Just In
Don't Miss
- News
ಅಮೆರಿಕಾದಲ್ಲೇ ನಡೆಯಿತು ಮೈಸೂರಿನ ಅಭಿಷೇಕ್ ಅಂತ್ಯಕ್ರಿಯೆ
- Movies
ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್
- Automobiles
ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಇಳಿಸುವಂತಿಲ್ಲ..!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Sports
ಸೈನ್ ಮಾಡಿ ಕೆಣಕಿದ ಕೆಸ್ರಿಕ್ಗೆ ಬ್ಯಾಟ್ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ದೀಪಾವಳಿಗೆ 'ಅಮೆಜಾನ್ ಫುಡ್ ಡೆಲಿವರಿ' ಆರಂಭ!..ಭೀತಿಯಲ್ಲಿ ಸ್ವಿಗ್ಗಿ, ಜೊಮೊಟೊ!
ಭಾರತದಲ್ಲಿ ಆನ್ಲೈನ್ ಸೇವೆಗಳು ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದ್ದು, ಮೆಟ್ರೊ ಸಿಟಿಗಳ ವ್ಯಾಪ್ತಿಯಲ್ಲಿ ಇತ್ತೀಚಿಗೆ ಫುಡ್ ಡೆಲಿವರಿ ಸೇವೆಯು ಬಹುಬೇಗನೆ ಯಶಸ್ಸನ್ನು ಕಂಡುಕೊಂಡಿದೆ. ಸದ್ಯ ಫುಡ್ ಡೆಲಿವರಿ ಸೇವೆಯಲ್ಲಿ ಸ್ವಿಗ್ಗಿ ಮತ್ತು ಜೊಮೊಟೊ ಸಂಸ್ಥೆಗಳು ಜನಪ್ರಿಯತೆ ಗಳಿಸಿವೆ. ಆದ್ರೆ ಫುಡ್ ಡೆಲಿವರಿ ವಲಯದಲ್ಲಿಯೂ ಪೈಪೋಟಿ ಶುರುವಾಗಿದ್ದು, ಇದೀಗ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಹ ಫುಡ್ ಡೆಲಿವರಿ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಪಣತೊಟ್ಟಿದೆ.
ಹೌದು, ಅಮೆಜಾನ್ ತಾಣವು ಈ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಫುಡ್ ಡೆಲಿವರಿ ಸೇವೆಯನ್ನು ಆರಂಭಿಸುವ ಸೂಚನೆಯನ್ನು ನೀಡಿದ್ದು, ಫುಡ್ ಡೆಲಿವರಿ ವಲಯದಲ್ಲಿ ಹೊಸ ಅಲೆ ಸೃಷ್ಠಿಸುವ ತಯಾರಿ ನಡೆಸಿದೆ. ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲದೇ ಫುಡ್ ಡೆಲಿವರಿ ಸೌಲಭ್ಯವನ್ನು ನೀಡುವುದು ಮತ್ತು ಅಮೆಜಾನ್ ಪೇ ವಾಲೆಟ್ ಕ್ಯಾಶ್ಬ್ಯಾಕ್ ಪ್ರಯೋಜನಗಳನ್ನು ನೀಡುವ ಮೂಲಕ ಬೇಗನೆ ನೆಲೆಯೂರುವ ಯೋಜನೆ ಮಾಡಿದೆ.
ಸ್ವಿಗ್ಗಿ ಮತ್ತು ಜೊಮೊಟೊ ಫುಡ್ ಡೆಲಿವರಿ ಸಂಸ್ಥೆಗಳು ಡೆಲಿವರಿ ಚಾರ್ಜ್ ನಿಗದಿಪಡಿಸುತ್ತವೆ. ಅಮೆಜಾನ್ ಆಹಾರವನ್ನು ಮಾತ್ರ ಡೆಲಿವರಿ ಮಾಡಲು ಪ್ರತ್ಯೇಕ ಕ್ಲೌಡ್ ಕಿಚನ್ಸ್ ಪರಿಚಯಿಸಲಿದೆ. ವ್ಯವಸ್ಥಿತವಾಗಿ ಮತ್ತು ತ್ವರಿತವಾಗಿ ಗ್ರಾಹಕರಿಗೆ ಅವರ ಆರ್ಡರ್ ತಲುಪಿಸಲು ಬಾಹ್ಯ ಡೆಲಿವರಿ ಎಜೆನ್ಸಿಗಳನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಿದೆ. ಅಮೆಜಾನ್ ರೆಸ್ಟೋರೆಂಟ್ಗಳಿಂದ ಪ್ರಸ್ತುತ ಇರುವ ಕಮಿಷನಿನ ನಾಲ್ಕನೇ ಒಂದು ಭಾಗ ಪಡೆಯುವ ಸಾಧ್ಯತೆಗಳಿವೆ.
ಅಮೆಜಾನ್ ಫುಡ್ ಡೆಲಿವರಿ ಸೇವೆಯನ್ನು ಆರಂಭಿಸುವ ಸಲುವಾಗಿ 500 ಮಿಲಿಯನ್ ಬಂಡವಾಳ ಹೂಡಲು ಸಜ್ಜಾಗಿದ್ದು, ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಪ್ರವೇಶಿಸಲು ತಯಾರಾಗಿದೆ. ಅತ್ಯುತ್ತಮ ಫುಡ್ ಡೆಲಿವರಿ ಸೇವೆಯಿಂದ ಗ್ರಾಹಕರಿಗೆ ಹತ್ತಿರವಾಗುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಭಾರತದಲ್ಲಿ 2023ರ ಸುಮಾರಿಗೆ ಫುಡ್ ಡೆಲಿವರಿ ವಲಯದಲ್ಲಿ ಶೇ.16 ಪರ್ಸೆಂಟ್ ಏರಿಕೆ ಕಾಣಲಿದೆ ಎಂದು ವರದಿಯೊಂದು ತಿಳಿಸಿದೆ.
ಇ-ಕಾಮರ್ಸ್ ವಲಯದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಅಮೆಜಾನ್ ಇದೀಗ ಫುಡ್ ಡೆಲಿವರಿ ಸೇವೆಯನ್ನು ಆರಂಭಿಸುತ್ತಿರುವುದು ಸ್ವಿಗ್ಗಿ ಮತ್ತು ಜೊಮೊಟೊಗೆ ಹಿನ್ನಡೆ ಆಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಡೆಲಿವರಿ ಚಾರ್ಜ್ನಿಂದ ವಿನಾಯ್ತಿ ನೀಡುತ್ತಿರುವುದು ಮತ್ತು ರೆಸ್ಟೋರಂಟ್ಗಳಿಂದ ಕಡಿಮೆ ಕಮಿಷನ್ ಪಡೆಯುವ ಅಂಶಗಳು ಯಶಸ್ಸಿಗೆ ಕಾರಣಗಳಾಗಲಿವೆ ಎನ್ನಲಾಗಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090