ಡಿಸ್ಕೌಂಟ್‌ನಲ್ಲಿ CCTV ಕ್ಯಾಮೆರಾ ಖರೀದಿಸಲು ಅಮೆಜಾನ್‌ನಲ್ಲಿ ಈಗ ಬೆಸ್ಟ್‌ ಆಫರ್!

|

ಪ್ರಸ್ತುತ ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್‌ಗಳಂತೆ ಪ್ರತಿ ಅಂಗಡಿ ಹಾಗೂ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಗತ್ಯ ಎನ್ನುವಂತಾಗಿದೆ. ಸುರಕ್ಷತೆಯ ದೃಷ್ಠಿಯಿಂದ ಅನೇಕರು ತಮ್ಮ ಅಂಗಡಿಗಳಿಗೆ, ಗೋಡಾನ್‌ಗಳಿಗೆ ಹಾಗೂ ಮನೆಗಳಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡುತ್ತಿದ್ದಾರೆ. ಆದರೆ ಮನೆಗಳಿಗೆ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ದುಬಾರಿ ಸಿಸಿಟಿವಿ ಕ್ಯಾಮೆರಾ ಹಾಕಿಸಲು ಮುಂದಾಗುವುದು ಕಡಿಮೆ. ನೀವೇನಾದರೂ ಡಿಸ್ಕೌಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಹುಡುಕುತ್ತಿದ್ದರೇ ಅದಕ್ಕೆ ಈಗ ಅಮೆಜಾನ್ ಇ-ಕಾಮರ್ಸ್ ತಾಣ ಸೂಕ್ತ ಆಯ್ಕೆ ಆಗಿದೆ.

ಅಮೆಜಾನ್

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಇದೀಗ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಿದೆ. ಐದು ದಿನಗಳ ಈ ವಿಶೇಷ ಇಂದಿನಿಂದ ಪ್ರಾರಂಭವಾಗಿದ್ದು, ಇದೇ ಆಗಷ್ಟ್ 9ರ ವರೆಗೂ ಇರಲಿದೆ. ಅಮೆಜಾನಿನ ಈ ಸೇಲ್‌ನಲ್ಲಿ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಹಾಗೂ ಕೆಲವು ಆಕ್ಸಸರಿಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಕೊಡುಗೆಗಳನ್ನು ಘೋಷಿಸಿದೆ. ಹಾಗೆಯೇ ಸಿಸಿಟಿವಿ ಕ್ಯಾಮೆರಾಗಳಿಗೂ ಈ ಸೇಲ್‌ನಲ್ಲಿ ಹೆಚ್ಚಿನ ರಿಯಾಯಿತಿ ನೀಡಲಾಗಿದೆ. ಹಾಗಾದರೇ ಅಮೆಜಾನ್‌ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಕೆಲವು ಸಿಸಿಟಿವಿ ಕ್ಯಾಮೆರಾಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕಾನ್ಬ್ರೆ ಮಲ್ಟಿಪಲ್ XR2 ಪ್ರೊ (Conbre MultipleXR2 Pro)

ಕಾನ್ಬ್ರೆ ಮಲ್ಟಿಪಲ್ XR2 ಪ್ರೊ (Conbre MultipleXR2 Pro)

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಕಾನ್ಬ್ರೆ ಮಲ್ಟಿಪಲ್ XR2 ಪ್ರೊ ಸಿಸಿಟಿವಿ ಕ್ಯಾಮೆರಾ ಆಕರ್ಷಕ ದರದಲ್ಲಿ ಲಭ್ಯವಾಗಲಿದೆ. ಈ ಸಿಸಿಟಿವಿ ಕ್ಯಾಮೆರಾವು ಹೆಚ್‌ಡಿ ಸ್ಮಾರ್ಟ್ ವೈಫೈ ವೈರ್‌ಲೆಸ್ IP ಕ್ಯಾಮೆರಾ ಆಗಿದೆ. ಇದು 2-ವೇ ಆಡಿಯೋ ಸಪೋರ್ಟ್‌ ಪಡೆದಿದೆ. ಹಾಗೆಯೇ 64 GB ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಬೆಂಬಲಿಸುತ್ತದೆ. ಅಮೆಜಾನ್‌ನ ಸೇಲ್‌ನಲ್ಲಿ ಈ ಸಿಸಿಟಿವಿ ಕ್ಯಾಮೆರಾ ಬೆಲೆಯು 1,329ರೂ. ಆಗಿದೆ.

