ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಸಿಮ್‌ ಕಾರ್ಡ್: ಹೇಗೆ..?

|

ಡಿಜಿಟಲ್ ಭಾರತದ ಕನಸು ನಿಜವಾಗುತ್ತಿದ್ದು, ಹಣ ಪಾವತಿಗೆ, ಶಾಪಿಂಗ್ ಮಾಡುವುದಕ್ಕೇ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಡಿಜಿಟಲ್ ಮಾಧ್ಯಮವೇ ಹೆಚ್ಚು ಬಳಕೆಯಾಗುತ್ತಿದೆ. ಇದೇ ಮಾದರಿಯಲ್ಲಿ ದೇಶದಲ್ಲಿ ಶಾಪಿಂಗ್ ತಾಣಗಳ ಆರ್ಭಟವು ಹೆಚ್ಚಾಗಿದೆ. ಇದೇ ಮಾದರಿಯಲ್ಲಿ ಅಮೆಜಾನ್ ಹೊಸದೊಂದು ಸೇವೆಯನ್ನು ಆರಂಭಿಸಲು ಮುಂದಾಗಿದೆ.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಸಿಮ್‌ ಕಾರ್ಡ್: ಹೇಗೆ..?

ಓದಿರಿ: ರೂ.499ಕ್ಕೆ LED ಟಿವಿ ಎಂದರೆ ನೀವು ನಂಬಲ್ಲ ಅಲ್ವಾ? ಅಮೆಜಾನ್‌ನಲ್ಲಿ ದೊರೆಯುತ್ತಿದೆ ಎಂದ ಮೇಲೆ ನಂಬಬೇಕು.!

ಇಷ್ಟು ದಿನ ಮೊಬೈಲ್‌ನಿಂದ ಹಿಡಿದು ವಾಷಿಂಗ್ ಮಿಷನ್‌ವರೆಗೂ ಮಾರಾಟ ಮಾಡುತ್ತಿದ್ದ ಅಮೆಜಾನ್ ಈ ಬಾರಿ ಸಿಮ್‌ ಕಾರ್ಡುಗಳನ್ನು ಮಾರಾಟ ಮಾಡಲು ಶುರುಮಾಡಿದೆ. ಈ ಮೂಲಕ ಮನೆ ಬಾಗಿಲಿಗೆ ಸಿಮ್ ತಲುಪಿಸುವ ಕಾರ್ಯಕ್ಕೆ ಅಮೆಜಾನ್‌ ಚಾಲನೆ ನೀಡಿದೆ ಎನ್ನಲಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ವೊಡಾಫೋನ್ ಮತ್ತು ಏರ್‌ಟೆಲ್ ಸಿಮ್‌ಗಳು..!

ವೊಡಾಫೋನ್ ಮತ್ತು ಏರ್‌ಟೆಲ್ ಸಿಮ್‌ಗಳು..!

ಸದ್ಯ ಅಮೆಜಾನ್‌ನಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಸಿಮ್‌ ಕಾರ್ಡುಗಳು ಮಾತ್ರವೇ ದೊರೆಯಲಿದ್ದು, ದಿನ ಕಳೆದಂತೆ ಎಲ್ಲಾ ಕಂಪನಿಗಳ ಸಿಮ್‌ಕಾರ್ಡ್‌ಗಳು ದೊರೆಯಲಿದೆ ಎನ್ನಲಾಗಿದೆ. ಸದ್ಯಕ್ಕೆ ವೊಡಾಫೋನ್ ಮತ್ತು ಏರ್‌ಟೆಲ್ ಸಿಮ್ ಅಮೆಜಾನ್‌ನಲ್ಲಿ ಮಾರಾಟವಾಗಲಿದೆ.

24 ಗಂಟೆಗಳ ಡಿಲಿವರಿ:

24 ಗಂಟೆಗಳ ಡಿಲಿವರಿ:

ಅಮೆಜಾನ್ ತನ್ನ ತಾಣದಲ್ಲಿ ಸಿಮ್ ಕಾರ್ಡ್ ಖರೀದಿಸುವವರಿಗೆ ಹೊಸ ಆಫರ್ ನೀಡಿದ್ದು, ಸಿಮ್ ಬುಕ್ ಮಾಡಿದ ಒಂದು ದಿನದ ಒಳಗೆ ಎಂದರೆ 24 ಗಂಟೆಗಳಲ್ಲಿ ಸಿಮ್‌ ಅನ್ನು ಮನೆ ಮುಂದಕ್ಕೆ ಡೆಲಿವಲಿಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಸಿಮ್‌ ಬುಕ್ ಮಾಡಿ ಹೆಚ್ಚು ಸಮಯವನ್ನು ಕಾಯಬೇಕಾಗಿಲ್ಲ.

ಇಂಟರ್‌ನ್ಯಾಷಿನಲ್ ಸಿಮ್ ಕೂಡ:

ಇಂಟರ್‌ನ್ಯಾಷಿನಲ್ ಸಿಮ್ ಕೂಡ:

ಫಾರಿನ್ ಟ್ರಿಪ್ ಹೋಗುವವರಿಗೆ ಹೆಚ್ಚು ಉಪಯೋಗವಾಗಲಿ ಎಂದು ಇಂಟರ್‌ನ್ಯಾಷಿನಲ್ ಸಿಮ್‌ ಕಾರ್ಡ್ ಅನ್ನು ಅಮೆಜಾನ್ ಮಾರಾಟ ಮಾಡಲಿದೆ ಎನ್ನಲಾಗಿದೆ. ಅಮೆಜಾನ್ ಈ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ ಎನ್ನಲಾಗಿದೆ.

Most Read Articles
Best Mobiles in India

English summary
Amazon India has now started selling mobile SIM card. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X