Subscribe to Gizbot

ಏಲಿಯನ್‌ಗಳಿಂದ ಮೆಸೇಜ್‌: ವಿಜ್ಞಾನಿಗಳಿಗೆ ಅರ್ಥವಾಗುತ್ತಿಲ್ಲ ಏಕೆ?

Written By:

ಏಲಿಯನ್‌ಗಳ ಬಗ್ಗೆ ಮಾಹಿತಿಗಳನ್ನು ಮತ್ತು ಅವುಗಳ ಅಸ್ತಿತ್ವದ ಬಗ್ಗೆ ಮಾಹಿತಿಯನ್ನು ಸಾಮಾನ್ಯವಾಗಿ ದಶಕದಿಂದಲೂ ಕೇಳುತ್ತಲೇ ಇದ್ದೀರಿ. ಆದರೆ ವಾಸ್ತವವಾಗಿ ಇನ್ನು ಸಹ ಯಾರು ಏಲಿಯನ್‌ಗಳ ಅಸ್ತಿತ್ವದ ಬಗ್ಗೆ ನಿಖರ ಮಾಹಿತಿಯನ್ನು ನೀಡಲು ಆಗಿಲ್ಲ. ಆದರೆ ಒಂದು ಸತ್ಯಾಂಶ ಏನೆಂದರೆ ಇಂದಿಗೂ ಸಹ ವಿಜ್ಞಾನಿಗಳು ಏಲಿಯನ್‌ ಅಸ್ತಿತ್ವದ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಹಾಗೆಯೇ ಏಲಿಯನ್‌ಗಳು ಭೂಮಿಯ ಸಂಪರ್ಕಕ್ಕಾಗಿ ಮೆಸೇಜ್‌ಗಳನ್ನು ಕಳುಹಿಸಲು ಸಾಮರ್ಥ್ಯವನ್ನು ಹೊಂದಿವೆ. ಆದರೆ ನಮಗೆ ಆ ಮೆಸೇಜ್‌ಗಳನ್ನು ಡಿಕೋಡ್‌ ಮಾಡಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಖಗೋಳ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಏಲಿಯನ್‌ಗಳೂ ಮೆಸೇಜ್‌ ಕಳುಹಿಸಲು ಸಾಧ್ಯವಿದೆ. ಆದರೆ ಅವುಗಳನ್ನು ನಾವು ತಿಳಿಯಲು ಆಗುತ್ತಿಲ್ಲ. ಕಾರಣ ಮೆಸೇಜ್‌ಗಳನ್ನು ಡಿಕೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಮೇರಿಕ ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿಯ ವಿಸ್ಟಲ್‌ಬ್ಲೋವರ್‌ ಎಡ್ವರ್ಡ್‌ ಸ್ನೋಡೆನ್‌ ಇತ್ತೀಚೆಗೆ ಹೇಳಿದ್ದಾರೆ.
ಚಿತ್ರ ಕೃಪೆ: Getty Images

Neil deGrasse Tyson : ಖಗೋಳ ವಿಜ್ಞಾನಿ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿಯ ವಿಸ್ಟಲ್‌ಬ್ಲೋವರ್‌ 'ಎಡ್ವರ್ಡ್‌ ಸ್ನೋಡೆನ್ ' Neil deGrasse Tyson ರವರೊಂದಿಗೆ ಏಲಿಯನ್‌ಗಳು ಭೂಮಿಯನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಿವೆ ಆದರೆ ಅದನ್ನು ತಿಳಿಯಲು ಮತ್ತು ಡಿಕೋಡ್‌ ಮಾಡಲು ನಮಗೆ ಸಾಮರ್ಥ್ಯವಿಲ್ಲ ಎಂದು ಹೇಳಿದ್ದಾರೆ.
ಚಿತ್ರ ಕೃಪೆ: mike Agilio Corbis

StarTalk podcast

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಸ್ನೋಡೆನ್' ರವರು ಇತ್ತೀಚೆಗೆ ಖಗೋಳವಿಜ್ಞಾನಿಗಳ StarTalk podcast ನಲ್ಲಿ ಅತಿಥಿಯಾಗಿ ಮಾಸ್ಕೋದಿಂದ ವೀಡಿಯೋ ಲಿಂಕ್‌ ಮುಖಾಂತರ ಮಾತನಾಡಿದ್ದಾರೆ. ಏಲಿಯನ್‌ಗಳು ಸಂಪರ್ಕವನ್ನು ಎನ್‌ಕ್ರಿಪ್ಟ್‌ ಮಾಡಿರುವುದನ್ನು ನೋಡಿದರೆ ಅವುಗಳು ವಾಸ್ತವವಾಗಿ ಹೇಗೆ ಎನ್‌ಕ್ರಿಪ್ಟ್‌ ಮಾಡಿವೆ ಎಂದು ಹೇಳಲು ಆಗುವುದಿಲ್ಲ ಎನ್ನಲಾಗಿದೆ. ಅಲ್ಲದೆ ಏಲಿಯನ್‌ಗಳು ಅಸ್ತಿತ್ವದಲ್ಲಿದ್ದು, ಅವುಗಳ ಬುದ್ದಿವಂತಿಕೆಯ ಸಂವಹನದ ಮಾಹಿತಿಯನ್ನು ಪತ್ತೆಹಚ್ಚಲು ಆಗುತ್ತಿಲ್ಲ ಎಂಬುದಾಗಿ ಪ್ರಸ್ತಾಪಿಸಿದ್ದಾರೆ.

