ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಿಗೆ ಅಮೆಜಾನ್‌ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

|

ಜನಪ್ರಿಯ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ ಕೆಲ ದಿನಗಳ ಹಿಂದೆ ತನ್ನ ಪ್ರೈಮ್‌ ಡೇ ಸೇಲ್‌ ಅನ್ನು ಎಂಡ್‌ ಮಾಡಿತ್ತು. ಇದೀಗ ಮತ್ತೊಮ್ಮೆ ತನ್ನ ಆನ್‌ಲೈನ್‌ ಗ್ರಾಹಕರಿಗೆ ಹೊಸ ಸೇಲ್‌ ಒಂದನ್ನು ಹೊತ್ತು ತಂದಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ ಇದೇ ಆಗಸ್ಟ 5 ರಿಂದ ಶುರುವಾಗಲಿದ್ದು, ಆಗಸ್ಟ್‌ 9ರ ವರೆಗೂ ನಡೆಯಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭರ್ಜರಿ ಆಫರ್‌ ನೀಡಲಾಗ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ನಾಳೆಯಿಂದ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆಯೋಜಿಸಿದೆ. ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗ್ತಿದೆ. ಡಿಸ್ಕೌಂಟ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಹಾಗಾದರೇ ಅಮೆಜಾನ್ ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಮಾತ್ರವಲ್ಲದೆ ಆಫರ್‌ನಲ್ಲಿ ಲಭ್ಯವಾಗುವ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ತಿಳಿಸಿಕೊಡ್ತಿವಿ ಮುಂದೆ ಓದಿರಿ.

HP 15 ಲ್ಯಾಪ್‌ಟಾಪ್‌

HP 15 ಲ್ಯಾಪ್‌ಟಾಪ್‌

HP 15 ಲ್ಯಾಪ್‌ಟಾಪ್‌ 10 ನೇ ಜನ್ ಇಂಟೆಲ್ ಕೋರ್ i3ಯನ್ನು ಹೊಂದಿದೆ. ಇದು 15.6-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ 8GB RAM ಹೊಂದಿದ್ದು 16GB ವರೆಗೆ ಅಪ್‌ಗ್ರೇಡಬಲ್ ಮಾಡಬಹುದಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 10 ಹೋಮ್ ಅನ್ನು ಮೊದಲೇ ಲೋಡ್ ಮಾಡಲಾಗಿದೆ. ಇದು ವಿಧ್ಯಾರ್ಥಿ ಸ್ನೇಹಿ ಲ್ಯಾಪ್‌ಟಾಪ್‌ ಎನಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ ಮೂಲ ಬೆಲೆ 44,908 ರೂ ಆಗಿದ್ದು, ಅಮೆಜಾನ್ ಸೇಲ್‌ನಲ್ಲಿ 40,990 ರೂ ಗಳಿಗೆ ಖರೀದಿಸಬಹುದಾಗಿದೆ.

ಆಪಲ್ ಮ್ಯಾಕ್‌ಬುಕ್ ಪ್ರೊ 2020

ಆಪಲ್ ಮ್ಯಾಕ್‌ಬುಕ್ ಪ್ರೊ 2020

ಆಪಲ್ ಮ್ಯಾಕ್‌ಬುಕ್ ಪ್ರೊ 2020 13.3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಆಪಲ್ M1 ಚಿಪ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 20 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ಹೆಚ್ಚು ಕೆಲಸ ಮಾಡಲು ಅವಕಾಶ ನೀಡಲಿದೆ. ಇದು 8-ಕೋರ್ ಸಿಪಿಯು 2.8x ವೇಗದ ಕಾರ್ಯಕ್ಷಮತೆಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಮೂಲ ಬೆಲೆ 1,22,900 ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 1,12,990 ರೂ ಗಳಿಗೆ ಖರೀದಿಸಬಹುದಾಗಿದೆ.

ಸೋನಿ WH-1000XM3

ಸೋನಿ WH-1000XM3

ಇನ್ನು ಅಮೆಜಾನ್‌ ಸೇಲ್‌ನಲ್ಲಿ ಸೋನಿ WH-1000XM3 ಹೆಡ್‌ಫೋನ್‌ ಮೇಲೂ ಕೂಡ ಭಾರಿ ರಿಯಾಯಿತಿ ನೀಡಲಾಗ್ತಿದೆ. ಇನ್ನು ಈ ಹೆಡ್‌ಸೆಟ್‌ 30 ಗಂಟೆಗಳ ಬ್ಯಾಟರಿ ಲೈಫ್, ತ್ವರಿತ ಚಾರ್ಜ್, ಸ್ಪರ್ಶ ನಿಯಂತ್ರಣ ಮತ್ತು ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌ ಅನ್ನು ಹೊಂದಿದೆ. ಇದರ ಮೂಲ ಬೆಲೆ 29,990. ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 20,586ರೂ ಗಳಿಗೆ ಖರೀದಿಸಬಹುದಾಗಿದೆ.

ನಾಯ್ಸ್‌ ಕಲರ್‌ ಫಿಟ್ ಪಲ್ಸ್ SPO 2 ಸ್ಮಾರ್ಟ್ ವಾಚ್

ನಾಯ್ಸ್‌ ಕಲರ್‌ ಫಿಟ್ ಪಲ್ಸ್ SPO 2 ಸ್ಮಾರ್ಟ್ ವಾಚ್

ನಾಯ್ಸ್‌ ಕಲರ್‌ ಫಿಟ್ ಪಲ್ಸ್ SPO 2 ಸ್ಮಾರ್ಟ್ ವಾಚ್ 1.4 "ಫುಲ್ ಟಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 10 ದಿನಗಳ ಬ್ಯಾಟರಿ ಲೈಫ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತ, ಸ್ಲೀಪ್ ಮಾನಿಟರಿಂಗ್ ಮತ್ತು ಐಪಿ 68 ಜಲನಿರೋಧಕದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಮೂಲ ಬೆಲೆ 4,999 ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 2,999ರೂ,ಗಳಿಗೆ ಖರೀದಿಸಬಹುದಾಗಿದೆ.

Most Read Articles
Best Mobiles in India

English summary
Amazon Great Freedom Festival sale has been announced and it will kick off on August 5.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X