ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಾಳೆಯಿಂದ ಶುರು; ಆಫರ್ ಏನು?

|

ಇ-ಕಾಮರ್ಸ್‌ ದೈತ್ಯ ಹಾಗೂ ಶಾಪಿಂಗ್ ಪ್ರಿಯರ ಪ್ರಮುಖ ಆನ್‌ಲೈನ ತಾಣ ಅಮೆಜಾನ್ ಇತ್ತೀಚಿಗಷ್ಟೆ ಅಮೆಜಾನ್ ಪ್ರೈಮ್‌ ಡೇ ಸೇಲ್‌ ಅನ್ನು ಮುಕ್ತಾಯ ಮಾಡಿದೆ. ಅದರ ಬೆನ್ನಲ್ಲೇ ಈಗ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಿದೆ. ಈ ನಾಳೆಯಿಂದ (ಆಗಷ್ಟ್ 5ರಿಂದ) ಶುರುವಾಗಲಿದ್ದು, ಆಗಷ್ಟ್ 9ರ ವರೆಗೂ ನಡೆಯಲಿದೆ. ಈ ಸೇಲ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ವಾಚ್ ಸೇರಿದಂತೆ ಹಲವು ಗ್ಯಾಡ್ಜೆಟ್ಸ್‌ಗಳಿಗೂ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತಾಣದಲ್ಲಿ ನಾಳೆಯಿಂದ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಪ್ರಾರಂಭವಾಗಲಿದೆ. ಡಿಸ್ಕೌಂಟ್‌ನಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದೊಂದು ಬೊಂಬಾಟ್ ಅವಕಾಶ ಎನಿಸಲಿದೆ. ಈ ಸೇಲ್‌ನಲ್ಲಿ ಮುಖ್ಯವಾಗಿ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್‌ನ ಸ್ಮಾರ್ಟ್‌ಫೋನ್‌ಗಳಿಗೂ ವಿಶೆಷ ರಿಯಾಯಿತಿ ಲಭ್ಯವಾಗಲಿದೆ. ಅಲ್ಲದೇ ಸ್ಮಾರ್ಟ್‌ ವಾಚ್, ಸ್ಮಾರ್ಟ್‌ ಟಿವಿ, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಗ್ಯಾಡ್ಜೆಟ್ಸ್‌ಗಳ ಖರೀದಿಗೂ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಹೆಚ್ಚು ಆಕರ್ಷಕ ಎನಿಸಲಿದೆ. ಹಾಗಾದರೇ ಅಮೆಜಾನ್ ಈ ಸೇಲ್ ನಲ್ಲಿ ಆಫರ್‌ನಲ್ಲಿ ಲಭ್ಯವಾಗುವ ಬೆಸ್ಟ್ ಕ್ಯಾಮೆರಾ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M32

ಸ್ಯಾಮ್‌ಸಂಗ್ ಗ್ಯಾಲಕ್ಸಿ M32

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ M32 ಫೋನ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಫೋನ್ 6GB RAM ಮತ್ತು 128GB ಸ್ಟೋರೇಜ್‌ನ ವೇರಿಯಂಟ್‌ ಬೆಲೆಯು 16,999ರೂ. ಆಗಿದೆ. ಇನ್ನು ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ಒನ್‌ಪ್ಲಸ್‌ ನಾರ್ಡ್‌ CE 5G

ಒನ್‌ಪ್ಲಸ್‌ ನಾರ್ಡ್‌ CE 5G

ಇತ್ತೀಚಿಗಷ್ಟೆ ಲಾಂಚ್ ಆಗಿರುವ ಒನ್‌ಪ್ಲಸ್‌ ನಾರ್ಡ್‌ CE 5G ಫೋನ್ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಈ ಫೋನ್ ಬಿಲ್ಟ್‌ ಇನ್ ಅಲೆಕ್ಸಾ ಸೌಲಭ್ಯ ಪಡೆದಿದೆ. ಈ ಫೋನ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಪಡೆದಿದ್ದು, 90Hz ರೀಫ್ರೇಶ್ ರೇಟ್ ಅನ್ನು ಪಡೆದಿದೆ.

ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್

ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಶಿಯೋಮಿ ಕಂಪನಿಯ ಇತ್ತೀಚಿಗಿನ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ವಿಶೇಷ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಪಡೆದಿದ್ದು, 120Hz ರೀಫ್ರೇಶ್ ರೇಟ್ ಅನ್ನು ಪಡೆದಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 732 ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಜೊತೆಗೆ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ನಿಂದ ಗಮನ ಸೆಳೆದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಫೋನ್ ಸಹ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಫೋನ್ 7000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇನ್ನು ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ಆಪಲ್ ಐಫೋನ್ 11

ಆಪಲ್ ಐಫೋನ್ 11

ಆಕರ್ಷಕ ಫೀಚರ್ಸ್‌ಗಳ ಆಪಲ್ ಐಫೋನ್ 11 ಸಹ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ. ಈ ಫೋನ್ A13 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 6.1 ಇಂಚಿನ ರೆಟಿನಾ ಎಲ್‌ಸಿಡಿ ಡಿಸ್‌ಪ್ಲೇ ಇದೆ.

Most Read Articles
Best Mobiles in India

English summary
Amazon Great Freedom Festival 2021: Great Deal On These Best Camera Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X