ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್‌; ನೂತನ ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್!

|

ಪ್ರಸ್ತುತ ಇ-ಕಾಮರ್ಸ್‌ ತಾಣಗಳು ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್ ನೀಡುತ್ತವೆ. ಈ ನಿಟ್ಟಿನಲ್ಲಿ ಅನೇಕರು ಫೋನ್ ಆನ್‌ಲೈನ್‌ನಲ್ಲಿಯೇ ಸ್ಮಾರ್ಟ್‌ಫೋನ್ ಖರೀದಿಗೆ ಮುಂದಾಗುತ್ತಾರೆ. ಈ ರೀತಿ ನೀವು ಡಿಸ್ಕೌಂಟ್ ಬೆಲೆಯಲ್ಲಿ ಹೊಸ ಫೋನ್ ಖರೀದಿಸುವ ಆಲೋಚನೆಯಲ್ಲಿದ್ದರೇ ಅದಕ್ಕೆ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸೂಕ್ತ ವೇದಿಕೆ ಸಿದ್ಧವಾಗಿದೆ. ಅಮೆಜಾನ್‌ ಆಯೋಜಿಸುವ ಫ್ಯಾಬ್ ಫೋನ್ ಫೆಸ್ಟ್‌ ಸೇಲ್ ಮೇಳವು ಮತ್ತೆ ಬಂದಿದೆ.

ಅಮೆಜಾನ್ ಈಗ ಫ್ಯಾಬ್ ಫೋನ್ ಫೆಸ್ಟ್

ಹೌದು, ಅಮೆಜಾನ್ ಈಗ ಫ್ಯಾಬ್ ಫೋನ್ ಫೆಸ್ಟ್ ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಮೇಳವು ಫೆಬ್ರವರಿ 26ರಿಂದ (ನೆನ್ನೆ) ಶುರುವಾಗಿದ್ದು, ಇದೇ ಫೆ.29ರ ವರೆಗೂ ಇರಲಿದೆ. ಈ ಸೇಲ್ ಮೇಳದಲ್ಲಿ ನೂತನ ಸ್ಮಾರ್ಟ್‌ಫೋನ್‌ಗಳ ಮೇಲೆ 40% ವರೆಗೂ ರಿಯಾಯಿತಿ ಲಭ್ಯವಿದ್ದು, ಜೊತೆಗೆ ಫೋನ್ ಆಕ್ಸಸರಿಸ್‌ಗಳ ಮೇಲೆಯೂ ಡಿಸ್ಕೌಂಟ್ ದೊರೆಯುತ್ತವೆ. ಐಸಿಐಸಿಐ ಮತ್ತು ಕೋಟೆಕ್ ಮಹಿಂದ್ರಾ ಬ್ಯಾಂಕ್‌ಗಳಿಂದ ಇಎಮ್‌ಐ ಸೌಲಭ್ಯ ಸಹ ಇವೆ. ಈ ಸೇಲ್ ಮೇಳದಲ್ಲಿ ಬಿಗ್ ಡಿಸ್ಕೌಂಟ್ ಪಡೆದ ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಜನಪ್ರಿಯ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ 10,499ರೂ.ಗಳಿಗೆ ಲಭ್ಯವಿದ್ದು, ಇದರೊಂದಿಗೆ 1000ರೂ. ಎಕ್ಸ್‌ಚೇಂಜ್ ಕೊಡುಗೆಯು ದೊರೆಯಲಿದೆ. 48ಎಂಪಿ ಸೆನ್ಸಾರ್ ಕ್ಯಾಮೆರಾಮ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಈ ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M30s

ಸ್ಯಾಮ್‌ಸಂಗ್ ಗ್ಯಾಲಕ್ಸಿ M30s

6000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆಯಲ್ಲಿ ಅಬ್ಬರಿಸಿದ್ದ ಗ್ಯಾಲಕ್ಸಿ M30s ಫೋನ್ ಅಮೆಜಾನ್ ಫ್ಯಾಬ್ ಫೋನ್ ಸೇಲ್‌ನಲ್ಲಿ ಆರಂಭಿಕ ಬೆಲೆ 12,999ರೂ.ಗೆ ಲಭ್ಯವಾಗಲಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ 4GB ಮತ್ತು 6GB RAM ವೇರಿಯಂಟ್ ಆಯ್ಕೆ ಹೊಂದಿದೆ.

ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್ 8 ಪ್ರೊ

ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಠಿಸಿದ ಶಿಯೋಮಿಯ ರೆಡ್ಮಿ ನೋಟ್ 8 ಪ್ರೊ ಫೋನ್ ಆರಂಭಿಕ ಬೆಲೆಯು 13,999ರೂ.ಗಳಿಗೆ ಸಿಗಲಿದೆ. 64ಎಂಪಿ ಕ್ಯಾಮೆರಾ ಸೆನ್ಸಾರ್ ಪಡೆದಿರುವುದು ಈ ಫೋನಿನ ಪ್ಲಸ್ ಪಾಯಿಂಟ್ ಆಗಿದೆ. ಉಳಿದಂತೆ ಹಿಲಿಯೊ G90T ಪ್ರೊಸೆಸರ್ ಬಲವನ್ನು ಹೊಂದಿದ್ದು, ಬಿಲ್ಟ್‌ ಇನ್ ಅಲೆಕ್ಸಾ ಸೌಲಭ್ಯವನ್ನು ಪಡೆದಿದೆ.

ಒನ್‌ಪ್ಲಸ್ 7 ಪ್ರೊ

ಒನ್‌ಪ್ಲಸ್ 7 ಪ್ರೊ

ಆಂಡ್ರಾಯ್ಡ್ ಓಎಸ್‌ ಪ್ರಿಯರನ್ನು ಗಮನವನ್ನು ಸೆಳೆದಿದ್ದ ಒನ್‌ಪ್ಲಸ್ 7 ಪ್ರೊ ಫೋನ್ ಅಮೆಜಾನ್ ಸೇಲ್‌ನಲ್ಲಿಗ 42,999ರೂ.ಗಳಿಗೆ (8GB RAM+256GB) ದೊರೆಯುತ್ತದೆ. ಇದರೊಂದಿಗೆ 3000ರೂ ಎಕ್ಸ್‌ಚೇಂಜ್ ಕೊಡುಗೆಯು ಲಭ್ಯವಾಗಲಿದೆ. ಇನ್ನು ಈ ಫೋನ್ ಸಹ 48ಎಂಪಿ ಕ್ಯಾಮೆರಾ ಹಾಗೂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M40

ಸ್ಯಾಮ್‌ಸಂಗ್ ಗ್ಯಾಲಕ್ಸಿ M40

ಗ್ಯಾಲಕ್ಸಿ M40 ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ ಪೈ ಓಎಸ್ ಸಪೋರ್ಟ್ ಇದೆ. ಜೊತೆಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 32ಎಂಪಿ ಸೆನ್ಸಾರ್‌ನಲ್ಲಿದೆ. 19,990ರೂ. ಬೆಲೆಯಲ್ಲಿ ಲಾಂಚ್ ಆಗಿದ್ದ ಈ ಫೋನ್ ಸದ್ಯ ಅಮೆಜಾನ್‌ನಲ್ಲಿ 16,999ರೂ.ಗಳಿಗೆ ಲಭ್ಯ.

Most Read Articles
Best Mobiles in India

English summary
Amazon India will offer a 10% instant discount of up to Rs 1,500 on all the transactions made via ICICI Bank credit cards and Kotak Mahindra Bank Credit Cards.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X