ಅಮೆಜಾನ್‌ ಮ್ಯೂಸಿಕ್‌ ಫೆಸ್ಟ್‌ ಸೇಲ್‌: ಆಡಿಯೋ ಡಿವೈಸ್‌ಗಳ ಮೇಲೆ ಬಿಗ್‌ ಆಫರ್‌!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗಾಗಿ ಹೊಸ ಸೇಲ್‌ ಹೊತ್ತು ತಂದಿದೆ. ಮ್ಯೂಸಿಕ್‌ ಪ್ರಿಯರಿಗಾಗಿ ಮೆಗಾ ಮ್ಯೂಸಿಕ್‌ ಫೆಸ್ಟ್‌ ಅನ್ನು ಆಯೋಜಿಸಿದೆ. ಇನ್ನು ಈ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಹೆಡ್‌ಫೋನ್‌ಗಳು, ಸ್ಪೀಕರ್‌ಗಳು, ಗಿಟಾರ್‌ಗಳು ಮತ್ತು ಮ್ಯೂಸಿಕ್‌ ಡಿವೈಸ್‌ಗಳ ಮೇಲೆ ಆಫರ್‌ ಅನ್ನು ಘೋಷಿಸಿದೆ. ಇನ್ನು ಈ ಸೇಲ್‌ನಲ್ಲಿ ಬೋಟ್‌, ಸೋನಿ, ಜೆಬಿಎಲ್‌, ಕ್ಯಾಸಿಯೋ ಸೇರಿದಂತೆ ಹಲವು ಪ್ರಮುಖ ಬ್ರ್ಯಾಂಡ್‌ಗಳ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಇಂಡಿಯಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ ಅನ್ನು ಆಯೋಜಿಸಿದೆ. ಮ್ಯೂಸಿಕ್‌ ಪ್ರಿಯರು ರಿಯಾಯಿತಿ ದರದಲ್ಲಿ ಮ್ಯೂಸಿಕ್‌ ಆಕ್ಸಿಸರೀಸ್‌ಗಳನ್ನು ಖರೀದಿಸುವುದಕ್ಕೆ ಉತ್ತಮ ಅವಕಾಶವಾಗಿದೆ. ಸದ್ಯ ಈ ಫೆಸ್ಟ್ ಅಮೆಜಾನ್‌ನಲ್ಲಿ ಈಗಾಗಲೇ ಲೈವ್ ಆಗಿದ್ದು, ಇದು ಸೆಪ್ಟೆಂಬರ್ 20 ರವರೆಗೆ ಮುಂದುವರಿಯಲಿದೆ. ಹಾಗಾದ್ರೆ ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳಿಗೆ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಬೋಟ್‌ ಏರ್‌ಡೂಪ್ಸ್‌ 441 ವಾಯರ್‌ಲೆಸ್ ಇಯರ್‌ಫೋನ್‌ ರಿಯಾಯಿತಿ ದರದಲ್ಲಿ 1,999ರೂ ಗಳಿಗೆ ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ ಐದು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಹೆಚ್ಚುವರಿ 25 ಗಂಟೆಗಳ ಚಾರ್ಜಿಂಗ್ ಕೇಸ್ ಅನ್ನು ನೀಡಲಿದೆ. ಏರ್‌ಡೂಪ್ಸ್‌ 441 ಬ್ಲೂಟೂತ್ v5.0, ಡಿಜಿಟಲ್ ಅಸಿಸ್ಟೆಂಟ್, IPX7 ರೇಟಿಂಗ್ ಒಳಗೊಂಡಿದೆ.

ಸೋನಿ WF-1000XM3

ಇನ್ನು ಸೋನಿ WF-1000XM3 ಸಹ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಸೋನಿ WF-1000XM3 ಹೆಡ್‌ಫೋನ್‌ 12,990ರೂ,ಗಳಿಗೆ ಲಭ್ಯವಾಗಲಿದೆ. ಇನ್ನು ಸೋನಿ WF-1000XM3 ಟ್ರೂಲಿ ವಾಯರ್‌ಲೆಸ್‌ ಹೆಡ್‌ಸೆಟ್ ಆಗಿದ್ದು, ಕ್ಯೂಎನ್ 1 ಇ ನಾಯ್ಸ್ ಕ್ಯಾನ್ಸಲೇಶನ್‌ ಪ್ರೊಸೆಸರ್ ಹೊಂದಿದೆ. ಇನ್ನು ಈ ಹೆಡ್‌ಸೆಟ್ ಪ್ರತಿ ಚಾರ್ಜ್‌ಗೆ ಎಂಟು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 90 ನಿಮಿಷಗಳ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ.

