ಅಮೆಜಾನ್ ಸೇಲ್‌ನಲ್ಲಿ ಸೋನಿ ಇಯರ್‌ಬಡ್ಸ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

|

ಅಮೆಜಾನ್ ಪ್ರೈಮ್ ಡೇ ಸೇಲ್‌ ಬಳಕೆದಾರರಿಗೆ ಈಗಾಗಲೇ ಲೈವ್ ಆಗಿವೆ. ಅಮೆಜಾನ್ ಪ್ರೈಮ್ ಡೇ ಸೇಲ್‌ ನಾಳೆಯವರೆಗೆ ಮಾತ್ರ ಲೈವ್ ಆಗಿರುತ್ತದೆ. ಅಲ್ಲದೆ ಇದು ಪ್ರೈಮ್ ಸದಸ್ಯರಿಗಾಗಿ ಮಾತ್ರ ಇರುತ್ತದೆ. ಇನ್ನು ಫ್ಲಿಪ್‌ಕಾರ್ಟ್ ಸೇಲ್‌ ಜುಲೈ 29 ರವರೆಗೆ ಮುಂದುವರಿಯುತ್ತದೆ. ಇನ್ನು ಈ ಎರಡೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ಹಲವಾರು ಉತ್ಪನ್ನಗಳಲ್ಲಿ ರಿಯಾಯಿತಿಯನ್ನು ನೀಡುತ್ತಿವೆ.

ಅಮೆಜಾನ್ ಸೇಲ್‌ನಲ್ಲಿ ಸೋನಿ ಇಯರ್‌ಬಡ್ಸ್‌ಗಳಿಗೆ ಬಿಗ್‌ ಡಿಸ್ಕೌಂಟ್‌!

ಹೌದು, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ವಿಶೇಷ ಸೇಲ್‌ಗಳಲ್ಲಿ ಗ್ರಾಹಕರು ಮುಗಿಬಿದ್ದು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್‌ಫೋನ್‌ , ಲ್ಯಾಪ್‌ಟಾಪ್‌ ಮಾತ್ರವಲ್ಲದೆ ಫಿಟ್ನೆಸ್ ವಾಚ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳನ್ನು ಖರೀದಿಸಲು ಇದು ಅತ್ಯುತ್ತಮ ಸಮಯವಾಗಿದೆ. ಇನ್ನುಳಿದಂತೆ ಈ ಸೇಲ್‌ಗಳಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತ ಡೀಲ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ಪ್ರೈಮ್ ಡೇ: ಕಿಂಡಲ್ ಡಿವೈಸ್‌ಗಳ ಮೇಲೆ ಭಾರಿ ರಿಯಾಯಿತಿ
6 ಇಂಚಿನ ಪರದೆ ಮತ್ತು ವೈಫೈ ಹೊಂದಿರುವ ಕಿಂಡಲ್ 10 ನೇ ಜನ್ ಮಾರಾಟದ ಸಮಯದಲ್ಲಿ ಕೇವಲ 6,299 ರೂ. ಗಳಿಗೆ ದೊರಯಲಿದೆ. ಇನ್ನು 10 ನೇ ತಲೆಮಾರಿನ ಕಿಂಡಲ್ ಪೇಪರ್‌ವೈಟ್ ಅನ್ನು 10,299 ರೂ. ಕಿಂಡಲ್ ಓಯಸಿಸ್ (10 ನೇ ಜನ್) ಆಸಕ್ತರಿಗೆ 17,999 ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಎಲ್ಲಾ ಬೆಲೆಗಳು ಕೇವಲ ವೈಫೈ ಹೊಂದಿರುವ 8 GB RAM ರೂಪಾಂತರಗಳಿಗೆ ಮಾತ್ರ.

ಅಮೆಜಾನ್ ಪ್ರೈಮ್ ಡೇ: ಎಕೋ ಡಿವೈಸ್‌
ಎಕೋ 4 ನೇ ತಲೆಮಾರಿನ 2020 ಸಾಧನವು ಮೂಲ ಬೆಲೆ 4,499 ಹೊಂದಿದ್ದು, ಸೇಲ್‌ ಸಮಯದಲ್ಲಿ 3,249 ರೂ. ಗಳಿಗೆ ಲಭ್ಯವಾಗಲಿದೆ. ಅಲಾರ್ಮ್ ಗಡಿಯಾರ ಹೊಂದಿರುವ ಎಕೋ ಡಾಟ್ ಮೂಲ ಬೆಲೆ 5,499 ರೂ. ಆಗಿದ್ದು, ಇದು 4,249 ರೂ.ಗೆ ಲಭ್ಯವಾಗಲಿದೆ. ಇನ್ನು ಎಕೋ 8 ಇಂಚಿನ ಆವೃತ್ತಿಯನ್ನು ಮಾರಾಟದ ಸಮಯದಲ್ಲಿ 7,999 ರೂ. ಗೆ ಖರೀದಿಸಬಹುದಾಗಿದೆ.

ಇದಲ್ಲದೆ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಟಿಸಿಎಲ್ ಮತ್ತು ಐಫಾಲ್ಕಾನ್ ಟಿವಿ ಸರಣಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. C715 4K QLED 52,999 ರೂ.ಗಳಿಂದ ಪ್ರಾರಂಭವಾಗಿ 65,999 ರೂ.ಗಳವರೆಗೆ ಲಭ್ಯವಾಗಲಿದೆ. ಇವು ಕ್ಯೂಎಲ್‌ಇಡಿ ಪರದೆಗಳು, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ಮತ್ತು ಆಂಡ್ರಾಯ್ಡ್ ಟಿವಿಯೊಂದಿಗೆ ಬರುತ್ತವೆ. ಈ ಟಿವಿ ಸರಣಿ 50 ಇಂಚು, 55 ಇಂಚು ಮತ್ತು 65 ಇಂಚಿನ ರೂಪಾಂತರಗಳಲ್ಲಿ ಲಭ್ಯವಿದೆ.

ಅಮೆಜಾನ್ ಪ್ರೈಮ್‌ ಡೇ: ಸೋನಿ ಸ್ಪೀಕರ್‌ಗಳಿಗೆ ರಿಯಾಯಿತಿ
ಸೋನಿಯ ಸ್ಪೀಕರ್‌ಗಳು ಸಹ ಸಾಕಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. 24 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿರುವ SRS-XB43 ಅಮೆಜಾನ್‌ನಲ್ಲಿ 14,990 ರೂ.ಗೆ ದೊರೆಯಲಿದೆ. ಇದರ ಮೂಲ ಬೆಲೆ 21,990 ರೂ. ಆಗಿದೆ. ಇನ್ನು SRS-XB33 ಬೆಲೆ 11,490 ರೂ.ಗೆ ದೊರೆಯಲಿದೆ. 4500 ರೂ.ಗಳ ರಿಯಾಯಿತಿ, ಎಸ್‌ಆರ್‌ಎಸ್-ಎಕ್ಸ್‌ಬಿ 23 ಬೆಲೆ 7,990 ರೂ.ಗಳಿಗೆ ದೊರೆಯಲಿದೆ.

Most Read Articles
Best Mobiles in India

English summary
Amazon Prime Day, Flipkart Big Saving Days sale 2021 Offers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X