ಅಮೆಜಾನ್‌ ಆಪಲ್‌ ಡೇಸ್‌ ಸೇಲ್‌: ಐಫೋನ್‌ 11 ಸರಣಿ ಫೋನ್‌ಗಳಿಗೆ ಭಾರಿ ರಿಯಾಯಿತಿ!

|

ಇ-ಕಾಮರ್ಸ್‌ ವಲಯದ ದೈತ್ಯ ಅಮೆಜಾನ್ ತಾಣವು ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಆಫರ್‌ ನೀಡುವುದರಲ್ಲಿ ಸದಾ ಮುಂದೆ. ಪ್ರಮುಖ ಸೇಲ್‌ ಮೇಳಗಳು ಹಾಗೂ ಕೆಲವು ಸ್ಪೆಷಲ್‌ ದಿನಗಳಂದು ನೂತನ ಸ್ಮಾರ್ಟ್‌ಫೋನ್‌ಗಳಿಗೂ ಸಹ ವಿಶೇಷ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತದೆ. ಅಮೆಜಾನ್‌ ತಾಣದಲ್ಲಿ ಅಂತಹ ಟೈಮ್ ಈಗ ಬಂದಿದ್ದು, ಜನಪ್ರಿಯ ಐಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಕೊಡುಗೆ ಘೋಷಿಸಿದೆ.

ಕಾಮರ್ಸ್‌

ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇದೀಗ 'ಆಪಲ್‌ ಡೇಸ್ ಸೇಲ್' ಮೇಳವು ಇಂದು ರಾತ್ರಿ ಚಾಲ್ತಿಯಲ್ಲಿದ್ದು, ಜುಲೈ 25, 2020 ವರೆಗೂ ಇರಲಿದೆ. ಈ ವೇಳೆ ಆಪಲ್‌ ಐಫೋನ್‌ಗಳಿಗೆ ಭಾರಿ ರಿಯಾಯಿತಿ ಇದ್ದು, ಮುಖ್ಯವಾಗಿ ಐಫೋನ್ 11 ಸರಣಿಯ ಫೋನ್‌ಗಳಿಗೆ ಹಾಗೂ ಐಫೋನ್ 8 ಪ್ಲಸ್‌ ಆಕರ್ಷಕ ಡಿಸ್ಕೌಂಟ್ ಲಭ್ಯ ಇದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರಿಗೆ 5,000 ರೂ.ವರೆಗೂ ರಿಯಾಯಿತಿ ಲಭಿಸಲಿದೆ. ಆಪಲ್ ಸೇಲ್ ಮೇಳದಲ್ಲಿ ಯಾವೆಲ್ಲಾ ಐಫೋನ್‌ಗಳಿಗೆ ಡಿಸ್ಕೌಂಟ್ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್‌ ಐಫೋನ್‌ 11

ಆಪಲ್‌ ಐಫೋನ್‌ 11

ಆಪಲ್‌ನ ಹೊಸ ಆಪಲ್‌ ಐಫೋನ್‌ 11 ಸ್ಮಾರ್ಟ್‌ಫೋನ್ ಸಹ ಡಿಸ್ಕೌಂಟ್‌ ಪಡೆದಿದ್ದು, 64GB ಆಂತರಿಕ ಸ್ಟೋರೇಜ್‌ ವೇರಿಯಂಟ್‌ ಫೋನ್ 62,900ರೂ. ಬೆಲೆಗೆ ಲಭ್ಯವಾಗಲಿದೆ. ಹಾಗೆಯೇ ಎಚ್‌ಡಿಎಫ್‌ಸಿ ಕಾರ್ಡ್‌ ಬಳಸಿ ಖರೀದಿಸಿದರೇ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಈ ಐಫೋನ್ ಹಿಂಬದಿಯಲ್ಲಿ 12ಎಂಪಿ ಸೆನ್ಸಾರ್‌ನ ಕ್ಯಾಮೆರಾ ಹೊಂದಿದ್ದು, ಮುಂಬದಿ ಸಹ 12ಎಂಪಿ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ ಹಾಗೂ ಕ್ರೆಡಿಟ್ ಕಾರ್ಡ್‌ ಬಳಸಿ ಐಫೋನ್ 11 ಪ್ರೊ ಫೋನ್ ಖರೀದಿಸಿದರೇ 4,000ರೂ. ಡಿಸ್ಕೌಂಟ್ ದೊರೆಯಲಿದೆ. ಇನ್ನು ಈ ಐಫೋನ್ 5.8 ಇಂಚಿನ ಸೂಪರ್‌ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಮೂರು ಕ್ಯಾಮೆರಾಗಳು ಸಹ 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

ಐಫೋನ್ 11 ಪ್ರೊ ಮ್ಯಾಕ್ಸ್

ಐಫೋನ್ 11 ಪ್ರೊ ಮ್ಯಾಕ್ಸ್

ಈ ಐಫೋನಿಗೂ ಸಹ ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್‌ ಹಾಗೂ ಕ್ರೆಡಿಟ್ ಕಾರ್ಡ್‌ ಬಳಸಿ ಐಫೋನ್ 11 ಪ್ರೊ ಫೋನ್ ಖರೀದಿಸಿದರೇ 4,000ರೂ. ಡಿಸ್ಕೌಂಟ್ ದೊರೆಯಲಿದೆ. ಇನ್ನು ಈ ಐಫೋನ್ 6.5 ಇಂಚಿನ ಸೂಪರ್‌ ರೇಟಿನಾ XDR ಡಿಸ್‌ಪ್ಲೇ ಮತ್ತು ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಈ ಫೋನ್‌ ಸಹ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿವೆ. ಐಫೋನ್ ಮ್ಯಾಕ್ಸ್‌ ಸಹ 64GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

ಆಪಲ್ ಐಫೋನ್ 8 ಪ್ಲಸ್‌ ಮತ್ತು ಇತರೆ

ಆಪಲ್ ಐಫೋನ್ 8 ಪ್ಲಸ್‌ ಮತ್ತು ಇತರೆ

ಈ ಸೇಲ್ ಮೇಳದಲ್ಲಿ ಆಪಲ್‌ನ ಐಫೋನ್‌ 8 ಪ್ಲಸ್‌ ಸಹ ಡಿಸ್ಕೌಂಟ್ ಪಡೆದಿದ್ದು, 64GB ಸ್ಟೋರೇಜ್‌ನ ವೇರಿಯಂಟ್‌ ಫೋನ್ ಇದೀಗ 41,500 ರೂ.ಗಳಿಗೆ ಸಿಗಲಿದೆ. ಇದರೊಂದಿಗೆ ಆಪಲ್‌ ಐಪ್ಯಾಡ್‌ಗೆ 5,000ರೂ. ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಆಪಲ್ ವಾಚ್ ಸೀರಿಸ್ 3 ಡಿವೈಸ್‌ಗೆ 1,000ರೂ. ಡಿಸ್ಕೌಂಟ್ ದೊರೆಯಲಿದೆ.

Most Read Articles
Best Mobiles in India

English summary
The iPhone 11 will be priced at Rs. 62,900 for the 64GB storage option, instead of its last revised price of Rs. 68,300 during the sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X