ಅಮೆಜಾನ್‌ ಸೇಲ್‌ನಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಸಿಗಲಿದೆ 70% ಆಫರ್‌!

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ಒಂದಿಲ್ಲೊಂದು ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಪೆಸ್ಟಿವಲ್‌ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ ಇದೇ ಆಕ್ಟೋಬರ್‌ 3ರಿಂದ ಪ್ರಾರಂಭವಾಗಲಿದೆ. ಇನ್ನು ಈ ಸೇಲ್‌ನಲ್ಲಿ ಆಯ್ದ ಬ್ರಾಂಡ್‌ಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸೇಲ್‌ನಲ್ಲಿ ವಿಶೇಷ ರಿಯಾಯಿತಿ ಘೋಷಿಸಿಲಾಗಿದೆ. ಅದರಲ್ಲೂ ಮ್ಯೂಸಿಕ್‌ ಪ್ರಿಯರ ಪಾಲಿಗೆ ಈ ಸೇಲ್‌ ಸಾಕಷ್ಟು ವಿಶೇಷವಾಗಿದೆ. ಏಕೆಂದರೆ ಈ ಸೇಲ್‌ನಲ್ಲಿ ಅಮೆಜಾನ್ ಸ್ಪೀಕರ್‌ಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ ನೀಡುತ್ತಿದೆ. ಆದ್ದರಿಂದ ಉತ್ತಮ ಬ್ಲೂಟೂತ್‌ ಸ್ಪೀಕರ್‌ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಹಾಗಾದ್ರೆ ರಿಯಾಯಿತಿ ಬೆಲೆಗೆ ನೀವು ಖರೀದಿಸಬಹುದಾದ ಬ್ಲೂಟೂತ್ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಲ್ಟಿಮೇಟ್ ಇಯರ್ಸ್ ಬೂಮ್ 3

ಅಲ್ಟಿಮೇಟ್ ಇಯರ್ಸ್ ಬೂಮ್ 3

ಅಮೆಜಾನ್‌ ಸೇಲ್‌ನಲ್ಲಿ ಅಲ್ಟಿಮೇಟ್ ಇಯರ್ಸ್ ಬೂಮ್ 3 ನಿಮಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಸ್ಪೀಕರ್‌ ನಿಮ್ಮ ಔಟಿಂಗ್ ಮತ್ತು ಹೌಸ್ ಪಾರ್ಟಿ ಅಗತ್ಯಗಳನ್ನು ಪೂರೈಸುತ್ತದೆ. ಈ ಸ್ಪೀಕರ್‌ನಲ್ಲಿ ನೀವು ಬಾಸ್ ಔಟ್‌ಪುಟ್ ಅನ್ನು ಆನುಭವಿಸಬಹುದಾಗಿದೆ. ಇನ್ನು ಈ ಸ್ಪೀಕರ್‌ ಅನ್ನು IP67 ರೇಟ್ ಮಾಡಲಾಗಿದ್ದು, ಪೂಲ್ ಪಾರ್ಟಿಗೆ ಅಥವಾ ಶವರ್‌ ಸಮಯದಲ್ಲೂ ಬಳಸಬಹುದಾಗಿದೆ. ಇದು 15 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಈ ಬ್ಲೂಟೂತ್ ಸ್ಪೀಕರ್ ಅನ್ನು ಮೂಲಬೆಲೆ 15,995ರೂ ಆಗಿದ್ದು, ಅಮೆಜಾನ್‌ ಸೇಲ್‌ನಲ್ಲಿ 10,995ರೂ ಗಳಿಗೆ ಲಭ್ಯವಿದೆ.

