ರೆಟ್ರೊ ಶೈಲಿಯ ಅಮಾಜ್‌ಫಿಟ್ ನಿಯೋ ಸ್ಮಾರ್ಟ್‌ವಾಚ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ಹಲವು ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಈಗಾಗಲೇ ಹಲವು ಸಂಸ್ತೆಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿವೆ. ಇದೀಗ ಹುಮೈ ಸಂಸ್ಥೆ ತನ್ನ ಹೊಸ ಅಮಾಜ್‌ಫಿಟ್‌ ನಿಯೋ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ರೆಟ್ರೊ ಶೈಲಿಯನ್ನು ಹೊಂದಿದೆ. ಇನ್ನು ಅಮಾಜ್‌ಫಿಟ್ ನಿಯೋ ಸ್ಮಾರ್ಟ್‌ವಾಚ್‌ 28 ದಿನಗಳ ಬ್ಯಾಟರಿ ಅವಧಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಜೊತೆಗೆ ಇದರ ರೆಟ್ರೊ ವಿನ್ಯಾಸವನ್ನು ಹೈಲೈಟ್ ಮಾಡುವ ಸ್ಮಾರ್ಟ್ ವಾಚ್ ನ್ಯಾವಿಗೇಷನ್‌ಗಾಗಿ ನಾಲ್ಕು Physical ಗುಂಡಿಗಳನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್

ಹೌದು, ಹುಮೈ ಸಂಸ್ಥೆ ತನ್ನ ಹೊಸ ಅಮಾಜ್‌ ಫಿಟ್‌ ನಿಯೋ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದು 5ATM ವಾಟರ್‌ ಪ್ರೂಪ್‌ ಅನ್ನು ಒಳಗೊಂಡಿದೆ. ನಿದ್ರೆಯ ಗುಣಮಟ್ಟದ ಮೇಲ್ವಿಚಾರಣೆ ಮತ್ತು 24x7 ಹೃದಯ ಬಡಿತ ಮಾನಿಟರಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಈ ಸ್ಮಾರ್ಟ್‌ವಾಚ್‌ ಒಳಗೊಂಡಿದೆ. ಜೊತೆಗೆ ಇದು ವೈಯಕ್ತಿಕ ಚಟುವಟಿಕೆ ಇಂಟೆಲಿಜೆನ್ಸ್ ಮೌಲ್ಯಮಾಪನ ಮಾಡುವ ಫಿಚರ್ಸ್‌ ಅನ್ನು ಸಹ ಇದು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಒಳಗೊಂಡಿರುವ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್

ಅಮಾಜ್‌ಫಿಟ್ ನಿಯೋ ಸ್ಮಾರ್ಟ್‌ವಾಚ್‌ 1.2-ಇಂಚಿನ STN monochrome ಡಿಸ್‌ಪ್ಲೇಯನ್ನು ಹೊಂದಿದೆ. ಇದು ಲಿಫ್ಟ್-ಟು-ವೇಕ್ ಫೀಚರ್ಸ್‌ ಅನ್ನು ಹೊಂದಿದ್ದು, ಗಡಿಯಾರದ ಮುಖವನ್ನು PUR ಪಟ್ಟಿಯಿಂದ ಹಿಡಿದಿಡಲಾಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಅಮಾಜ್‌ಫಿಟ್ ನಿಯೋ ಸ್ಮಾರ್ಟ್‌ವಾಚ್‌ 24x7 ಹಾರ್ಟ್‌ಬಿಟ್‌ ಮಾನಿಟರಿಂಗ್‌ ಮಾಡುವುದಕ್ಕೆ ಪಿಪಿಜಿ ಬಯೋ-ಟ್ರ್ಯಾಕಿಂಗ್ ಆಪ್ಟಿಕಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದು ಟೋಟಲ್ ಸ್ಲೀಪ್, ಲೈಟ್‌ ಸ್ಲೀಪ್‌, ಡೀಪ್‌ ಸ್ಲೀಪ್‌, ಮತ್ತು rapid eye movement (REM) ಅನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 20 ನಿಮಿಷಗಳಿಗಿಂತ ಹೆಚ್ಚು ಕಾಲ ಇರುವ ಕಿರು ನಿದ್ದೆಗಳ ಮಲಗುವ ಮಾದರಿಗಳನ್ನು ಸಹ ಇದು ಪತ್ತೆ ಮಾಡುತ್ತದೆ ಎಂದು ಅಮಾಜ್‌ಫಿಟ್ ಹೇಳಿದೆ.

