Just In
Don't Miss
- News
"ಚಿಕ್ಕತಿರುಪತಿ"ಯ ಗಿಡದ ಜಾತ್ರೆಯಲ್ಲಿ ಏನೆಲ್ಲಾ ವೈಶಿಷ್ಟ್ಯ...
- Movies
ಅತ್ಯಾಚಾರಿಗಳ ಎನ್ ಕೌಂಟರ್: ಉಪ್ರೇಂದ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ
- Automobiles
ಕಾಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್
- Sports
ಐಎಸ್ಎಲ್: ನಾರ್ತ್ ಈಸ್ಟ್-ಎಟಿಕೆಗೆ ಡ್ರಾವನ್ನು ಜಯವಾಗಿಸಲು ಸೂಕ್ತ ಕಾಲ
- Finance
ಸರ್ಕಾರ ನೆರವು ಕೊಡದಿದ್ರೆ ವೊಡಾಫೋನ್-ಐಡಿಯಾ ಮುಚ್ಚಬೇಕು: ಕೆ.ಎಂ. ಬಿರ್ಲಾ
- Lifestyle
ಶನಿವಾರದ ದಿನ ಭವಿಷ್ಯ 07-12-2019
- Education
JEE Main Admit Card 2020: ಜೆಇಇ ಜನವರಿ ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಅಮೆಜಾನ್ ಆಫರ್ : ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಡಿಸ್ಕೌಂಟ್!
ಸ್ಮಾರ್ಟ್ಫೋನ್ ಖರೀದಿಸಬೇಕು ಎಂದುಕೊಂಡಿರುವವರು ಇತ್ತೀಚಿಗೆ ಹೆಚ್ಚಾಗಿ ಇ ಕಾಮರ್ಸ್ ಜಾಲತಾಣಗಳತ್ತ ಕಣ್ಣು ನೆಟ್ಟಿರುತ್ತಾರೆ. ಏಕೆಂದರೇ ಇ-ಕಾಮರ್ಸ್ ಜಾಲತಾಣಗಳಲ್ಲಿ ಗ್ಯಾಜೆಟ್ ಉತ್ಪನ್ನಗಳಿಗೆ ಅದರಲ್ಲೂ ಸ್ಮಾರ್ಟ್ಫೋನ್ಗಳಿಗೆ ಅತ್ಯುತ್ತಮ ಆಫರ್ ಇರುವುದು ಪಕ್ಕಾ ಎನ್ನುವಂತಾಗಿದೆ. ಹೀಗೆ ನೀವು ಫೋನ್ ಖರೀದಿಸಲು ಬೆಸ್ಟ್ ಆಫರ್ಗಾಗಿ ಎದುರು ನೋಡುತ್ತಿದ್ದರೇ ಅದಕ್ಕಿಗ 'ಅಮೆಜಾನ್' ತಾಣದಲ್ಲಿ ಸುಸಮಯ ಕೂಡಿಬಂದಿದೆ.
ಹೌದು, ಜನಪ್ರಿಯ ಅಮೆಜಾನ್ ತಾಣವು ಇದೀಗ ಮತ್ತೆ 'ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್' ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಮೇಳವು ಇಂದಿನಿಂದ (ಆಗಷ್ಟ್ 27) ಆರಂಭವಾಗಿದ್ದು, ಇದೇ ಅಗಷ್ಟ್ 30ವರೆಗೂ ಚಾಲ್ತಿಯಲ್ಲಿರಲಿದೆ. ಈ ಭರ್ಜರಿ ಸೇಲ್ ಮೇಳದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಮಾರ್ಟ್ಫೋನ್ಗಳ ಮೇಲೆ ಶೇ.40% ರಿಯಾಯಿತಿ ಸೌಲಭ್ಯ ದೊರೆಯಲಿದೆ ಹಾಗೂ ವಿಶೇಷ ಡಿಸ್ಕೌಂಟ್ ಸಹ ಲಭ್ಯ.
ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 500ರೂ. ಇನ್ಸ್ಟಂಟ್ ಡಿಸ್ಕೌಂಟ್ ದೊರೆಯಲಿದ್ದು, ಇದರೊಂದಿಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗ್ರಾಹಕರಿಗೆ ಇಎಮ್ಐ ಟ್ರಾನ್ಸಕ್ಶನ್ ಮೇಲೆ 250ರೂ.ಗಳ ರಿಯಾಯಿತಿ ಸಹ ಲಭ್ಯವಾಗಲಿದೆ. ಉಳಿದಂತೆ ನೋಕಾಸ್ಟ್ ಇಎಮ್ಐ ಮತ್ತು ಎಕ್ಸ್ಚೇಂಜ್ ಡಿಸ್ಕೌಂಟ್ ಪ್ರಯೋಜನಗಳು ಸೇರಿರಲಿವೆ. ಹಾಗಾದರೇ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್ ಮೇಳದಲ್ಲಿ ಬೆಸ್ಟ್ ಆಫರ್ನಲ್ಲಿ ಲಭ್ಯವಿರುವ ಸ್ಮಾರ್ಟ್ಫೋನ್ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಓದಿರಿ : ಟಾಟಾಸ್ಕೈ ಡಿ2ಎಚ್ನಲ್ಲಿ 153ರೂ.ಗಳಿಗೆ 200 ಚಾನೆಲ್ ಲಭ್ಯ!

