'ಅಮೆಜಾನ್' ಮತ್ತು 'ಫ್ಲಿಪ್‌ಕಾರ್ಟ್‌' ಆಫರ್‌ಗೆ ಇಂದೇ ಕೊನೆಯ ದಿನ!

|

ಜನಪ್ರಿಯ ಅಮೆಜಾನ್ ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಮತ್ತು ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ದಿ ಬಿಗ್ ಬಿಲಿಯನ್ ಡೇಸ್‌' ಸೇಲ್‌ ಮೇಳಗಳ ಮುಕ್ತಾಯಕ್ಕೆ ಇನ್ನೇನು ಕೆಲವೇ ಗಂಟೆಗಳು ಭಾಕಿ ಉಳಿದಿವೆ. ಇದೇ ಸೆಪ್ಟೆಂಬರ್ 29ರಿಂದ ಆರಂಭವಾಗಿದ್ದು ಈ ಸೇಲ್‌ ಮೇಳಗಳು ಇಂದು (ಅಕ್ಟೋಬರ್ 4) ಕೊನೆಯಾಗಲಿವೆ. ಹೀಗಾಗಿ ಸ್ಮಾರ್ಟ್‌ಫೋನ್‌ ಖರೀದಿಸುವುದಿದ್ದರೇ ಇಂದೇ ಖರೀದಿಸಿಬಿಡಿ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌

ಹೌದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಇ-ತಾಣಗಳು ಹಬ್ಬದ ಪ್ರಯಕ್ತ ಆಯೋಜಿಸಿದ್ದ ಆಫರ್‌ ಇಂದು ಕೊನೆಯಾಗಲಿದ್ದು, ಈ ಎರಡು ತಾಣಗಳಲ್ಲಿ ಗ್ಯಾಜೆಟ್ಸ್‌ ಉತ್ಪನ್ನಗಳಿಗೆ ಅತ್ಯುತ್ತಮ ಡಿಸ್ಕೌಂಟ್‌ ನೀಡಲಾಗಿದೆ. ಇದರೊಂದಿಗೆ ನೋ-ಕಾಸ್ಟ್‌ ಇಎಮ್‌ಐ ಆಯ್ಕೆ ಮತ್ತು ಪೇ ಲೆಟರ್ ಆಯ್ಕೆಗಳು ಲಭ್ಯವಿದ್ದು, ಕೆಲವು ಆಯ್ದ ಬ್ಯಾಂಕ್‌ಗಳಿಂದ ಶೇ.10% ಡಿಸ್ಕೌಂಟ್‌ ಸಹ ನೀಡುತ್ತಿವೆ. ಹಾಗಾದರೇ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್‌ ಆಫರ್‌ ಇರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಅಮೆಜಾನ್‌ನಲ್ಲಿ-ಒನ್‌ಪ್ಲಸ್‌ 7T

ಅಮೆಜಾನ್‌ನಲ್ಲಿ-ಒನ್‌ಪ್ಲಸ್‌ 7T

ಹೊಸದಾಗಿ ಬಿಡುಗಡೆ ಆಗಿರುವ ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯ ಇರುತ್ತದೆ. ಒನ್‌ಪ್ಲಸ್‌ 7T ಫೋನಿನ 8GB RAM ಮತ್ತು 128GB ವೇರಿಯಂಟ್ ಬೆಲೆಯು 37,999ರೂ.ಗಳಾಗಿದ್ದು, ಹಾಗೆಯೇ 8GB RAM ಮತ್ತು 256GB ವೇರಿಯಂಟ್ ಬೆಲೆಯು 39,999ರೂ.ಗಳಾಗಿದೆ. ಆದ್ರೆ ಅಮೆಜಾನ್‌ ತಾಣದಲ್ಲಿ ಎಸ್‌ಬಿಐ ಕಾರ್ಡ್‌ ಬಳಸಿ ಖರೀದಿಸಿದರೇ ಶೇ.10% ಡಿಸ್ಕೌಂಟ್‌ ಸಿಗಲಿದೆ.

