ಸ್ಮಾರ್ಟ್‌ವಾಚ್‌ ಇಲ್ಲವೇ ಸ್ಮಾರ್ಟ್‌ಬ್ಯಾಂಡ್‌ ಖರೀದಿಸುವ ಪ್ಲ್ಯಾನ್‌ ಇದ್ರೆ, ಈ ಚಾನ್ಸ್‌ ಕಳ್ಕೋಬೇಡಿ!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್ ಏನಾದರೊಂದು ಭಾರೀ ಸೇಲ್‌ಗಳನ್ನು ಆಯೋಜಿಸುವ ಮೂಲಕ ಶಾಪಿಂಗ್ ಪ್ರಿಯರನ್ನು ಸೆಳೆಯುತ್ತದೆ. ಅದೇ ರೀತಿ ಇದೀಗ ಆನ್‌ಲೈನ್ ತಾಣದಲ್ಲಿ 'ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022' ಚಾಲ್ತಿ ಇದೆ. ಐದು ದಿನಗಳ ಈ ವಿಶೇಷ ಸೇಲ್‌ ಇದೇ ಆ. 6 ರಿಂದ ಪ್ರಾರಂಭವಾಗಿದ್ದು, ಇದೇ ಆಗಷ್ಟ್ 10 ರ ವರೆಗೂ ನಡೆಯಲಿದೆ. ಈ ಸೇಲ್‌ನಲ್ಲಿ ಫೋನ್‌ಗಳ ಜೊತೆಗೆ ಸ್ಮಾರ್ಟ್‌ವಾಚ್‌ ಹಾಗೂ ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.

ಅಮೆಜಾನಿನ

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ ದರದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ ಎನ್ನುವ ಗ್ರಾಹಕರಿಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಉತ್ತಮ ಎನಿಸಲಿದೆ. ಅಮೆಜಾನಿನ ಈ ಮಾರಾಟ ಮೇಳದಲ್ಲಿ ಕೆಲವು ಆಯ್ದ ಸ್ಮಾರ್ಟ್ ಫೋನ್ ಮತ್ತು ಇತರೆ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಲಭ್ಯ ಮಾಡಿದೆ. ಹಾಗೆಯೇ ಈ ಸೇಲ್‌ ಆಯ್ದ ಸ್ಮಾರ್ಟ್‌ವಾಚ್‌ ಹಾಗೂ ಸ್ಮಾರ್ಟ್‌ಬ್ಯಾಂಡ್‌ ಡಿವೈಸ್‌ಗಳು ಹೆಚ್ಚಿನ ರಿಯಾಯಿತಿ ಪಡೆದಿದ್ದು, ಬ್ಯಾಂಕ್ ಕೊಡುಗೆಗಳು ಕೂಡ ಇವೆ.

ಬೆಲೆಯಲ್ಲಿ

ಮುಖ್ಯವಾಗಿ ನಾಯಿಸ್‌, ಬೋಟ್, ಅಮೆಜಿಫಿಟ್‌, ಫೈರ್‌ಬೋಲ್ಟ್‌, ರೆಡ್ಮಿ, ಮಿ, ಒನ್‌ಪ್ಲಸ್‌ ಸಂಸ್ಥೆಗಳ ಕೆಲವು ಆಯ್ದ ಸ್ಮಾರ್ಟ್‌ವಾಚ್‌ ಹಾಗೂ ಸ್ಮಾರ್ಟ್‌ಬ್ಯಾಂಡ್‌ ಸಾಧನಗಳು ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಸ್ಮಾರ್ಟ್‌ವಾಚ್‌ ಹಾಗೂ ಸ್ಮಾರ್ಟ್‌ಬ್ಯಾಂಡ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ನಾಯಿಸ್‌ ಕಲರ್‌ಫಿಟ್‌ ಪಲ್ಸ್‌ Spo2 ಸ್ಮಾರ್ಟ್‌ವಾಚ್‌