ಕಾಸ್ಮಿಕ್‌ ಮೈಕ್ರೋವೇವ್ ರೇಡಿಯೇಷನ್ ಮೂಲಕ ಸಂಪರ್ಕ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಏಲಿಯನ್‌ಗಳು ನಮ್ಮ ನಾಗರಿಕತೆಯ ಬಗ್ಗೆ ಪ್ರತಿಯೊಂದನ್ನು ತಿಳಿಯುತ್ತಿವೆ ಹಾಗೂ ನಮ್ಮ ಉಪಗ್ರಹದಿಂದ ನಾವು ತಿಳಿಯುತ್ತಿದ್ದೇವೆ ಎಂದು ತಿಳಿಯುತ್ತಿವೆ. ಆದರೆ ನಾವು ಅವುಗಳು ಎನ್‌ಕ್ರಿಪ್ಟ್‌ ಮಾಡಿರುವುದನ್ನು ಅಂದರೆ ಅಸ್ಪಷ್ಟವಾಗಿರುವುದನ್ನು ಕಾಸ್ಮಿಕ್‌ ಮೈಕ್ರೋವೇವ್ ಹಿಂದಿನ ರೇಡಿಯೇಷನ್‌ ಮೂಲಕ ತಿಳಿಯುತ್ತಿದ್ದೇವೆ ಎಂದು ಸ್ನೋಡೆನ್‌ ತಿಳಿಸಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ನ್ಯಾಷನಲ್‌ ಸೆಕ್ಯುರಿಟಿ ಏಜೆನ್ಸಿಯಿಂದಲು ಸಹ ಏಲಿಯನ್‌ಗಳ ಸಂವಹನ ಮಾದರಿಯನ್ನು ಅರ್ಥೈಸಲು ಆಗುತ್ತಿಲ್ಲ. ಕಾರಣ ಕೇವಲ ಹಿಂಬದಿ ಶಬ್ಧವನ್ನು ಮಾತ್ರ ಕೇಳಿಸಿಕೊಳ್ಳಬಹುದಾಗಿದೆ. ಏಲಿಯನ್‌ಗಳು ಅಸ್ತಿತ್ವದಲ್ಲಿದ್ದರೆ ಅವುಗಳು ನಮಗಿಂತ ಬುದ್ದಿವಂತವಾಗಿದ್ದು ನಮ್ಮ ನಾಗರಿಕತೆಯನ್ನು ತಿಳಿದಿವೆ. ಆದರೆ ನಾವು ಇನ್ನು ಅಷ್ಟು ಅಭಿವೃದ್ದಿಹೊಂದಿ ಅವುಗಳ ನಾಗರಿಕತೆ ತಿಳಿಯಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಡಾ|| ನಥಲೈ ಕಾರ್ಬೊ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಏಲಿಯನ್‌ ಅಸ್ತಿತ್ವದ ಬಗ್ಗೆ ಪತ್ತೆ ಹಚ್ಚುವ ಮುಂಚೂಣಿಯಲ್ಲಿ ಅಮೇರಿಕದ ಸೇತಿ ಸಂಸ್ಥೆಯ ಡಾ|| ನಥಲೈ ಕಾರ್ಬೊ ಸಹ ಇದ್ದು, ಅವರು ಈ ಹಿಂದೆ ಏಲಿಯನ್‌ಗಳ ಸಿಗ್ನಲ್‌ಗಳನ್ನು ನಾವು ಇನ್ನು ಸಹ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದರು.
ಚಿತ್ರ ಕೃಪೆ: Alamy ,
ಚಿತ್ರ ಕೃಪೆ: Linkedin

ಸೌರವ್ಯೂಹದ ಹೊರ ಭಾಗದಿಂದ ಹಲವು ಸಿಗ್ನಲ್‌ಗಳು

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ಇತ್ತೀಚೆಗೆ ವಿಜ್ಞಾನಿಗಳು ಸೌರವ್ಯೂಹದ ಹೊರ ಭಾಗದಿಂದ ಹಲವು ನಿಗೂಢ ಮಿಡಿಯುವ ಸಿಗ್ನಲ್‌ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ರೇಡಿಯೋ ಸಿಗ್ನಲ್‌ಗಳ ಮೂಲಕ ಏಲಿಯನ್‌ ಅಸ್ತಿತ್ವ ಪತ್ತೆ

ಏಲಿಯನ್‌ಗಳು ಮೆಸೇಜ್‌ ಕಳುಹಿಸಲು ಸಿದ್ಧ

ವಿಜ್ಞಾನಿಗಳು ಸೌರವ್ಯೂಹದ ಹೊರ ಭಾಗದಿಂದ ಹಲವು ನಿಗೂಢ ಮಿಡಿಯುವ ಸಿಗ್ನಲ್‌ಗಳನ್ನು ಪಡೆದ ಹಿನ್ನೆಲೆಯಿಂದ ಡಾ|| ಕಾರ್ಬೋಲ್‌'' ಏಲಿಯನ್‌ ಅಸ್ತಿತ್ವ ಪತ್ತೆ ಹಚ್ಚಲು ರೇಡಿಯೋ ಸಿಗ್ನಲ್‌ ಹುಡುಕಾಟ ಮಾರ್ಗ ಪ್ರಸ್ತುತದಲ್ಲಿ ಇದೆ" ಎಂದು ಹೇಳಿದ್ದಾರೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಹೊಸ ಗ್ರಹದ ಜನನ ಕಂಡ ಖಗೋಳವಿಜ್ಞಾನಿಗಳು

ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Aliens could be sending us messages but they are encrypted. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot