ಸದ್ಯದಲ್ಲೇ ಅಮೆಜಾನ್‌ ಪ್ರೈಮ್‌ ಬಳಕೆದಾರರಿಗೆ ತಟ್ಟಲಿದೆ ಬೆಲೆ ಏರಿಕೆಯ ಶಾಕ್‌!

|

ಇತ್ತೀಚಿನ ದಿನಗಳಲ್ಲಿ ವೀಡಿಯೊ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ಅಮೆಜಾನ್‌ ಪ್ರೈಮ್‌ ವೀಡಿಯೋ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸದ್ಯ ಅಮೆಜಾನ್‌ ಪ್ರೈಮ್‌ ತನ್ನ ಬಳಕೆದಾರರಿಗೆ ಮೂರು ರೀತಿಯ ಚಂದಾದಾರಿಕೆ ಯೋಜನೆಗಳನ್ನು ಹೊಂದಿದೆ. ಇದೀಗ ಭಾರತದಲ್ಲಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಬೆಲೆಯನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ. ಇದರ ಬಗ್ಗೆ ಕಂಪನಿಯು ತನ್ನ FAQ ಪೇಜ್‌ನಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ರೈಮ್‌ ವೀಡಿಯೊ ತನ್ನ ಚಂದಾದಾರಿಕೆ ಬಲೆಯನ್ನು ಶೀಘ್ರದಲ್ಲೇ ಹೆಚ್ಚಿಸಲಿದೆ ಎನ್ನಲಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ವಾರ್ಷಿಕ ಪ್ರಧಾನ ಸದಸ್ಯತ್ವ, ಮಾಸಿಕ ಚಂದಾದಾರಿಕೆ ಸೇರಿದಂತೆ ತನ್ನ ಮೂರು ಚಂದಾದಾರಿಕೆ ಯೋಜನೆಗಳ ಬೆಲೆ ಹೆಚ್ಚಳವಾಗಲಿದೆ. ಆದರೆ ಸೇವೆಯ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗಿದೆ. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ವೀಡಿಯೋ ತನ್ನ ಚಂದಾದಾರಿಕೆ ಪ್ಲಾನ್‌ಗಳಲ್ಲಿ ಎಷ್ಟು ಬೆಲೆ ಹೆಚ್ಚಳ ಮಾಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ ಪ್ರಸ್ತುತ ವಾರ್ಷಿಕ ಚಂದಾದಾರಿಕೆಯನ್ನು 999ರೂ.ಗಳಿಗೆ ನೀಡುತ್ತಿದೆ. ಇನ್ನು ಮಾಸಿಕ ಚಂದಾದಾರಿಕೆ ಯೋಜನೆಯನ್ನು 129ರೂ. ಗೆ ಖರೀದಿಸಬಹುದು. ಹಾಗೆಯೇ ತ್ರೈಮಾಸಿಕ ಯೋಜನೆಯನ್ನು 329ರೂ.ಗಳಿಗೆ ನೀಡುತ್ತಿದೆ. ಆದರೆ ಡಿಸೆಂಬರ್ 13ರ ನಂತರ ಮಾಸಿಕ ಚಂದಾದಾರಿಕೆ ಬೆಲೆ 179ರೂ.ಗಳಿಗೆ ಏರಿಕೆಯಾಗಲಿದೆ. ಇನ್ನು ವಾರ್ಷಿಕ ಚಂದಾದಾರಿಕೆಯನ್ನು ಖರೀದಿಸುವವರು 1,499ರೂ. ಪಾವತಿಸಬೇಕಾಗುತ್ತದೆ. ಅಂದರೆ ವಾರ್ಷಿಕ ಯೋಜನೆಯಲ್ಲಿ 500ರೂ. ಬೆಲೆ ಹೆಚ್ಚಿಸಲಾಗುತ್ತದೆ. ಇದರೊಂದಿಗೆ ತ್ರೈಮಾಸಿಕ ಯೋಜನೆಯನ್ನು 459 ರೂ.ಗಳಿಗೆ ಏರಿಸಲಾಗುತ್ತದೆ.

