ಅಮೆಜಾನ್‌ನಲ್ಲಿ ಸೋನಿ, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಟಿವಿಗಳಿಗೆ ಡಿಸ್ಕೌಂಟ್‌!

|

ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ವಿಶೇಷ ರಿಯಾಯಿತಿ ಮೇಳಗಳು ಹಾಗೂ ಡಿಸ್ಕೌಂಟ್‌ ಸೇಲ್‌ಗಳನ್ನು ಆಯೋಜಿಸುತ್ತಾ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಅದೇ ರೀತಿ ಸದ್ಯ ಅಮೆಜಾನ್ ತಾಣದಲ್ಲಿ ಪ್ರೈಮ್‌ ಡೇ ಸೇಲ್‌ ಚಾಲ್ತಿ ಇದ್ದು, ಇಂದು ಮುಕ್ತಾಯವಾಗಲಿದೆ. ಎರಡು ದಿನಗಳ ಈ ಸೇಲ್ ನಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ಗಳನ್ನು ಘೋಷಿಸಿ ಗಮನ ಸೆಳೆದಿದೆ. ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ವಹಿವಾಟಿನ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಅಮೆಜಾನ್‌ನಲ್ಲಿ ಸೋನಿ, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಟಿವಿಗಳಿಗೆ ಡಿಸ್ಕೌಂಟ್‌!

ಹೌದು, ಅಮೆಜಾನ್ ಆಯೋಜಿಸಿರುವ ಅಮೆಜಾನ್ ಪ್ರೈಮ್‌ ಡೇ ಸೇಲ್‌ ಪ್ರಸ್ತುತ ಚಾಲ್ತಿ ಇದ್ದು, ಆಕರ್ಷಕ ಕೊಡುಗೆಗಳನ್ನು ನೀಡಿದೆ. ಮುಖ್ಯವಾಗಿ ರಿಯಾಯಿತಿ ದರದಲ್ಲಿ ಅತ್ಯುತ್ತಮ ಸ್ಮಾರ್ಟ್‌ ಟಿವಿ ಖರೀದಿಸಬೇಕು ಎನ್ನುವವರಿಗೆ ಇದು ಸಕಾಲ ಎನ್ನಬಹುದಾಗಿದೆ. ಸ್ಯಾಮ್‌ಸಂಗ್, ಸೋನಿ, ಶಿಯೋಮಿ, ಸೇರಿದಂತೆ ಇತರೆ ಜನಪ್ರಿಯ ಬ್ರ್ಯಾಂಡ್‌ಗಳ ಕೆಲವು ಆಯ್ದ ಸ್ಮಾರ್ಟ್‌ ಟಿವಿಗಳಗೆ ಹೆಚ್ಚಿನ ರಿಯಾಯಿತಿ ತಿಳಿಸಿದೆ. ಹಾಗಾದರೇ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದ ಕೆಲವು ಸ್ಮಾರ್ಟ್‌ ಟಿವಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಸ್ಮಾರ್ಟ್‌ ಟಿವಿ
ಸ್ಯಾಮ್‌ಸಂಗ್ 43 ಇಂಚು ಸ್ಮಾರ್ಟ್‌ ಟಿವಿ ಸಹ ರಿಯಾಯಿತಿ ಪಡೆದಿದೆ. ಕಂಪನಿಯ ಈ ಟಿವಿಯು ಕ್ರಿಸ್ಟಲ್ 4k ಪ್ರೊ ಸೀರೀಸ್ ಅಲ್ಟ್ರಾ HD ಸ್ಮಾರ್ಟ್ ಎಲ್ಇಡಿ ಟಿವಿ ಆಗಿದೆ. ಡಾಲ್ಬಿ ಸ್ಪೀಕರ್‌ ವ್ಯವಸ್ಥೆಯನ್ನು ಪಡೆದಿದ್ದು, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ ಸೇರಿದಂತೆ ಇತರೆ ಓಟಿಟಿ ಸೌಲಭ್ಯಗಳನ್ನು ಪಡೆದಿದೆ.

ಸೋನಿ ಸ್ಮಾರ್ಟ್‌ ಟಿವಿ
ಸೋನಿ ಬ್ರಾವಿಯಾ 55 ಇಂಚಿನ ಸ್ಮಾರ್ಟ್‌ ಟಿವಿ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ದರದದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ ಟಿವಿಯು ಅಲೆಕ್ಸಾ ಸೌಲಭ್ಯ ಪಡೆದಿದ್ದು, 3840 x 2160 ಪಿಕ್ಸಲ್ ರೆಸಲ್ಯೂಷನ್‌ ಡಿಸ್‌ಪ್ಲೇಯನ್ನು ಪಡೆದಿದೆ. ಆಫರ್ ಬೆಲೆ 77,990ರೂ. ಆಗಿದೆ.

ಒನ್‌ಪ್ಲಸ್‌ ಸ್ಮಾರ್ಟ್‌ ಟಿವಿ
ಒನ್‌ಪ್ಲಸ್ 50 ಇಂಚು ಸ್ಮಾರ್ಟ್‌ ಟಿವಿಯು ಅಮೆಜಾನ್‌ ಸೇಲ್‌ನಲ್ಲಿ 45,499ರೂ. ಗಳ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಟಿವಿಯು ಅತ್ಯುತ್ತಮ ಆಡಿಯೋ ಸ್ಪೀಕರ್‌ ವ್ಯವಸ್ಥೆಯನ್ನು ಪಡೆದಿದ್ದು, ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್‌ ಸೇರಿದಂತೆ ಇತರೆ ಓಟಿಟಿ ಸೌಲಭ್ಯಗಳನ್ನು ಪಡೆದಿದೆ. ವಾಯಿಸ್‌ ಅಸಿಸ್ಟಂಟ್ ವ್ಯವಸ್ಥೆ ಇದೆ.

Most Read Articles
Best Mobiles in India

English summary
Amazon Pride Day Sale: Amazing Discount On These Smart Tvs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X