ಮ್ಯೂಸಿಕ್‌

ಮೆಗಾ ಮ್ಯೂಸಿಕ್‌ ಫೆಸ್ಟ್‌ಸೇಲ್‌ನಲ್ಲಿ ಸೌಂಡ್‌ಬಾರ್‌ ಖರೀದಿಸುವವರಿಗೂ ಉತ್ತಮ ಅವಕಾಶವಿದೆ. ಇದರಲ್ಲಿ ಬೋಟ್ ಅವಂತೆ ಬಾರ್ 1800 ರಿಯಾಯಿತಿ ದರದಲ್ಲಿ ಸಿಗಲಿದೆ. ಇದು 120 ವ್ಯಾಟ್ 2.1 ಚಾನೆಲ್ ವಾಯರ್‌ಲೆಸ್‌ ಬ್ಲೂಟೂತ್ ಸೌಂಡ್‌ಬಾರ್ ಆಗಿದ್ದು, ಅಮೆಜಾನ್‌ನಲ್ಲಿ ರೂ 7,999 ಕ್ಕೆ ಮಾರಾಟವಾಗುತ್ತಿದೆ. ಇದರೊಂದಿಗೆ ಇನ್ಫಿನಿಟಿ ಸೋನಿಕ್ B200WL ಸೌಂಡ್‌ಬಾರ್ 8,999ರೂ ಗಳಿಗೆ ಲಭ್ಯವಿದೆ. ಇದು ಆಕ್ಸ್, ಯುಎಸ್‌ಬಿ ಮತ್ತು ಆಪ್ಟಿಕಲ್ ಇನ್‌ಪುಟ್ ಸೇರಿದಂತೆ ಹಲವಾರು ಸೌಂಡ್‌ ಪ್ರೋಡಕ್ಟ್‌ಆಯ್ಕೆಗಳನ್ನು ನೀಡಲಿದೆ.

ಇನ್ಫಿನಿಟಿ

ಇದಲ್ಲದೆ ಇನ್ಫಿನಿಟಿ ಹಾರ್ಡ್‌ರಾಕ್ 210 ಸ್ಪೀಕರ್ ಕೂಡ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿದೆ. ಸದ್ಯ ಈ ಸ್ಪೀಕರ್‌ ಅಮೆಜಾನ್‌ನಲ್ಲಿ 4,999 ರೂ. ಬೆಲೆ ಪಡೆದುಕೊಂಡಿದೆ. ಇದು 100W ಔಟ್‌ಪುಟ್‌ ನೊಂದಿಗೆ 2.1 ಚಾನೆಲ್ ಮಲ್ಟಿಮೀಡಿಯಾ ಸ್ಪೀಕರ್ ಆಗಿದೆ. ಇದನ್ನು ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಅಥವಾ ಯಾವುದೇ ಬ್ಲೂಟೂತ್ ಡಿವೈಸ್‌ಗೆ ಕನೆಕ್ಟ್‌ ಮಾಡಬಹುದು. ಐಆರ್ ರಿಮೋಟ್ ಮೂಲಕ ಸ್ಪೀಕರ್ ಅನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಇಯರ್‌ಫೋನ್‌

ಇನ್ನು ಸೆನ್‌ಹೈಸರ್ ಸಿಎಕ್ಸ್ 120 ಬಿಟಿ ನೆಕ್‌ಬ್ಯಾಂಡ್ ಇಯರ್‌ಫೋನ್‌ 1,990ರೂ ಗಳಿಗೆ ಸಿಗಲಿದೆ. ಇದಲ್ಲದೆ ಸೋನಿ ಡಬ್ಲ್ಯುಎಫ್ -1000 ಎಕ್ಸ್‌ಎಂ 4 ಹೆಡ್‌ಫೋನ್‌ಗಳು ಪ್ರಸ್ತುತ ರೂ .26,990ರೂ ಗಳಿಗೆ ಲಭ್ಯವಾಗಲಿದೆ. ಇನ್ನು ಈ ಮೆಗಾ ಮ್ಯೂಸಿಕ್‌ ಫೆಸ್ಟ್‌ ಸೇಲ್‌ನಲ್ಲಿ ಇತರೆ ಮ್ಯೂಸಿಕ್‌ ಆಡಿಯೋ ಆಕ್ಸಿಸರೀಸ್‌ಗಳ ಮೇಲೂ ಬಿಗ್‌ ಡಿಸ್ಕೌಂಟ್‌ ್ಒರೆಯಲಿದೆ.

Most Read Articles
Best Mobiles in India

English summary
Amazon is offering deals on a wide range of audio products during its latest 'Mega Music Fest'.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X