ಅಮೆಜಾನ್ ಫ್ರೀಡಂ ಸೇಲ್‌: ರಿಯಾಯಿತಿ ದರದಲ್ಲಿ ಲಭ್ಯವಾಗುವ ಬ್ಲಾಕ್‌ಬಸ್ಟರ್ ಡೀಲ್‌ಗಳು!

|

ಇ-ಕಾಮರ್ಸ್ ದೈತ್ಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ಆಯೋಜಿಸಿರುವ ಅಮೆಜಾನ್ ಫ್ರೀಡಂ ಸೇಲ್‌ ಇಂದು ಕೊನೆಗೊಳ್ಳುತ್ತಿದೆ. ಕಳೆದ ನಾಲ್ಕು ದಿನಗಳಿಂದ ತನ್ನ ಗ್ರಾಹಕರಿಗೆ ಆಭರಿ ರಿಯಾಯಿತಿ ದರದಲ್ಲಿ ಖರೀದಿಸಲು ಅವಕಾಶ ನೀಡಿರುವ ಅಮೆಜಾನ್‌ ಕೊನೆಯ ದಿನವಾದ ಇಂದು ಸಹ ಹಲವು ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಈಗಾಗಲೇ ನಾಲ್ಕು ದಿನಗಳ ಮಾರಾಟದ ಸಮಯದಲ್ಲಿ, ಅಮೆಜಾನ್ ಸ್ಮಾರ್ಟ್‌ಫೋನ್‌ಗಳು, ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು, ಪರಿಕರಗಳು ಮತ್ತು ಹೆಚ್ಚಿನ ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಫ್ರೀಡಂ ಸೇಲ್‌ನ ಕೊನೆಯ ದಿನವಾದ ಇಂದು ಹಲವು ಪ್ರಾಡಕ್ಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಆನ್‌ಲೈನ್ ಸೇಲ್‌ ಇಂದು ಮುಕ್ತಾಯಗೊಳ್ಳುತ್ತಿರುವುದರಿಂದ ಸಾಕಷ್ಟು ವೈವಿಧ್ಯಮಯ ಪ್ರಾಡಕ್ಟ್‌ಗಳ ಮೇಲೂ ರಿಯಾಯಿತಿ ನೀಡಲಾಗ್ತಿದೆ. ಸದ್ಯ ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ‘ಬ್ಲಾಕ್‌ಬಸ್ಟರ್ ಡೀಲ್‌ಗಳು' ಅಡಿಯಲ್ಲಿ ಪಟ್ಟಿ ಮಾಡಲಾದ ಹಲವು ಉತ್ತನ್ನಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಅಮೆಜಾನ್ ಫ್ರೀಡಮ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ base ಮಾಡೆಲ್‌ 6GB RAM + 64GB ಸಂಗ್ರಹ ಸಾಮರ್ಥ್ಯದ ಮಾದರಿ ಕೇವಲ 16,498 ರೂಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 64 ಮೆಗಾಪಿಕ್ಸೆಲ್ ಕ್ವಾಡ್-ಕ್ಯಾಮೆರಾ ಮತ್ತು 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಪ್ರಿಂಟರ್‌