ಅಮೆಜಾನ್‌

ಅಮೆಜಾನ್‌ ಪ್ರೈಮ್‌ FAQ ಪೇಜ್‌ ಮಾಹಿತಿ ಪ್ರಕಾರ, ನಿಮ್ಮ ಉಚಿತ ಪ್ರಯೋಗ ಅಥವಾ ಸದಸ್ಯತ್ವ ಅವಧಿಯು ಕೊನೆಗೊಂಡ ದಿನದಿಂದ ಮುಂದಿನ ಸದಸ್ಯತ್ವ ಅವಧಿಗೆ ಅಮೆಜಾನ್‌ ಸ್ವಯಂಚಾಲಿತವಾಗಿ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ ಈಗಾಗಲೇ "ಅಸ್ತಿತ್ವದಲ್ಲಿರುವ ಪ್ರೈಮ್ ಸದಸ್ಯರು ತಮ್ಮ ಸದಸ್ಯತ್ವ ಯೋಜನೆಯು ಪ್ರಸ್ತುತ ಬೆಲೆಯಲ್ಲಿರುವ ಅವಧಿಯವರೆಗೆ ತಮ್ಮ ಸದಸ್ಯತ್ವವನ್ನು ಮುಂದುವರಿಸಬಹುದು. ಆದಾಗ್ಯೂ, ಬೆಲೆ ಬದಲಾವಣೆಯ ನಂತರ, ಹೊಸ ಬೆಲೆಯಲ್ಲಿ ನಿಮ್ಮ ಸದಸ್ಯತ್ವವನ್ನು ನವೀಕರಿಸಬೇಕಾಗುತ್ತದೆ.

ಅಮೆಜಾನ್

ಇನ್ನು ಅಮೆಜಾನ್ ಪ್ರೈಮ್ ಭಾರತದಲ್ಲಿ ಶುರುವಾದಾಗಿನಿಂದ ಕಂಪನಿಯು ಬಳಕೆದಾರರಿಗೆ ನೀಡುವ ಮೌಲ್ಯವನ್ನು ಮಾತ್ರ ಹೆಚ್ಚಿಸಿದೆ. ಹಾಗೆಯೇ ಗಮನಿಸಬೇಕಾದ ಸಂಗತಿ ಯೆಂದರೆ ಕೆಲವು ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಸದ್ಯ ಅಮೆಜಾನ್ ಪ್ರೈಮ್ ಚಂದಾದಾರಿಕೆ ಶುಲ್ಕ ಏರಿಕೆ ಕಂಡ ಬಳಿಕ ಅಮೆಜಾನ್ ಪ್ರೈಮ್ ಯೋಜನೆಗಳು ಪ್ಲ್ಯಾನ್‌ಗಳು ಕೂಡ ದುಬಾರಿ ಆಗುವ ಸಾಧ್ಯತೆ ಇವೆ ಎನ್ನಲಾಗಿದೆ.

ಅಮೆಜಾನ್‌

ಇದಲ್ಲದೆ ಅಮೆಜಾನ್‌ ಇತ್ತಿಚಿಗೆ ಭಾರತದಲ್ಲಿ ಹೊಸದಾಗಿ ಪ್ರೈಮ್ ವಿಡಿಯೋ ಚಾನೆಲ್‌ಗಳನ್ನು ಆರಂಭಿಸಿದೆ. ತನ್ನ ಪ್ರೈಮ್‌ ವೀಡಿಯೋ ಚಾನೆಲ್‌ಗಳು ಪ್ರೈಮ್‌ ಸದಸ್ಯರಿಗೆ 8 OTT ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ. ಈ ಅಪ್ಲಿಕೇಶನ್‌ಗಳು ಚಂದಾದಾರಿಕೆಯನ್ನು ಹೊಂದಿದ್ದು, ಒಂದೇ ಸೂರಿನಡಿಯಲ್ಲಿ ಪ್ರವೇಶಿಸಲು ಅನುಮತಿಸಲಿವೆ. ಇವುಗಳಲ್ಲಿ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯುಬೇ, ಇರೋಸ್ ನೌ, ಮುಬಿಐ, ಹೊಯಿಚೊಯ್, ಮನೋರಮಾ ಮ್ಯಾಕ್ಸ್, ಮತ್ತು ಶಾರ್ಟ್ಸ್ ಟಿವಿಯಂತಹ ಸ್ಟ್ರೀಮಿಂಗ್ ಆಪ್‌ಗಳು ಸೇರಿವೆ.