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ ಎಂ30
ಸ್ಯಾಮ್ಸಂಗ್ 'ಗ್ಯಾಲ್ಯಾಕ್ಸಿ ಎಂ30' ಸ್ಮಾರ್ಟ್ಫೋನ್ 1,000ರೂ ಬೆಲೆ ಇಳಿಕೆ ಪಡೆದಿದ್ದು, ಇದೀಗ 4GB + 64GB ವೇರಿಯಂಟ್ 13,990ರೂ.ಗಳಿಗೆ ದೊರೆಯಲಿದೆ. ಇನ್ನು ಈ ಸ್ಮಾರ್ಟ್ಫೋನ್ 6.4 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದ್ದು, ಜೊತೆಗೆ ತ್ರಿವಳಿ ಕ್ಯಾಮೆರಾವನ್ನು ಪಡೆದಿದೆ, ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ, 5000mAh ಬ್ಯಾಟರಿ ಪವರ್ ಸಾಮರ್ಥ್ಯವನ್ನು ಒಳಗೊಂಡಿದೆ.

ಹಾನರ್ 9N
ಹಾನರ್ 9N ಸ್ಮಾರ್ಟ್ಫೋನ್ನ 4GB/ 64GB ವೇರಿಯಂಟ್ 8,499ರೂ.ಗಳಿಗೆ ದೊರೆಯಲಿದ್ದು, 4GB/ 128GB ವೇರಿಯಂಟ್ 10,999ರೂ.ಗಳಿಗೆ ಲಭ್ಯವಾಗಲಿದೆ. 3,000mAh ಬ್ಯಾಟರಿ ಶಕ್ತಿಯನ್ನು ಪಡೆದಿರುವ ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಹೊಂದಿದೆ. 2280 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.84 ಇಂಚಿನ ಮಲ್ಟಿಟಚ್ ಡಿಸ್ಪ್ಲೇ ಹೊಂದಿದೆ.

ರೆಡ್ಮಿ ಸ್ಮಾರ್ಟ್ಫೋನ್ಗಳಿಗೆ ಆಫರ್
ಶಿಯೋಮಿ ಸಂಸ್ಥೆಯ ರೆಡ್ಮಿ ಆಯ್ದ ಸ್ಮಾರ್ಟ್ಫೋನ್ಗಳಿಗೂ ಅಮೆಜಾನ್ ಮೇಳದಲ್ಲಿ ಬೆಸ್ಟ್ ಆಫರ್ ನೀಡಲಾಗಿದೆ. 3GB+64GB ಸ್ಟೋರೇಜ್ ಸಾಮರ್ಥ್ಯದ ರೆಡ್ಮಿ 6 ಸ್ಮಾರ್ಟ್ಫೋನ್ 7,500ರೂ.ಗಳಿಗೆ ಲಭ್ಯ, 2GB+16GB ವೇರಿಯಂಟ್ನ ರೆಡ್ಮಿ 6A ಫೋನ್ 6,120ರೂ.ಗಳಿಗೆ ಸಿಗಲಿದೆ. ಹಾಗೂ 4GB+64GB ವೇರಿಯಂಟ್ನ ರೆಡ್ಮಿ 6 ಪ್ರೊ 8,999ರೂ.ಗಳ ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ.

ಶಿಯೋಮಿ ಮಿ A2
4GB RAM + 64GB ಸ್ಟೋರೇಜ್ ಸಾಮರ್ಥ್ಯದ ಶಿಯೋಮಿಯ ಮಿ A2 ಸ್ಮಾರ್ಟ್ಫೋನ್ 9,999ರೂ.ಗಳಿಗೆ ಸಿಗಲಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ವೇರಿಯಂಟ್ 12,999ರೂ.ಗಳಿಗೆ ಗ್ರಾಹಕರ ಕೈ ಸೇರಲಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಪಡೆದಿದ್ದು, 5.99 ಇಂಚಿನ ಡಿಸ್ಪ್ಲೇ ಹೊಂದಿದೆ. 3010mAh ಬ್ಯಾಟರಿ ಪವರ್ ಸಾಮರ್ಥ್ಯವನ್ನು ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ ಎಂ20
ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ ಎಂ20 ಸ್ಮಾರ್ಟ್ಫೋನಿನ 3GB RAM + 32GB ಸ್ಟೋರೇಜ್ ವೇರಿಯಂಟ್ 9,990ರೂ.ಗಳ ಪ್ರೈಸ್ಟ್ಯಾಗ್ ಹೊಂದಿದೆ. 4GB RAM + 64GB ಸ್ಟೋರೇಜ್ ಬೆಲೆಯು 11,990ರೂ.ಗಳಾಗಿದೆ. ಈ ಸ್ಮಾರ್ಟ್ಫೋನ್ 6.3 ಇಂಚಿನ ಫುಲ್ ಹೆಚ್ಡಿ ಇನ್ಫಿನಿಟಿ ಡಿಸ್ಪ್ಲೇ ಹೊಂದಿದ್ದು, 5000mAh ಬ್ಯಾಟರಿ ಬ್ಯಾಕ್ಅಪ್ ಬೆಂಬಲವನ್ನು ಪಡೆದಿದೆ. ಫೇಸ್ಅನ್ಲಾಕ್ ಮತ್ತು ಫಿಂಗರ್ಪ್ರಿಂಟ್ ಸೆನ್ಸಾರ್ ಆಯ್ಕೆ ಹೊಂದಿದೆ.
ಓದಿರಿ : ಏರ್ಟೆಲ್ ಕೊಡುಗೆ : ಪ್ರತಿದಿನ ಸಿಗಲಿದೆ ಹೆಚ್ಚುವರಿ ಉಚಿತ ಡೇಟಾ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090