Just In
- 28 min ago
ಗ್ಯಾಲಕ್ಸಿ ಎ51, ಗ್ಯಾಲಕ್ಸಿ ಎ71 ಸ್ಮಾರ್ಟ್ಫೋನ್ ಲಾಂಚ್ ಮಾಡಿದ ಸ್ಯಾಮ್ಸಂಗ್!
- 1 hr ago
BSNLನ ಈ ಪ್ಲ್ಯಾನಿನಲ್ಲಿ ಸಿಗುತ್ತೆ 2GB ಡಾಟಾ ಮತ್ತು 54 ದಿನ ವ್ಯಾಲಿಡಿಟಿ!
- 3 hrs ago
ಡಿಸ್ಕೌಂಟ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಖರೀದಿಸಲು ಒಳ್ಳೆಯ ಚಾನ್ಸ್!
- 5 hrs ago
ಭಾರತದ ಜನರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡಿದ 10 ಸ್ಮಾರ್ಟ್ ಫೋನ್ ಗಳು
Don't Miss
- News
ಪಕ್ಷ ಬದಲಾದರೂ ಸಿದ್ದರಾಮಯ್ಯ ಈಗಲೂ ನಮ್ಮ ಗುರುಗಳು: ರಮೇಶ್
- Automobiles
ಜೀಪ್ ಕಾಂಪಾಸ್ ಎಸ್ಯುವಿ ಮೇಲೆ 2ಲಕ್ಷದವರೆಗೆ ಭರ್ಜರಿ ಆಫರ್
- Travel
ವನ್ಯಜೀವಿ ಫೋಟೋಗ್ರಫಿ ಗೆ ಮಹಾರಾಷ್ಟ್ರದಲ್ಲಿರುವ ಈ ಪಕ್ಷಿಧಾಮಗಳೇ ಬೆಸ್ಟ್
- Lifestyle
ಮಾನವ ದೇಹದ ಬಗ್ಗೆ ಇನ್ನೂ ರಹಸ್ಯವಾಗಿಯೇ ಉಳಿದಿರುವ ಒಂಭತ್ತು ಅಚ್ಚರಿಯ ಸಂಗತಿಗಳು
- Movies
'ಸೂಜಿದಾರ' ಬಳಿಕ ನಟಿ ಹರಿಪ್ರಿಯಾ ಮತ್ತೊಂದು ಕಿರಿಕ್
- Finance
ಜಿಎಸ್ಟಿ ಪರಿಹಾರ ನೀಡುತ್ತೇವೆ: ನಿರ್ಮಲಾ ಸೀತಾರಾಮನ್
- Sports
ಪಂದ್ಯದ ಮಧ್ಯೆ ಮಗಳ ಗಮನಸೆಳೆಯಲು ಯತ್ನಿಸಿದ ರೋಹಿತ್; ವೀಡಿಯೋ ವೈರಲ್
- Education
ಯುಪಿಎಸ್ಸಿ ಎನ್ಡಿಎ ಮತ್ತು ಎನ್ಎ II ಪರೀಕ್ಷಾ ಫಲಿತಾಂಶ ಪ್ರಕಟ
ನಿಮ್ಮ ಮನೆಯಲ್ಲಿ ಅಮೆಜಾನ್ ಕ್ಲೌಡ್ ಕ್ಯಾಮ್ ಇದೆಯಾ?..ಈ ಶಾಕಿಂಗ್ ನ್ಯೂಸ್ ನೋಡಿ!
ಕೃತಕ ಬುದ್ಧಿಮತ್ತೆ ಮತ್ತು ಖಾಸಗಿತನದ ಹಕ್ಕು ಎರಡು ಒಂದಕ್ಕೊಂದು ಬೆಸೆದುಕೊಂಡಿರುವ ಆತಂಕಕಾರಿ ವಿಷಯಗಳು ಎಂಬ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಅಮೆಜಾನ್ ಕ್ಲೌಡ್ ಕ್ಯಾಮ್ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಈಗ ಇದಕ್ಕೆ ಕಾರಣವಾಗಿದ್ದು, ಕ್ಲೌಡ್ ಕ್ಯಾಮ್ ಚಿತ್ರೀಕರಿಸಿದ ವಿಡಿಯೋ ದೃಶ್ಯಗಳನ್ನು ಭಾರತ ಮತ್ತು ರೊಮಾನಿಯಾದಲ್ಲಿರುವ ಡಜನ್ಗೂ ಹೆಚ್ಚು ಅಮೆಜಾನ್ ಉದ್ಯೋಗಿಗಳು ಪರಾಮರ್ಶೆಗೊಳಪಡಿಸುತ್ತಾರೆ. ಇದು ಖಾಸಾಗಿತನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
ಹೌದು, ಅಮೆಜಾನ್ ಕ್ಲೌಡ್ ಕ್ಯಾಮ್ ಕ್ಯಾಮೆರಾವು ಕೃತಕ ಬುದ್ಧಿಮತ್ತೆಯೊಂದಿಗೆ ಕಾರ್ಯನಿರ್ವಹಿಸುವ ಉಪಕರಣವಾಗಿದ್ದು, ಅದರ ಕಾರ್ಯಕ್ಷಮತೆ ವೃದ್ಧಿಸುವ ಸಲುವಾಗಿ ಕ್ಯಾಮರಾ ಮೂಲಕ ಸೆರೆಹಿಡಿದ ವಿಡಿಯೋ ದೃಶ್ಯಾವಳಿಗಳನ್ನು ಅಮೆಜಾನ್ ಉದ್ಯೋಗಿಗಳು ವೀಕ್ಷಿಸುತ್ತಾರೆ. ಆ ಮೂಲಕ ಎಐ ಆಲ್ಗರಿಥಂಗೆ ತರಬೇತಿ ನೀಡುವ ಕೆಲಸಕ್ಕೆ ಈ ವಿಡಿಯೋಗಳನ್ನು ಬಳಸಲಾಗುತ್ತದೆ ಎಂದು ಈ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಿದ ಉದ್ಯೋಗಿಗಳ ಪೈಕಿ ಐವರು ನೀಡಿದ ಮಾಹಿತಿಯನ್ನು ಆಧರಿಸಿ ಬ್ಲೂಮ್ ಬರ್ಗ್ ವರದಿ ಮಾಡಿದೆ. ಇದು ಈಗ ವೈರಲ್ ಆಗಿದೆ.
