೈಬರ್ ನೋಂದಣಿ ಆರಂಭ!

ಗೀಗಾ ಫೈಬರ್ ನೋಂದಣಿ ಆರಂಭ!

ನೀವು ಈಗಾಗಲೇ ಜಿಯೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜಿಯೋ ಗೀಗಾ ಫೈಬರ್ಗೆ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ವೆಬ್‌ಸೈಟ್‌ನಲ್ಲಿ ನೀಡಲಾಗಿರುವ 'ಇನ್‌ವೈಟ್ ಜಿಯೋಗೀಗಾಫೈಬರ್' ಆಯ್ಕೆಯಲ್ಲಿ ಜಿಯೋಗೀಗಾಫೈಬರ್ ಅನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಜಿಯೋ ಗೀಗಾ ಫೈಬರ್ ಖರೀದಿಸುವವರು ತಮ್ಮ ವಿಳಾಸ, ಮೊಬೈಲ್ ನಂಬರ್ ಮತ್ತು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಜಿಯೋ ಗೀಗಾ ಫೈಬರ್ ಅನ್ನು ಮೊದಲು ಖರೀದಿಸಬಹುದಾದ ಆಯ್ಕೆ ನೀಡಲಾಗಿದೆ.

ಮೊದಲ ಹಂತದಲ್ಲಿ ಈ 29 ನಗರಗಳಲ್ಲಿ ಲಭ್ಯ

ಮೊದಲ ಹಂತದಲ್ಲಿ ಈ 29 ನಗರಗಳಲ್ಲಿ ಲಭ್ಯ

ಆನ್ಲೈನ್ ವರದಿಗಳ ಪ್ರಕಾರ ಭಾರತದ ಈ ಕೆಳಗಿನ 29 ಸಿಟಿಗಳಲ್ಲಿ ಪ್ರಾರಂಭಿಕವಾಗಿ ಗಿಗಾಫೈಬರ್ ಸೇವೆಯು ಲಭ್ಯವಿರುತ್ತದೆ. ಬೆಂಗಳೂರು, ಚೆನೈ,ಪುಣೆ, ಲಕ್ನೋ, ಕಾನ್ಪುರ, ರಾಯ್ ಪುರ, ನಾಗಪುರ, ಇಂಡೋರ್, ಥಾಣೆ, ಭೋಪಾಲ್, ಗಾಝಿಯಾಬಾದ್, ಲುದಿಯಾನ, ಕೊಯಂಬತ್ತೂರು, ಆಗ್ರಾ,ಮಧುರೈ, ನಾಸಿಕ್, ಫರಿದಾಬಾದ್, ಮೀರತ್, ರಾಜ್ಕೋಟ್, ಶ್ರೀನಗರ, ಅಮೃತಸರ, ಪಾಟ್ನಾ, ಅಲಹಾಬಾದ್, ರಾಂಚಿ, ಜೋಧಪುರ, ಕೋಟಾ, ಗೌಹಾಟಿ, ಚಂಡೀಘಡ ಮತ್ತು ಸೋಲಾಪುರಗಳಲ್ಲಿ ಸೇವೆ ಲಭ್ಯವಾಗಲಿದೆ

ಜಿಯೋಗಿಗಾಫೈಬರ್ ಪ್ರಿಪೇಯ್ಡ್ ಸೇವೆ!

ಜಿಯೋಗಿಗಾಫೈಬರ್ ಪ್ರಿಪೇಯ್ಡ್ ಸೇವೆ!

ಸದ್ಯಕ್ಕೆ ಜಿಯೋಗಿಗಾಫೈಬರ್ ಸೇವೆಯು ಪ್ರಿಪೇಯ್ಡ್ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಜಿಯೋಗಿಗಾಫೈಬರ್ ಪೋಸ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಜಿಯೋ ಮನಿ ಅಥವಾ ಪೇಟಿಎಂ ಮೂಲಕ ಹಣವನ್ನು ಪಾವತಿಸಬೇಕಾಗುತ್ತದೆಯೇ ಹೊರತು ಕ್ಯಾಷ್ ಪೇಮೆಂಟ್ ಗೆ ಅವಕಾಶವಿರುವುದಿಲ್ಲ. ಮತ್ತು ಪ್ರಿವ್ಯೂ ಆಫರ್ ನಲ್ಲಿರುವುದರಿಂದಾಗಿ ಸದ್ಯಕ್ಕೆ ಯಾವುದೇ ರೀತಿಯ ಇನ್ಸ್ಟಾಲೇಷನ್ ಚಾರ್ಜ್ ಜಿಯೋಗಿಗಾಫೈಬರ್ ಗೆ ಇರುವುದಿಲ್ಲ ಎಂದು ಹೇಳಲಾಗಿದೆ.

