ಅಮೆಜಾನ್ ಸಂಸ್ಥೆಯಿಂದ ಹೊಸ ತಲೆಮಾರಿನ ಎಕೋ ಶೋ ಸ್ಮಾರ್ಟ್‌ಡಿಸ್‌ಪ್ಲೇ ಬಿಡುಗಡೆ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಡಿವೈಸ್‌ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ ಅಸಿಸ್ಟೆಂಟ್‌, ಸ್ಮಾರ್ಟ್‌ ಸ್ಪೀಕರ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇನ್ನು ಅಮೆಜಾನ್‌ ಕಂಪೆನಿ ಕೂಡ ತನ್ನ ಎಕೋ ಶೋ ಡಿವೈಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಅಮೆಜಾನ್‌ ತನ್ನ ಎರಡನೇ ತಲೆಮಾರಿನ ಮಾದರಿಗಳಾದ ಎಕೋ ಶೋ 8, ಎಕೋ ಶೋ 5 ಮತ್ತು ಎಕೋ ಶೋ 5 ಕಿಡ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಕಂಪೆನಿ ಹೊಸ ಎಕೋ ಶೋ 8, ಎಕೋ ಶೋ 5 ಮತ್ತು ಎಕೋ ಶೋ 5 ಕಿಡ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಬೇಸ್‌ ಮಾಡೆಲ್‌ ಎಕೋ ಶೋ 5 ಬೆಲೆ $ 85 ರಿಂದ ಪ್ರಾರಂಭವಾಗಲಿದೆ. ಇನ್ನು ಎಕೋ ಶೋ 8 ಕ್ಯಾಮೆರಾದ ದೃಷ್ಟಿಯಿಂದ ಪ್ರಮುಖ ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದು 13 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಇನ್ನು ಎಕೋ ಶೋನ ಹೊಸ ಮಾದರಿಗಳು ಸಾಕಷ್ಟು ಅಪ್ಡೇಟ್‌ ಅನ್ನು ಪಡೆದುಕೊಂಡಿವೆ. ಹಾಗಾದ್ರೆ ಈ ಎಕೋ ಶೋಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಹೊಸದಾಗಿ ಪರಿಚಯಿಸಿರುವ ಮೂರು ಎಕೋ ಶೋ ಮಾದರಿಗಳು ಕ್ಯಾಮೆರಾದ ದೃಷ್ಟಿಯಿಂದ ಹೊಸ ನವೀಕರಣಗಳನ್ನು ಪಡೆದಿವೆ. ಈ ಸ್ಮಾರ್ಟ್ ಡಿಸ್‌ಪ್ಲೇಗಳು ಈಗ ಗೌಪ್ಯತೆ ಉದ್ದೇಶಗಳಿಗಾಗಿ ಇಂಟರ್‌ಬಿಲ್ಟ್‌ ಶಟರ್‌ಗಳನ್ನು ಪಡೆದುಕೊಂಡಿದೆ. ಈ ಡಿವೈಸ್‌ಗಳನ್ನು ಸಧ್ಯ ಯುನೈಟೆಡ್ ಸ್ಟೇಟಸ್‌ನಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಅಮೆಜಾನ್ ಎಕೋ ಶೋ 8 ಎರಡನೇ ತಲೆಮಾರಿನ ಮಾದರಿ ಸ್ಮಾರ್ಟ್‌ಡಿಸ್‌ಪ್ಲೇ 1,280x800 ಪಿಕ್ಸೆಲ್ ರೆಸಲ್ಯೂಶನ್‌ ಸಾಮರ್ಥ್ಯದ 8-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಎಂಟಿ 8183 ಆಕ್ಟಾ-ಕೋರ್ ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಜೊತೆಗೆ ಸುಧಾರಿತ 13 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ವಿಶೇಷವೆಂದರೆ, ಎಕೋ ಶೋ 10 ರಲ್ಲಿ ಬಳಸಲಾದ ಕ್ಯಾಮೆರಾ ಸೆನ್ಸಾರ್‌ ಅನ್ನು ಎರಡನೇ ತಲೆಮಾರಿನ ಮಾದರಿಯಲ್ಲಿ ಬಳಸಲಾಗಿದೆ.

ಎಕೋ

ಇನ್ನು ಎಕೋ ಶೋ 5 ಸ್ಮಾರ್ಟ್‌ ಡಿಸ್‌ಪ್ಲೇ 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹೊಸ ನೀಲಿ ಬಣ್ಣದ ರೂಪಾಂತರದಲ್ಲಿ ಸುಧಾರಿತ 2 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಮೊದಲ ತಲೆಮಾರಿನ ಮಾದರಿಯು 1 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಎಕೋ ಶೋ 5 ರ ಕಿಡ್ಸ್ ಆವೃತ್ತಿ ಮೂಲ ಆವೃತ್ತಿಗಿಂತ ಸ್ವಲ್ಪ ದುಬಾರಿಯಾಗಿದೆ. ಇದರ ಬೆಲೆ $ 95 (ಅಂದಾಜು 7,000 ರೂ.). ಈ ಡಿವೈಸ್‌ನೊಂದಿಗೆ ಬಳಕೆದಾರರು ಅಮೆಜಾನ್ ಕಿಡ್ಸ್ ಪ್ಲಸ್ ಸೇವೆಗಳಿಗೆ ಉಚಿತ ಒಂದು ವರ್ಷದ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಭಾರತ

ಸದ್ಯ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಎರಡನೇ ತಲೆಮಾರಿನ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆಯೇ ಎಂದು ಕಂಪನಿಯು ಇನ್ನೂ ಘೋಷಿಸಿಲ್ಲ. ಆದರೆ ಬೆಲೆಗಳನ್ನು ನೋಡಿದರೆ, ಅಮೆಜಾನ್ ಭಾರತದಲ್ಲಿ ಸಾಧನಗಳನ್ನು ಪ್ರಾರಂಭಿಸಲು ಪರಿಗಣಿಸಬಹುದು ಎಂದು ಊಹಿಸಬಹುದು. ಅಮೆಜಾನ್ ಈ ಹಿಂದೆ ಅಮೆಜಾನ್ ಎಕೋ ಶೋ 5 ಮತ್ತು ಎಕೋ ಶೋ 8 ಅನ್ನು ಭಾರತದಲ್ಲಿ ರೂ. 5,499 ಮತ್ತು ರೂ. 8,499, ಬೆಲೆಯಲ್ಲಿ ಕ್ರಮವಾಗಿ ಪರಿಚಯಿಸಿತ್ತು.

Most Read Articles
Best Mobiles in India

English summary
Amazon has launched the second generation models of Echo Show 8, Echo Show 5

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X