ಸೋನಿ ಎಸ್‌ಆರ್‌ಎಸ್ ಎಕ್ಸ್‌ಬಿ 13

ಸೋನಿ ಎಸ್‌ಆರ್‌ಎಸ್ ಎಕ್ಸ್‌ಬಿ 13

ಸೋನಿ ಎಸ್‌ಆರ್‌ಎಸ್ ಎಕ್ಸ್‌ಬಿ 13 ಸ್ಪೀಕರ್‌ ಕೂಡ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಜಾಕೆಟ್‌ಗೆ ಸುಲಭವಾಗಿ ಹೊಂದಿಕೊಳ್ಳುವ ಕಾಂಪ್ಯಾಕ್ಟ್ ಸ್ಪೀಕರ್ ಆಗಿದೆ. ಇದು IP67 ಧೂಳು ಅಥವಾ ವಾಟರ್‌ ರೆಸಿಸ್ಟೆನ್ಸ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಪೀಕರ್‌ 16 ಗಂಟೆಗಳ ಬ್ಯಾಟರಿ ಅವಧಿಯನ್ನು ಸೋನಿ ಹೇಳಿಕೊಂಡಿದೆ. ಬ್ಲೂಟೂತ್ ಸ್ಪೀಕರ್ 3,896ರೂ ಬೆಲೆ ಹೊಂದಿದ್ದು, ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

ಜೆಬಿಎಲ್ ಫ್ಲಿಪ್ 4

ಜೆಬಿಎಲ್ ಫ್ಲಿಪ್ 4

ಜನಪ್ರಿಯ ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಜೆಬಿಎಲ್ ಫ್ಲಿಪ್ 4 ಕೂಡ ಒಂದಾಗಿದೆ. ಇದು 16W ಆಡಿಯೋ ಯೂನಿಟ್‌ನಿಂದ ರನ್‌ ಆಗಲಿದೆ. ಈ ಸ್ಪೀಕರ್‌ ಸ್ಮಾಲ್‌ ಪಾರ್ಟಿ ಆಯೋಜನೆ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ 3000mAh ಬ್ಯಾಟರಿಯನ್ನು ಹೊಂದಿದ್ದು, ಇದು 12 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಜೆಬಿಎಲ್ ಫ್ಲಿಪ್ 4 ಪ್ರಸ್ತುತ 7,799 ರೂ.ಬೆಲೆಯನ್ನು ಹೊಂದಿದೆ.

ಬೋಟ್ ಸ್ಟೋನ್ 1400 ಮಿನಿ

ಬೋಟ್ ಸ್ಟೋನ್ 1400 ಮಿನಿ

ಬೋಟ್ ಸ್ಟೋನ್ 1400 ಮಿನಿ ಬ್ಲೂಟೂತ್‌ ಸ್ಪೀಕರ್‌ ಪ್ರಸ್ತುತ 9999ರೂ ಬೆಲೆ ಹೊಂದಿದೆ. ಆದರೆ ಅಮೆಜಾನ್‌ ಸೇಲ್‌ನಲ್ಲಿ ಇದರ ಬೆಲೆ ಸಾಕಷ್ಟು ಕಡಿತವಾಗುವ ಸಾಧ್ಯತೆ ಇದೆ. ಇನ್ನು ಈ ಸ್ಪೀಕರ್‌ 2000mAh ಬ್ಯಾಟರಿಯನ್ನು ಹೊಂದಿದ್ದು, 6 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ನೀಡಲಿದೆ. ಈ ಸ್ಪೀಕರ್‌ IPX5 ಪ್ರಮಾಣೀಕರಣ ಹೊಂದಿದೆ. ಈ ಬ್ಲೂಟೂತ್ ಸ್ಪೀಕರ್ ಉತ್ತಮ ಪ್ರಮಾಣದ ಬಾಸ್‌ನೊಂದಿಗೆ ಯೋಗ್ಯವಾದ ಸೌಂಡ್‌ ಪ್ರೊಡಕ್ಷನ್‌ ಅನ್ನು ಸಹ ಹೊಂದಿದೆ.

Most Read Articles
Best Mobiles in India

English summary
Amazon will offer up to 70 per cent discount on speakers. So to help you make the right purchase decision, we have listed the top offers on Bluetooth speakers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X