Just In
Don't Miss
- Movies
ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತ
- Sports
ಐಎಸ್ಎಲ್: ಮತ್ತೆ ಡ್ರಾಕ್ಕೆ ತೃಪ್ತಿಪಟ್ಟ ಕೇರಳ ಬ್ಲಾಸ್ಟರ್ಸ್ ಹಾಗೂ ಮುಂಬೈ ಸಿಟಿ
- News
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?
- Lifestyle
ಶುಕ್ರವಾರವಾದ ದಿನ ಭವಿಷ್ಯ 6-12-2019
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಗೂಗಲ್ ಮತ್ತು ಅಮೆಜಾನ್ ದೋಸ್ತಿ!.ಟೆಕ್ ಮೈತ್ರಿಯ ಹೊಸ ಸೇವೆ ಏನು ಗೊತ್ತಾ?
ಟೆಕ್ ದಿಗ್ಗಜ 'ಗೂಗಲ್' ಮತ್ತು ಜನಪ್ರಿಯ ಜಾಲತಾಣ 'ಅಮೆಜಾನ್' ಈ ಎರಡು ಸಂಸ್ಥೆಗಳು ಒಂದಾಗಿ ಹೆಜ್ಜೆ ಇಡಲು ಮುಂದಾಗಿದ್ದು, ದೋಸ್ತಿಯ ಮೈತ್ರಿ ಮಾಡಿಕೊಂಡಿವೆ. ಈ ಸುದ್ದಿ ಇದೀಗ ಟೆಕ್ ಪ್ರಿಯರ ಗಮನ ಸೆಳೆದಿದ್ದು, ಟೆಕ್ ಮೈತ್ರಿಯಿಂದ ಯಾವೆಲ್ಲಾ ಹೊಸ ಸೇವೆಗಳು ಆರಂಭವಾಗಲಿವೆ ಎನ್ನುವುದನ್ನು ಎದುರು ನೊಡುತ್ತಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಈಗಾಗಲೇ ಈ ಸಂಸ್ಥೆಗಳು ಹೊಸ ಸೇವೆಯ ಲಭ್ಯತೆಯನ್ನು ಗ್ರಾಹಕರಿಗೆ ನೀಡಿವೆ.
ಹೌದು, ಗೂಗಲ್ನ ಪ್ರಮುಖ ವಿಡಿಯೊ ಸೇವೆಯಾದ ಯೂಟ್ಯೂಬ್ ಮುಂಚೂಣಿಯಲ್ಲಿದ್ದು, ಹಾಗೆಯೇ ಸದ್ಯ ಭಾರಿ ಜನಪ್ರಿಯವಾಗಿರುವ ಅಮೆಜಾನ್ 'ಫೈರ್ ಸ್ಟಿಕ್ ಟಿವಿ' ಸೇವೆಯು ಗ್ರಾಹಕರ ಮನಗೆದ್ದಿದೆ. ಇದೀಗ ಫೈರ್ ಸ್ಟಿಕ್ ಟಿವಿ ಪ್ಲಾಟ್ಫಾರ್ಮ್ನಲ್ಲಿ 'ಯೂಟ್ಯೂಬ್ ಆಪ್' ಗ್ರಾಹಕರಿಗೆ ಲಭ್ಯವಾಗಲಿದ್ದು, ಹಾಗೆಯೇ ಆಂಡ್ರಾಯ್ಡ್ನಲ್ಲಿ ಅಮೆಜಾನ್ ಪ್ರೈಮ್ ದೊರೆಯುತ್ತಿದ್ದು, ಗೂಗಲ್ ಕ್ರೋಮ್ಕಾಸ್ಟ್ಗೆ ಸಹ ಬೆಂಬಲ ನೀಡಲಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿರ್ಧರಿಸಿದಂತೆ ಅಮೆಜಾನ್ ಪ್ರೈಮ್ ವಿಡಿಯೊ ಸೇವೆಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ಟಿವಿಯಲ್ಲಿ ಲಭ್ಯತೆ ಮಾಡಲಾಗಿದ್ದು, ಅದರೊಂದಿಗೆ ಗೂಗಲ್ ಕ್ರೋಮ್ಕಾಸ್ಟ್ ಪ್ಲಾಟ್ಫಾರ್ಮ್ಗೂ ಸಹ ಸಪೋರ್ಟ್ ಮಾಡಲಿದೆ. ಅಂತೆಯೇ ಗೂಗಲ್ ಸಹ ತನ್ನ ಯೂಟ್ಯೂಬ್ ಸೇವೆಯನ್ನು ಅಮೆಜಾನ್ ಫೈರ್ ಸ್ಟಿಕ್ ಪ್ಲಾಟ್ಫಾರ್ಮ್ನಲ್ಲಿ ದೊರೆಯುವಂತೆ ಮಾಡಿದ್ದು, ವಿಶ್ವವ್ಯಾಪಿ ಈ ಸೇವೆ ಗ್ರಾಹಕರಿಗೆ ಲಭ್ಯ.