ಮತ್ತೆ ಮೂರು ತಿಂಗಳು ಉಚಿತ?

ಮತ್ತೆ ಮೂರು ತಿಂಗಳು ಉಚಿತ?

ಈ ವರೆಗೂ 4G ತಂತ್ರಜ್ಞಾನದ ಮೂಲಕ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ನಡುಗಿಸಿದ್ದ ಜಿಯೋ, ಈಗ ತನ್ನ 'ಗೀಗಾಫೈಬರ್' ಮೂಲಕ ಬದಲಾವಣೆಯ ಗಾಳಿ ಬೀಸಲು ತಯಾರಾಗಿದೆ. ಜಿಯೋ ಗೀಗಾ ಫೈಬರ್ ಹೊಂದಿರುವ ಬೆಲೆ ಮತ್ತು ರೀಚಾರ್ಜ್ ಪ್ಲಾನ್‌ಗಳು ಯಾವುವು ಎಂಬ ಮಾಹಿತಿಗಳು ಕೆಲ ಮೂಲಗಳಿಂದ ಲೀಕ್ ಆಗಿವೆ. ಈ ಸುದ್ದಿಯ ಜೊತೆಯಲ್ಲಿಯೇ ಮತ್ತೊಂದು ಗುಡ್‌ನ್ಯೂಸ್ ಅನ್ನು ಪ್ರಮುಖ ಮಾಧ್ಯಮಗಳು ಪ್ರಕಟಿಸಿದ್ದು, ಜಿಯೋ ಗೀಗಾಫೈಬರ್' ಕೂಡ ಮೂರು ತಿಂಗಳು ಉಚಿತ ಸೇವೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

4,500 ರೂ.ಸೆಕ್ಯುರಿಟಿ ಡೆಪಾಸಿಟ್

4,500 ರೂ.ಸೆಕ್ಯುರಿಟಿ ಡೆಪಾಸಿಟ್

4,500 ರೂಪಾಯಿ ಮರುಪಾವತಿ ಮಾಡಲಾಗುವ ಸೆಕ್ಯುರಿಟಿ ಡೆಪಾಸಿಟ್ ಅನ್ನು ಬಳಕೆದಾರರು ಪಾವತಿಸಬೇಕಾಗುತ್ತದೆ. ಜಿಯೋ ಸಂಸ್ಥೆಯಿಂದ ನೀಡಲಾಗುವ ಗಿಗಾಹಬ್ ಹೋಮ್ ಗೇಟ್ ವೇ (ಓಎನ್ ಟಿ ಡಿವೈಸ್) ಗಾಗಿ ಇದನ್ನು ತೆಗೆದುಕೊಳ್ಳಲಾಗುತ್ತದೆ. ಅತ್ಯಾಧುನಿಕ ಫೈಬರ್ ಆಧಾರಿತ ಜಿಯೋ ಗೀಗಾ ಫೈಬರ್ ಡಿವೈಸ್ ಬೆಲೆ 2 ಸಾವಿರ ರೂಪಾಯಿಗಳಾಗಿರಲಿದ್ದು, ಜಿಯೋ ಗೀಗಾ ಫೈಬರ್ ಡಿವೈಸ್ ಖರೀದಿಸಿದರೆ, ಜಿಯೋ ಉಚಿತವಾಗಿ ಮನೆಗೆ ಕನೆಕ್ಷನ್ ಅನ್ನು ನೀಡಲಿದೆ. ಉಳಿದ 2,500 ರೂ. ಮರುಪಾವತಿಯಾಗಲಿದೆ ಎನ್ನಲಾಗಿದೆ.

ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್

ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್

ಜಿಯೋ ತನ್ನ ಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ಆರಂಭಿಸುವ ಸಲುವಾಗಿ ಮೊದಲು ಪ್ರಿವ್ಯೂ ಆಫರ್ ಅನ್ನು ನೀಡಲಿದೆ ಎಂದು ತಿಳಿದುಬಂದಿದೆ. ಜಿಯೋಗಿಗಾಫೈಬರ್ ಪ್ರಿವ್ಯೂ ಆಫರ್ ನ ಅನ್ವಯ ಬಳಕೆದಾರರಿಗೆ ಅಲ್ಟ್ರಾ ಹೈ ಸ್ಪೀಡ್ ಇಂಟರ್ನೆಟ್ 100Mbps ವರೆಗೆ 90 ದಿನಗಳ ಅವಧಿಗೆ ಲಭ್ಯವಾಗಲಿದ್ದು ಇದರಲ್ಲಿ ಮಾಸಿಕ ಡಾಟಾ ಕೋಟ 100ಜಿಬಿ ಇರುತ್ತದೆ. ಇದು ಜಿಯೋ ಪ್ರೀಮಿಯಂ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಅನ್ನು ನೀಡುತ್ತದೆ. 100ಜಿಬಿ ಮಾಸಿಕ ಕೋಟಾದಲ್ಲಿ ಉಚಿತವಾಗಿ 40ಜಿಬಿ ಟಾಪ್-ಅಪ್ ಡಾಟಾ ಸಹ ಸಿಗಲಿದೆ.

599 ರೂ. ಜಿಯೋ ಗಿಗಾಫೈಬರ್ ಪ್ಲಾನ್!

599 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಜಿಯೋ ಗೀಗಾ ಫೈಬರ್ ಸೇವೆಯ ಆರಂಭಿಕ ರೀಚಾರ್ಜ್ ಬೆಲೆಗಳು 500 ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಕನಿಷ್ಟ ರೀಚಾರ್ಜ್ ಪ್ಲಾನ್‌ನಲ್ಲಿ 599 ರೂ.ಗಳಿಗೆ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 300GB ಡೇಟಾವನ್ನು ಸಿಗಲಿದೆ. ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

750 ರೂ. ಜಿಯೋ ಗಿಗಾಫೈಬರ್ ಪ್ಲಾನ್!

750 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಜಿಯೋ ಗೀಗಾ ಫೈಬರ್ ಸೇವೆಯ ಎರಡನೇ ರೀಚಾರ್ಜ್ ಪ್ಲಾನ್ 750 ರೂಪಾಯಿಗಳಾಗಿವೆ. 750 ರೂಪಾಯಿಗಳ ಈ ಜಿಯೋ ಗೀಗಾ ಫೈಬರ್ ರೀಚಾರ್ಜ್ ಪ್ಲಾನ್‌ನಲ್ಲಿ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 450GB ಡೇಟಾವನ್ನು ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

ಗಿಗಾಫೈಬರ್

ಗಿಗಾಫೈಬರ್

ಜಿಯೋ ಗೀಗಾ ಫೈಬರ್‌ನ ಮೊದಲ 100 ಎಂಬಿಪಿಎಸ್ ವೇಗದ ಡೇಟಾ ಪ್ಲಾನ್ ಇದಾಗಿದೆ. 999 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 600 ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

1,299 ರೂ. ಜಿಯೋ ಗಿಗಾಫೈಬರ್ ಪ್ಲಾನ್!

1,299 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಪ್ರತಿ ತಿಂಗಳು 900GB ಡೇಟಾವನ್ನು ಹೊಂದಿರುವ ಗೀಗಾ ಫೈಬರ್‌ನ ಬಿಗ್ ಡೇಟಾ ಪ್ಲಾನ್ ಇದಾಗಿದೆ. 1,299 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 900ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

Most Read Articles
Best Mobiles in India

English summary
The new plan will come with Rs 4 lakh life cover from HDFC Life, Airtel said in ... Tags: Telecom operator Airtel | Airtel signs deal with HDFC Life. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more