ನಾಯಿಸ್‌ ಕಲರ್‌ಫಿಟ್‌ ಪಲ್ಸ್‌ Spo2 ಸ್ಮಾರ್ಟ್‌ವಾಚ್‌

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಸೇಲ್‌ನಲ್ಲಿ ನಾಯಿಸ್‌ ಕಲರ್‌ಫಿಟ್‌ ಪಲ್ಸ್‌ Spo2 ಸ್ಮಾರ್ಟ್‌ವಾಚ್‌ ಆಕರ್ಷಕ ರಿಯಾಯಿತಿ ಪಡೆದಿದ್ದು, 1,298 ರೂ. ಗಳಿಗೆ ಖರೀದಿಗೆ ಲಭ್ಯವಿದೆ. ಇನ್ನು ಈ ಸಾಧನವು 1.4 ಇಂಚಿನ ಪೂರ್ಣ-ಟಚ್ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು 60 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳನ್ನು ಪಡೆಯುತ್ತದೆ. ಹಾಗೆಯೇ ಇದು ಒಂದು ಪೂರ್ಣ ಚಾರ್ಜ್‌ನಲ್ಲಿ 10 ದಿನಗಳವರೆಗೆ ಬ್ಯಾಕ್‌ಅಪ್‌ ಹೊಂದಿರುತ್ತದೆ. ಇದು ನಿಮ್ಮ ಫಿಟ್ನೆಸ್ ಮತ್ತು ವ್ಯಾಯಾಮದ ಅಗತ್ಯಗಳಿಗೆ ಸರಿಹೊಂದುವಂತೆ 8 ಕ್ರೀಡಾ ವಿಧಾನಗಳನ್ನು ಸಹ ಪಡೆಯುತ್ತದೆ. ಆರೋಗ್ಯ ವೈಶಿಷ್ಟ್ಯಗಳು Spo2 ಮಟ್ಟಗಳ ಮಾನಿಟರ್, ನೈಜ-ಸಮಯದ ಹೃದಯ ಬಡಿತ ಮಾನಿಟರ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಅಮಾಜ್‌ಫಿಟ್ ಬಿಪ್ 3 ಸ್ಮಾರ್ಟ್‌ವಾಚ್

ಅಮಾಜ್‌ಫಿಟ್ ಬಿಪ್ 3 ಸ್ಮಾರ್ಟ್‌ವಾಚ್

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಸೇಲ್‌ನಲ್ಲಿ ಅಮಾಜ್‌ಫಿಟ್ ಬಿಪ್ 3 ಸ್ಮಾರ್ಟ್‌ವಾಚ್ ಅತ್ಯುತ್ತಮ ರಿಯಾಯಿತಿ ಪಡೆದಿದ್ದು, 2,998ರೂ. ಗಳಿಗೆ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ವಾಚ್‌ 1.69 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಗಡಿಯಾರವು ಬರುವ ಬಣ್ಣದ ಆಯ್ಕೆಗಳೊಂದಿಗೆ ಸುಂದರವಾಗಿ ಕಾಣುತ್ತದೆ. ಒಂದೇ ಪೂರ್ಣ ಚಾರ್ಜ್‌ನಲ್ಲಿ ನೀವು ಎರಡು ವಾರಗಳವರೆಗೆ ಬ್ಯಾಟರಿ ಬಾಳಿಕೆಯನ್ನು ಪಡೆಯುತ್ತೀರಿ. ಲೈವ್ ಕ್ರಿಕೆಟ್ ಡೇಟಾ ಮಾನಿಟರಿಂಗ್‌ನೊಂದಿಗೆ ಸ್ಮಾರ್ಟ್‌ವಾಚ್ ಬರುತ್ತದೆ. ನೀವು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಸಹ ಪಡೆಯುತ್ತೀರಿ. ಹಾಗೆಯೇ ಈ ವಾಚ್‌ ಸ್ಮಾರ್ಟ್ ವಾಚ್ 5ATM ನೀರಿನ ಪ್ರತಿರೋಧವನ್ನು ಸಹ ಹೊಂದಿದೆ. ಒತ್ತಡದ ಮೇಲ್ವಿಚಾರಣೆ, ಹೃದಯ ಬಡಿತದ ಮಾನಿಟರಿಂಗ್ ನಂತಹ ಆಯ್ಕೆಗಳನ್ನು ಒಳಗೊಂಡಿದೆ.