ಅಮೆಜಾನ್‌ನಲ್ಲಿ-ಒನ್‌ಪ್ಲಸ್‌ 7 ಪ್ರೊ

ಅಮೆಜಾನ್‌ನಲ್ಲಿ-ಒನ್‌ಪ್ಲಸ್‌ 7 ಪ್ರೊ

ಇತ್ತೀಚಿಗೆ ಬಿಡುಗಡೆ ಆಗಿರುವ ಒನ್‌ಪ್ಲಸ್‌ ಕಂಪನಿಯ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್‌ 7 ಪ್ರೊ' ಫೋನಿಗೆ ಭರ್ಜರಿ ಆಫರ್‌ ತಿಳಿಸಿಲಾಗಿದೆ. ಒನ್‌ಪ್ಲಸ್‌ 7 ಪ್ರೊ 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ಗೆ 5,000ರೂ.ಗಳ ಡಿಸ್ಕೌಂಟ್‌ ನೀಡಲಾಗಿದ್ದು, 44,999ರೂ.ಗಳಿಗೆ ದೊರೆಯಲಿದೆ. ಪಾಪ್‌ಅಪ್‌ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 49,999ರೂ.ಗಳಿಗೆ ಬಿಡುಗಡೆ ಆಗಿತ್ತು.

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 10

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 10

ಸ್ಯಾಮ್‌ಸಂಗ್‌ ಸಂಸ್ಥೆಯ ಗ್ಯಾಲ್ಯಾಕ್ಸಿ ನೋಟ್ 10 ಸ್ಮಾರ್ಟ್‌ಫೋನ್ಗೂ ಸಹ ಆಫರ್ ನೀಡಲಾಗಿದ್ದು, 8GB RAM ಮತ್ತು 256GB ವೇರಿಯಂಟ್‌ ಸ್ಮಾರ್ಟ್‌ಫೋನ್‌ 5,001ರೂ. ಡಿಸ್ಕೌಂಟ್‌ ಪಡೆದುಕೊಂಡಿದೆ. ಹಾಗೆಯೇ 6GB RAM ಮತ್ತು 128GB ವೇರಿಯಂಟ್‌ ಸ್ಮಾರ್ಟ್‌ಫೋನ್ 75,000ರೂ.ಬೆಲೆಯನ್ನು ಹೊಂದಿದ್ದು, ಆದರೆ ಅಮೆಜಾನ್‌ ಸೇಲ್‌ ಮೇಳದಲ್ಲಿ 69,999ರೂ.ಗಳಿಗೆ ಸಿಗಲಿದೆ.

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್‌ ಸಹ ಬೆಸ್ಟ್‌ ಆಫರ್ ಪಡೆದಿದೆ. 6GB RAM ಮತ್ತು 128GB ವೇರಿಯಂಟ್‌ ಸ್ಮಾರ್ಟ್‌ಫೋನ್‌ ಬೆಲೆಯು 73,600ರೂ.ಗಳಾಗಿದ್ದು, ಆದರೆ ಈ ಸ್ಮಾರ್ಟ್‌ಫೋನಿಗೆ 30,601ರೂ. ಬಿಗ್ ಡಿಸ್ಕೌಂಟ್‌ ನೀಡಲಾಗಿದೆ. ಹೀಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು 42,999ರೂ.ಗಳಿಗೆ ಖರೀದಿಸಬಹುದಾಗಿದೆ.

ಅಮೆಜಾನ್‌ನಲ್ಲಿ-ಇತರೆ ಬೆಸ್ಟ್‌ ಡೀಲ್‌

ಅಮೆಜಾನ್‌ನಲ್ಲಿ-ಇತರೆ ಬೆಸ್ಟ್‌ ಡೀಲ್‌

ಹುವಾವೆ ಮೇಟ್ 20 ಪ್ರೊ, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ಮತ್ತು ಶಿಯೋಮಿ ರೆಡ್ಮಿ 7 ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್‌ ಪಡೆದುಕೊಂಡಿದೆ. ಹುವಾವೆ ಮೇಟ್ 20 ಪ್ರೊ 6GB RAM, 128GB ವೇರಿಯಂಟ್‌ 49,990ರೂ.ಗಳಿಗೆ ಲಭ್ಯವಾಗಲಿದ್ದು, ಗ್ಯಾಲ್ಯಾಕ್ಸಿ ಎಂ30 9,999ರೂ.ಗಳಿಗೆ ಹಾಗೂ ರೆಡ್ಮಿ 7 ((2GB RAM, 32GB ) 5,999ರೂ.ಗಳಿಗೆ ಸಿಗಲಿವೆ.

