ಅಮೆಜಾನ್‌ ಪ್ರೈಡ್‌ ಸೇಲ್ ಇಂದೇ ಕಡೆಯ ದಿನ‌: ಐಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

|

ಅಮೆಜಾನ್‌ ಇ-ಕಾಮರ್ಸ್‌ ತಾಣವು ಒಂದಿಲ್ಲೊಂದು ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಸಾಗಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆದಿದೆ. ಅಮೆಜಾನ್‌ ಇದೀಗ ಅಮೆಜಾನ್‌ ಪ್ರೈಡ್‌ ಡೇ ಸೇಲ್ ಆಯೋಜಿಸಿದ್ದು, ಎರಡು ದಿನಗಳ ಈ ಸೇಲ್ ಇಂದು ಮುಕ್ತಾಯವಾಗಲಿದೆ. ಅಮೆಜಾನ್‌ ಈ ಸೇಲ್‌ನಲ್ಲಿ ಐಫೋನ್‌ಗಳಿಗೂ ಅತ್ಯುತ್ತಮ ರಿಯಾಯಿತಿ ತಿಳಿಸಲಾಗಿದೆ.

ಅಮೆಜಾನ್‌ ಪ್ರೈಡ್‌ ಸೇಲ್ ಇಂದೇ ಕಡೆಯ ದಿನ‌: ಐಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಹೌದು, ಅಮೆಜಾನ್‌ ಆಯೋಜಿಸಿರುವ ಪ್ರೈಡ್‌ ಡೇ ಸೇಲ್ 2021 ಸೇಲ್‌ ಇದೇ ಜುಲೈ 27ರ (ಇಂದು) ವರೆಗೂ ಚಾಲ್ತಿ ಇರಲಿದೆ. ಈ ಪ್ರೈಡ್‌ ಡೇ ಸೇಲ್ 2021 ಮಾರಾಟವು ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಮುಖ್ಯವಾಗಿ ಈ ಸೇಲ್‌ನಲ್ಲಿ ಆಯ್ದ ಐಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಹಾಗಾದರೇ ಅಮೆಜಾನ್ ಪ್ರೈಡ್‌ ಡೇ ಸೇಲ್ 2021 ಸೇಲ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿರುವ ಐಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ XR
ಅಮೆಜಾನ್‌ ಪ್ರೈಡ್‌ ಡೇ ಸೇಲ್ 2021 ಸೇಲ್‌ನಲ್ಲಿ ಐಫೋನ್ XR ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಈ ಫೋನ್ 1792x828 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326 ppi ಆಗಿದೆ. 12ಎಂಪಿ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾವು 5x ಡಿಜಿಟಲ್ ಝೂಮ್‌ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 7ಎಂಪಿ ಸೆನ್ಸಾರ್‌ನ ಕ್ಯಾಮೆರಾ ನೀಡಲಾಗಿದೆ. ಅಮೆಜಾನ್‌ನಲ್ಲಿ ಇದರ ಬೆಲೆಯು 37,999ರೂ. ಆಗಿದೆ.

ಐಫೋನ್ 12 ಪ್ರೊ ಮ್ಯಾಕ್ಸ್
ಅಮೆಜಾನ್‌ ಪ್ರೈಡ್‌ ಡೇ ಸೇಲ್ 2021 ಸೇಲ್‌ನಲ್ಲಿ ಐಫೋನ್ 12 ಪ್ರೊ ಮ್ಯಾಕ್ಸ್ ಅತ್ಯುತ್ತಮ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್ ಆಫರ್‌ನಲ್ಲಿ 1,25,900ರೂ. ಪಡೆದಿದೆ. ಈ ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಇದರಲ್ಲಿ ಐಫೋನ್ 12 ಪ್ರೊ ಎರಡು ವೈಡ್ ಆಂಗಲ್ ಸೆನ್ಸಾರ್‌ಅನ್ನು ಹೊಂದಿದೆ ಮತ್ತು 4x ಆಪ್ಟಿಕಲ್ ಜೂಮ್‌ಗಾಗಿ 52 ಎಂಎಂ ಫೋಕಲ್ ಲೆಂಗ್ತ್ ಟೆಲಿಫೋಟೋ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಹಾಗೆಯೇ ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ 6.7-ಇಂಚಿನ ರೇಟಿನಾ XDR ಮಾದರಿಯ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ ಬಯೋನಿಕ್ ಸಿಸ್ಟಮ್-ಆನ್-ಚಿಪ್‌ಸೆಟ್‌ ಪ್ರೊಸೆಸರ್‌ ಕಾರ್ಯನಿರ್ವಹಿಸಲಿವೆ. ಪ್ರೊಸೆಸರ್‌ಗೆ ಪೂರಕವಾಗಿ iOS 14 ಬೆಂಬಲ ನೀಡಲಿದೆ.

Most Read Articles
Best Mobiles in India

English summary
Amazon Prime Day 2021: Top Deals On iPhones And iPads.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X