ಪ್ರಿಂಟರ್‌

ನಿವು ಹೊಸ ಮಾದರಿಯ ಪ್ರಿಂಟರ್‌ಗಳನ್ನ ಸರ್ಚ್‌ ಮಾಡುತ್ತಿದ್ದರೆ, ಅದರಲ್ಲೂ ಆಕರ್ಷಕ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳುವ ಉದ್ದೇಶ ಹೊಂದಿದ್ದರೆ ಅಮೆಜಾನ್‌ ಫ್ರೀಡಂ ಸೇಲ್‌ಗೆ ಬೇಟಿ ನೀಡುವುದು ಒಳ್ಳೆಯದು. ಏಕೆಂದರೆ ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಪ್ರಿಂಟರ್‌ಗಳ ಮೇಲೆ 50% ವರೆಗೆ ರಿಯಾಯಿತಿ ದೊರೆಯುತ್ತಿದೆ. ಅದರಲ್ಲೂ ಎಚ್‌ಪಿ ಲೇಸರ್‌ಜೆಟ್‌ M1005 ಮಲ್ಟಿಫಂಕ್ಷನ್ ಲೇಸರ್ ಪ್ರಿಂಟರ್ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ, 17,999 ರೂ ಗಳಿಗೆ ಲಭ್ಯವಿದೆ. ಅಲ್ಲದೆ ನೀವು HP 1020 ಪ್ಲಸ್ ಸಿಂಗಲ್ ಫಂಕ್ಷನ್ ಲೇಸರ್ ಪ್ರಿಂಟರ್ ಅನ್ನು, 12,349 ರೂ ಗಳಿಗೆ ಪಡೆದುಕೊಳ್ಳಬಹುದಾಗಿದೆ.

ಕ್ಯಾಮೆರಾಗಳು

ಕ್ಯಾಮೆರಾಗಳು

ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಕ್ಯಾನನ್ ಕ್ಯಾಮೆರಾಗಳಲ್ಲಿ ಬಾರಿ ರಿಯಾಯಿತಿಯನ್ನು ಸಹ ಹೊಂದಿದೆ. ಸದ್ಯ ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ Canon EOS 1500D 24.1 Digital SLR Camera with EF S18-55 ರೊಂದಿಗಿನ ಕ್ಯಾನನ್ ಕ್ಯಾಮೆರಾ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. 16GB ಕಾರ್ಡ್ ಮತ್ತು ಕ್ಯಾರಿ ಕೇಸ್, 28,490 ರೂಗಳಿಗೆ ಲಭ್ಯವಿದೆ. ನೀವು ಕ್ಯಾನನ್ EOS90D ಡಿಜಿಟಲ್ SLR ಕ್ಯಾಮೆರಾವನ್ನು 18-135 ರೊಂದಿಗೆ USM ಲೆನ್ಸ್ 16GB ಕಾರ್ಡ್‌ ಹೊಂದಿರುವ ಕ್ಯಾಮೆರಾ 1,13,990ರೂ.ಗಳಿಗೆ ಪಡೆಯಬಹುದಾಗಿದೆ.

ಅಮೆಜಾನ್ ಎಕೋ ಡಾಟ್

ಅಮೆಜಾನ್ ಎಕೋ ಡಾಟ್

ಅಮೆಜಾನ್‌ನ ಫ್ರೀಡಂ ಸೇಲ್‌ನಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಮತ್ತೊಂದು ಪ್ರಾಡಕ್ಟ್‌ ಅಂದರೆ ಅದು ಸ್ಮಾರ್ಟ್ ಸ್ಪೀಕರ್. ಸದ್ಯ ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ 55% ರಿಯಾಯಿತಿ ದರದಲ್ಲಿ ಸ್ಪೀಕರ್‌ಗಳು ಲಭ್ಯವಿವೆ. ಅದರಲ್ಲೂ ಅಮೆಜಾನ್‌ ಎಕೋ ಡಾಟ್‌ ವಿಪ್ರೋ 9 ಡಬ್ಲ್ಯೂ ಎಲ್ಇಡಿ ಸ್ಮಾರ್ಟ್ ಕಲರ್ ಬಲ್ಬ್‌ನೊಂಡಿಗೆ ಲಬ್ಯವಾಗಲಿದ್ದು, ಇದರಬಂಡಲ್ ಅನ್ನು 2,698 ರೂಗಳ ರಿಯಾಯಿತಿ ದರದಲ್ಲಿ ಪಟ್ಟಿ ಮಾಡಲಾಗಿದೆ.

Most Read Articles
Best Mobiles in India

English summary
Planning to buy a new camera, printer or phone? Here are some of the top blockbuster deals on Amazon Freedom Sale.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X