ಆಗಸ್ಟ್‌ 6ರಂದು ಅಮೆಜಾನ್ ಪ್ರೈಮ್‌ ಡೇ ಶುರು; ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

|

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಲು ಇ-ಕಾಮರ್ಸ್‌ಗಳತ್ತ ಹೆಚ್ಚು ಗಮನ ನೀಡುತ್ತಿದ್ದು, ಅದರಲ್ಲೂ ಗ್ಯಾಜೆಟ್‌ ಉತ್ಪನ್ನಗಳನ್ನು ಕೊಳ್ಳುವವರು ಫ್ಲಿಪ್‌ಕಾರ್ಟ್‌ ಅಥವಾ ಅಮೆಜಾನ್ ತಾಣಗಳನ್ನು ಜಾಲಾಡುತ್ತಿರುತ್ತಾರೆ. ನಿವೇನಾದ್ರು ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವ ಆಸಕ್ತಿ ಹೊಂದಿದ್ದರೇ ಇದೇ ಆಗಸ್ಟ್‌ 6ರಂದು ಅಮೆಜಾನ್ ತಾಣಕ್ಕೆ ಭೇಟಿ ನೀಡಿ. ಏಕೆಂದರೇ ಅಮೆಜಾನ್ ಪ್ರೈಮ್‌ ಡೇ ಶುರುವಾಗಲಿದೆ.

ಇ-ಕಾಮರ್ಸ್‌ ದೈತ್ಯ

ಹೌದು, ಇ-ಕಾಮರ್ಸ್‌ ದೈತ್ಯ ಅಮೆಜಾನ್‌ನ ತಾಣವು ಎರಡು ದಿನಗಳ 'ಅಮೆಜಾನ್ ಪ್ರೈಮ್‌ ಡೇ' ಆಯೋಜಿಸಿದೆ. ಈ ಮೇಳವು ಇದೇ ಆಗಸ್ಟ್‌ 6ರಿಂದ ಆರಂಭವಾಗಿದೆ. ಕೇವಲ 48 ಗಂಟೆಗಳ ಈ ಎಕ್ಸ್‌ಕ್ಲ್ಯೂಸಿವ್‌ ಮೇಳದಲ್ಲಿ ಎಲ್ಲ ಬಗೆಯ ಉತ್ಪನ್ನಗಳಿಗೆ ಡಿಸ್ಕೌಂಟ್‌ ಲಭವಿದ್ದು, ಹಾಗೆಯೇ ಭಾರಿ ದೊಡ್ಡ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್‌ಗಳು ದೊರೆಯಲಿವೆ. ಈಗಾಗಲೇ ಆರಂಭವಾಗಿರುವ 'ಅಮೆಜಾನ್‌ ಪ್ರೈಮ್‌' ಮೇಳದಲ್ಲಿ ಸ್ಯಾಮ್‌ಸಂಗ್‌, ಐಫೋನ್, ಒನ್‌ಪ್ಲಸ್ ಸೇರಿದಂತೆ ಪ್ರಮುಖ ಕಂಪನಿಗಳ ಆಯ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ ದೊರೆಯಲಿದೆ. ಹಾಗಾದರೇ ಅಮೆಜಾನ್ ಪ್ರೈಮ್‌ ಮೇಳದಲ್ಲಿ ಬೆಸ್ಟ್‌ ಡೀಲ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ M31s ಭಾರಿ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 6,000mAh ಬ್ಯಾಟರಿ, 64ಎಂಪಿ ರಿಯರ್ ಕ್ಯಾಮೆರಾ, sAMOLED ಮಾದರಿಯ ಡಿಸ್‌ಪ್ಲೇ ಗಳಂತಹ ಆಕರ್ಷಕ ಫೀಚರ್ಸ್‌ಗಳಿಂದ ಹೈಕ್ಲಾಸ್ ಲುಕ್‌ ಹೊಂದಿದೆ.

ಐಫೋನ್ 11

ಐಫೋನ್ 11

ಆಪಲ್‌ನ ನೂತನ ಮಾಡೆಲ್ ಐಫೋನ್ 11 ಸಹ ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಇನ್ನು ಈ ಐಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ನೀಡಲಾಗಿದ್ದು, ಆಪಲ್‌ ಎಕ್ಸ್‌ಆರ್‌ಗಿಂತ ಬ್ಯಾಟರಿ ಲೈಫ್ ಅಧಿಕವಾಗಿದೆ. ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದೆ.

ಒನ್‌ಪ್ಲಸ್‌ 8 ಫೋನ್

ಒನ್‌ಪ್ಲಸ್‌ 8 ಫೋನ್

ಒನ್‌ಪ್ಲಸ್‌ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಒನ್‌ಪ್ಲಸ್‌ 8 ಫೋನ್ ಫೋನ್‌ಗೂ ಡಿಸ್ಕೌಂಟ್ ಲಭ್ಯವಾಗಲಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. 4,300mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಒಪ್ಪೋ F15

ಒಪ್ಪೋ F15

ಹೊಸ ಒಪ್ಪೋ F15 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P70 ಚಿಪ್‌ಸೆಟ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಹಾಗೂ ಕಲರ್ ಓಎಸ್‌ 6 ಬೆಂಬಲ್ ಇದೆ. ನಾಲ್ಕು ಕ್ಯಾಮೆರಾ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ 4,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಈ ಫೋನ್ ಸಹ ಮೇಳದಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ.

ಇತರೆ ಯಾವೆಲ್ಲಾ ಫೋನ್‌ಗಳಿಗೆ ಡಿಸ್ಕೌಂಟ್‌

ಇತರೆ ಯಾವೆಲ್ಲಾ ಫೋನ್‌ಗಳಿಗೆ ಡಿಸ್ಕೌಂಟ್‌

ಶಿಯೋಮಿ ಮಿ 10, ಒನ್‌ಪ್ಲಸ್ 8 ಪ್ರೊ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10, ವಿವೊ ವಿ 19, ವಿವೋ ಎಸ್ 1 ಪ್ರೊ ಮತ್ತು ಹಾನರ್ 9 ಎಕ್ಸ್, ರೆಡ್ಮಿ 8A ಡ್ಯುಯಲ್‌, ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ಗಳು ಭಾರಿ ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ಇದರೊಂದಿಗೆ ಗ್ಯಾಲಕ್ಸಿ M11 ಫೋನ್‌ ಸಹ ಭರ್ಜರಿ ಡಿಸ್ಕೌಂಟ್ ಪಡೆಯಲಿದೆ.

Most Read Articles
Best Mobiles in India

English summary
Amazon Prime Day Sale 2020: Amazon will be offering discounts and offers on several products including smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X