ಅಮೆಜಾನ್‌ ಪ್ರೈಮ್‌ ನೋಡುವ ಮುನ್ನ, ನೀವಿನ್ನೂ ಎರಡು ಬಾರಿ ಯೋಚಿಸಿಲೇಬೇಕು!

|

ಪ್ರಸ್ತುತ ವಿಡಿಯೋ ಸ್ಟ್ರೀಮಿಂಗ್ ಓಟಿಟಿ ಆಪ್‌ಗಳು ಭಾರೀ ಸದ್ದು ಮಾಡುತ್ತಿವೆ. ಆ ಪೈಕಿ ಅಮೆಜಾನ್ ಪ್ರೈಮ್ ಭಾರತದ ಅತ್ಯಂತ ಜನಪ್ರಿಯ ಚಂದಾದಾರಿಕೆಗಳಲ್ಲಿ ಒಂದಾಗಿದೆ. ಬಳಕೆದಾರರು ನಿಗದಿತ ಶುಲ್ಕ ಪಾವತಿಸಿ ಅಮೆಜಾನ್ ಪ್ರೈಮ್‌ ಸದಸ್ಯತ್ವ ಪಡೆಯಬಹುದಾಗಿದೆ. ಇನ್ನು ಈ ಅಮೆಜಾನ್ ಪ್ರೈಮ್‌, ಅಮೆಜಾನ್ ಪ್ರೈಮ್ ವಿಡಿಯೋ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಸೇರಿದಂತೆ ಇತರೆ ಸೇವೆಗಳನ್ನು ಒಳಗೊಂಡಿದೆ. ಈ ಮೂಲಕ ಅಮೆಜಾನ್ ಪ್ರೈಮ್ ಹೆಚ್ಚು ಜನಪ್ರಿಯ ಪಡೆದಿದೆ. ಆದರೆ ಅಮೆಜಾನ್‌ ಸಂಸ್ಥೆಯು ಅಮೆಜಾನ್ ಪ್ರೈಮ್ ಚಂದಾದಾರಿಕೆ ಪಡೆಯುವ ಗ್ರಾಹಕರಿಗೆ ಶಾಕ್ ನೀಡಲು ಸಜ್ಜಾಗಿದೆ.

ಚಂದಾದಾರಿಕೆಯ

ಹೌದು, ಅಮೆಜಾನ್ ಸಂಸ್ಥೆಯು ಅಮೆಜಾನ್ ಪ್ರೈಮ್ ಸದಸ್ಯ ಶುಲ್ಕವನ್ನು ಸದ್ಯದಲ್ಲೇ ಹೆಚ್ಚಿಸುವುದಾಗಿ ತಿಳಿಸಿದೆ. ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಶುಲ್ಕದಲ್ಲಿ 500ರೂ. ಏರಿಕೆ ಮಾಡಲಿದೆ ಎನ್ನಲಾಗಿದೆ. ಹೀಗಾಗಿ ಅಮೆಜಾನ್ ಪ್ರೈಮ್ ಸದಸ್ಯರು ಪ್ರಸ್ತುತ ಬೆಲೆ ಗಿಂತ 50% ಹೆಚ್ಚು ದುಬಾರಿ ನೀಡಬೇಕಾಗುತ್ತದೆ ಎಂದು ಅಮೆಜಾನ್ ಹೇಳಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನ ವೆಬ್‌ಪುಟದಲ್ಲಿ ಕಂಪನಿಯು ಹೊಸ ಬೆಲೆ ಮಾದರಿಯನ್ನು ನವೀಕರಿಸಿದೆ.

ಅಮೆಜಾನ್ ಪ್ರೈಮ್ ಚಂದಾದಾರಿಕೆ ಇನ್ನು ದುಬಾರಿ!

ಅಮೆಜಾನ್ ಪ್ರೈಮ್ ಚಂದಾದಾರಿಕೆ ಇನ್ನು ದುಬಾರಿ!

ಅಮೆಜಾನ್ ಪ್ರೈಮ್ ಚಂದಾದಾರರು ಸದ್ಯ ಇರುವ ಶುಲ್ಕಕ್ಕಿಂತ ಶೇ 50% ಹೆಚ್ಚು ದುಬಾರಿ ಆಗಲಿದೆ ಎಂದು ಅಮೆಜಾನ್ ದೃಢಪಡಿಸಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನ ವೆಬ್‌ಪುಟದಲ್ಲಿ ಕಂಪನಿಯು ಹೊಸ ಬೆಲೆ ಮಾದರಿಯನ್ನು ನವೀಕರಿಸಿದೆ. ಹೊಸ ಬೆಲೆಯು 'very soon' (ಅತೀ ಶೀಘ್ರದಲ್ಲೇ) ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ ಆದರೆ ನಿಖರವಾದ ದಿನಾಂಕವನ್ನು ನೀಡಿಲ್ಲ.

ತ್ರೈಮಾಸಿಕ

ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಶುಲ್ಕದಲ್ಲಿ 500ರೂ ಬೆಲೆ ಏರಿಕೆ ಎನ್ನಲಾಗಿದೆ. ದರ ಏರಿಕೆಯ ನಂತರ ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಶುಲ್ಕ 1,499ರೂ. ಆಗಲಿದೆ ಎನ್ನಲಾಗಿದೆ. ಕೇವಲ ವಾರ್ಷಿಕ ಯೋಜನೆ ಅಷ್ಟೇ ಅಲ್ಲದೇ ತ್ರೈಮಾಸಿಕ ಮತ್ತು ತಿಂಗಳ ಯೋಜನೆಗಳು ಕೂಡ ಬೆಲೆ ಏರಿಕೆಯನ್ನು ಕಾಣಲಿವೆ. ತಿಂಗಳ ಅವಧಿಯ ಯೋಜನೆಯು 129ರೂ ರಿಂದ 179ರೂ ಕ್ಕೆ ಮತ್ತು ತ್ರೈಮಾಸಿಕ ಯೋಜನೆಯು 329ರೂ ರಿಂದ 459ರೂ ಕ್ಕೆ ಏರಿಕೆ ಕಾಣಲಿವೆ.

ಪ್ರಿಪೇಯ್ಡ್

ಅಮೆಜಾನ್ ಪ್ರೈಮ್ ಭಾರತದಲ್ಲಿ ಶುರುವಾದಾಗಿನಿಂದ ಕಂಪನಿಯು ಬಳಕೆದಾರರಿಗೆ ನೀಡುವ ಮೌಲ್ಯವನ್ನು ಮಾತ್ರ ಹೆಚ್ಚಿಸಿದೆ. ಹಾಗೆಯೇ ಗಮನಿಸಬೇಕಾದ ಸಂಗತಿ ಯೆಂದರೆ ಕೆಲವು ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಸದ್ಯ ಅಮೆಜಾನ್ ಪ್ರೈಮ್ ಚಂದಾದಾರಿಕೆ ಶುಲ್ಕ ಏರಿಕೆ ಕಂಡ ಬಳಿಕ ಅಮೆಜಾನ್ ಪ್ರೈಮ್ ಯೋಜನೆಗಳು ಪ್ಲ್ಯಾನ್‌ಗಳು ಕೂಡ ದುಬಾರಿ ಆಗುವ ಸಾಧ್ಯತೆ ಇವೆ ಎನ್ನಲಾಗಿದೆ.

Most Read Articles
Best Mobiles in India

English summary
Amazon has confirmed that the Amazon Prime members will become 50% more expensive than its current price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X