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌9

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌9

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಸ್‌9 ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ನೀಡಲಾಗಿದೆ. 64GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್‌ ಬೆಲೆಯು 62,500ರೂ.ಗಳಾಗಿದ್ದು, ಒಟ್ಟು 35,501ರೂ.ಗಳ ಬಿಗ್ ಡಿಸ್ಕೌಂಟ್‌ ಪಡೆದುಕೊಂಡಿದೆ. ಹೀಗಾಗಿ ಸದ್ಯ 29,999ರೂ.ಗಳಿಗೆ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50 64GB ಆಂತರಿಕ ಸ್ಟೋರೇಜ್ ವೇರಿಯಂಟ್‌ ಬೆಲೆಯು 21,000ರೂ.ಗಳಾಗಿದೆ. ಆದ್ರೆ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌ ಮೇಳದಲ್ಲಿ 4,001ರೂ.ಗಳ ಬೆಲೆ ಕಡಿತದಿಂದಾಗಿ ಗ್ರಾಹಕರಿಗೆ 16,999ರೂ.ಗಳಿಗೆ ದೊರೆಯುತ್ತದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಫೀಚರ್‌ ಹೊಂದಿದೆ ಮತ್ತು 25ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಗೂಗಲ್ ಪಿಕ್ಸಲ್ 3

ಫ್ಲಿಪ್‌ಕಾರ್ಟ್‌ನಲ್ಲಿ- ಗೂಗಲ್ ಪಿಕ್ಸಲ್ 3

64 GB ಸ್ಟೋರೇಜ್‌ ವೇರಿಯಂಟ್‌ನ 'ಗೂಗಲ್ ಪಿಕ್ಸಲ್ 3' ಸ್ಮಾರ್ಟ್‌ಫೋನ್ ಬೆಲೆಯು 71,000ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌ ಮೇಳದಲ್ಲಿ 28,001ರೂ ಡಿಸ್ಕೌಂಟ್‌ ನೀಡಲಾಗಿದೆ. ಹೀಗಾಗಿ 42,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 'ಗೂಗಲ್ ಪಿಕ್ಸಲ್ 3a' ಸ್ಮಾರ್ಟ್‌ಫೋನ್ 15,001 ಡಿಸ್ಕೌಂಟ್‌ ಪಡೆದಿದ್ದು, 29,999ರೂ.ಗಳಿಗೆ ದೊರೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಶಿಯೋಮಿ ಪೊಕೊ ಎಫ್1

ಫ್ಲಿಪ್‌ಕಾರ್ಟ್‌ನಲ್ಲಿ- ಶಿಯೋಮಿ ಪೊಕೊ ಎಫ್1

ಶಿಯೋಮಿ ಪೊಕೊ ಎಫ್1 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, 21,999ರೂ. ಪ್ರೈಸ್‌ಟ್ಯಾಗ್‌ ಪಡೆದಿದೆ. ಆದರೆ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌ ಮೇಳದಲ್ಲಿ 7,000ರೂ.ಗಳ ಡಿಸ್ಕೌಂಟ್‌ ಪಡೆದಿದ್ದು, 14,999ರೂ.ಗಳಿಗೆ ಖರೀದಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ

ಫ್ಲಿಪ್‌ಕಾರ್ಟ್‌ನಲ್ಲಿ- ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ

ಫ್ಲಿಪ್‌ಕಾರ್ಟ್‌ನಲ್ಲಿನ ಬಿಗ್ ಬಿಲಿಯನ್ ಡೇಸ್‌ ಸೇಲ್ ಮೇಳದಲ್ಲಿ ಶಿಯೋಮಿಯ ಇತ್ತೀಚಿನ 'ರೆಡ್ಮಿ ಕೆ20' ಸ್ಮಾರ್ಟ್‌ಫೋನ್ 6GB RAM ಮತ್ತು 64GB ವೇರಿಯಂಟ್ 19,999ರೂ.ಗಳಿಗೆ ಸಿಗಲಿದೆ. ಹಾಗೆಯೇ 'ರೆಡ್ಮಿ ಕೆ20 ಪ್ರೊ' ಸ್ಮಾರ್ಟ್‌ಫೋನ್ 6GB RAM ಮತ್ತು 128GB ವೇರಿಯಂಟ್ 24,999 ರೂ.ಗಳಿಗೆ ಲಭ್ಯವಿದೆ. ಈ ರೆಡ್ಮಿ ಕೆ20 ಸರಣಿಯು ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

Most Read Articles
Best Mobiles in India

English summary
Today is the last day of the first round of festive season sales on Amazon and Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more