ಅಮಾಜ್‌ಫಿಟ್

ಇದು ಮಿ ಸ್ಮಾರ್ಟ್ ಬ್ಯಾಂಡ್ 5 ರಂತೆಯೇ, ಅಮಾಜ್‌ಫಿಟ್ ನಿಯೋ ಸಹ ಪಿಎಐ ಮೌಲ್ಯಮಾಪನ ವ್ಯವಸ್ಥೆಯನ್ನು ಹೊಂದಿದೆ. ಇದು ಹಾರ್ಟ್‌ಬೀಟ್‌ , ಸಕ್ರಿಯ ಸಮಯ ಮತ್ತು ಇತರ ಸೂಚಕಗಳಂತಹ ಡೇಟಾವನ್ನು ನೋಡುವ ಮೂಲಕ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸಲು ಇದು ವಿಶೇಷ ಅಲ್ಗಾರಿದಮ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ಅಮಾಜ್‌ಫಿಟ್ ನಿಯೋ ವಾಕಿಂಗ್, ಓಟ ಮತ್ತು ಸೈಕ್ಲಿಂಗ್ ನಂತಹ ಮೂರು ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ.

ಸ್ಮಾರ್ಟ್ ವಾಚ್

ಇನ್ನು ಈ ಸ್ಮಾರ್ಟ್ ವಾಚ್ 160mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು ನಿಯಮಿತ ಬಳಕೆಯಲ್ಲಿ ಸಿಂಗಲ್‌ ಚಾರ್ಜ್‌ನಲ್ಲಿ 28 ದಿನಗಳವರೆಗೆ ಮತ್ತು ಪವರ್‌ ಸೇವ್‌ ಮೋಡ್‌ನಲ್ಲಿ 37 ದಿನಗಳವರೆಗೆ ಇರುತ್ತದೆ ಎಂದು ಸಂಸ್ಥೆ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಸಂಪರ್ಕವನ್ನು ಬೆಂಬಲಿಸುತ್ತದೆ. ಅಲ್ಲದೆ ಇದು ಆಂಡ್ರಾಯ್ಡ್ 5.0 ಅಥವಾ ಐಒಎಸ್ 10.0ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಡಿವೈಸ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ ಅಮಾಜ್‌ಫಿಟ್ ನಿಯೋ ಫೋನ್ ಕರೆ ಮತ್ತು ಸಂದೇಶಗಳ ಅಧಿಸೂಚನೆಗಳನ್ನು ಸಹ ನೀಡಲಿದೆ.

ಅಮಾಜ್‌ಫಿಟ್ ನಿಯೋ

ಸದ್ಯ ಅಮಾಜ್‌ಫಿಟ್ ನಿಯೋ ಸ್ಮಾರ್ಟ್‌ವಾಚ್‌ನ ಬೆಲೆ 2,499ರೂ, ಆಗಿದೆ. ಇದು ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂಟ್ರಾ, ಪೇಟಿಎಂ, ಟಾಟಾ ಕ್ಲಿಕ್ ಮತ್ತು ಅಮೇಜ್‌ಫಿಟ್.ಕಾಮ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಇದು ಇದೇ ಅಕ್ಟೋಬರ್ 1 ರಿಂದ ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗಲಿದೆ.

Most Read Articles
Best Mobiles in India

English summary
Amazfit Neo has launched in India as the latest smartwatch offering by Huami. The retro-style Amazfit Neo offers 28 days of battery life and comes with a monochrome always-on display.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X