ಇದೀಗ ಏರ್‌ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!

|

ರಿಲಯನ್ಸ್ ಜಿಯೋ ವಾಯಿಸ್ ಕರೆಗಳಿಗೆ ಹಣ ಪಾವತಿಸಬೇಕು ಎಂದು ಹೇಳಿದ ತಕ್ಷಣವೇ ಮತ್ತೊಂದು ಶಾಕಿಗ್ ಸುದ್ದಿ ಹೊರಬಿದ್ದಿದೆ. ಜಿಯೋ ವಾಯಿಸ್ ಕರೆಗಳಿಗೆ ಹಣ ಪಾವತಿಸಬೇಕು ಎಂದ ತಕ್ಷಣದಲ್ಲೇ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಕೂಡ ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ನಾವು ಈ ಬೆಳವಣಿಗೆಯನ್ನು ಭವಿಷ್ಯದಲ್ಲಿ ಸುಂಕವನ್ನು ಹೆಚ್ಚಿಸುವ ಮತ್ತೊಂದು ಅವಕಾಶವಾಗಿ ನೋಡುತ್ತಿದ್ದೇವೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ಇದೀಗ ಏರ್‌ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!

ಹೌದು, ರಿಲಯನ್ಸ್ ಜಿಯೋ ಈಗಾಗಲೇ ಹೊರಹೋಗುವ ಕರೆಗಳಿಗೆ ನಿಮಿಷಕ್ಕೆ 0.06 ಪೈಸೆ ವಿಧಿಸುವುದಾಗಿ ಘೋಷಿಸಿದೆ. ಇದರಿಂದ ಏರ್‌ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳು ಕೂಡ ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸುವ ಸಾಧ್ಯತೆಯಿದೆ. ಇತ್ತ ಜಿಯೋ ಕಂಪನಿಯು ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ)ಗಾಗಿ ಹೊಸ ಯೋಜನೆಗಳನ್ನು ಪ್ರಾರಂಭಿಸಿದರೆ, ಮತ್ತೊಂದೆಡೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡೂ ಷೇರುಗಳು ಬೆಳಿಗ್ಗೆ ವಹಿವಾಟಿನಲ್ಲಿ ಕ್ರಮವಾಗಿ 4 ಪ್ರತಿಶತ ಮತ್ತು 18 ಪ್ರತಿಶತದಷ್ಟು ಏರಿವೆ.

ಇದೀಗ ಏರ್‌ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!

ಈ ಅಂಶಗಳಿಂದ ನಾವು ಟೆಲಿಕಾಂನಲ್ಲಿ ಮತ್ತಷ್ಟು ಗುರುತರ ಬದಲಾವಣೆಗಳನ್ನು ಕಾಣಬಹುದು. ಹೊರಹೋಗುವ ಕರೆಗಳಿಗೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವ ಮೂಲಕ ಅಥವಾ ಪ್ಯಾಕ್ ಬೆಲೆಗಳನ್ನು ಹೆಚ್ಚಿಸುವ ಮೂಲಕ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇಲ್ಲವಾದರೇ ಸುಂಕವನ್ನು ಬದಲಾಗದೆ ಇರಿಸುವ ಮೂಲಕ ಜಿಯೋ ವಿರುದ್ಧದ ಸ್ಪರ್ಧಾತ್ಮಕ ತೀವ್ರತೆಯನ್ನು ಹೆಚ್ಚಿಸಲು ಅವರು (ಏರ್‌ಟೆಲ್ ಮತ್ತು ಐಡಿಯಾ ವೊಡಾಫೋನ್) ಪ್ರಯತ್ನಿಸಬಹುದು ಎಂದು ವದರಿಯಲ್ಲಿ ಹೇಳಿದೆ.

ಇದೀಗ ಏರ್‌ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!

ಇನ್ನು ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸಿದ ರಿಲಯನ್ಸ್ ಜಿಯೋ ಕ್ರಮವನ್ನು ತರಾತುರಿಯಲ್ಲಿ ಮಾಡಲಾಗಿದೆ ಎಂದು ವೊಡಾಫೋನ್ ತಿಳಿಸಿದೆ. ಈ ವಿಷಯವು ಟೆಲಿಕಾಂ ಆಪರೇಟರ್‌ಗಳ ನಡುವೆ ಇದೆ. ಇದು ಗ್ರಾಹಕರ ಬೆಲೆ ವಿಷಯಗಳಿಗೆ ಸಂಬಂಧಿಸಿಲ್ಲ. ಗ್ರಾಹಕರು ಆನ್-ನೆಟ್ ಮತ್ತು ಆಫ್-ನೆಟ್ ಕರೆಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಸ್ಥಿತಿಯಲ್ಲಿಲ್ಲ ಮತ್ತು ನಮ್ಮ ಚಂದಾದಾರರಿಗೆ ಹಾಗೆ ಮಾಡಲು ಪ್ರಯತ್ನಿಸುವ ಮೂಲಕ ಅನಾನುಕೂಲತೆ ಹೊರೆಯಾಗಲು ಅವರು ಬಯಸುವುದಿಲ್ಲ ಎಂದು ವೊಡಾಫೋನ್ ಹೇಳಿದೆ.

ಜಿಯೋ ಉಚಿತ ಕರೆಗೆ ಬ್ರೇಕ್!..ಅಂಬಾನಿಯ ಪ್ಲ್ಯಾನ್ ಕೇಳಿ ಮೂರ್ಛೆ ಹೋಗದಿರಿ!

ಜಿಯೋವಿನ ನೇರಾನೇರ ಎದುರಾಳಿ ಕಂಪೆನಿ ಏರ್‌ಟೆಲ್ ಕೂಡ ಜಿಯೋ ಮೇಲೆ ಸಿಟ್ಟಾದಂತಿದೆ. ರಿಲಯನ್ಸ್ ಜಿಯೋ ನಿಮಿಷಕ್ಕೆ 6 ಪೈಸೆ ವಿಧಿಸುವ ಈ ನಿರ್ಧಾರವು ಟ್ರಾಯ್‌ಗೆ ಐಯುಸಿ ದರಗಳನ್ನು ತಗ್ಗಿಸಲು ಒತ್ತಾಯಿಸುತ್ತಿದೆ ಎಂದು ಏರ್‌ಟೆಲ್ ಆರೋಪಿಸಿದೆ. ಒಟ್ಟಿನಲ್ಲಿ ಮೂರು ವರ್ಷಗಳಿಂದ ಕಡಿಮೆ ಬೆಲೆಯಲ್ಲಿ ಡೇಟಾ ಹಾಗೂ ಕರೆ ಸೇವೆಗಳನ್ನು ಪಡೆದುಕೊಂಡಿದ್ದ ಗ್ರಾಹಕರಿಗೆ ಇನ್ಮುಂದೆ ಕಹಿಸುದ್ದಿ ಸಿಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಂದು ವೇಳೆ ದರಸಮರದಲ್ಲಿ ಅವರು ರಾಜಿಯಾದರೆ ಗ್ರಾಹಕರಾದ ನಮಗೆ ಚಿಪ್ಪು ಗ್ಯಾರಂಟಿ.!

Best Mobiles in India

English summary
The ongoing fight between the telecom operators on IUC is going to escalate further, as Airtel and Vodafone Idea are likely to charge for outgoing calls. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X