ಅಮೆಜಾನ್ ಫೈರ್ ಸ್ಟಿಕ್ನ (2nd Gen), ಫೈರ್ ಟಿವಿ ಸ್ಟಿಕ್ 4K, ಫೈರ್ಟಿವಿ ಕ್ಯೂಬ್, ಫೈರ್ ಟಿವಿ ಸ್ಟಿಕ್ ಬೇಸಿಕ್ ಎಡಿಷನ್ ಹಾಗೂ ಫೈರ್ ಟಿವಿ ಎಡಿಷನ್ನ ಎಲ್ಲ ಸ್ಮಾರ್ಟ್ಟಿವಿಗಳಲ್ಲಿ 'ಯೂಟ್ಯೂಬ್ ಆಪ್' ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಶೀಘ್ರದಲ್ಲಿಯೇ 'ಯೂಟ್ಯೂಬ್ ಟಿವಿ' ಮತ್ತು 'ಯೂಟ್ಯೂಬ್ ಕಿಡ್ಸ್' ಆಪ್ ಸೇವೆಗಳು ಸಹ ಅಮೆಜಾನ್ ಫೈರ್ ಟಿವಿ ಪ್ಲಾಟ್ಫಾರ್ಮ್ ಸೇರುವ ಸಾಧ್ಯತೆಗಳಿವೆ.
ಓದಿರಿ : ವಾಟ್ಸಪ್ನ ಈ ಹೊಸ ಫೀಚರ್ಸ್ ಖಂಡಿತಾ ನಿಮಗೆ ಉಪಯುಕ್ತ!
ಅಧಿಕೃತ ಯೂಟ್ಯೂಬ್ ಆಪ್ ಫೈರ್ ಟಿವಿಯಲ್ಲಿ 60 fps ವೇಗದ ಸಾಮರ್ಥ್ಯದಲ್ಲಿ 4K HDR ವಿಡಿಯೊಗಳನ್ನು ಬೆಂಬಲಿಸಲಿದೆ. ಇನ್ನು ಯೂಟ್ಯೂಬ್ ಆಪ್ನಲ್ಲಿ ಅಮೆಜಾನ್ ಅಲೆಕ್ಸಾ ವಾಯಿಸ್ ಅಸಿಸ್ಟಂಟ್ ಬೆಂಬಲಿಸಲಿದ್ದು, ಗ್ರಾಹಕರು ವಾಯಿಸ್ ಕಮಾಂಡ್ ಮೂಲಕ ಯೂಟ್ಯೂಬ್ ನಿಯಂತ್ರಿಸಬಹುದಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್ಟಿವಿಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೊ ಆಪ್ ಗ್ರಾಹಕರಿಗೆ ಲಭ್ಯವಾಗಲಿದೆ.
ಓದಿರಿ : BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!
-
29,999
-
14,999
-
28,999
-
37,430
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
37,430
-
15,999
-
25,999
-
46,354
-
19,999
-
17,999
-
9,999
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090
-
15,500