ಅಮೆಜಾನ್‌

ಅಮೆಜಾನ್‌ನ ಪ್ರೈಮ್ ಲಾಯಲ್ಟಿ ಪ್ರೋಗ್ರಾಂಗೆ ಭಾರತದಲ್ಲಿ ವಾರ್ಷಿಕ 999ರೂ, ಬೆಲೆ ನಿಗಧಿ ಪಡಿಸಲಾಗಿದೆ. ಇದು ಗ್ರಾಹಕರಿಗೆ ಉಚಿತ ವಿತರಣೆ, ಮಾರಾಟದ ಸಮಯದಲ್ಲಿ ಡೀಲ್‌ಗಳಿಗೆ ಆರಂಭಿಕ ಪ್ರವೇಶ ಮತ್ತು ಉಚಿತ ಸಂಗೀತ ಮತ್ತು ವಿಡಿಯೋ ಸ್ಟ್ರೀಮಿಂಗ್ ನೀಡುತ್ತದೆ. ಇನ್ನು ಈ ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ಜಾಗತಿಕ ಮತ್ತು ಲೋಕಲ್‌ ಶೋಗಳು, ಚಲನಚಿತ್ರಗಳು, ರಿಯಾಲಿಟಿ ಟಿವಿ, ಡಾಕ್ಯುಮೆಂಟರಿಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಎಂಟು ವೀಡಿಯೋ-ಸ್ಟ್ರೀಮಿಂಗ್ ಸೇವೆಗಳಾದ ಡಿಸ್ಕವರಿ+, ಲಯನ್ಸ್‌ಗೇಟ್ ಪ್ಲೇ, ಡಾಕ್ಯೂಬೇ ಇರೋಸ್ ನೌ, MUBI, hoichoi, manoramaMAX, ಮತ್ತು ShortsTV ಗೆ ಪ್ರವೇಶ ಪಡೆಯುವುದು ಸುಲಭವಾಗಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಪ್ರೈಮ್‌ ವೀಡಿಯೋ ಚಾನಲ್‌ನಲ್ಲಿ ಗ್ರಾಹಕರು ತಾವು ಆಯ್ಕೆ ಮಾಡಿದ ಸೇವೆಗಳಿಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಪ್ರಧಾನ ಸದಸ್ಯರು OTT ಚಾನೆಲ್ ಪಾಲುದಾರರಿಂದ ಲಭ್ಯವಿರುವ ವಿಶೇಷ ವಾರ್ಷಿಕ ಚಂದಾದಾರಿಕೆ ಆಫರ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. "ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಮಲ್ಟಿ ಆಪ್ಲಿಕೇಶನ್‌ಗಳಿಗೆ ಲಾಗ್‌ ಇನ್‌ ಆಗಲು ನಾವು ಅವಕಾಶ ನೀಡುತ್ತಿದ್ದೆವೇ ಅನ್ನೊದನ್ನ ಭಾರತದಲ್ಲಿ ಅಮೆಜಾನ್ ಪ್ರೈಮ್ ವೀಡಿಯೋ ಮುಖ್ಯಸ್ಥರಾಗಿರುವ ಗೌರವ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Most Read Articles
Best Mobiles in India

English summary
Amazon Prime subscription price will soon be increase in India.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X