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್ ಜೊತೆಗೆ ಅಲೆಕ್ಸಾ ಬಿಲ್ಟ್-ಇನ್

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್ ಜೊತೆಗೆ ಅಲೆಕ್ಸಾ ಬಿಲ್ಟ್-ಇನ್

ಬೋಟ್ ಎಕ್ಸ್ಟೆಂಡ್ ಸ್ಮಾರ್ಟ್ ವಾಚ್ ಜೊತೆಗೆ ಅಲೆಕ್ಸಾ ಬಿಲ್ಟ್-ಇನ್ ಸಾಧನವು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಸೇಲ್‌ನಲ್ಲಿ 1,998 ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇನ್ನು ಈ ವಾಚ್‌ 1.69 ಇಂಚಿನ LCD ಡಿಸ್‌ಪ್ಲೇ ಜೊತೆಗೆ ಅಮೆಜಾನ್ ಅಲೆಕ್ಸಾದೊಂದಿಗೆ ಬರುತ್ತದೆ ಮತ್ತು ನಿಮ್ಮ ವಾಯಿಸ್‌ನೊಂದಿಗೆ ಸ್ಮಾರ್ಟ್ ವಾಚ್ ಅನ್ನು ನಿಯಂತ್ರಿಸಲು ನಿಮಗೆ ಅವಕಾಶ ನೀಡುತ್ತದೆ. ಇದು 14 ಕ್ರೀಡಾ ವಿಧಾನಗಳನ್ನು ಸಹ ಒಳಗೊಂಡಿದ್ದು, 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿಗೆ ಪ್ರವೇಶವನ್ನು ಹೊಂದಿದೆ. ಆರೋಗ್ಯದ ಆಯ್ಕೆಗಳಲ್ಲಿ 24/7 ಹೃದಯ ಬಡಿತ ಮಾನಿಟರ್, SpO2 ಟ್ರ್ಯಾಕರ್, ಮೇಡಿಟೆಷನ್‌ ಮೋಡ್ ಮತ್ತು ನಿಮ್ಮ ನಿದ್ರೆಯ ಮಾದರಿಗಳ ಮೇಲೆ ಟ್ಯಾಬ್ ಇರಿಸಿಕೊಳ್ಳಲು ಸ್ಲೀಪ್ ಟ್ರ್ಯಾಕರ್ ಸೇರಿವೆ.

ಫೈರ್-ಬೋಲ್ಟ್ ಫೀನಿಕ್ಸ್ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್

ಫೈರ್-ಬೋಲ್ಟ್ ಫೀನಿಕ್ಸ್ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್‌ವಾಚ್

ಈ ಸ್ಮಾರ್ಟ್‌ವಾಚ್‌ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಸೇಲ್‌ನಲ್ಲಿ 1,899ರೂ. ಗಳ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಸ್ಮಾರ್ಟ್ ವಾಚ್ 1.3 ಇಂಚಿನ ಪೂರ್ಣ-ಟಚ್ ಡಿಸ್ಪ್ಲೇಯನ್ನು ಹೊಂದಿದೆ ಆದ್ದರಿಂದ ನೀವು ಅದನ್ನು ಸುಲಭವಾಗಿ ನ್ಯಾವಿಗೇಟ್ ಮಾಡಬಹುದು. ಹೆಚ್ಚುವರಿ ಅನುಕೂಲಕ್ಕಾಗಿ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಕಾರ್ಯವನ್ನು ಸಹ ಪಡೆಯುತ್ತದೆ. ಅದಕ್ಕೆ ಸೇರಿಸಿ, ಇದು ತ್ವರಿತ ಪ್ರವೇಶ ಡಯಲ್ ಪ್ಯಾಡ್, ಕರೆ ಹಿಸ್ಟರಿ ಮತ್ತು ಸಿಂಕ್ ಸಂಪರ್ಕಗಳ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ. ನಿಮ್ಮ ಶೈಲಿಗೆ ಸರಿಹೊಂದುವಂತೆ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿವೆ.

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56 ಇಂಚಿನ (152 x 486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಮಿ ಸ್ಮಾರ್ಟ್ ಬ್ಯಾಂಡ್‌ನ 1.1 ಇಂಚಿನ AMOLED ಡಿಸ್‌ಪ್ಲೇಗೆ ಹೋಲಿಸಿದರೆ ಪರದೆಯು ಗಾತ್ರದಲ್ಲಿ ದೊಡ್ಡದಾಗಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2022 ಸೇಲ್‌ನಲ್ಲಿ 2,898ರೂ. ಗಳ ರಿಯಾಯತಿ ದರದಲ್ಲಿ ಲಭ್ಯವಿದೆ.

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್ ಸಾಧನವು 126 x 294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ. ಅದೇ ರೀತಿ ಶಿಯೋಮಿ ಮಿ ಬ್ಯಾಂಡ್ 5 ಡಿವೈಸ್‌ 1.1 ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95 ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

Best Mobiles in India

English summary
Amazon Great Freedom Festival Sale 2022: Attractive Deals on smartwatches and fitness bands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X