ದೀಪಾವಳಿಗೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ ನಲ್ಲಿ ಹೊಸ ಫೋನ್‌ಗಳಿಗೆ ಬೆಸ್ಟ್‌ ಆಫರ್!

|

ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣಗಳು ಭರ್ಜರಿ ಆಫರ್‌ ಮೂಲಕ ಗ್ರಾಹಕರನ್ನು ಸೆಳೆದಿವೆ. ಸದ್ಯ ದೀಪಾವಳಿ ಹಬ್ಬದ ಪ್ರಯುಕ್ತ ಈ ಎರಡು ಇ ಕಾಮರ್ಸ್‌ ದೈತ್ಯ ತಾಣಗಳು ಆಯ್ದ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌ ಘೋಷಿಸಿವೆ. ಇದರೊಂದಿಗೆ ಇನ್ನಷ್ಟು ರಿಯಾಯಿತಿಗಳು ಸಹ ಲಭ್ಯವಾಗಲಿವೆ.

ಅಮೆಜಾನ್‌

ಹೌದು, ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ತಾಣಗಳು ದೀಪಾವಳಿ 2020 ವಿಶೇಷ ಮಾರಾಟವನ್ನು ಶುರು ಮಾಡಿದ್ದು, ಇದೇ ನವೆಂಬರ್ 13ರ ವರೆಗೂ ಚಾಲ್ತಿ ಇರಲಿದೆ. ಈ ವೇಳೆ ಆಪಲ್‌, ಸ್ಯಾಮ್‌ಸಂಗ್, ಪೊಕೊ, ಒನ್‌ಪ್ಲಸ್‌, ರೆಡ್ಮಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಿವೆ. ಹಾಗಾದರೇ ದೀವಾವಳಿ ಹಬ್ಬದ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಆಪಲ್ ಐಫೋನ್ XR

ಆಪಲ್ ಐಫೋನ್ XR

ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ 2020 ಮಾರಾಟದ ಸಮಯದಲ್ಲಿ ಐಫೋನ್ XR ರಿಯಾಯಿತಿ ದರದಲ್ಲಿ ಮರಳಿದೆ. 64 ಜಿಬಿ ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 38,999ರೂ.ಗಳಿಗೆ ಲಭ್ಯವಾಗಲಿದೆ. ಎಕ್ಸ್‌ಚೇಂಜ್‌ ರಿಯಾಯಿತಿಯು 14,100ರೂ. ವರೆಗೂ ಸಿಗಲಿದೆ. ಆಯ್ದ ಬ್ಯಾಂಕ್‌ಗಳಿಂದ ಶೇ.10 ಇನ್‌ಸ್ಟಂಟ್ ರಿಯಾಯಿತಿ ಲಭ್ಯ.

ಐಫೋನ್ SE

ಐಫೋನ್ SE

ಈ ಹಬ್ಬದ ಸೇಲ್‌ನಲ್ಲಿ ಆಪಲ್‌ನ ಐಫೋನ್ SE ಫೋನ್‌ಗೂ ರಿಯಾಯಿತಿ ಲಭ್ಯವಿದೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 64GBಯ ಐಫೋನ್ SE ಫೋನ್ 32,999ರೂ.ಗೆ ದೊರೆಯಲಿದೆ. (ಎಂಆರ್‌ಪಿ ರೂ. 39,900). ಹಾಗೆಯೇ ಗ್ರಾಹಕರಿಗೆ 14,100ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆಯು ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್‌

ಫ್ಲಿಪ್‌ಕಾರ್ಟ್‌ ದೀಪಾವಳಿ ಹಬ್ಬದ ವಿಶೇಷ ಮಾರಾಟದ ಅವಧಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 ಪ್ಲಸ್‌ 54,999ರೂ.ಗಳಿಗೆ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಗ್ರಾಹಕರಿಗೆ 14,100ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆಯು ಸಹ ಲಭ್ಯವಾಗಲಿದೆ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ಜನಪ್ರಿಯ ಐಫೋನ್ 11 ಪ್ರೊ ಸಹ ಬಿಗ್ ಡಿಸ್ಕೌಂಟ್‌ ಪಡೆದಿದ್ದು, ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ 2020 ಮಾರಾಟದ ವೇಳೆ 79,999ರೂ.ಗಳಿಗೆ ಲಭ್ಯವಿದೆ. ಹಾಗೆಯೇ ಈ ಫೋನಿಗೂ ಸಹ 14,100ರೂ.ಗಳ ವರೆಗೂ ಎಕ್ಸ್‌ಚೇಂಜ್ ಕೊಡುಗೆಯು ಸಿಗಲಿದೆ.

ಒನ್‌ಪ್ಲಸ್ 8

ಒನ್‌ಪ್ಲಸ್ 8

ಜನಪ್ರಿಯ ಅಮೆಜಾನ್ ತಾಣದಲ್ಲಿ ಹಬ್ಬದ ಅಂಗವಾಗಿ ಒನ್‌ಪ್ಲಸ್ 8 ಆಕರ್ಷಕ ರಿಯಾಯಿತಿ ಪಡೆದಿದೆ. 6GB ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ದರವು 39,999ರೂ. ಆಗಿದೆ. ಇನ್ನು ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೇ ಶೇಕಡಾ 10 ರಷ್ಟು ಹೆಚ್ಚುವರಿ ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದು. ಅಮೆಜಾನ್ 16,400ರೂ. ವರೆಗೂ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ.

ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ

ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ವೇಳೆ ಈ ಫೋನ್ ಬೇಸ್‌ ವೇರಿಯಂಟ್‌ 12,999ರೂ.ಗಳಿಗೆ ಸಿಗಲಿದೆ. ಇನ್ನು ಈ ಫೋನ್ 6.67-ಇಂಚಿನ ಪೂರ್ಣ-ಹೆಚ್‌ಡಿ + ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್‌ 720 ಪ್ರೊಸೆಸರ್‌ ಪಡೆದಿದೆ.

Most Read Articles
Best Mobiles in India

English summary
Flipkart, Amazon Diwali 2020 special sales are open till November 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X