ಮನೆಯೊಳಗೆ ಅಮೆಜಾನ್ ಕ್ಲೌಡ್ ಕ್ಯಾಮ್ ಇರಿಸುವುದರಿಂದಾಗಿ ಮನೆಯ ಸದಸ್ಯರ ಎಲ್ಲ ಚಲನವಲನಗಳು ಕೂಡ ಸ್ವಯಂಚಾಲಿತವಾಗಿ ಚಿತ್ರೀಕರಿಸಲ್ಪಟ್ಟಿರುತ್ತವೆ. ದೃಶ್ಯಗಳ ಪ್ರೈವೆಸಿ ರೈಟ್ ಕ್ಲೌಡ್ ಕ್ಯಾಮ್ ಗ್ರಾಹಕರದ್ದೇ ಆಗಿರುತ್ತದೆ ಎಂದು ಅಮೆಜಾನ್ ಹೇಳುತ್ತಿದೆ. ಆದರೆ, ಇವುಗಳನ್ನು ಸಹ ಪರಾಮರ್ಶೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಒಂದು ವೇಳೆ ಹೀಗಾದಲ್ಲಿ ಆ ದೃಶ್ಯಗಳಲ್ಲಿ ಕೆಲವು ಪತಿ-ಪತ್ನಿಯರ ಆಪ್ತ ಕ್ಷಣಗಳ ದೃಶ್ಯಗಳೂ ಇದ್ದರೆ ಆಗಬಹುದಾದ ಪರಿಣಾಮ ಏನು ಎಂಬುದಾಗಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ.
ಆಪಲ್, ಗೂಗಲ್ ಮತ್ತು ಅಮೆಜಾನ್ ಸೇರಿದಂತೆ ಸಾಕಷ್ಟು ಟೆಕ್ ದೈತ್ಯ ಕಂಪೆನಿಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿವೆ. ಇದೇ ಕಾರಣಕ್ಕಾಗಿ ತನ್ನ ಒಡೆತನದಲ್ಲಿರುವ ಕೃತಕ ಬುದ್ದಿಮತ್ತೆ ಸಾಧನಗಳಿಂದ ಸಾಕಷ್ಟು ಡೇಟಾ ಪಡೆದು ಪರಾಮರ್ಶೆಗೊಳಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜನರ ಭಾವನೆ ಮತ್ತು ಅವರ ಆಸೆ ಆಕಾಂಕ್ಷೆಗಳನ್ನು ಅಳೆಯುತ್ತಿರುವ ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸಾಕಷ್ಟು ಹದಗೊಳಿಸಿ ಸರಳಗೊಳಿಸುವ ಆಶಯವನ್ನು ಎಲ್ಲ ಸಂಸ್ಥೆಗಳು ಹೊತ್ತಿವೆ.
ಈ ಎಲ್ಲ ಟೆಕ್ ಕಂಪೆನಿಗಳ ಆಶಯ ಉತ್ತಮವೇ ಇರಬಹುದು. ಆದರೆ, ಇದರಿಂದ ಜನರ ಖಾಸಗಿತನದ ಹಕ್ಕನ್ನು ಕಸಿದಂತಾಗುತ್ತದೆ. ಹೆಚ್ಚು ಹೆಚ್ಚು ಮಾಹಿತಿಗಳನ್ನು ಬಳಸಿಕೊಂಡು ಕೃತಕ ಬುದ್ದಿಮತ್ತೆ ಅಲ್ಗರಿಥಂ ಅಭಿವೃದ್ದಿ ಪಡಿಸುವುದು ಒಂದು ಹಂತಕ್ಕಷ್ಟೇ ಸೀಮಿತವಾಗಿರಬೇಕು. ಇಲ್ಲವಾದಲ್ಲಿ ಜನರ ಖಾಸಾಗಿತನ ಎಂಬುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಟೆಕ್ ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಈಗ ಕೃತಕ ಬುದ್ಧಿಮತ್ತೆ ಮತ್ತು ಖಾಸಗಿತನದ ಹಕ್ಕು ಮತ್ತೆ ಮುನ್ನೆಲೆಗೆ ಬಂದಿದೆ. ಮುಂದೆ ಏನಾಗುತ್ತದೆಯೋ ಕಾದುನೋಡಬೇಕು.
ಇದೀಗ ಏರ್ಟೆಲ್, ಐಡಿಯಾ ಕೊಡಲಿವೆ ಬಿಗ್ ಶಾಕ್!..ನೀವು ಬೆಚ್ಚಿಬೀಳುವುದು ಗ್ಯಾರಂಟಿ!
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790