ಅಮೆಜಾನ್‌ ‘ಆಪಲ್ ಡೇಸ್’ ಸೇಲ್‌: ಐಫೋನ್‌ ಖರೀದಿಸಲು ಇದೇ ಬೆಸ್ಟ್‌ ಟೈಂ!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ತನ್ನ ಗ್ರಾಹಕರಿಗೆ ಅಮೆಜಾನ್‌ ವಿಶೇಷ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್ ಇಂಡಿಯಾ ವೆಬ್‌ಸೈಟ್‌ 'ಆಪಲ್ ಡೇಸ್' ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಆಪಲ್‌ ಐಫೋನ್‌ ಪ್ರಿಯರು ಐಫೋನ್ 12 ಸರಣಿ, ಐಫೋನ್ 11 ಪ್ರೊ ಸರಣಿ, ಐಪ್ಯಾಡ್ ಮಿನಿ, ಮ್ಯಾಕ್‌ಬುಕ್ ಪ್ರೊ ಮತ್ತು ಇತರ ಆಪಲ್ ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್

ಹೌದು, ಅಮೆಜಾನ್.ಇನ್‌ನಲ್ಲಿ ‘ಆಪಲ್ ಡೇಸ್' ಸೇಲ್‌ ಶುರುವಾಗಿದೆ. ಇದು ಇದೇ ಜುಲೈ 17, 2021 ರವರೆಗೆ ಲೈವ್ ಆಗಿರುತ್ತದೆ. ಈ ಸೇಲ್‌ನಲ್ಲಿ ಗ್ರಾಹಕರು ನೋ ಕಾಸ್ಟ್‌ ಇಎಂಐ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಹೆಚ್ಚುವರಿ ರಿಯಾಯಿತಿಯಂತಹ ಹಣಕಾಸು ಆಯ್ಕೆಗಳನ್ನು ಬಳಸಿಕೊಳ್ಳಬಹುದು. ಹಾಗಾದ್ರೆ ಅಮೆಜಾನ್‌ ಆಪಲ್‌ ಡೇಸ್‌ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿಇತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಫೋನ್ 12 (64 GB)ವೈಟ್

ಆಪಲ್ ಐಫೋನ್ 12 (64 GB)ವೈಟ್

ಅಮೆಜಾನ್‌ ‘ಆಪಲ್ ಡೇಸ್' ಸೇಲ್‌ನಲ್ಲಿ 79,900 ರೂ ಮೂಲಬೆಲೆ ಹೊಂದಿರುವ ಆಪಲ್ ಐಫೋನ್ 12 (64GB) ಯ ವೈಟ್ ಕಲರ್ ರೂಪಾಂತರವು 11% ರಿಯಾಯಿತಿಯ ನಂತರ 70,900 ರೂಗಳಿಗೆ ಮಾರಾಟವಾಗುತ್ತಿದೆ. ಇನ್ನು ಐಫೋನ್ 12 6.1-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎ 14 ಬಯೋನಿಕ್ ಚಿಪ್‌ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಐಫೋನ್ 12 ಎಂಪಿ ಅಲ್ಟ್ರಾ ವೈಡ್ ಮತ್ತು ವೈಡ್ ಕ್ಯಾಮೆರಾಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು 12 ಎಂಪಿ ಟ್ರೂ ಡೆಪ್ತ್ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಆಪಲ್ ಐಫೋನ್ 12 (64GB)ಬ್ಲೂ

ಆಪಲ್ ಐಫೋನ್ 12 (64GB)ಬ್ಲೂ

ಇನ್ನು ಈ ಸೇಲ್‌ನಲ್ಲಿ 79,900 ರೂ, ಮೂಲ ಬೆಲೆಯ ಐಫೋನ್ 12 (64GB) ಬ್ಲೂ ಕಲರ್ ರೂಪಾಂತರವನ್ನು 71,900 ರೂ.ಗೆ ಖರೀದಿಸಬಹುದಾಗಿದೆ. ಇದರ ಮೇಲೆ 7,000 ರೂ.ಗಳ ರಿಯಾಯಿತಿಯೊಂದಿಗೆ ಪಡೆಯಬಹುದು.

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್ (256GB) - ಮಿಡ್ನೈಟ್ ಗ್ರೀನ್‌

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್ (256GB) - ಮಿಡ್ನೈಟ್ ಗ್ರೀನ್‌

ಇನ್ನು ಅಮೆಜಾನ್‌ ಆಪಲ್‌ ಡೇಸ್‌ ಸೇಲ್‌ನಲ್ಲಿ ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್ (256GB) ಮಿಡ್ನೈಟ್ ಗ್ರೀನ್‌ ರೂಪಾಂತರ 96,900 ರೂಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 1,23,900 ರೂ. ಆಗಿದೆ. ಈ ಐಫೋನ್‌ ಮೇಲೆ 22% ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಆಪಲ್ ಮ್ಯಾಕ್‌ಬುಕ್ ಪ್ರೊ 2020 13.3 ಇಂಚು- ಸ್ಪೇಸ್ ಗ್ರೇ

ಆಪಲ್ ಮ್ಯಾಕ್‌ಬುಕ್ ಪ್ರೊ 2020 13.3 ಇಂಚು- ಸ್ಪೇಸ್ ಗ್ರೇ

ಇದಲ್ಲದೆ 2020 13.3-ಇಂಚಿನ ಆಪಲ್ ಮ್ಯಾಕ್‌ಬುಕ್ ಪ್ರೊ (ಸ್ಪೇಸ್ ಗ್ರೇ) 15% ರಿಯಾಯಿತಿಯಲ್ಲಿ ದೊರೆಯಲಿದೆ. ಅಂದರೆ ಈ ಮ್ಯಾಕ್‌ಬುಕ್‌ ಕೇವಲ 99,990 ರೂಗಳಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದು 1.4GHz ಕ್ವಾಡ್-ಕೋರ್ 8 ನೇ-ಜನರೇಷನ್ ಇಂಟೆಲ್ ಕೋರ್ ಐ 5 ಪ್ರೊಸೆಸರ್ ಹೊಂದಿದೆ.

Most Read Articles
Best Mobiles in India

English summary
The ‘Apple Days’ sale has arrived on the Amazon India website.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X