Just In
Don't Miss
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- News
'ಹಿಜಾಬ್' ಕುರಿತು ಟ್ವೀಟ್: ಪಾಕ್ನಲ್ಲಿ ಚೀನಾ ಅಧಿಕಾರಿ ವಿರುದ್ಧ ಕಿಡಿ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏರ್ಟೆಲ್ನಿಂದ ಎರಡು ಹೊಸ ರೀಚಾರ್ಜ್ ಪ್ಯಾಕ್ ಲಾಂಚ್!..ಪ್ರಯೋಜನಗಳೆನು?
ಸದ್ಯ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿದ್ದು, ಪ್ರಮುಖ ಟೆಲಿಕಾಂ ಸಂಸ್ಥೆಗಳ ನಡುವೆ ಪೈಪೋಟಿ ಮಾತ್ರ ನಡೆಯುತ್ತಲೆ ಸಾಗಿದೆ. ಅವುಗಳಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯು ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಟೆಲಿಕಾಂನೊಂದಿಗೆ ಸ್ಪರ್ಧಾತ್ಮಕ ಹೆಜ್ಜೆಗಳನ್ನು ಹಾಕುತ್ತಿದೆ. ಇದೀಗ ಏರ್ಟೆಲ್ ಟೆಲಿಕಾಂ ಎರಡು ಹೊಸ ರೀಚಾರ್ಜ್ ಪ್ಯಾಕ್ಗಳನ್ನು ಅನಾವರಣ ಮಾಡಿದೆ.

ಹೌದು, ಏರ್ಟೆಲ್ ತನ್ನ ಗ್ರಾಹಕರಿಗೆ ಈಗಾಗಲೇ ಹಲವು ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್ಗಳನ್ನು ಪರಿಚಯಿಸಿದ್ದು, ಈಗ ಹೊಸದಾಗಿ 78ರೂ ಮತ್ತು 248ರೂ.ಗಳ ಎರಡು ಆಡ್ ಆನ್ ಪ್ಯಾಕ್ಗಳನ್ನು ಪರಿಚಯಿಸಿದೆ. ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗೆ ಏರ್ಟೆಲ್ನ ಈ ಪ್ಯಾಕ್ಗಳು ಹೆಚ್ಚು ಉಪಯುಕ್ತವಾಗಿವೆ. ಡೇಟಾ ಜೊತೆಗೆ ವಿಂಕ್-Wynk ಮ್ಯೂಸಿಕ್ ಸೇವೆಯನ್ನು ಪಡೆದಿವೆ. ಹಾಗಾದರೇ ಏರ್ಟೆಲ್ನ ಈ ಎರಡು ಆಡ್ ಆನ್ ಪ್ಯಾಕ್ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್ಟೆಲ್ 78ರೂ. ಆಡ್-ಆನ್ ಪ್ಯಾಕ್
ಏರ್ಟೆಲ್ನ ಈ ಪ್ಯಾಕ್ನಲ್ಲಿ ಬಳಕೆದಾರರಿಗೆ 5GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಏರ್ಟೆಲ್ ಪ್ರೀಪೇಯ್ಡ್ ಯೋಜನೆ ವ್ಯಾಲಿಡಿಟಿಯೇ ಹೊಂದಿದೆ. ನಿಗದಿತ 5GB ಡೇಟಾ ಮುಗಿದ ನಂತರ, ಬಳಕೆದಾರರು ಪ್ರತಿ MBಗೆ 50 ಪೈಸೆ ದರದಲ್ಲಿ ಡೇಟಾವನ್ನು ಬಳಸಬಹುದು. ಹಾಗೆಯೇ ಇದು ಒಂದು ತಿಂಗಳ ವಿಂಕ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯ.

ಏರ್ಟೆಲ್ 248ರೂ. ಆಡ್-ಆನ್ ಪ್ಯಾಕ್
ಏರ್ಟೆಲ್ನ ಈ ಪ್ಯಾಕ್ನಲ್ಲಿ ಬಳಕೆದಾರರಿಗೆ 25GB ಡೇಟಾ ಲಭ್ಯವಾಗಲಿದ್ದು, ಇದರೊಂದಿಗೆ ಅಸ್ತಿತ್ವದಲ್ಲಿರುವ ಯಾವುದೇ ಏರ್ಟೆಲ್ ಪ್ರೀಪೇಯ್ಡ್ ಯೋಜನೆ ವ್ಯಾಲಿಡಿಟಿಯೇ ಹೊಂದಿದೆ. ನಿಗದಿತ 25GB ಡೇಟಾ ಮುಗಿದ ನಂತರ, ಬಳಕೆದಾರರು ಪ್ರತಿ MBಗೆ 50 ಪೈಸೆ ದರದಲ್ಲಿ ಡೇಟಾವನ್ನು ಬಳಸಬಹುದು. ಹಾಗೆಯೇ ವಾರ್ಷಿಕ ಅವಧಿಗೆ ವಿಂಕ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಲಭ್ಯ.

ಏರ್ಟೆಲ್ನ ಇತರೆ ಆಡ್-ಆನ್ ಡೇಟಾ ಪ್ಯಾಕ್ಗಳು
ಏರ್ಟೆಲ್ನಲ್ಲಿ ಆಕರ್ಷಕ ಡೇಟಾ ಆಡ್-ಆನ್ ಪ್ಯಾಕ್ಗಳು ಇವೆ. ಅವುಗಳಲ್ಲಿ ಹೆಚ್ಚು ಗಮನ ಸೆಳೆದ ಪ್ಯಾಕ್ಗಳಲ್ಲಿ 401ರೂ ಹಾಗೂ 48ರೂ. ಪ್ಯಾಕ್ ಸಹ ಸೇರಿವೆ . ಏರ್ಟೆಲ್ 48ರೂ. ಪ್ಯಾಕ್ 3GB FUP ಡೇಟಾ ಜೊತೆಗೆ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಏರ್ಟೆಲ್ 401ರೂ. ಪ್ಯಾಕ್ 30 ಜಿಬಿ ಡೇಟಾ ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190