ರಿಯಲ್‌ಮಿ 360 ವೈ-ಫೈ ಸೆಕ್ಯುರಿಟಿ ಕ್ಯಾಮೆರಾ

ರಿಯಲ್‌ಮಿ 360 ವೈ-ಫೈ ಸೆಕ್ಯುರಿಟಿ ಕ್ಯಾಮೆರಾ

ರಿಯಲ್‌ಮಿ ಕಂಪನಿಯ ರಿಯಲ್ 360 ವೈ-ಫೈ ಸೆಕ್ಯುರಿಟಿ ಕ್ಯಾಮೆರಾ ಸದ್ಯ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಈ ಕ್ಯಾಮೆರಾ 3,999ರೂ. ಎಮ್‌ಆರ್‌ಪಿ ಹೊಂದಿದ್ದು, ಇದೀಗ ಆಫರ್‌ನಲ್ಲಿ 2,599ರೂ.ಗಳಿಗೆ ಲಭ್ಯ ಇದೆ. ಟು-ವೇ ಆಡಿಯೋ ಸಪೋರ್ಟ್‌ ಪಡೆದಿದೆ. ಇದರೊಂದಿಗೆ ಅಲೆಕ್ಸ್‌ ವಾಯಿಸ್‌ ಅಸಿಸ್ಟಂಟ್ ಬೆಂಬಲವನ್ನು ಪಡೆದಿದೆ. ಮೋಷನ್ ಟ್ರ್ಯಾಕಿಂಗ್ ಸೌಲಭ್ಯ ಹೊಂದಿದ್ದು, ಫುಲ್ ಹೆಚ್‌ಡಿ ಗುಣಮಟ್ಟ ಹೊಂದಿದೆ.

ಮಿ ವೈ-ಫೈ ಸಿಸಿಟಿವಿ ಕ್ಯಾಮೆರಾ

ಮಿ ವೈ-ಫೈ ಸಿಸಿಟಿವಿ ಕ್ಯಾಮೆರಾ

ಶಿಯೋಮಿಯ ಕಂಪನಿಯ ಮಿ ವೈ-ಫೈ 1080p ಫುಲ್ HD 360 ಸಿಸಿಟಿವಿ ಕ್ಯಾಮೆರಾ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಬಿಗ್ ರಿಯಾಯಿತಿ ಪಡೆದಿದೆ. ಈ ಕ್ಯಾಮೆರಾ 3,999ರೂ. ಎಮ್‌ಆರ್‌ಪಿ ಹೊಂದಿದ್ದು, ಇದೀಗ ಆಫರ್‌ನಲ್ಲಿ 2,799ರೂ.ಗಳಿಗೆ ಲಭ್ಯ ಇದೆ. ಇದು 64GB ಎಸ್‌ಡಿ ಕಾರ್ಡ್‌ ಸಪೋರ್ಟ್‌ ಹೊಂದಿದ್ದು, ಟಾಕ್‌ಬ್ಯಾಕ್‌ ಫೀಚರ್ ಸಹ ಪಡೆದಿದೆ.

CP ಪ್ಲಸ್‌ ಹೋಮ್ ಸೆಕ್ಯುರಿಟಿ ಕ್ಯಾಮೆರಾ

CP ಪ್ಲಸ್‌ ಹೋಮ್ ಸೆಕ್ಯುರಿಟಿ ಕ್ಯಾಮೆರಾ

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ CP ಪ್ಲಸ್‌ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಆಕರ್ಷಕ ರಿಯಾಯಿತಿ ಪಡೆದಿದೆ. ಈ ಕ್ಯಾಮೆರಾವು 1080 ಫುಲ್ ಹೆಚ್‌ಡಿ, ವೈರ್‌ಲೆಸ್ / ವೈಫೈ, 360 ಡಿಗ್ರಿ ವೀಕ್ಷಣೆ, ಮೋಷನ್ ಡಿಟೆಕ್ಷನ್, ಟೂ ವೇ ಕಮ್ಯುನಿಕೇಶನ್, ಸುಪೀರಿಯರ್ ನೈಟ್ ವಿಷನ್, ಪ್ಯಾನ್-ಟಿಲ್ಟ್ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್ ಸ್ಲಾಟ್‌ ಆಯ್ಕೆಗೂ ಅವಕಾಶ ಇದೆ. ಇದರ ಎಮ್‌ಆರ್‌ಪಿ 3,990ರೂ. ಆಗಿದ್ದು, ಡಿಸ್ಕೌಂಟ್‌ನಲ್ಲಿ 1,990ರೂ.ಗಳಿಗೆ ಲಭ್ಯವಿದೆ.

Most Read Articles
Best Mobiles in India

English summary
Amazon Great Freedom Festival 2021: Amazing Discounts On These CCTV cameras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X